Sambaru mandali subsidy scheme-ಸಾಂಬಾರು ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಸಾಂಬಾರು ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ(Sambaru mandali subsidy scheme)ಹ್ವಾನಿಸಲಾಗಿದ್ದು,ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳು ಇತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಪ್ರಸ್ತುತ 2024-25 ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ  ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಸಹಾಯಧನ ಪಡೆಯಲು ದಿನಾಂಕ 20 ಅಕ್ಟೋಬರ್ 2024 ರ ಒಳಗೆ ಅರ್ಜಿ ಸಲ್ಲಿಸಬಹುದು.

Sambaru mandali yojanegalu- ಯಾವೆಲ್ಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ?

1) ಹೊಸದಾಗಿ ಏಲಕ್ಕಿ ತೋಟ ನಿರ್ಮಾಣ.
2) ಏಲಕ್ಕಿ ನರ್ಸರಿ ನಿರ್ಮಾಣ.
3) ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ ಮತ್ತು ಗ್ರಾವಿಟಿ ಸಪರೇಟರ್ ಯಂತ್ರ ಪಡೆಯಲು ಸಹ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: bagar hukum-ಕಂದಾಯ ಇಲಾಖೆಯಿಂದ ‘ಬಗರ್ ಹುಕುಂ’ ಸಾಗುವಳಿ ರೈತರಿಗೆ ಗುಡ್ ನ್ಯೂಸ್!

ಇತರೆ ಸಹಾಯಧನ ಯೋಜನೆಗಳು:

1) ಸೌರಶಾಖ ಘಟಕ.
2) ಪ್ರಾಥಮಿಕ ಸಂಸ್ಕರಣಾ ಘಟಕಗಳು: ಮಲ್ಟಿ ಪರ್ಪಸ್ ಪ್ರೋಸೆಸಿಂಗ್ ಯೂನಿಟ್(ಅಡಿಕೆ,ಕೋಕೋ,ಕಾಳುಮೆಣಸು,ಏಲಕ್ಕಿ,ಕೋಕಮ್)
3) ಗೇರು ಸಂಸ್ಕರಣಾ ಘಟಕ.
4) ಒಣದ್ರಾಕ್ಷಿ ಘಟಕ
5) ಸಂಚಾರಿ ಅರಿಶಿಣ ಸಂಸ್ಕರಣ ಘಟಕ
6) ಇತರೆ ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳು.

Guidelines/ಮಾರ್ಗಸೂಚಿ: Download Now-1, Download Now-2

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ನಿಮ್ಮ ಹತ್ತಿರದ ಸಂಬಾರು ಮಂಡಳಿಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Atal Pension Yojana-2024: ಅಟಲ್ ಪಿಂಚಣಿ ಯೋಜನೆ ಪ್ರತಿ ತಿಂಗಳಿಗೆ ರೂ 5,000 ಪಿಂಚಣಿ ಪಡೆಯಲು ಅರ್ಜಿ!

Required documents- ವಿವಿಧ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳು:
 
A)ಹೊಸದಾಗಿ ಏಲಕ್ಕಿ ತೋಟ ಮಾಡಿದ ಯೋಜನೆಗೆ ಬೇಕಾಗುವ ದಾಖಲೆಗಳು:

1)ಈ ವರ್ಷದ RTC/ಪಹಣಿ
2)ನಕಾಶೆ (Survey sketch)
3)ಬ್ಯಾಂಕ್ ಪಾಸಬುಕ್ 
4)ತೋಟಗಾರಿಕಾ ಇಲಾಖೆಯಿಂದ ಫಾರ್ಮ್-B
5)ವೋಟರ್ ಐಡಿ
6)ಆಧಾರ್ ಕಾರ್ಡ್

B) ಏಲಕ್ಕಿ ನರ್ಸರಿ ಯೋಜನೆಗೆ ಬೇಕಾಗುವ ದಾಖಲಾತಿಗಳು::

1)RTC/ಪಹಣಿ
2)ಬ್ಯಾಂಕ್ ಪಾಸ್ಬುಕ್ 
3)ಆಧಾರ್ ಕಾರ್ಡ್
4)ವೋಟರ್ ಐಡಿ

ಇದನ್ನೂ ಓದಿ: PM awas scheme-ಸ್ವಂತ ಮನೆ ಕಟ್ಟುವವರಿಗೆ PM Awas ಯೋಜನೆಯಡಿ1.2 ಲಕ್ಷ ಸಬ್ಸಿಡಿ!
 
C) ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ ಮತ್ತು ಗ್ರಾವಿಟಿ ಸಪರೇಟರ್ ಗೆ ಬೇಕಾಗುವ ದಾಖಲೆಗಳು:

1)ಕ್ವೋಟೇಶನ್ -Quotation (ಸಂಬಾರ ಮಂಡಳಿ ಅನುಮೋದಿತ ತಯಾರಕರಿಂದ)
2)ಪಹಣಿ/RTC
3)ಆರ್.ಟಿ.ಸಿ ಯಲ್ಲಿ ಕಾಳುಮೆಣಸು ಬೆಳೆ ಇಲ್ಲದಿದ್ದರೆ ಗ್ರಾಮ ಲೆಕ್ಕಾಧಕಾರಿಯಿಂದ ಬೆಳೆ ದೃಢೀಕರಣ ಪತ್ರ.
4)ಆಧಾರ್ ಕಾರ್ಡ್.
5)ಬ್ಯಾಂಕ್ ಪಾಸ್ಬುಕ್.
6)ವೋಟರ್ ಐಡಿ.
7)ಕಂದಾಯ ತುಂಬಿದ ರಶೀದಿ.

ಹೆಚ್ಚಿನ ಮಾಹಿತಿಗೆ  ನಿಮ್ಮ ಹತ್ತಿರದ ಸಾಂಬಾರು ಮಂಡಳಿಯ ಕ್ಷೇತ್ರಾಧಿಕಾರಿ ರವರನ್ನು ಸಂಪರ್ಕಿಸಿ.
Sambaru mandali website-ಸಾಂಬಾರು ಮಂಡಳಿಯ ಅಧಿಕೃತ ವೆಬ್ಸೈಟ್ ಲಿಂಕ್: Click here