ಕರ್ನಾಟಕ ಹಾಲು ಮಹಾಮಂಡಳಿ(KMF)ಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ ಪ್ರತಿ ಲೀಟರ್ ಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಹೈನುಗಾರಿಕೆಯಲ್ಲಿ ಉಪಕಸುಬನ್ನು ಮಾಡಿಕೊಂಡಿರುವ ರೈತರಿಗೆ ಅರ್ಥಿಕವಾಗಿ ನೆರವು ನೀಡಲು ಕರ್ನಾಟಕ ಹಾಲು ಮಹಾಮಂಡಳಿ(KMF)ಯ ಡೈರಿಗಳಿಗೆ ಹಾಲನ್ನು ಪೂರೈಸುವ ರೈತರಿಗೆ ಪ್ರತಿ ಲೀಟರ್ ಗೆ 5 ರೂ ಸಹಾಯಧನವನ್ನು(Milk Incentive) ರಾಜ್ಯ ಸರಕಾರದಿಂದ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾಹಿಸಲಾಗುತ್ತದೆ.
ಅದರೆ ಈ ಸಹಾಯಧನವು ರೈತರಿಗೆ ಸಕಾಲದಲ್ಲಿ ಬರುತ್ತಿಲ್ಲ ಮತ್ತು ಸಹಾಯಧನ ಎಷ್ಟು ಲೀಟರ್ ಹಾಲಿಗೆ ಜಮಾ ಅಗಿದೆ ಮತ್ತು ಯಾವ ದಿನದಂದು ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಎಲ್ಲಿ ವಿಚಾರಿಸಬೇಕು ಎಂದು ಅನೇಕ ರೈತರಿಗೆ ಮಾಹಿತಿ ಇರುವುದಿಲ್ಲ ಈ ಲೇಖನದಲ್ಲಿ ರೈತರು ಡೈರಿಗೆ ಹಾಕುವ ಹಾಲಿಗೆ ಯಾವ ತಿಂಗಳು ಎಷ್ಟು ಸಹಾಯಧನ ಬಂದಿದೆ ಎನ್ನುವ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲೇ ಅಧಾರ್ ನಂಬರ್ ಹಾಕಿ ಹೇಗೆ ಚೆಕ್ ಮಾಡಬೇಕು ಎಂದು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ಇದನ್ನೂ ಓದಿ: RTC details- ಪೋಡಿ ಎಂದರೇನು? ಪೋಡಿ ಎಷ್ಟು ವಿಧ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
Milk incentive status- ಹಾಲಿನ ಪ್ರೋತ್ಸಾಹ ಧನ ಬಿಡುಗಡೆ! ನಿಮಗೆ ಬಂದಿರುವುದನ್ನು ಚೆಕ್ ಮಾಡುವ ವಿಧಾನ:
Step-1: ಪ್ರಥಮದಲ್ಲಿ ಈ ಲಿಂಕ್ Milk incentive status check ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ mobile app ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ನಂತರ ನಿಮ್ಮ ಮನೆಯಲ್ಲಿ ನೀವು ಯಾರ ಹೆಸರಿನಲ್ಲಿ ಡೈರಿಗೆ ಹಾಲು ಪೂರೈಕೆ ಮಾಡುತ್ತಿರೋ ಅವರ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಮೊಬೈಲ್ ಗೆ ಬರುವ OTP ನಮೂದಿಸಿ ನಿಮಗೆ ಸದಾ ನೆನಪಿನಲ್ಲಿ ಉಳಿಯುವ 4 ಅಂಕಿಯ ಪಾಸ್ವರ್ಡ್ ರಚನೆ ಮಾಡಿಕೊಂಡು ಮುಖಪುಟ ಭೇಟಿ ಮಾಡಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಬಳಿಕ ಈ DBT karnataka ಅಪ್ಲಿಕೇಶನ್ ಗೆ ಲಾಗಿನ್ ಆಗುತ್ತದೆ ಇಲ್ಲಿ ಕನ್ನಡ/English ಆಯ್ಕೆ ಬಲಬದಿಯಲ್ಲಿ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ನಂತರ ಮುಖಪುಟದಲ್ಲಿ ಕಾಣುವ “ಪಾವತಿ ಸ್ಥಿತಿ” ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Parihara – 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ ಕಂತಿನ ಬರ ಪರಿಹಾರ!
Step-4: ಇಲ್ಲಿ ಫಲಾನುಭವಿಯ ಡಿಬಿಟಿ ಯೋಜನೆ ಮಾಹಿತಿ ಗೋಚರಿಸುತ್ತದೆ “ಹಾಲು ಉತ್ಪಾದಕರಿಗೆ ಪ್ರೋತ್ಸಾಧನ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಯಾವ ಯಾವ ತಿಂಗಳು ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ತೋರಿಸುವುದರ ಜೊತೆಗೆ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ? UTR ನಂಬರ್, ಎಷ್ಟು ಹಣ, ಬಿಡುಗಡೆ ಅದ ದಿನಾಂಕ, ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ಸಂಖ್ಯೆ ವಿವರ ತೋರಿಸುತ್ತದೆ.
Ksheerasiri website- ಹಾಲಿನ ಪ್ರೋತ್ಸಾಹದ ಕ್ಷೀರಸಿರಿ ಜಾಲತಾಣದ ಮೂಲಕ ಚೆಕ್ ಮಾಡುವ ವಿಧಾನ:
ರೈತರಿಗೆ ಪ್ರತಿ ತಿಂಗಳ ಹಾಲಿನ ಪ್ರೋತ್ಸಾಹ ಧನ ವಿತರಣೆ ಮಾಡಲು ಕ್ಷೀರಸಿರಿ ಜಾಲತಾಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ರೈತರು ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ FID ನಂಬರ್ ಹಾಕಿ ಎಷ್ಟು ಲೀಟರ್ ಹಾಲಿಗೆ ಎಷ್ಟು ಸಹಾಯಧನ ವರ್ಗಾವಣೆ ಅಗಿದೆ ಎಂದು ತಿಂಗಳುವಾರು ಮಾಹಿತಿ ಗೋಚರಿಸುತ್ತದೆ.
Step-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Milk incentive status ಕ್ಷೀರಸಿರಿ ವೆಬ್ಸೈಟ್ ಭೇಟಿ ಮಾಡಬೇಕು ನಂತರ ಫಲಾನುಭವಿಯ FID ನಂಬರ್ ಹಾಕಿ Login ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!
Step-2: ನಂತರ ವರ್ಷ ಆಯ್ಕೆ ಮಾಡಿ “View” ಬಟನ್ ಮೇಲೆ ಕ್ಲಿಕ್ ಮಾಡಿದ್ದರೆ ನೀವು ಡೈರಿಗೆ ಪೂರೈಕೆ ಮಾಡಿದ ತಿಂಗಳುವಾರು ಹಾಲಿನ ವಿವರ ಮತ್ತು ಸಹಾಯಧನದ ಹಣ ವರ್ಗಾವಣೆ ಮಾಹಿತಿ ತೋರಿಸುತ್ತದೆ.
ನಿಮ್ಮ ಆಧಾರ್ ನಂಬರ್ ಹಾಕಿ FID ನಂಬರ್ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: Click here