Male nakshatragalu: 2024ರ ಮಳೆ ನಕ್ಷತ್ರಗಳು ಮತ್ತು ಹಿರಿಯರ ಗಾದೆಗಳು! ಇಲ್ಲಿದೆ ಉಪಯುಕ್ತ ಮಾಹಿತಿ!

Facebook
Twitter
Telegram
WhatsApp

ರಾಜ್ಯದ್ಯಂತ ಕಳೆದ 2-3 ವಾರದಿಂದ ಉತ್ತಮ ಮತ್ತು ಅಧಿಕ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು ಈ ವರ್ಷದ(2024) ಮಳೆ ನಕ್ಷತ್ರಗಳು ಯಾವ ತಿಂಗಳಲ್ಲಿ ಯಾವ ಮಳೆ ನಕ್ಷತ್ರಗಳು(Male nakshatragalu: 2024) ಬರುತ್ತವೆ ಮತ್ತು ಈ ಕುರಿತು ನಮ್ಮ ಹಿರಿಯರ ಗಾದೆ ಮಾತುಗಳ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಮಳೆ ನಕ್ಷತ್ರಗಳ ಕುರಿತು ನಮ್ಮ ಪೂರ್ವಜರು ಅನೇಕ ವರ್ಷದ ಅನುಭವದ ಆಧಾರದ ಮೇಲೆ ಹಲವು ಬಗ್ಗೆಯ ಗಾಧೆ ಮಾತುಗಳನ್ನು ಹೇಳಿದ್ದು ಅವುಗಳು ವಾಸ್ತವವಾಗಿ ಸತ್ಯವು ಅಗಿವೆ. ಇಂದಿನ ವೈಜ್ನಾನಿಕ ಕಾಲದಲ್ಲಿಯು ಜನರು ಈ ಗಾದೆ ಮಾತುಗಳನ್ನು ನಂಬಿರುತ್ತಾರೆ.

ಇಂಗ್ಲಿಷ್ ನಲ್ಲಿ ಹೇಳುವ ಹಾಗೆ Old is Gold ಎನ್ನುವ ರೀತಿ ಪ್ರತಿ ತಿಂಗಳು ಬರುವ ಮಳೆ ನಕ್ಷತ್ರಗಳು ಹಾಗೂ ಅವುಗಳ ಕುರಿತಾದ ಗಾದೆ ಮಾತುಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿವೆ. ಈ ಕೆಳಗೆ ಯಾವ ತಿಂಗಳು ಯಾವ ಮಳೆ ನಕ್ಷತ್ರ ಬರುತ್ತದೆ ಮತ್ತು ಆ ಮಳೆ ನಕ್ಷತ್ರದ ಕುರಿತಾದ ಹಿರಿಯರ ಗಾದೆ ಮಾತು ಯಾವುದು? ಎಂದು ಮಾಹಿತಿ ಹಂಚಿಕೊಂಡಿದ್ದು, ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Dam water level in karnataka: ರಾಜ್ಯದ ಯಾವ ಯಾವ ಡ್ಯಾಂ ಎಷ್ಟು? ನೀರು ಭರ್ತಿಯಾಗಿದೆ ಇಲ್ಲಿದೆ ಸಂಪೂರ್ಣ ವಿವರ!

Male nakshatragala mahiti- ಈ ವರ್ಷದ ಮಳೆ ನಕ್ಷತ್ರಗಳು ಮತ್ತು ಅವದಿ

ಅಶ್ವಿನಿ: ಏಪ್ರಿಲ್ 14 ರಿಂದ ಏಪ್ರಿಲ್ 27

ಭರಣಿ: ಏಪ್ರಿಲ್ 28 ರಿಂದ ಮೇ 11

ಕೃತಿಕಾ: ಮೇ 12 ರಿಂದ ಮೇ 25

ರೋಹಿಣಿ: ಮೇ 26 ರಿಂದ ಜೂನ್ 6

ಮೃಗಶಿರ: ಜೂನ್ 7 ರಿಂದ ಜೂನ್ 22

ಆರ್ದ್ರ: ಜೂನ್ 23 ರಿಂದ ಜುಲೈ 6

ಪುನರ್ವಸು: ಜುಲೈ 7 ರಿಂದ ಜುಲೈ 20

ಪುಷ್ಯ: ಜುಲೈ 21 ರಿಂದ ಆಗಸ್ಟ್ 3

ಆಶ್ಲೇಷಾ: ಆಗಸ್ಟ್ 4 ರಿಂದ ಆಗಸ್ಟ್ 17

ಇದನ್ನೂ ಓದಿ: LIC jobs-2024: ಎಲ್ಐಸಿಯಿಂದ 200 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ!

ಮಖ/ಮಾಘ: ಆಗಸ್ಟ್ 18 ರಿಂದ ಸೆಪ್ಟೆಂಬರ್ ಆಗಸ್ಟ್ 31

ಪುಬ್ಬಾ: ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 13

ಉತ್ತರಾ: ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 27

ಹಸ್ತ: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 10

ಚಿತ್ತಾ: ಅಕ್ಟೋಬರ್ 11 ರಿಂದ ಅಕ್ಟೋಬರ್ 24

ಸ್ವಾತಿ: ಅಕ್ಟೋಬರ್ 25 ರಿಂದ ನವೆಂಬರ್ 6

ವಿಶಾಖ: ನವೆಂಬರ್ 7 ರಿಂದ ನವೆಂಬರ್ 19

ಅನೂರಾಧಾ: ನವೆಂಬರ್ 20 ರಿಂದ ಡಿಸೆಂಬರ್ 2

ಜ್ಯೇಷ್ಠ: ಡಿಸೆಂಬರ್ 3 ರಿಂದ ಡಿಸೆಂಬರ್ 15

ಮೂಲ: ಡಿಸೆಂಬರ್ 16 ರಿಂದ ಡಿಸೆಂಬರ್ 28

ಇದನ್ನೂ ಓದಿ: Vasati Yojane application-2024: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ನೆರವು!

ಪೂರ್ವಾಷಾಢ (ಪೂಷಾ): ಡಿಸೆಂಬರ್ 29 ರಿಂದ 2025 ಜನವರಿ 10

ಉತ್ತರಾಷಾಢ (ಉಷಾ): 2025 ಜನವರಿ 11 ರಿಂದ ಜನವರಿ 23

ಶ್ರವಣ: 2025 ಜನವರಿ 24 ರಿಂದ 2025 ಫೆಬ್ರುವರಿ 5

ಧನಿಷ್ಠ: 2025 ಫೆಬ್ರುವರಿ 6 ರಿಂದ 2025 ಫೆಬ್ರುವರಿ 18

ಶತಭಿಷ: 2025 ಫೆಬ್ರುವರಿ 19 ರಿಂದ ಮಾರ್ಚ್ 3

ಪೂರ್ವಾಭಾದ್ರಾ: 2025 ಮಾರ್ಚ್ 4 ರಿಂದ ಮಾರ್ಚ್ 16

ಉತ್ತರಾಭಾದ್ರಾ: 2025 ಮಾರ್ಚ್ 17 ರಿಂದ 

ಇದನ್ನೂ ಓದಿ: PM Usha Scholarship 2024: PUC ಪಾಸಾದವರಿಗೆ ಕೇಂದ್ರದಿಂದ 20 ಸಾವಿರ ವಿದ್ಯಾರ್ಥಿವೇತನ!

Male nakshatragala gade matugalu-ಮಳೆ ನಕ್ಷತ್ರಗಳಿಗೆ ಸಂಬಂದಪಟ್ಟ ಹಿರಿಯರ ಗಾದೆ ಮಾತುಗಳು:

ಅಶ್ವಿನಿ:

ಅಶ್ವಿನಿ ಸಸ್ಯ ನಾಶಿನಿ
ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು
ಅಶ್ವಿನಿ ಆದರೆ ಶಿಶುವಿಗೆ ಹಾಲಿಲ್ಲ

ಭರಣಿ:

ಭರಣಿ ಮಳೆ ಧರಣಿ ಬೆಳೆ
ಭರಣಿ ಮಳೆ ಧರಣಿ ಎಲ್ಲಾ ಆಳ್ತು
ಭರಿಣಿ ಬಂದ್ರ ಧರಿಣಿ ಬೆಳೀತದ
ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು
ಭರಣಿ ಸುರಿದರೆ ಧರಣಿ ಬದುಕೀತು
ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ
ಭರಣಿ ಮಳೆ ಧರಣಿ ತಂಪು

ಕೃತಿಕಾ:

ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ರೋಹಿಣಿ:

ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
ರೋಹಿಣಿ ಮಳೆಗೆ ಓಣ್ಯೆಲ್ಲಾ ಜೋಳ

ಮೃಗಶಿರ:

ಮೃಗಶಿರ ಮಿಂಚಿದರೆ ಮೂರು ಮಳೆ ಇಲ್ಲ
ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು
ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

ಆರಿದ್ರಾ:

ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ
ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ
ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ
ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ
ಆರಿದ್ರೆಯಲಿ ಗಿಡ ಆದರೆ ಆದಿತು

ಪುನರ್ವಸು:

ಪುನರ್ವಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು

ಪುಷ್ಯ:

ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)
ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು

ಆಶ್ಲೇಷ:

ಆಶ್ಲೇಷ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ
ಆಶ್ಲೆಚ ಮಳೆ ಕೈತುಂಬಾ ಬೆಳೆ
ಆಶ್ಲೇಷ ಮಳೆ ಈಸಲಾರದ ಹೊಳೆ
ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.
ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು
ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ
ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ ನಂಜಿನ ಮಳೆ

ಇದನ್ನೂ ಓದಿ: Krishi mela dharwad-2024: ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ಮಾಹಿತಿ!

ಮಖ/ಮಾಘ:

ಬಂದರೆ ಮಘೆ ಹೋದರೆ ಹೊಗೆ
ಬಂದರೆ ಮಘೆ ಇಲ್ಲದಿದ್ದರೆ ಧಗೆ
ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು
ಮಗೆ ಮಳೆ ಮಗೆ ಗಾತ್ರ ಬೀಳ್ತದೆ
ಮಘಮಳೆ ಮೊಗೆದು ಹೊಯ್ಯುವುದು

ಪುಬ್ಬಾ/ ಹುಬ್ಬ:

ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ
ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ
ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ
ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ
ಹುಬ್ಬೆ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.

ಉತ್ತರೆ:

ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ
ಉತ್ತರ ಎದುರುತ್ತರದ ಮಳೆ
ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ
ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

ಹಸ್ತ:

ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ
ಹಸ್ತಾ ಭಾರಿಸಿದರೆ ಅಷ್ಟೇ
ಹಸ್ತ ಮಳೆ ಎತ್ಲಿಂದಾದ್ರೂ ಬರುತ್ತೆ

ಚಿತ್ತ:

ಕುರುಡು ಚಿತ್ತೆ ಎರಚಿದತ್ತ ಬೆಳೆ
ಚಿತ್ತಾ ಮಳೆ ವಿಚಿತ್ರ ಬೆಳೆ!
ಚಿತ್ತಾ ಚಿತ್ರವಿಚಿತ್ರ ಮಳೆ
ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ

ಸ್ವಾತಿ:

ಸ್ವಾತಿ ಮಳೆ ಮುತ್ತಿನ ಬೆಳೆ
ಸ್ವಾತಿ ಮಳೆ ಹೇತೆನೆಂದ್ರೂ ಬಿಡದು
ಸ್ವಾತಿ ಮುತ್ತಿನ ಹನಿಯ ಮಳೆ
ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

ವಿಶಾಖ:

ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ
ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ
ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ

ಅನುರಾಧ:

ಅನುರಾಧ ಬಂದರೆ ನಮ್ಮ ರಾಗಿ ನಮ್ಮದು
ಅನುರಾಧಾ ಹೊಯ್ದರೆ ರೋಗ ನಿವಾರಣೆ

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ