- Advertisment -
HomeAgricultureMale Nakshatragalu-2025: ಈ ವರ್ಷದ ಮಳೆ ನಕ್ಷತ್ರಗಳು! ಇಲ್ಲಿದೆ ಸಂಪೂರ್ಣ ಮಾಹಿತಿ!

Male Nakshatragalu-2025: ಈ ವರ್ಷದ ಮಳೆ ನಕ್ಷತ್ರಗಳು! ಇಲ್ಲಿದೆ ಸಂಪೂರ್ಣ ಮಾಹಿತಿ!

ಬಿಕ್ಕಟ್ಟಿನ ಬೇಸಿಗೆಯ ನಡುವೆಯೇ ಜನತೆಯ ಕಣ್ಣಿನಲ್ಲಿ ಮಳೆಯ ನಿರೀಕ್ಷೆಯ ಮಂಜು! 2025ರ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿಂದಲೇ(Karnataka monsoon astrology 2025) ರಾಜ್ಯದ ಹಲವೆಡೆ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಸೂರ್ಯನ ಕಿರಣಗಳು ನೆತ್ತಿಯ ಮೇಲೆ ನಿಂತು ಸುಡುವ ಸ್ಥಿತಿ ನಿರ್ಮಾಣವಾಗಿದೆ. ಜನರು ಎಳನೀರು, ಜ್ಯೂಸ್‌ಗಳ ಮೊರೆ ಹೋಗುತ್ತಿದ್ದಾರೆ. ಈ ಬಿಸಿ ಧಗೆಯಲ್ಲಿ ಮಳೆ ಕಳೆ ಬೀರಲು ಜನತೆ ಕಾಯುತ್ತಿದ್ದಾರೆ.

ಹವಾಮಾನ ಇಲಾಖೆ ಹಾಗೂ ಜ್ಯೋತಿಷ್ಯ ಶಾಸ್ತ್ರ(Male nakshatra) ಎರಡೂ ಈ ವರ್ಷ ಉತ್ತಮ ಮಳೆಯ ಭರವಸೆ ನೀಡುತ್ತಿವೆ. ಮುಂಗಾರು ಮಳೆಯ(Monsoon prediction Karnataka) ಅಧಿಕೃತ ಅವಧಿ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಇರಲಿದ್ದು ಈ ಸಮಯದಲ್ಲಿನ ಮಳೆ ನಕ್ಷತ್ರಗಳು ಮತ್ತು ಅವುಗಳ ಮಳೆ ಅವಧಿ ಮತ್ತು ಈ ನಕ್ಷತ್ರಗಳ ಕುರಿತು ಹಿರಿಯರು ಹೇಳಿರುವ ಗಾಧೆ ಮಾತುಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Diploma Agriculture-ಒಂದು ವರ್ಷದ ಕೃಷಿ ಡಿಪ್ಲೊಮಾ ಮತ್ತು ಇತರೆ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ!

Nakshatra Gade Mathugalu-ಜ್ಯೋತಿಷ್ಯದ ನಕ್ಷತ್ರಗಳ ಅನ್ವಯ ಮಳೆ ನಿರೀಕ್ಷೆ:

ಯುಗಾದಿ ಸಂದರ್ಭದಲ್ಲಿ ಹೊರಬರುವ ಪಂಚಾಂಗ ಆಧರಿಸಿ ಮಳೆಯ ಪೂರ್ವಾನುಮಾನ ಮಾಡಲಾಗುತ್ತದೆ. 27 ನಕ್ಷತ್ರಗಳಲ್ಲಿ 11 ಅನ್ನು ಮಳೆ ನಕ್ಷತ್ರಗಳೆಂದು ಪರಿಗಣಿಸಲಾಗುತ್ತದೆ. ಈ ಮಳೆ ನಕ್ಷತ್ರಗಳಲ್ಲಿ ಪ್ರಮುಖವಾದವು ಇವುಗಳ ವಿವರ ಹೀಗಿದೆ: ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘೆ, ಹುಬ್ಬಾ, ಉತ್ತರಾ, ಹಸ್ತ, ಚಿತ್ತಾ, ಸ್ವಾತಿ, ವಿಶಾಖ

Male Nakshatragalu-2025 ಮುಂಗಾರು ಮಳೆಯ ಪ್ರಮುಖ ನಕ್ಷತ್ರಗಳು ಮತ್ತು ಅವಧಿ:

1) ಏಪ್ರಿಲ್ 13–26: ಅಶ್ವಿನಿ
2) ಏಪ್ರಿಲ್ 27–ಮೇ 10: ಭರಣಿ
3) ಮೇ 11–23: ಕೃತಿಕಾ
4) ಮೇ 24–ಜೂನ್ 6: ರೋಹಿಣಿ
5) ಜೂನ್ 7–20: ಮೃಗಶಿರ
6) ಜೂನ್ 21–ಜುಲೈ 4: ಆರಿದ್ರಾ
7) ಜುಲೈ 5–19: ಪುನರ್ವಸು
8) ಜುಲೈ 20–ಆಗಸ್ಟ್ 2: ಪುಷ್ಯ
9) ಆಗಸ್ಟ್ 3–16: ಆಶ್ಲೇಷಾ
10) ಆಗಸ್ಟ್ 17–29: ಮಘೆ

ಇದನ್ನೂ ಓದಿ: Anganavadi Recruitment-558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ!


11) ಆಗಸ್ಟ್ 30–ಸೆಪ್ಟೆಂಬರ್ 12: ಹುಬ್ಬಾ
12) ಸೆಪ್ಟೆಂಬರ್ 13–26: ಉತ್ತರಾ
13) ಸೆಪ್ಟೆಂಬರ್ 27–ಅಕ್ಟೋಬರ್ 9: ಹಸ್ತ
14) ಅಕ್ಟೋಬರ್ 10–24: ಚಿತ್ತಾ
15) ಅಕ್ಟೋಬರ್ 25–ನವೆಂಬರ್ 6: ಸ್ವಾತಿ
16) ನವೆಂಬರ್ 7–18: ವಿಶಾಖ

Male nakshatra-2025

Karnataka monsoon astrology 2025: ಜ್ಯೋತಿಷ್ಯ ದೃಷ್ಟಿಕೋಣದಿಂದ ಮಳೆ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಮತ್ತು ಶುಕ್ರ ಗ್ರಹಗಳು ಒಂದೇ ರಾಶಿಯಲ್ಲಿ ನಿಕಟವಾಗಿ ಇರುವುದರಿಂದ ಆ ವರ್ಷ ಉತ್ತಮ ಮಳೆಯಾಗುತ್ತದೆ. ಯುಗಾದಿಯಂದು ಪಂಚಾಂಗ ಓದಿದಾಗ ಈ ಪ್ರಕಾರ ಮಳೆಯ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Vidyasiri Yojane-2025: ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ! ವಿದ್ಯಾಸಿರಿ ಯೋಜನೆಯ ವಿದ್ಯಾರ್ಥಿವೇತನ ಏರಿಕೆ!

Male nakshatra gade matu-ಮಳೆ ನಕ್ಷತ್ರಗಳಿಗೆ ಸಂಬಂದಪಟ್ಟ ಗಾದೆ ಮಾತುಗಳು:

  • ಅಶ್ವಿನಿ: ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು
  • ಭರಣಿ: ಭರಣಿ ಮಳೆ ಧರಣಿ ಬೆಳೆ
  • ಕೃತಿಕಾ: ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು
  • ರೋಹಿಣಿ: ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
  • ಮೃಗಶಿರ: ಮೃಗಶಿರ ಮಿಂಚಿದರೆ ಮೂರು ಮಳೆ ಇಲ್ಲ
  • ಆರಿದ್ರಾ: ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ
  • ಪುನರ್ವಸು: ಪುನರ್ವಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು

ಇದನ್ನೂ ಓದಿ: Free Bus-ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ!

  • ಪುಷ್ಯ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)
  • ಆಶ್ಲೇಷ: ಆಶ್ಲೇಷ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ
  • ಮಖ/ಮಾಘ: ಬಂದರೆ ಮಘೆ ಹೋದರೆ ಹೊಗೆ
  • ಪುಬ್ಬಾ/ ಹುಬ್ಬ: ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ
  • ಉತ್ತರೆ: ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ
  • ಹಸ್ತ: ಹಸ್ತ ಮಳೆ ಎತ್ಲಿಂದಾದ್ರೂ ಬರುತ್ತೆ
  • ಚಿತ್ತ: ಕುರುಡು ಚಿತ್ತೆ ಎರಚಿದತ್ತ ಬೆಳೆ
  • ಸ್ವಾತಿ: ಸ್ವಾತಿ ಮಳೆ ಮುತ್ತಿನ ಬೆಳೆ
  • ವಿಶಾಖ: ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ
  • ಅನುರಾಧ: ಅನುರಾಧ ಬಂದರೆ ನಮ್ಮ ರಾಗಿ ನಮ್ಮದು
- Advertisment -
LATEST ARTICLES

Related Articles

- Advertisment -

Most Popular

- Advertisment -