ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ (LPG subsidy) ಪಡೆದ ಬಡ ಮಹಿಳೆಯರಿಗೆ ಅರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್ಗೆ ಸದ್ಯ ಇರುವ 200 ರೂ ನಿಂದ 300 ರೂ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಪತ್ರಿಕ ಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಈಗ ಹೆಚ್ಚಿಸಿರುವ ಎಲ್ಪಿಜಿ ಸಬ್ಸಿಡಿ 100 ರೂ ಅನ್ವಯ ಇನ್ನು ಮುಂದೆ ಫಲಾನುಭವಿಗೆ ಅಡುಗೆ ಸಿಲಿಂಡರ್ 603 ರೂಪಾಯಿಗೆ ಲಭ್ಯವಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ (ಅ.4) ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು. ಉಜ್ವಲ ಯೋಜನೆ ಫಲಾನುಭವಿಗಳು ಈಗ ಮನೆ ಬಳಕೆಯ ಎಲ್ಪಿಜಿ ಸಿಲಿಂಡರ್ 14.2 ಕಿಲೋ ತೂಕದ ಸಿಲಿಂಡರ್ ನ ಮಾರುಕಟ್ಟೆ ದರ 903 ರೂಪಾಯಿ ಇದ್ದು ಇದಕ್ಕೆ ಕೇಂದ ಸರಕಾರದಿಂದ 300 ರೂ ಸಹಾಯಧನ ನೀಡುವುದರಿಂದ ಫಲಾನುಭವಿಗಳಿಗೆ 603 ರೂಪಾಯಿಗೆ ಲಭ್ಯವಾಗಲಿದೆ.
Gruhalakshmi: ನಿಮಗೆ ಇನ್ನೂ ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ? ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
LPG subsidy- ಸಹಾಯಧನ ಹೇಗೆ ನೀಡಲಾಗುತ್ತದೆ?
ಫಲಾನುಭವಿಗಳು ಅಡುಗೆ ಸಿಲಿಂಡರ್ ಅನ್ನು ಖರೀದಿ ಮಾಡುವ ಸಮಯದಲ್ಲಿ ಪೂರ್ಣ ಮೊತ್ತವನ್ನು ಅಂದರೆ 903 ರೂಪಾಯಿ ಅನ್ನು ನೀಡಿ ಗ್ಯಾಸ್ ಏಜೆನ್ಸಿ ಮೂಲಕ ಸಿಲಿಂಡರ್ ಅನ್ನು ಖರೀದಿಸಬೇಕಾಗುತ್ತದೆ ನಂತರ ಫಲಾನುಭವಿಗಳ Bank account ಗೆ ನೇರವಾಗಿ LPG subsidy amount ಅನ್ನು ಸರಕಾರದಿಂದ ಜಮಾ ಮಾಡಲಾಗುತ್ತದೆ.
ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳ 14.2 ಕೆಜಿಯ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಮೇಲೆ 200 ರೂಪಾಯಿ ಬೆಲೆ ಇಳಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ಹಂಚಿಕೊಂಡಿದ್ದರು. ಈ ಕ್ರಮದಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 7,500 ಕೋಟಿ ರೂಪಾಯಿ ನಷ್ಟ ಆಗಲಿದ್ದು, ಈ ಮೊತ್ತವನ್ನು ಸರ್ಕಾರ ಭರಿಸಲಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 14.2 ಕೆಜಿ ಸಿಲಿಂಡರ್ನ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 1,103 ರೂಪಾಯಿಯಿಂದ 903 ರೂಪಾಯಿಗೆ ಇಳಿಸಿತು. ಉಜ್ವಲ ಯೋಜನೆಯವರಿಗೆ ಇನ್ನೂ 300 ರೂಪಾಯಿ ಇಳಿಕೆಯಾಗಿ 603 ರೂಪಾಯಿಗೆ ತಲುಪಿದೆ.
ಇದನ್ನೂ ಓದಿ: BPL ಮತ್ತು APL ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್! ಮಿಸ್ ಮಾಡ್ದೆ ಸುದ್ದಿ ನೋಡಿ.
LPG Subsidy status check- ಅಡುಗೆ ಸಿಲಿಂಡರ್ ಸಬ್ಸಿಡಿ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:
ಫಲಾನುಭವಿಗಳು ಇಲ್ಲಿ ಕ್ಲಿಕ್ ಮಾಡಿ>LPG Subsidy status check ಅ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನೀವು ಖರೀದಿ ಮಾಡಿರುವ ಅಡುಗೆ ಸಿಲಿಂಡರ್ ಗೆ ಸಹಾಯಧನ ಜಮಾ ಅಗಿರುವ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಖಚಿತಪಡಿಸಿಕೊಳ್ಳಬವುದಾಗಿದೆ.
ಅಡುಗೆ ಸಿಲಿಂಡರ್ ಸಬ್ಸಿಡಿ ಹೆಚ್ಚಳದ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್:
The government has raised subsidy amount for Pradhan Mantri Ujjwala Yojana beneficiaries from Rs 200 to Rs 300 per LPG cylinder: Union minister Anurag Thakur during a briefing on Cabinet decisions pic.twitter.com/Dvf7wXtXQT — ANI (@ANI) October 4, 2023
ಇದನ್ನೂ ಓದಿ: Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!