Marriage registration-2024: ವಿವಾಹ ನೋಂದಣಿ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ!

Facebook
Twitter
Telegram
WhatsApp

ಸಾರ್ವಜನಿಕರು ತಮ್ಮ ವಿವಾಹವನ್ನು ಸರಕಾರಿ ದಾಖಲೆ ಪಡೆಯುವುದರ ಮೂಲಕ ಅಧಿಕೃತ ಮಾಡಿಕೊಳ್ಳಲು ವಿವಾಹ ಪ್ರಮಾಣ ಪತ್ರವನ್ನು(Marriage registration) ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ವಿವಾಹ ನೋಂದಣಿಯನ್ನು ಎಲ್ಲಿ ಮಾಡಿಸಬೇಕು?(Marriage registration online application) ನೋಂದಣಿ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳೇನು? ಅಗತ್ಯ ದಾಖಲಾತಿಗಳೇನು? ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Sukanya Samriddhi Yojana-2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ತಪ್ಪದೇ ಈ ಕೆಲಸ ಮಾಡಿ!

Required Documents for Marriage registration- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ವಧು ಮತ್ತು ವರರ ಆಧಾರ್ ಕಾರ್ಡ ಪ್ರತಿ.
2) ವಧು ಮತ್ತು ವರರ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ.
3) ಮದುವೆಯ ಆಮಂತ್ರಣ ಪತ್ರ.
4) ಮೂರು ಜನ ಸಾಕ್ಷಿಗಳ ಆಧಾರ್ ಪ್ರತಿ.
5) ಮದುವೆ ಪೋಟೋ.

Online Marriage Registration link- ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ನಾಗರಿಕರು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಬಳಕೆ ಮಾಡಿಕೊಂಡು ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ ಕಾವೇರಿ 2.0 ಜಾಲತಾಣವನ್ನು ಪ್ರವೇಶ ಮಾಡಿ ಇಲ್ಲಿ ತಿಳಿಸಿರುವ ವಿಧಾನವನ್ನು  ಅನುಸರಿಸಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: RGEP Program-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Step-1: ಪ್ರಥಮದಲ್ಲಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾವೇರಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಈ ಜಾಲತಾಣಕ್ಕೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಮೊದಲಿಗೆ “Register” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕೊನೆಯಲ್ಲಿ ಕಾಣುವ “Register”ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ರಚನೆ ಮಾಡಿಕೊಂಡಿರುವ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-4: ಲಾಗಿನ್ ಅಗಿ ಇಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ವಿವಾಹ ವಿವರ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಕೆಯಾಗಿತ್ತದೆ.

Why Marriage Registration?ವಿವಾಹ ನೋಂದಣಿ ಏಕೆ ಮಾಡಬೇಕು?

ಮದುವೆ ಪ್ರಮಾಣ ಪತ್ರವು ಪ್ರಸ್ತುತ ದಿನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಮದುವೆಯಾದ ಪ್ರತಿಯೊಬ್ಬ ದಂಪತಿಗಳು ತಪ್ಪದೇ ತಮ್ಮ ವಿವಾಹ ನೋಂದಣಿಯನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

1) ಮದುವೆ ಪ್ರಮಾಣ ಪತ್ರವು ಮಹಿಳೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.

2) ಪತಿ/ಪತ್ನಿ ಇವರ ಪೈಕಿ ಯಾರಾದರೊಬ್ಬರು ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿರದೆ ಮರಣ ಹೊಂದಿದರೆ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣವನ್ನು ಕ್ಲೈಮ್ ಮಾಡಲು ಈ ಪ್ರಮಾಣ ಪತ್ರ ಅವಶ್ಯಕ.

3) ವಿದೇಶಗಳಿಗೆ ಪತಿ ಅಥವಾ ಪತ್ನಿಯನ್ನು ಕರೆದೊಯ್ಯವಾಗ ವಿಸಾ ಪಡೆಯುವ ಮದುವೆ ನೋಂದಣಿ ಪ್ರಮಾಣ ಪತ್ರ ಅವಶ್ಯಕ.

ಇದನ್ನೂ ಓದಿ:  PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!

ವಿವಾಹ ನೋಂದಣಿಯನ್ನು ಆನ್ಲೈನ್ ಹೊರತಾಗಿ ಎಲ್ಲಿ ಮಾಡಿಸಬಹುದು?

ಸಾರ್ವಜನಿಕರು ವಿವಾಹ ನೋಂದಣಿಯನ್ನು ಆನ್ಲೈನ್ ಹೊರತಾಗಿ ನಿಮ್ಮ ತಾಲ್ಲೂಕಿನ ಸಬ್-ರಿಜಿಸ್ಟಾರ್ ಕಚೇರಿಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.

ವಿವಾಹ ನೋಂದಣಿಯನ್ನು ಎಷ್ಟು ದಿನ ಒಳಗಾಗಿ ಮಾಡಿಕೊಳ್ಳಬೇಕು?

ಹಿಂದೂ ವಿವಾಹ ಮತ್ತು ಪರ‍್ಸಿ ವಿವಾಹಗನ್ನು ಮದುವೆಯಾದ ನಂತರ ಯಾವಗಲಾದರೂ ನೋಂದಣಿ ಮಾಡಿಕೊಳ್ಳಬಹುದು ಇದಕ್ಕೆ ಯಾವುದೇ ಸಮಯ ಅಥವಾ ಅವಧಿಯ ನಿರ್ಭಂಧವಿರುವುದಿಲ್ಲ.

ಇದನ್ನೂ ಓದಿ: Sambaru mandali subsidy scheme-ಸಾಂಬಾರು ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಹೆಚ್ಚಿನ ಮಾಹಿತಿ ಪಡೆಯಲು ವೆಬ್ಸೈಟ್ ಲಿಂಕ್:

ವಿವಾಹ ನೋಂದಣಿ ಕುರಿತು ಪ್ರಶ್ನೋತ್ತರಗಳು: Click here
ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್: Apply Now

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Pradhan Mantri Kisan Samman Nidhi) ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವ ರೂ 2,000 ಹಣವನ್ನು ದೇಶದ ಎಲ್ಲಾ ರೈತರಿಗೆ ಇಂದು(05-10-2024) ಜಮಾ ಅಗಲಿದ್ದು, ರೈತರು ತಮ್ಮ ಮೊಬೈಲ್

Best insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷ ಅಪಘಾತ ವಿಮೆ ಪರಿಹಾರಕ್ಕೆ ಅರ್ಜಿ!

ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷದವರೆಗೆ ಅಪಘಾತ ವಿಮೆ(Accidental insurance) ಪ್ರಯೋಜನ ಪಡೆಯಲು ನೂತನ ಯೋಜನೆಯನ್ನು ರಾಜ್ಯ ಸರಕಾರದಿಂದ ಜಾರಿಗೆ(insurance plan) ತರಲಾಗಿದ್ದು, ಈ ಯೋಜನೆಯ ಕುರಿತು

Bele parihara

Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಬೆಳೆ ನಷ್ಟ ಪರಿಹಾರವನ್ನು(bele parihara) ಪಡೆಯಲು ಎಲ್ಲಾ ದಾಖಲಾತಿಗಳು ಆನ್ಲೈನ್ ನಲ್ಲಿ ಸರಿಯಾಗಿ ಸಲ್ಲಿಸಿರುವ ರೈತರ ಹಳ್ಳವಾರು ಪಟ್ಟಿಯನ್ನು(Parihara farmer list) ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ನಲ್ಲಿ ಹಳ್ಳಿವಾರು ರೈತರ ಪಟ್ಟಿಯನ್ನು