Mission Vatsalya Yojana- ಈ ರೀತಿಯ ಮಕ್ಕಳಿಗೆ ಈ ಯೋಜನೆಯಡಿ ಸಿಗುತ್ತೆ ವರ್ಷಕ್ಕೆ ರೂ 48,000 ಸಾವಿರ!

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ತಂದೆ ಅಥವಾ ತಾಯಿಯಲ್ಲಿ  ಓರ್ವ ಪೋಷಕರನ್ನು ಹೊಂದಿರುವ ಮಕ್ಕಳಿಗೆ  ಶಿಕ್ಷಣ ಹಾಗೂ ವೈದ್ಯಕೀಯ ನೆರವು ನೀಡಲು  ಮಿಷನ್ ವಾತ್ಸಲ್ಯ ಯೋಜನೆಯನ್ನು  ಜಾರಿಗೆ ತರಲಾಗಿದ್ದು, ಈ ಯೋಜನೆಯ(Mission Vatsalya Yojana) ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಮಿಷನ್ ವಾತ್ಸಲ್ಯ ಯೋಜನೆಯನ್ನು ಸರಕಾರದಿಂದ ಜಾರಿಗೆ ತಂದಿದ್ದು, ತಂದೆ ಅಥವಾ ತಾಯಿಯಲ್ಲಿ ಓರ್ವ ಪೋಷಕರನ್ನು ಹೊಂದಿರುವ ಮಕ್ಕಳಿಗೆ ಶಿಕ್ಷಣ(children education allowance) ಹಾಗೂ ವೈದ್ಯಕೀಯ ವೆಚ್ಚಕ್ಕೆ(children medical allowance) ಅರ್ಥಿಕ ನೆರವನ್ನು ಒದಗಿಸಲು ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಥಾನ ಮಾಡಿಕೊಂಡು ಬರುತ್ತಿದೆ.

ಮಿಷನ್ ವಾತ್ಸಲ್ಯ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಿ ಈ ಅರ್ಥಿಕ ನೆರವು ಪಡೆಯಲು ಅರ್ಹರು ಯಾರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಒದಗಿಸಬೇಕಾದ ದಾಖಲೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಈ ಯೋಜನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪೂರ್ಣ ಮಾಹಿತಿಯುಳ್ಳ ಸಂದೇಶಗಳು ಹರಿದಾಡುತ್ತಿದ್ದು ಈ ಲೇಖನವನ್ನು ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಅಧಿಕೃತ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಸಹಕರಿಸಿ.

ಇದನ್ನೂ ಓದಿ: Guest lecturer jobs in bangalore- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ!

Mission Vatsalya scheme- ಮಿಷನ್ ವಾತ್ಸಲ್ಯ ಯೋಜನೆ

ಮಿಷನ್ ವಾತ್ಸಲ್ಯ ಯೋಜನೆ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಿಂದ ಅನುಷ್ಥಾನ ಮಾಡಿಕೊಂದು ಬರಲಾಗುತ್ತಿದ್ದು ಈ ಯೋಜನೆಯಡಿ ತಂದೆ ಅಥವಾ ತಾಯಿಯಲ್ಲಿ  ಓರ್ವ ಪೋಷಕರನ್ನು ಹೊಂದಿರುವ 18 ವರ್ಷದ ಒಳಗಿರುವ ಒಂದು ಕುಟುಂಬದ ಒಂದು ಮಗುವಿಗೆ ಪ್ರತಿ ತಿಂಗಳಿಗೆ ರೂ 4,000 ಸಾವಿರದಂತೆ ಒಂದು ವರ್ಷಕ್ಕೆ ರೂ 48,000 ಸಾವಿರ ಧನ ಸಹಾಯವನ್ನು ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚವನ್ನು ಭರಿಸಲು ನೀಡಲಾಗುತ್ತದೆ.

ಗಮನಿಸಿ: ಮಗುವಿಗೆ 18 ವರ್ಷ ತುಂಬುವ ವರೆಗೆ ಮಾತ್ರ ಈ ಯೋಜನೆಯಡಿ ಪ್ರತಿ ತಿಂಗಳು ಧನ ಸಹಾಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Ganga kalyana-ಮತ್ತೊಂದು ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ!

How can apply for Mission Vatsalya yojana-ಮಿಷನ್ ವಾತ್ಸಲ್ಯ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮಿಷನ್ ವಾತ್ಸಲ್ಯ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು ಎಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.

1) ತಂದೆ ಅಥವಾ ತಾಯಿಯಲ್ಲಿ  ಓರ್ವ ಪೋಷಕರನ್ನು ಹೊಂದಿರುವ ಮಕ್ಕಳು. 

2) ಮಕ್ಕಳ ವಯಸ್ಸು 18 ವರ್ಷದ ಒಳಗಿರಬೇಕು.

3) ವಾರ್ಷಿಕ ಕುಟುಂಬದ ಆದಾಯವು ತಂದೆ ಅಥವಾ ತಾಯಿಯಲ್ಲಿ  ಓರ್ವ ಪೋಷಕರನ್ನು ಹೊಂದಿರುವ ಮಕ್ಕಳಿಗೆ  ಗ್ರಾಮೀಣ ಪ್ರದೇಶದಲ್ಲಿದ್ದರೆ 72,000 ಹಾಗೂ ನಗರ ಪ್ರದೇಶದವರಾಗಿದ್ದರೆ ರೂ. 96,000/- ಹೊಂದಿರಬೇಕು.

Mission Vatsalya yojane application- ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಅರ್ಜಿದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಹಿತಿ/ಅರ್ಜಿ ಸಲ್ಲಿಸಲು ನಿಮ್ಮ ಹಳ್ಳಿಯ ಆಶಾ ಕಾರ್ಯಕರ್ತೆ ಅಥವಾ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ(CDPO office) ಅಧಿಕಾರಿಯನ್ನು ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ/ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Constable Job application-SSLC ಪಾಸಾದವರಿಗೆ 39,481 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ!

Documents- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಮಗುವಿನ ಆಧಾರ್ ಕಾರ್ಡ ಪ್ರತಿ
2) ಮಗುವಿನ ಶಾಲಾ ವ್ಯಾಸಂಗ ಪ್ರಮಾಣ ಪತ್ರ
3) ಮಗುವಿನ  ಜನನ ಪ್ರಮಾಣ ಪತ್ರ
4) ಮಗುವಿನ ಭಾವಚಿತ್ರ
5) ಮಗು ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ
6) ಮರಣ ಪ್ರಮಾಣ ಪತ್ರ(ತಂದೆ/ತಾಯಿ)
7) ಮಗುವಿನ ಬ್ಯಾಂಕ್ ಖಾತೆ ಪ್ರತಿ(ಆಧಾರ್ ಲಿಂಕ್ ಅಗಿರಬೇಕು)

ಇದನ್ನೂ ಓದಿ: Aadhar- ಆಧಾರ್ ಕಾರ್ಡಯಿರುವವರು ಈ ಮಾಹಿತಿ ತಿಳಿಯುವುದು ಅತ್ಯಗತ್ಯ!

ಹಾವೇರಿ ಜಿಲ್ಲೆಯಲ್ಲಿ  269 ಮಕ್ಕಳು ಈ ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ:

ವಿದ್ಯಾರ್ಥಿ ರುದ್ರೇಶ್, ಕೋವಿಡ್ ಸಾಂಕ್ರಾಮಿಕದಿಂದ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ  ಶಿಕ್ಷಣ ಮುಂದುವರೆಸಲು ಕಷ್ಟಸಾಧ್ಯವಾಗಿತ್ತು. ಆದರೆ,ಮಿಷನ್  ವಾತ್ಸಲ್ಯ ಯೋಜನೆಯಿಂದ ಆರ್ಥಿಕ ನೆರವು ದೊರೆತಿದ್ದು, ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 

ಮತ್ತೋರ್ವ ಫಲಾನುಭವಿಯ ತಾಯಿ ಲೀಲಾವತಿ ನಾಡಗೌಡ,  ಮೆಕ್ಯಾನಿಕ್  ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಪತಿ  ಕೋವಿಡ್ ಸಮಯದಲ್ಲಿ ಸಾವನ್ನಪ್ಪಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಯಿತು. ಈ ಸಮಯದಲ್ಲಿ ಯೋಜನೆಯು ತಮ್ಮ ನೆರವಿಗೆ ಬಂದಿದೆ ಎಂದು ಮಾಹಿತಿ ತಿಳಿಸಿದ್ದಾರೆ. 

ಶಿಗಿಹಳ್ಳಿ ಗ್ರಾಮದ ನಿವಾಸಿ ಐಶ್ವರ್ಯಾ, ಕೊರೋನಾ ಸಾಂಕ್ರಾಮಿಕಕ್ಕೆ ತಮ್ಮ ಮಾವ ಹಾಗೂ ಪತಿ ನಿಧನರಾದಾಗ ಎದುರಾದ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟಸಾಧ್ಯವಾಗಿತ್ತು. 
ಆದರೆ ಮಿಷನ್  ವಾತ್ಸಲ್ಯ ಯೋಜನೆ ತಮ್ಮ ಕುಟುಂಬದ ಬೆನ್ನಲುಬಾಗಿ  ನಿಂತಿದೆ ಎಂದು ತಿಳಿಸಿದರು. 

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಅನಾಥ, ಏಕಪೋಷಕ, ಬಡತನದಲ್ಲಿರುವ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯಕೀಯ ಮತ್ತು ಶಿಕ್ಷಣಕ್ಕೆ ನೆರವು ಒದಗಿಸುವ ಉದ್ದೇಶದಿಂದ ಮಿಷನ್ ವಾತ್ಸಲ್ಯ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯಲ್ಲಿ ಜಿಲ್ಲೆಯ 269 ಮಕ್ಕಳು ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

Mission Vatsalya guideline- ಮಿಷನ್ ವಾತ್ಸಲ್ಯ ಯೋಜನೆ ಮಾರ್ಗಸೂಚಿ: Download Now
Helpline-ಸಹಾಯವಾಣಿ: 1098