ಮಹಾತ್ಮಗಾಂಧಿ ನರೇಗಾ ಯೋಜನೆಯಡಿ(MGNREGA) ಅರ್ಹ ಕುಟುಂಬಗಳು 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಲು ಕೇಂದ್ರ ಸರಕಾರದಿಂದ ನರೇಗಾ ಯೋಜನೆಯಡಿ ಉದ್ಯೋಗವನ್ನು ನೀಡಲಾಗುತ್ತದೆ ಈ ಯೋಜನೆಯಡಿ ಎರಡು ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಸಮುದಾಯ ಕಾಮಗಾರಿಗಳು ಮತ್ತು ವೈಯಕ್ತಿಕ ಕಾಮಗಾರಿಗಳು ಇದರ ಕುರಿತು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: BPL card-ಈ ಕಾರ್ಡ ಹೊಂದಿರುವವರಿಗೆ BPL ರೇಶನ್ ಕಾರ್ಡ ಪಡೆಯಲು ಅವಕಾಶ!
MGNREGA Scheme Details-ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಪಡೆಯಬಹುದು?
ನರೇಗಾ ಯೋಜನೆಯಡಿ ನೊಂದಾಯಿತವಾದ ಒಂದು ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಟ 5.00 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆಯಬಹುದಾಗಿದ್ದು ಅವುಗಳ ವಿವರ ಹೀಗಿದೆ.
ದನದ ಕೊಟ್ಟಿಗೆ- 57,000/-
ಕುರಿ/ಮೇಕೆ ಶೆಡ್- 70,000/-
ಬಚ್ಚಲು ಗುಂಡಿ- 11,000/-
ಕೋಳಿ ಶೆಡ್- 60,000/-
ಕೊಳವೆ ಬಾವಿ ಮರುಪೂರಕ ಘಟಕ- 45,000/-
ಎರೆಹುಳು ತೊಟ್ಟಿ- 20,000/-
ತೆರೆದ ಬಾವಿ- 1,50,000/-
ಅಜೋಲಾ ಘಟಕ- 16,000/-
ಕೃಷಿ ಹೊಂಡ-1,49,000/-
ಕಂದಕ ಬದು ನಿರ್ಮಾಣ-84,000/-
ಹಂದಿ ಸಾಕಾಣಿಕೆ ಕೊಟ್ಟಿಗೆ-87,000/-
ದೀನಬಂಧು ಜೈವಿಕ ಅನಿಲ ಘಟಕ-40,000/-
ಇಂಗು ಗುಂಡಿ ನಿರ್ಮಾಣ-4,000/-
ಇದನ್ನೂ ಓದಿ: Student Incentives-ಸರಕಾರದಿಂದ ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹಧನ!
Horticulture crop-ಬೆಳೆ ಬೆಳೆಯಲು ಸಹಾಯಧನದ ವಿವರ( 2.5 ಎಕರೆಗೆ):
ಅಡಿಕೆ- 1,68,000/-
ತೆಂಗು- 66,000/-
ಗೇರು- 63,000/-
ಮಾವು/ಸಪೋಟ- 56,000/-
ದಾಳಿಂಬೆ- 69,000/-
ಸೀಬೆ- 1,31,000/-
ತಾಳೆ- 34,000/-
ಚಕ್ಕೆ ದಾಲ್ಚಿನ್ನಿ- 1,74,000/-
ಲವಂಗ- 50,000/-
ಕಾಳುಮೆಣಸು- 1,09,000/-
ನಿಂಬೆ/ಮೋಸಂಬಿ/ಕಿತ್ತಳೆ- 49,000/-
ಹುಣಸೆ- 1,18,000/-
ನೇರಳೆ- 54,000/-
ಸೀತಾಫಲ- 58,000/-
ಇದನ್ನೂ ಓದಿ: Maize msp price- ಕೆಎಂಎಫ್ ನಿಂದ ರೂ 2,400/- ದರದಲ್ಲಿ ಮೆಕ್ಕೆಜೋಳ ಖರೀದಿ!
ಬಾರೆ- 48,000/-
ನುಗ್ಗೆ- 70,000/-
ನೆಲ್ಲಿ- 1,69,000/-
ಅಂಜೂರ- 88,000/-
ಹಲಸು- 54,000/-
ದ್ರಾಕ್ಷಿ- 4,72,000/-
ವೀಳೆದೆಲೆ(ಅರ್ಧ ಎಕರೆಗೆ)- 28,000/-
ಕರೀಬೇವು(ಅರ್ಧ ಎಕರೆಗೆ)- 60,000/-
ಕಾಫಿ- 1,68,000/-
ಬೆಣ್ಣೆ ಹಣ್ಣು- 51,000/-
ರಾಮ್ಬೂತಾನ್- 52,000/-
ಅಪ್ಪೇಮಿಡಿ ಮಾವು- 94,000/-
ಜಾಯಿಕಾಯಿ-25,000/-
ಹಿಪ್ಪು ನೇರಳೆ ನರ್ಸರಿ ಅಭಿವೃದ್ದಿ-1,28,000/-
ಡ್ರಾಗನ್ ಪ್ರೋಟ್ಸ್-1,54,000/-
ಗುಲಾಬಿ ಕೃಷಿ
Narega Yojana application-ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ರೈತರು ಮೇಲೆ ತಿಳಿಸಿರುವ ಕಾಮಗಾರಿಗಳನ್ನು ನಿಮ್ಮ ಜಮೀನಿನಲ್ಲಿ ಕೈಗೊಳ್ಳಲು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿ ಅಥವಾ ಆ ಕಾಮಗಾರಿಗೆ ಸಂಬಂಧಪಟ್ಟ ತಾಲ್ಲೂಕಿನ ಕಚೇರಿಯನ್ನು(ಕೃಷಿ/ತೋಟಗಾರಿಕೆ/ರೇಷ್ಮೆ/ಪಶುಸಂಗೋಪನೆ) ಅನ್ನು ಭೇಟಿ ಮಾಡಿ ಕ್ರಿಯಾಯೋಜನೆಯಲ್ಲಿ ನಿಮ್ಮ ಕಾಮಗಾರಿಯನ್ನು ಸೇರಿಸಲು ಅರ್ಜಿ ಸಲ್ಲಿಸಬೇಕು.
ಒಮ್ಮೆ ಕೀಯಾಯೋಜನೆಯು ಅನುಮೋದನಯಾಗಿ ಬಂದ ತಕ್ಷಣ ನೀವು ಆ ಕಾಮಗಾರಿಯನ್ನು ಅನುಷ್ಥಾನ ಮಾಡುವ ಕಾರ್ಯವನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ: New ration card- ಎಲ್ಲಾ ಜಿಲ್ಲೆಗಳಲ್ಲೂ ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
ಜಾಬ್ ಕಾರ್ಡ ಇದ್ದರೆ ಮಾತ್ರ ಅವಕಾಶ:
ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಜಾಬ್ ಕಾರ್ಡ ಅನ್ನು ಹೊಂದಿರುವುದ ಕಡ್ಡಾಯವಾಗಿದ್ದು ಇದನ್ನು ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು.
Narega job card-ಜಾಬ್ ಕಾರ್ಡ ಪಡೆಯಲು ಬೇಕಾಗುವ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಪೋಟೋ
4) ರೇಶನ್ ಕಾರ್ಡ ಪ್ರತಿ
5) ಮೊಬೈಲ್ ಸಂಖ್ಯೆ
ನರೇಗಾ ಯೋಜನೆಯ ಕುರಿತು ಇನ್ನು ಹೆಚ್ಚನ ವಿವರವನ್ನು ಪಡೆಯಲು ಉಪಯುಕ್ತ ಕೊಂಡಿಗಳು:
ಅಧಿಕೃತ ಆದೇಶದ ಪ್ರತಿ: Download Now ಅಧಿಕೃತ ವೆಬ್ಸೈಟ್: Click here
ಸಹಾಯವಾಣಿ ಸಂಖ್ಯೆ: 1800 4258 666
ಎಕ್ಸ್(Twitter)- Click here