ರಾಜ್ಯ ಸರ್ಕಾರದಿಂದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಉತೇಜನ ನೀಡಲು KMF ನೀಡುವ ದರಕ್ಕೆ ಹೆಚ್ಚುವರಿಯಾಗಿ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಸರ್ಕಾರದಿಂದ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಪಾವತಿ(Milk incentive Amount) ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ.ವೆಂಕಟೇಶ್ ಅವರು ಹಂಚಿಕೊಂಡಿರುವ ಮಾಹಿತಿಯ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಹೈನುಗಾರಿಕೆಯು ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಯ ರೈತರ ಒಂದು ಬಹುಮುಖ್ಯ ಉಪಕಸುಬಿನಲ್ಲಿ ಒಂದಾಗಿದ್ದು ಹೈನುಗಾರಿಕೆಯನ್ನು(Dairy Farm) ಮಾಡುವುದರಿಂದ ರೈತರಿಗೆ ಹೊಲಕ್ಕೆ ಗೊಬ್ಬರ ಸಿಗುವುದರ ಜೊತೆಗೆ ತಿಂಗಳ ಮನೆಯ ನಿರ್ವಹಣೆಗೆ ಆರ್ಥಿಕವಾಗಿ ನೆರವನ್ನು ಸಹ ಇದು ಒದಗಿಸುತ್ತದೆ.
ಇದನ್ನೂ ಓದಿ: Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ!
ಸರ್ಕಾರದ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇನ್ನು ₹400 ಕೋಟಿ ಹಾಲಿಗೆ ಪ್ರೋತ್ಸಾಹಧನವನ್ನು(Milk incentive) ರೈತರ ಖಾತೆಗೆ ವರ್ಗಾವಣೆ ಮಾಡುವುದು ಬಾಕಿಯಿದ್ದು ಈ ಹಣವನ್ನು ರೈತರ ಖಾತೆಗೆ ಜಮಾ ಮಾಡುವುದರ ಕುರಿತು ಸಂಬಂಧಪಟ್ಟ ಇಲಾಖೆಯ ಸಚಿವರು ತಿಳಿಸಿರುವ ಮಾಹಿತಿಯನ್ನು ಮತ್ತು ಇಲ್ಲಿಯವರೆಗೆ ತಿಂಗಳುವಾರು ಎಷ್ಟು ಹಾಲಿನ ಪ್ರೋತ್ಸಾಹಧನ ರೈತರ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡುವುದು ಎನ್ನುವ ವಿವರವನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.
Milk incentive Status2 ತಿಂಗಳೊಳಗಾಗಿ ಪ್ರೋತ್ಸಾಹಧನ ಪಾವತಿ:
ಈ ಹಿಂದಿನ ಸರ್ಕಾರದ ಅಧಿಕಾರ ಅವಧಿ ಸಮಯದಿಂದಲು ಹಾಲಿನ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡು ಬರಲಾಗಿದ್ದು, ಕಳೆದ ಬಜೆಟ್ ಅವಧಿಯಲ್ಲಿ ರೈತರ ಖಾತೆಗೆ ₹300 ಕೋಟಿ ಪ್ರೋತ್ಸಾಹಧನವನ್ನು ಜಮಾ ಮಾಡಲಾಗಿದ್ದು, ಇನ್ನು ₹400 ಕೋಟಿ ಬಾಕಿ ಹಣವನ್ನು ಪಾವತಿ ಮಾಡುವುದು ಇದ್ದು, ಈ ಸಂಬಂಧ ಆರ್ಥಿಕ ಇಲಾಖೆಯ ಅನುಮೋದನೆಗೆ ಕಡತವನ್ನು ಕಳುಹಿಸಲಾಗಿದ್ದು ಇನ್ನು 2 ತಿಂಗಳೊಳಗಾಗಿ ರೈತರ ಬ್ಯಾಂಕ್ ಖಾತೆಗೆ ಈ ಹಣವನ್ನು ಸಹ ಪಾವತಿ ಮಾಡಲಾಗುತ್ತದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ.ವೆಂಕಟೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: PM-Kisan 2025: ಪಿಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರ ಕೈತಪ್ಪಿದ ಆರ್ಥಿಕ ನೆರವು! ಇಲ್ಲಿದೆ ಅಧಿಕೃತ ಪಟ್ಟಿ!

Milk incentive Status- ಹಾಲಿನ ಪ್ರೋತ್ಸಾಹಧನ ವಿವರವನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ:
ರೈತರು ತಿಂಗಳುವಾರು ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಎಷ್ಟು ಮೊತ್ತದ ಹಾಲಿನ ಪ್ರೋತ್ಸಾಹಧನ ಜಮಾ ಅಗಿದೆ ಎನ್ನುವ ವಿವರವನ್ನು ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ತಾವು ಇದ್ದಲೇ ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದೇ ಒಂದೆರಡು ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.
Step-1: ಮೊಟ್ಟ ಮೊದಲಿಗೆ ಇಲ್ಲಿ ಕ್ಲಿಕ್ Milk incentive Status Check ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಭೇಟಿ ಮಾಡಿ “DBT KARNATAKA” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ಇದಾದ ಬಳಿಕ ರೈತರು ತಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡಲು ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Bescom Helpline-ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗೆ ಜಿಲ್ಲಾವಾರು ಸಹಾಯವಾಣಿ ಬಿಡುಗಡೆ!

ಇದನ್ನೂ ಓದಿ: Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!
Step-3: ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಈ ಅಪ್ಲಿಕೇಶನ್ ಗೆ ಲಾಗಿನ್ ಅಗಬೇಕು ಇಲ್ಲಿ ಮುಖಪುಟದಲ್ಲಿ ಕಾಣುವ “ಪಾವತಿ ಸ್ಥಿತಿ/Payment Status” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕಾಣುವ “ಹಾಲಿನ ಪ್ರೋತ್ಸಾಹಧನ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ತಿಂಗಳುವಾರು ಇಲ್ಲಿಯವರೆಗೆ ಎಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.
Bank Account Aadhar link-ಆಧಾರ್ ಕಾರ್ಡ ಲಿಂಕ್ ಇರುವ ಖಾತೆಗೆ ಹಣ ಜಮಾ:
ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ₹5 ರೂ ಹೆಚ್ಚುವರಿಯಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು ಈ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಅದ್ದರಿಂದ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅನ್ನು ತಪ್ಪದೇ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!
KMF ಹಾಲು ಸಂಗ್ರಹಣೆಯಲ್ಲಿ ಸುಧಾರಣೆ:
ಕೆ ಎಂ ಎಫ್ ಹಾಲು ಸಂಗ್ರಹ ಕೇಂದ್ರಗಳಲ್ಲಿ ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಹಾಲಿನ ಸಂಗ್ರಹಣೆಯು ಕಡಿಮೆಯಾಗುವುದ ಸಹಜವಾಗಿದ್ದು, ಕಳೆದ ಒಂದೆರಡು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿರುವುದರ ಪರಿಣಾಮದಿಂದ ಸ್ವಲ್ಪ ಮಟ್ಟಿಗೆ ಹಾಲಿನ ಸಂಗ್ರಹದಲ್ಲಿ ಸುಧಾರಣೆ ತಂದಿದೆ ಎಂದು ಕೆ ಎಂ ಎಫ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬೇಸಿಗೆ ಕಾಲದಲ್ಲಿನ ಹೆಚ್ಚು ತಾಪಮಾನಕ್ಕೆ ಈ ಸಮಯದಲ್ಲಿ ಪ್ರತಿ ನಿತ್ಯ 80 ಲಕ್ಷ ಲೀಟರ್ ಹಾಲನ್ನು ಕೆ ಎಂ ಎಫ್ ರಾಜ್ಯದ್ಯಂತ ಸಂಗ್ರಹವಾಗುತ್ತದೆ ಮಳೆಗಾಲದಲ್ಲಿ ಅಂದರೆ ಜೂನ್ ನಂತರದಲ್ಲಿ 1 ಕೋಟಿ ಲೀಟರ್ ಹಾಲಿನ ಸಂಗ್ರಹವನ್ನು ಕೆ ಎಂ ಎಫ್ ನಿಂದ ಮಾಡಲಾಗುತ್ತದೆ.