Karnataka Male Mahiti-ಕರ್ನಾಟಕ ಮಳೆ ಮುನ್ಸೂಚನೆ! ಈ ಜಿಲ್ಲೆಗಳಲ್ಲಿ ಮಳೆ!

April 28, 2025 | Siddesh
Karnataka Male Mahiti-ಕರ್ನಾಟಕ ಮಳೆ ಮುನ್ಸೂಚನೆ! ಈ ಜಿಲ್ಲೆಗಳಲ್ಲಿ ಮಳೆ!
Share Now:

ಕರ್ನಾಟಕ ಮಳೆ ಪ್ರಮಾಣ ಸೂಚಕ ನಕ್ಷೆಯ ಮಾಹಿತಿಯನ್ವಯ(male mahiti) ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಗದಗ ಜಿಲ್ಲೆ ಲಕ್ಷ್ಮೀಶ್ವರ ತಾಲ್ಲೂಕಿನ ದೊಡ್ಡೂರ ವ್ಯಾಪ್ತಿಯಲ್ಲಿ ಅತ್ಯಧಿಕ 82 ಮಿಲಿ ಮೀಟರ್ ದಾಖಲಾಗಿರುತ್ತದೆ. ಉಳಿದಂತೆ ತುಮಕೂರು, ಹಾವೇರಿ, ದಕ್ಷಿಣಕನ್ನಡ, ಧಾರವಾಡ ಜಿಲ್ಲೆಯ ಅಲ್ಲಿಲ್ಲಿ ಸಾಧಾರಣದಿಂದ ಉತ್ತಮ ಮಳೆ ದಾಖಲಾಗಿದ್ದು ಉಳಿದ ಜಿಲ್ಲೆಯಲ್ಲಿ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ದಾಖಲಾಗಿದೆ.

ಈ ಲೇಖನದಲ್ಲಿ ನಾಳೆ ಬೆಳಿಗ್ಗೆವರೆಗಿನ ಮಳೆ ಮುನ್ಸೂಚನೆ(Male Munsuchane) ಮತ್ತು ಮುಂದಿನ 3 ದಿನದ ಮಳೆ ಮಾಹಿತಿ ಸೇರಿದಂತೆ ರಾಜ್ಯದ ಹವಾಮಾನ ಮುನ್ಸೂಚನೆ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Land Owner Document-1 ಲಕ್ಷ ನಿವಾಸಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ: ಸಚಿವ ಕೃಷ್ಣಬೈರೇಗೌಡ

ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ(Karnataka Male mahiti) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.

Rain Forecast-ನಾಳೆ ಅಂದರೆ 29 ಏಪ್ರಿಲ್ 2025ರ ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ ಹೀಗಿದೆ:

ಕರಾವಳಿ ಜಿಲ್ಲೆಗಳಲ್ಲಿ:

ಕಾಸರಗೋಡು-ಕರ್ನಾಟಕ ಗಡಿಭಾಗ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳು, ಉಡುಪಿ ಜಿಲ್ಲೆಯ ಘಟ್ಟದ ಕೆಳಭಾಗದ ಪ್ರದೇಶಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವೆಡೆ ಮೋಡದ ವಾತಾವರಣದ ಜೊತೆಗೆ ಒಂದೆರಡು ಕಡೆ ಅನಿರೀಕ್ಷಿತ ಸಾಮಾನ್ಯ ಮಳೆ ಬೀಳುವ ಸಂಭವವಿದೆ.

ಪ್ರಸ್ತುತ ಮಾಹಿತಿಯಂತೆ, ಏಪ್ರಿಲ್ 29 ಮತ್ತು 30ರಂದು ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದಾದರೂ, ಮೇ 1ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆಗಳಿವೆ.

ಇದನ್ನೂ ಓದಿ: Pouthi Khata Abhiyana-ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ!

male munsuchane

ಮಲೆನಾಡು ಜಿಲ್ಲೆಗಳಲ್ಲಿ:

ಕೊಡಗು, ಹಾಸನ ಜಿಲ್ಲೆಯ ಕರಾವಳಿಯ ಅಕ್ಕ-ಪಕ್ಕದ ಪ್ರದೇಶಗಳು, ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಕುದುರೆಮುಖ, ಆಗುಂಬೆ, ಶೃಂಗೇರಿ, ಕೊಪ್ಪ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಶಿವಮೊಗ್ಗದ ಉಳಿದ ಭಾಗಗಳಲ್ಲಿ ಕೆಲವೆಡೆ ಸಾಮಾನ್ಯ ಮಳೆಯ ಸಂಭವವಿದೆ. ಚಿಕ್ಕಮಗಳೂರು ಮತ್ತು ಹಾಸನದ ಇತರ ಪ್ರದೇಶಗಳಲ್ಲಿ ಕೆಲವೆಡೆ ಮೋಡದ ವಾತಾವರಣ ಮತ್ತು ತುಂತುರು ಮಳೆಯ ಸಾಧ್ಯತೆ ಇದೆ.

ಪ್ರಸ್ತುತ ಮಾಹಿತಿಯಂತೆ, ಏಪ್ರಿಲ್ 29ರಿಂದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯಲಿದ್ದು, ಮೇ 1ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ ಇದೆ.

ಇದನ್ನೂ ಓದಿ: Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

ಒಳನಾಡು ಜಿಲ್ಲೆಗಳಲ್ಲಿ:

ಉತ್ತರ ಒಳನಾಡು: ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಉಳಿದ ಉತ್ತರ ಒಳನಾಡಿನ ಭಾಗಗಳಲ್ಲಿ ಕೆಲವೆಡೆ ಮೋಡದ ವಾತಾವರಣ ಇರಬಹುದು.

ದಕ್ಷಿಣ ಒಳನಾಡು: ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಗಳ ಒಂದೆರಡು ಕಡೆ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಕೆಲವೆಡೆ ಗುಡುಗು ಮತ್ತು ಮೋಡದ ವಾತಾವರಣ ಇರಬಹುದು.

ಪ್ರಸ್ತುತ ಮಾಹಿತಿಯಂತೆ, ಮುಂದಿನ ಎರಡು ದಿನಗಳ ಕಾಲ ಮಳೆಯ ಪ್ರಮಾಣ ಕಡಿಮೆಯಾಗಬಹುದು. ಆದರೆ, ಮೇ 1ರಿಂದ ದಕ್ಷಿಣ ಒಳನಾಡಿನಲ್ಲಿ ಮತ್ತು ಮೇ 4ರಿಂದ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.

Share Now: