ಮೈಕ್ರೋಫೈನಾನ್ಸ್ ನಲ್ಲಿ ಸಾಲವನ್ನು ಪಡೆದು ಮರು ಪಾವತಿ ವೇಳೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ನೆರವು ಮತ್ತು ಸಹಾಯವನ್ನು ಮಾಡಲು ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್(Microfinance) ಸಂಸ್ಥೆಯಿಂದ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದುಇವುಗಳ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಹಲವು ಭಾಗಗಳಲ್ಲಿ ಮೈಕ್ರೋಫೈನಾನ್ಸ್(Microfinance Loan) ಗಳಿಂದ ಸಾಲವನ್ನು ಪಡೆದು ಮರಳಿ ಪಾವತಿ ಮಾಡಲಾಗದೇ ಕಿರುಕುಳಕ್ಕೆ ಒಳಗಾದವರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದ್ದು ಈ ಕುರಿತು ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್ ಸಂಸ್ಥೆಯಿಂದ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಗ್ರಾಮೀಣ ಮತ್ತು ನಗರ ಭಾಗದ ಜನರು ಮೈಕ್ರೋಫೈನಾನ್ಸ್ ನಲ್ಲಿ ಸಾಲವನ್ನು(Microfinance News In Karnataka) ಪಡೆದು ಅತೀ ಹೆಚ್ಚು ಬಡ್ದಿದರದಿಂದ ಸಾಲವನ್ನು ಮರು ಪಾವತಿ ಮಾಡಲಾಗದೇ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಕಿರುಕುಳಕ್ಕೆ ಒಳಗಾದ ಅನೇಕ ಪ್ರಕರಣಗಳು ಕಳೆದ 2-3 ತಿಂಗಳಿನಿಂದ ರಾಜ್ಯದಲ್ಲಿ ದಾಖಲಾದ ಕಾರಣ ಇದರ ನಿಯಂತ್ರಣಕ್ಕೆ ರಾಜ್ಯ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿ ನೂತನ ನಿಯಮವನ್ನು ಜಾರಿಗೆ ತಂದಿರುತ್ತದೆ.
ಇದನ್ನೂ ಓದಿ: MSP Price List-ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ!ದರ ಎಷ್ಟು?
AKMI Notices-ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್ ಪ್ರಕಟಣೆ ವಿವರ:
ರಾಜ್ಯದಲ್ಲಿ ಸಾಲ ವಸೂಲಾತಿ ಮಾಡುವ ಸಂಧರ್ಭದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ನಮ್ಮ ಸದಸ್ಯರುಗಳಾದ ಮೈಕ್ರೋಫೈನಾನ್ಸ್ ಕಂಪನಿಗಳು RBI ನಿಯಂತ್ರಣದಲ್ಲಿ ಬರುವುದರಿಂದ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲವಾದರೂ ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್ ಇನ್ಸಿಟ್ಯೂಷನ್ಸ್ (AKMI) ಗ್ರಾಹಕರ ರಕ್ಷಣೆಯ ವಿಚಾರದಲ್ಲಿ RBI ನಿಯಮಾವಳಿಗೂ,
ರಾಜ್ಯ ಸರ್ಕಾರದ ಆಶಯಗಳಿಗೂ ಬದ್ಧವಾಗಿದೆ ಹಾಗೂ ಸದಾ ಗ್ರಾಹಕರ ಜೊತೆಗಿದ್ದು ಅವ ಅವರ ದೂರು, ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತ ಪರಿಹಾರ ಒದಗಿಸಿದೆ. ನಮ್ಮ ಸದಸ್ಯರುಗಳು ವಿತರಿಸುವ ಸಾಲದ ಮೇಲಿನ ಬಡ್ಡಿ ದರ ಹಾಗೂ ಇತರೆ ಶುಲ್ಕಗಳು RBI ನಿಯಮಗಳ ಪ್ರಕಾರವಾಗಿಯೇ ಇದ್ದು ಹೆಚ್ಚು ಬಡ್ಡಿ ದರ ವಿಧಿಸುವ ಪ್ರಶ್ನೆ ಇಲ್ಲ.
ಪ್ರಸ್ತುತ ಸನ್ನಿವೇಶದಲ್ಲೂ ಕಿರುಕುಳ, ಬಲವಂತದ ಸಾಲ ವಸೂಲಿಯಂಥ ಅನುಚಿತ ಮಾರ್ಗಗಳನ್ನು ತಡೆಯಲು AKMI(ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್ ) ಬದ್ಧವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಅವರ ದೂರುಗಳನ್ನು ಪರಿಹರಿಸಲು ಪ್ರಾದೇಶಿಕವಾರು ಹಲವು ಜಿಲ್ಲೆಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿದೆ. ಸಾಲ ಮರುಪಾವತಿ ಸೇರಿದಂತೆ ಯಾವುದೇ ಅನುಮಾನ, ಸಮಸ್ಯೆಗಳಿಗೆ ಸಂಬಂಧಿಸಿ ಗ್ರಾಹಕರು ನೇರವಾಗಿ ಈ ಸಹಾಯವಾಣಿಗಳಿಗೆ ಸಂಪರ್ಕಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ: Free Bus for Students- SSLC ಮತ್ತು PUC ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ!

ಇದನ್ನೂ ಓದಿ: Karnataka Dam Water Level-ಈ ಬಾರಿ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ?
District Wise Microfinance Helpline Numbers-ಜಿಲ್ಲಾವಾರು ಸಹಾಯವಾಣಿಗಳ ವಿವರ ಈ ಕೆಳಗಿನಂತಿದೆ:
ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿಗೆ ಕಿರುಕುಳ ನೀಡುತ್ತಿದ್ದರೆ ಅಂತಹ ಗ್ರಾಹಕರು ಈ ಕೆಳಗೆ ತಿಳಿಸಿರುವ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ದೂರನ್ನು ಸಲ್ಲಿಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.
Kalaburgi Microfinance Helpline-ಕಲಬುರಗಿ- 18002022411
ಕಲಬುರಗಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಬೀದರ್ ಮತ್ತು ಕೊಪ್ಪಳ
ಇದನ್ನೂ ಓದಿ: Land Rights Cases-ಕೃಷಿ ಜಮೀನಿನ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುವುದು ಕಡ್ಡಾಯ!
Mysure Microfinance Helpline-ಮೈಸೂರು- 9686877435
ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಕೋಲಾರ, ಬೆಂಗಳೂರು (R&U) ಮತ್ತು ಚಿಕ್ಕಬಳ್ಳಾಪುರ
Davanagere Microfinance Helpline-ದಾವಣಗೆರೆ-8192296307
ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ, ಬಳ್ಳಾರಿ, ವಿಜಯನಗರ (ಹೊಸಪೇಟೆ), ಹಾವೇರಿ, ಉತ್ತರ ಕನ್ನಡ, ಧಾರವಾಡ ಮತ್ತು ಗದಗ