ರಾಜ್ಯ ಸರಕಾರದಿಂದ ಕೆ.ಎಂ.ಎಫ್(KMF) ಡೈರಿಗಳಿಗೆ ಹಾಲನ್ನು ಸರಬರಾಜು ಮಾಡುವ ರೈತರ ಖಾತೆಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ನೀಡುವ ಪ್ರೋತ್ಸಾಹ ಧನವನ್ನು(Milk Incentive Status) ಬಿಡುಗಡೆ ಮಾಡಲಾಗಿದ್ದು ಫೆಬ್ರವರಿ-2025 ತಿಂಗಳ ಒಟ್ಟು ₹288 ಕೋಟಿ ಹಣವನ್ನು ಜಮಾ ಮಾಡಲಾಗಿದೆ.
KMF ಡೈರಿಗಳಿಗೆ ಪ್ರತಿ ನಿತ್ಯ ಹಾಲನ್ನು ಹಾಕುವ ರೈತರಿಗೆ ಉತ್ತಮ ದರವನ್ನು ನೀಡಲು ಪ್ರತಿ ಲೀಟರ್ ಹಾಲಿಗೆ 5/- ರೂ ಹೆಚ್ಚುವರಿ ಪ್ರೋತ್ಸಾಹಧನವನ್ನು(Halina Prothsahadhana) ರಾಜ್ಯ ಸರಕಾರದಿಂದ ಒದಗಿಸಲಾಗುತ್ತಿದ್ದು, ಫೆಬ್ರವರಿ-2025 ತಿಂಗಳಲ್ಲಿ ಜಮಾ ಮಾಡಲು ಬಾಕಿ ಇದ್ದ ₹288 ಕೋಟಿ ಹಣವನ್ನು ಹಾಲಿನ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆಯ ಮೂಲಕ ಜಮಾ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ಕೆ ವೆಂಕಟೇಶ್ ಪಶುಸಂಗೋಪನೆ ಇಲಾಖೆಯ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿ ಹೇಮಲತಾ ನಾಯಕ್ ಅವರು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರೈತರು KMF ಡೈರಿಗಳಿಗೆ ಹಾಲನ್ನು ಹಾಕುವುದರ ಕುರಿತು ಕೇಳಿರುವ ಪ್ರಶ್ನೆಗಳಿಗೆ ಅಧಿಕೃತ ಲಿಖಿತ ಉತ್ತರಗಳನ್ನು ನೀಡಿದ್ದು ಇದರ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Agriculture Loan- ರೈತರಿಗೆ ಸಿಹಿ ಸುದ್ದಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ ಸರಕಾರ!
Milk Incentive Status Check -ರೈತರು ತಮ್ಮ ಮೊಬೈಲ್ ನಲ್ಲೇ ಎಲ್ಲಾ ಮಾಹಿತಿಯನ್ನು ಪಡೆಯಬಹುದು:
ಇಲ್ಲಿಯವರೆಗೆ ಜಮಾ ಅಗಿರುವ ಹಾಲಿನ ಪ್ರೋತ್ಸಾಹ ಧನ ವಿವರವನ್ನು(Milk Incentive Amount) ರೈತರ ತಮ್ಮ ಮೊಬೈಲ್ ನಲ್ಲೇ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ Milk Incentive Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಹಣ ಜಮಾ ವಿವರವನ್ನು ಪಡೆಯಬಹುದು.

ಪ್ರಶ್ನೆ-1: ರಾಜ್ಯದಲ್ಲಿ ಒಟ್ಟು ಹಾಲು ಉತ್ಪಾದಕರ ಒಕ್ಕೂಟಗಳೆಷ್ಟು್? ಹಾಲು ಉತ್ಪಾದಕರ ಸಹಕಾರ ಸಂಘಗಳು ಎಷ್ಟು? ನೊಂದಾಯಿತ ಹಾಲು ಉತ್ಪಾದಕರ ಸಂಖ್ಯೆ ಎಷ್ಟು? ದಿನ ಪ್ರತಿ ಎಷ್ಟು ಜನ ರೈತರು ಸರಬರಾಜು ಮಾಡುತ್ತಿದ್ದಾರೆ? ಹಾಲಿನ ಪ್ರೊತ್ಸಾಹಧನವನ್ನು ಪಡೆಯುತ್ತಿರುವ ರೈತರ ಸಂಖ್ಯೆ ಎಷ್ಟು? ಆ ಪೈಕಿ – ಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರ ಸಂಖ್ಯೆ ಎಷ್ಟು?
ಸಚಿವರ ಉತ್ತರ: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ವ್ಯಾಪ್ತಿಯಲ್ಲಿ 16 ಜಿಲ್ಲಾ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: Krishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!
ಒಟ್ಟು 15,887 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಒಟ್ಟು 26,68,937 ನೊಂದಾಯಿತ ಹಾಲು ಉತ್ಪಾದಕರು ಇದ್ದಾರೆ. ಪ್ರತಿ ದಿನ ಸರಾಸರಿ 9.0 ಲಕ್ಷ ಹಾಲು ಉತ್ಪಾದಕರು ಹಾಲು ಸರಬರಾಜು ಮಾಡುತ್ತಿದ್ದಾರೆ. ಒಟ್ಟು 9,04,547 ರೈತರು ಪ್ರತಿ ತಿಂಗಳು ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ.
ಆ ಪೈಕಿ ಸಾಮಾನ್ಯ ವರ್ಗದ ಹಾಲು ಉತ್ಪಾದಕರು-8,17,074 ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರು-52,467 ಮತ್ತು ಪರಿಶಿಷ್ಟ ಪಂಗಡದ ಹಾಲು ಉತ್ಪಾದರು-35,006 ಒಟ್ಟು 9,04,547 ಹಾಲು ಉತ್ಪಾದಕರು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ.
ಪ್ರಶ್ನೆ-2: ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ವಿವಿಧ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿರುವ ಪ್ರೊತ್ಸಾಹಧನ ಎಷ್ಟು? 2023-ಏಪ್ರಿಲ್ ತಿಂಗಳಿನಿಂದ 2025 ಫೆಬ್ರವರಿ ತಿಂಗಳ ಅಂತ್ಯದವರೆಗೆ ಎಷ್ಟು ಮೊತ್ತವನ್ನು ರೈತರಿಗೆ ಪ್ರೊತ್ಸಾಹಧನ ಯೋಜನೆಯಡಿ ಪಾವತಿ ಮಾಡಲಾಗಿದೆ?
ಉತ್ತರ: ಹೈನುಗಾರಿಕೆ ನಡೆಸುವ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ ರೂ.5/-ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಏಪ್ರಿಲ್ -2023 ರಿಂದ ಫೆಬ್ರವರಿ-2025ರ ಅಂತ್ಯದವರೆಗೆ ರೂ.2661.70 ಕೋಟಿ ಪ್ರೋತ್ಸಾಹಧನ ಪಾವತಿಸಲಾಗಿರುತ್ತದೆ.

ಪ್ರಶ್ನೆ-3: ಪ್ರೊತ್ಸಾಹಧನವನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಮೊತ್ತ ವೆಷ್ಟು? ಯಾವ ಕಾರಣಕ್ಕಾಗಿ ಬಾಕಿ ಉಳಿಸಿಕೊಳ್ಳಲಾಗಿದೆ? ಬಾಕಿ ಉಳಿಸಿಕೊಂಡಿರುವುದು ಸರ್ಕಾರ ರೈತರಿಗೆ ಮಾಡಿರುವ ಅನ್ಯಾಯವಾಗುವುದಿಲ್ಲವೇ? ಯಾವ ಕಾಲಮಿತಿಯೊಳಗೆ ಪ್ರೊತ್ಸಾಹಧನವನ್ನು ಪಾವತಿಸಲು ಕ್ರಮವಹಿಸಲಾಗುವುದು?
ಉತ್ತರ: ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ರೂ 613.5 ಕೋಟಿ, ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರಿಗೆ ರೂ.18.29 ಕೋಟಿ ಮತ್ತು ಪರಿಶಿಷ್ಟ ಪಂಗಡದ ಹಾಲು ಉತ್ಪಾದಕರಿಗೆ ರೂ. 24.20 ಕೋಟಿ ಪ್ರೋತ್ಸಾಹ ಧನ ಪಾವತಿಗೆ ಬಾಕಿ ಇರುತ್ತದೆ.
2024-25 ನೇ ಸಾಲಿನಲ್ಲಿ ರೂ1300.00 ಕೋಟಿ ಹಾಗು ಹೆಚ್ಚುವರಿ ಅನುದಾನ ರೂ 200.00 ಕೋಟಿ. ಒಟ್ಟಾರೆ ಪ್ರಸಕ್ತ ಸಾಲಿಗೆ ಬಿಡುಗಡೆಯಾದ ರೂ.1500.00 ಕೋಟಿ ಹಿಂದಿನ ಸಾಲುಗಳಲ್ಲಿ ಬಾಕಿಯಿದ್ದ ರೂ.614.24 ಕೋಟಿ ಪ್ರೋತ್ಸಾಹಧನ ಪಾವತಿಸಲಾಗಿರುತ್ತದೆ.
ಮತ್ತು ಉಳಿದ ಅನುದಾನದಲ್ಲಿ ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್-2024 ರವರೆಗೆ 885.76 ಕೋಟಿ ಪ್ರೋತ್ಸಾಹಧನ ಪಾವತಿಸಲಾಗಿರುವುದರಿಂದ. ಸದರಿ ಸಾಲಿನಲ್ಲಿ ಪ್ರೋತ್ಸಾಹದನ ಪಾವತಿಸಲು ಬಾಕಿ ಇರುತ್ತದೆ.
ಇದರಿಂದಾಗಿ ರಾಜ್ಯದ ರೈತರಿಗೆ ಪ್ರೋತ್ಸಾಹಧನ ಪಾವತಿಸುವಲ್ಲಿ ವಿಳಂಬವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಉಳಿದ ತಿಂಗಳುಗಳ ಬಾಕಿ ಇರುವ ಪ್ರೋತ್ಸಾಹ ಧನ ನೀಡುವ ಸಂಬಂಧ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ
ಪ್ರಶ್ನೆ-4: ಹಾಲಿನ ಪ್ರೊತ್ಸಾಹದನವನ್ನು ಕಡ್ಡಾಯವಾಗಿ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಪಾವತಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ಉತ್ತರ: ಪ್ರಸಕ್ತ ಸಾಲಿನ ಪ್ರೋತ್ಸಾಹಧನ ರೂ.885.76 ಕೋಟಿ ಪಾವತಿಸಲಾಗಿರುವುದರಿಂದ ಪ್ರೋತ್ಸಾಹಧನ ಪಾವತಿಗೆ ವಿಳಂಬವಾಗಿರುತ್ತದೆ. ಪ್ರಸಕ್ತ ಸಾಲಿನ ಬಾಕಿ ಉಳಿದು
ಬಾಕಿ ಇರುವ ಪ್ರೋತ್ಸಾಹಧನ ನೀಡುವ ಸಂಬಂಧ ಪ್ರಸ್ತಾವನೆ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದ್ದು. ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಬಿಡುಗಡೆಯಾದ ತಕ್ಷಣ ಬಾಕಿಯಿರುವ ಪ್ರೋತ್ಸಾಹಧನ ಪಾವತಿಗೆ ಕ್ರಮವಹಿಸಲಾಗುವುದು ಎಂದು ಸಚಿವರು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.