ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (KMF) ಪಶು ಆಹಾರ ಉತ್ಪಾದನಾ ಘಟಕಕ್ಕೆ ಮೆಕ್ಕೆಜೋಳ ಪೂರೈಕೆ ಮಾಡಲು ರೈತರಿಂದ ಮೆಕ್ಕೆಜೋಳವನ್ನು(Maize msp price) ಖರೀದಿ ಮಾಡಲು ಖರೀದಿ ಕೇಂದ್ರ ತೆರೆಯಲು ಸಿದ್ದತೆಯನ್ನು ನಡೆಸಿದೆ.
ರಾಜ್ಯದಲ್ಲಿ KMF ಡೈರಿಗಳಿಗೆ ಹಾಲನ್ನು ಪೂರೈಕೆ ಮಾಡುವ ರೈತರಿಗೆ ಪಶು ಆಹಾರವನ್ನು ಮಂಡಳಿಯಿಂದ ನೀಡಲಾಗುತ್ತದೆ ಇದಕ್ಕಾಗಿ ಪಶು ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಿದ್ದು ಈ ಆಹಾರ ತಯಾರಿಕೆಗೆ ಬೇಕಾಗುವ ಮೆಕ್ಕೆಜೋಳವನ್ನು ಪ್ರತಿ ವರ್ಷ ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ ಇದರಂತೆ ಈ ವರ್ಷವು ಸಹ ರೈತರಿಂದ ನೇರವಾಗಿ ಪಶು ಆಹಾರ ತಯಾರಿಕೆಗೆ ಮೆಕ್ಕೆಜೋಳ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ನಡೆಸಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಲಾಗುತ್ತದೆ? ಮೆಕ್ಕೆಜೋಳವನ್ನು ಕೆಎಂಎಫ್‌ಗೆ ಮಾರಾಟ ಮಾಡಲು ರೈತರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
Maize msp price- ಮೆಕ್ಕೆಜೋಳ ಖರೀದಿ ದರ:
ರೈತರಿಂದ ಖರೀದಿ ಕೇಂದ್ರಗಳ ಮೂಲಕ ಪ್ರತಿ ಕ್ವಿಂಟಲ್‌ಗೆ ₹2,400 ದರದಲ್ಲಿ (ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಬೆಂಬಲ ಬೆಲೆ ₹2,225, ಎರಡು ಗೋಣಿ ಚೀಲದ ಮೊತ್ತ ಮತ್ತು ಸಾಗಣೆ ವೆಚ್ಚ ₹175) ದರದಲ್ಲಿ ಮೆಕ್ಕೆ ಜೋಳವನ್ನು ಖರೀದಿ ಮಾಡಲಾಗುತ್ತದೆ.
ಯಾವ ದಿನದಿಂದ ಮೆಕ್ಕೆಜೋಳ ಖರೀದಿ ಮಾಡಲಾಗುತ್ತದೆ?
ಕೆಎಂಎಫ್ ಮಂಡಳಿ ವ್ಯಾಪ್ತಿಯಲ್ಲಿರುವ ಒಟ್ಟು 5 ಪಶು ಆಹಾರ ಘಟಕಗಳ ಸಾಮರ್ಥ್ಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಒಟ್ಟು 12 ಖರೀದಿ ಕೇಂದ್ರಗಳನ್ನು ತೆರೆಯಲು KMF ನಿಂದ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿದ್ದು ನವೆಂಬರ್ 14ರೊಳಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: New ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
KMF ಗೆ ಮೆಕ್ಕೆಜೋಳ ಮಾರಾಟ ಮಾಡಲು ರೈತರು ಅನುಸರಿಸಬೇಕಾದ ಕ್ರಮ:
ಮೆಕ್ಕೆಜೋಳವನ್ನು KMF ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಲು ಆಸಕ್ತಿ ಹೊಂದಿರುವವರು ಮೊದಲು ಮೆಕ್ಕೆಜೋಳದ ಸ್ಯಾಂಪಲ್ ಅನ್ನು ತೆಗೆದುಕೊಂಡು ಖರೀದಿ ಕೇಂದ್ರ ಭೇಟಿ ಮಾಡಿ ಅಗತ್ಯ ವಿವರವನ್ನು ಒದಗಿಸಿ ನೋಂದಣಿ ಮಾಡಿಕೊಳ್ಳಬೇಕು ಇದಾದ ಬಳಿಕ ಇಂತಹ ದಿನ ರೈತರು ಮೆಕ್ಕೆಜೋಳವನ್ನು ತೆಗೆದುಕೊಂಡು ಬರಬೇಕು ಎಂದು ಖರೀದಿ ಕೇಂದ್ರದಲ್ಲಿ ರೈತರಿಗೆ ತಿಳಿಸಲಾಗುತ್ತದೆ ಆ ದಿನ ಮೆಕ್ಕೆಜೋಳವನ್ನು ರೈತರು ತೆಗೆದುಕೊಂಡು ಹೋಗಬೇಕು.
Maize msp DBT payment- ಮೆಕ್ಕೆಜೋಳದ ಹಣ ಪಾವತಿ ವಿಧಾನ:
ಒಮ್ಮೆ ಖರೀದಿ ಕೇಂದ್ರದಲ್ಲಿ ರೈತರು ತಮ್ಮ ಮೆಕ್ಕೆಜೋಳವನ್ನು ಮಾರಾಟ ಮಾಡಿದ ಬಳಿಕ ಖರೀದಿ ಕೇಂದ್ರದಲ್ಲಿ ನೀವು ಎಷ್ಟು ಕ್ವಿಂಟಾಲ್ ಮೆಕ್ಕೆಜೋಳ ಮಾರಾಟ ಮಾಡಿರುವಿರಿ? ಎಷ್ಟು ಹಣವನ್ನು KMF ನಿಮಗೆ ಪಾವತಿ ಮಾಡಬೇಕು? ಪಾವತಿ ಮಾಡವ ದಿನಾಂಕದ ಮಾಹಿತಿಯ ಸ್ವೀಕೃತಿ ನೀಡಲಾಗುತ್ತದೆ 15-20 ದಿನದ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಮೆಕ್ಕೆಜೋಳದ ಮಾರಾಟದ ಹಣ DBT ಮೂಲಕ ಜಮಾ ಮಾಡಲಾಗುತ್ತದೆ.
KMF mekejola kharidi kendra- ರಾಜ್ಯದಲ್ಲಿ ಎಲ್ಲೆಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತದೆ?
1) ಎಚ್.ಡಿ. ಕೋಟೆ
2) ದಾವಣಗೆರೆ
3) ಹಾವೇರಿ
4) ಚಿತ್ರದುರ್ಗ
5) ಹಗರಿಬೊಮ್ಮನಹಳ್ಳಿ
6) ಪಿರಿಯಾಪಟ್ಟಣ
7) ಗೌರಿಬಿದನೂರು
8) ಶಿಗ್ಗಾವಿ
9) ಹೊನ್ನಾಳಿ
10) ಗದಗ
11) ಹಿರೇಕೆರೂರು
12) ರಾಣೆಬೆನ್ನೂರು