ಆರ್ಮಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಸಲು(Military College Admission) ಅವಕಾಶ ಈ ಹಿಂದೆ ನಿಗದಿಪಡಿಸಿದ ದಿನಾಂಕವನ್ನು ವಿಸ್ತರಣೆ ಮಾಡಿ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಸಂಸ್ಥೆಯಿಂದ ಹೊರಡಿಸಲಾಗಿದ್ದು ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ(army college dehradun) ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ(Army school Admission), ಜನವರಿ 2026 ನೇ ಅಧಿವೇಶನಕ್ಕಾಗಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2025ನೇ ಜೂನ್ 1 ರಂದು ನಡೆಸಲಾಗುವುದು. ಅರ್ಜಿ ಸಲ್ಲಿಸಲು 2025 ರ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಇದೀಗ ಅರ್ಜಿ ಸಲ್ಲಿಸುವ ಅವಧಿಯನ್ನು 2025ರ ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: Land Documents-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!
ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ್, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು – 25 ಇವರಿಗೆ ಏಪ್ರಿಲ್ 15 ರೊಳಗಾಗಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಅಥವಾ ಸಮೀಪದಲ್ಲಿರುವ ತಮ್ಮ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Military College Dehradun Details-ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ವಿವರ:
ಡೆಹರಾಡೂನ್‌ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಗಡುವು ಮುಂದೂಡಿಕೆ ಡೆಹರಾಡೂನ್‌ನಲ್ಲಿ ಸ್ಥಿತವಾಗಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು (RIMC), ಭಾರತದ ಪ್ರತಿಷ್ಠಿತ ಸೇನಾ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ಭಾರತೀಯ ನೌಕಾಪಡೆ ಅಕಾಡೆಮಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಕಾಲೇಜಿನಲ್ಲಿ 8ನೇ ತರಗತಿಗೆ ಪ್ರವೇಶ ಪಡೆಯಲು ಆಕಾಂಕ್ಷಿಗಳು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗುತ್ತದೆ. ಇತ್ತೀಚೆಗೆ, ಜುಲೈ 2025ರ ಅವಧಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಗಡುವನ್ನು ಮುಂದೂಡಲಾಗಿದೆ ಎಂದು ಸಂಸ್ಥೆಯಿಂದ ತಿಳಿಸಲಾಗಿದೆ.
ಇದನ್ನೂ ಓದಿ: Nandini Milk Price-ಹಾಲಿನ ದರ ₹4 ರೂ ಹೆಚ್ಚಳ ಮಾಡಿದ ಸರ್ಕಾರ!

Who can Apply-ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು:
ಅಭ್ಯರ್ಥಿಗಳು 2026ರ ಜನವರಿ 1ಕ್ಕೆ ಕನಿಷ್ಠ 11½ ವರ್ಷ ಹಾಗೂ ಗರಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು.
8ನೇ ತರಗತಿಗೆ ಪ್ರವೇಶ ಪಡೆಯಲು, ಅರ್ಜಿದಾರರು ಮಾನ್ಯತೆ ಪಡೆದ ಶಾಲೆಯಿಂದ 7ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
Military College Admission-2025: ಪ್ರವೇಶ ಪರೀಕ್ಷೆಯ ವಿವರ:
ಪ್ರವೇಶ ಪರೀಕ್ಷೆಯು ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ (ವೈವಾ-ವೋಸ್) ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿದೆ. ಲಿಖಿತ ಪರೀಕ್ಷೆಯಲ್ಲಿ ಇಂಗ್ಲಿಷ್ (125 ಅಂಕಗಳು), ಗಣಿತ (200 ಅಂಕಗಳು) ಮತ್ತು ಸಾಮಾನ್ಯ ಜ್ಞಾನ (75 ಅಂಕಗಳು) ವಿಷಯಗಳಲ್ಲಿ ಪ್ರಶ್ನೆಗಳು ಇರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮೌಖಿಕ ಸಂದರ್ಶನಕ್ಕೆ ಆಹ್ವಾನಿಸಲ್ಪಡುತ್ತಾರೆ, ಇದು 50 ಅಂಕಗಳನ್ನು ಹೊಂದಿರುತ್ತದೆ. ಅಂತಿಮವಾಗಿ, ವೈದ್ಯಕೀಯ ಪರೀಕ್ಷೆಯಲ್ಲಿ ಆಯ್ಕೆಯಾದವರು ಪ್ರವೇಶಕ್ಕೆ ಅರ್ಹರಾಗುತ್ತಾರೆ.
ಇದನ್ನೂ ಓದಿ: Togari Kharidi-ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವವರಿಗೆ ಸಿಹಿ ಸುದ್ದಿ!
Important Dates-ಪ್ರಮುಖ ದಿನಾಂಕಗಳು:
ಮೊದಲು ನಿಗದಿಪಡಿಸಿದ್ದಂತೆ 2025ರ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು.
ಆದರೆ, ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು 2025ರ ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅರ್ಜಿಯನ್ನು ಪಡೆದು ಸಲ್ಲಿಸಬಹುದು.
ಇದನ್ನೂ ಓದಿ: KPSC ಯಿಂದ ವಿವಿಧ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!
Military College Study Benefits-ಆರ್ಮಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದರಿಂದ ಅಗುವ ಪ್ರಯೋಜನಗಳು:
ಇಂಡಿಯನ್ ಆರ್ಮಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಶಿಸ್ತು ಚಿಕ್ಕ ವಯಸ್ಸಿನಿಂದಲೇ ರೂಡಿಯಾಗುತ್ತದೆ.
ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಇಚ್ಚೆಯನ್ನು ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿರುತ್ತದೆ.
ದೇಶದ ಪ್ರತಿಷ್ಠಿತ ಸೇನಾ ಸಂಸ್ಥೆಗಳಲ್ಲಿ ಮುಂದಿನ ಶಿಕ್ಷಣ ಪಡೆಯಲು ವಿಶೇಷ ಅವಕಾಶ ಇದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 080-25589459
ಅಧಿಕೃತ ಜಾಲತಾಣ-CLICK HERE