Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!

Financial Education about importance of Money – ಹಣ ಎಂದರೆ ಹೆಣವು ಕೂಡ ಬಾಯಿ ತೆಗೆಯುತ್ತದೆ ಎಂಬ ಮಾತು ಇದೆ. ಇಂದಿನ ಸಮಯದಲ್ಲಿ ಹಣವು ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ ಇಂದು ಸಮಾಜವು ಒಬ್ಬ ವ್ಯಕ್ತಿಯ ಯಶಸ್ಸನ್ನು ಕೂಡ ಅವನು ಸಂಪಾದಿಸಿದ ಹಣದ ಆಧಾರದ ಮೇಲೆ ಅಳೆಯುತ್ತಾರೆ. ಹಣ ಗಳಿಸದವನು ಸೋತವನು, ಯಾವ ಕೆಲಸಕ್ಕೂ ಉಪಯೋಗವಿಲ್ಲದವನು ಎಂಬುದರ ಮಟ್ಟಿಗೆ ಹಣವು ಪ್ರಾಮುಖ್ಯತೆ ಪಡೆದಿದೆ.

ಕೆಲವರು ಹೇಳುತ್ತಾರೆ ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ (Money can’t buy happiness). ಇನ್ನು ಕೆಲವರು ಹೇಳುತ್ತಾರೆ ಹಣ ಇಲ್ಲದಿದ್ದರೆ ಏನನ್ನು ಖರೀದಿಸಲು ಸಾಧ್ಯವಿಲ್ಲ (Without money you can’t buy anything). ಈ ಎರಡು ಹೇಳಿಕೆಗಳು ಸಮತೋಲನ ತೂಕ ಹೊಂದಿವೆ.

ಇದನ್ನೂ ಓದಿ: Bele parihara news- 56 ಸಾವಿರ ಹೆಕ್ಟೇರ್ ಬೆಳೆ ಹಾನಿ ಈ ಪಟ್ಟಿಯಲ್ಲಿರುವವರಿಗೆ 15 ದಿನದಲ್ಲಿ ಬೆಳೆ ಹಾನಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ

ಅದೇ ರೀತಿ ಪ್ರಮುಖವಾಗಿ ಹಣವು ಮನುಷ್ಯನ ಮೂಲಭೂತ ಅಗತ್ಯತೆಗಳನ್ನು (Basic Needs) ಪೂರೈಸಲು ಬೇಕಾಗುತ್ತದೆ. ಮಕ್ಕಳ ಶಿಕ್ಷಣದಿಂದ ಹಿಡಿದು ತಂದೆ ತಾಯಿಯರ ಅರೋಗ್ಯಕ್ಕೆ ಹಣವನ್ನು ಗಳಿಸಲೇ ಬೇಕಾದಂತಹ ಸನ್ನಿವೇಶ ಇಂದು ಇದೆ. ಹಾಗಿದ್ದರೆ ಪ್ರತಿಯೊಬ್ಬರ ಜೀವನದಲ್ಲಿ ಹಣ ಏಕೆ ಮುಖ್ಯ ಪಾತ್ರ ವಹಿಸುತ್ತದೆ ಎಂಬ ವಿವರಣೆ ಇಲ್ಲಿದೆ.

Money is Power – ಹಣವೆಂಬುದು ಶಕ್ತಿ

ಹಣವು ಕೇವಲ ನಮ್ಮ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅಷ್ಟೇ ಅಲ್ಲದೆ, ಇಂದು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಬಹು ಅಗತ್ಯವಾಗಿದೆ. ಏಕೆಂದರೆ ಹಣ ನಮ್ಮ ಬಳಿ ಇದ್ದರೆ ಎಂದು ಕುತಲ್ಲಿಯೇ ಎಷ್ಟೋ ಕೆಲಸಗಳನ್ನು ಮಾಡಿಸಿಕೊಳ್ಳಬಹುದಾದ ಸನ್ನಿವೇಶ ಇದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು, ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಹಣವು ಬೇಕೇ ಬೇಕು.

ಇದನ್ನೂ ಓದಿ: Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!

How to earn money- ಸಾಧನೆಯ ಸೂಚನೆ:-

ಒಬ್ಬ ವ್ಯಕ್ತಿಯ ಯಶಸ್ಸನ್ನು ಸಮಾಜವು ಅವನು ಗಳಿಸಿದ ಹಣದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ಯಾವುದೇ ಒಂದು ಬಿಜಿನೆಸ್ ಆರಂಭಿಸಿದ್ದಾನೆ ಎಂದರೆ ಅವನು ಅದರಲ್ಲಿ ಗಳಿಸುವ ಲಾಭದ ಮೇಲೆ ಅವನ ಯಶಸ್ಸನ್ನು ಅಳೆಯಲಾಗುತ್ತದೆ. ಹಣದ ಶಕ್ತಿಯು ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ ಮನಸ್ಥಿತಿಯನ್ನು ಬದಲಾವಣೆ ಮಾಡಿದೆ.

Money saving tips

Money is Social Status :

ಇಂದು ಒಬ್ಬ ವ್ಯಕ್ತಿಯು ಯಾವ ಬಟ್ಟೆ ಉಡುತ್ತಾನೆ, ಯಾವ ಕಾರಿನಲ್ಲಿ ಓಡಾಡುತ್ತಾನೆ, ಅವನ ಆಸ್ತಿ ಅಥವಾ ಅವನ ಬಳಿ ಇರುವ ಹಣದ ಮೇಲೆ ಅವನಿಗೆ ಸಮಾಜದಲ್ಲಿ ಉತ್ತಮ ಮರ್ಯಾದೆ, ಗೌರವ ಹಾಗೂ ಪ್ರೀತಿ ದೊರೆಯುತ್ತಿದೆ. ಆದ್ದರಿಂದ ಹಣವೆಂಬುದು ಪ್ರತಿಯೊಬ್ಬರ ಜೀವನದಲ್ಲಿ ಅವಶ್ಯಕ ಸಾಧನವಾಗಿದೆ. ಹಣ ಗಳಿಸುವುದು ಬಹು ಪ್ರಾಮುಖ್ಯತೆಯನ್ನು ಹೊಂದಿದ್ದು, ಇದರ ನಿಟ್ಟಿನಲ್ಲಿ ನಾವು ಒಳ್ಳೆಯ ದಾರಿಯಲ್ಲಿ, ನಿಯತ್ತಿನ ದಾರಿಯಲ್ಲಿ ಶ್ರಮ ಮತ್ತು ನಮ್ಮ ಬುದ್ಧಿಶಕ್ತಿ ಯಿಂದ ಹಣ ಗಳಿಸೋಣ.

ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!

Financial management- ಹಣ ಗಳಿಸಲು ಪ್ರಮುಖ ಸಲಹೆಗಳು ಮತ್ತು ಪ್ರಮುಖ ದಾರಿಗಳು :

ನಮ್ಮ ಜ್ಞಾನ ಮತ್ತು ಪರಿಶ್ರಮದಿಂದ ನಾವು ನ್ಯಾಯದ ದಾರಿಯಲ್ಲಿ ಕಷ್ಟಪಟ್ಟು ದುಡಿದರೆ ಯಾವುದೇ ಕ್ಷೇತ್ರದಲ್ಲಾದರೂ ನಾವು ಹಣವನ್ನು ಗಳಿಸಬಹುದು. ನಮಗೆ ಕೇವಲ ಹಣ ಗಳಿಸುವ ಜ್ಞಾನ ಒಂದಿದ್ದರೆ ಸಾಲದು, ಹಣವನ್ನು ನಿಭಾಯಿಸುವ ಹಾಗೂ ಉಳಿತಾಯ ಮಾಡಿ ಹಣದಿಂದ ಹಣ ಗಳಿಸುವ ಜ್ಞಾನವು ಕೂಡ ಇರಬೇಕು.

Money saving skills- ಹಣದಿಂದ ಹಣ ಗಳಿಸಲು ಇರುವ 50:30:20 ನಿಯಮ :

ಇಂದಿನ ಈ ಹಣದುಬ್ಬರ ಮತ್ತು ಅತಿ ಹೆಚ್ಚು ವೆಚ್ಚದ ಕಾಲದಲ್ಲಿ ನಾವು ದುಡಿದಿರುವ ಹಣವನ್ನು ಸರಿಯಾಗಿ ನಿಭಾಯಿಸದಿದ್ದರೆ ನಾವು ಬಡವರಾಗಿಯೇ ಉಳಿಯಬೇಕಾಗುತ್ತದೆ. ಆದ್ದರಿಂದ ಹಣಕಾಸು ತಜ್ಞರು ಹೇಳುವ ಪ್ರಕಾರ ನಾವು ದುಡಿದಿರುವ ಹಣವನ್ನು 50:30:20 ನಿಯಮದಲ್ಲಿ ವೆಚ್ಚ ಮಾಡಿದರೆ ಹಣಕಾಸು ವಿಷಯದಲ್ಲಿ ಸ್ಟೇಬಲ್ ಆಗಿ ಇರಬಹುದು.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

Earn money- ಹಾಗಿದ್ದರೆ ಏನಿದು 50:30:20 ನಿಯಮ :

ಇದು ನಿಮ್ಮ ಬಜೆಟ್ ನ ಅಥವಾ ನಿಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡಲು ಇರುವಂತಹ ಶೇಕಡವಾರು ಆಧಾರಿತ ಬಜೆಟ್ ನಿಯಮವಾಗಿದೆ. ಇದರ ಅರ್ಥ ನಿಮಗೆ ಬರುವ ತಿಂಗಳ ಆದಾಯದಲ್ಲಿ ಅಥವಾ ವಾರ್ಷಿಕ ಆದಾಯದಲ್ಲಿ ನಿಮ್ಮ ಹಣವನ್ನು 3 ಭಾಗಗಳಾಗಿ ವಿಂಗಡಿಸಿ. ಅಂದರೆ ನಿಮ್ಮ ಆಧಾಯದ 50% ಹಣವನ್ನು ನಿಮ್ಮ ದಿನದ ಅಗತ್ಯತೆಗಳಿಗಾಗಿ (Needs) ಉಪಯೋಗಿಸಿ.

30% ಹಣವನ್ನು ನಿಮ್ಮ ಬೇಕುಗಳಿಗಾಗಿ (Wants) ಉಪಯೋಗಿಸಿ. ಉಳಿದ 20% ಹಣವನ್ನು ಉಳಿತಾಯ ಅಥವಾ ಹೂಡಿಕೆಗಾಗಿ ಮಿಸಲಿಡಿ. ಹೂಡಿಕೆಯನ್ನು ನೀವು ವಿವಿಧ ರೀತಿಯಾಗಿ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ , ಬ್ಯಾಂಕಿನಲ್ಲಿ ಎಫ್ ಡಿ, ರಿಯಲ್ ಎಸ್ಟೇಟ್ ಹೂಡಿಕೆ ಸೇರಿದಂತೆ ವಿವಿಧ ನಿಮ್ಮ ಸ್ವಇಚ್ಛೆ ಆಯ್ಕೆಗಳನ್ನು ನಿಮ್ಮ ಸ್ವಯಂ ನಿರ್ಧಾರದ ಮೇಲೆ ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

Investment- 50/30/20 ನಿಯಮದ ಪ್ರಯೋಜನಗಳೇನು?

ನೀವು ಈ ನಿಯಮವನ್ನು ಪಾಲಿಸುವುದರಿಂದ ದೀರ್ಘಕಾಲಿನ ಗುರಿಗಳನ್ನು ಸಾಧಿಸಲು ಇದು ನಿಮಗೆ ಸಹಾಯ ಮಾಡಬಲ್ಲದು. ಈ ನಿಯಮವು ನಿಮಗೆ ಹಣಕಾಸಿನ ಸಮತೋಲನವನ್ನು (Financial Balance) ಕೂಡ ನೀಡುತ್ತದೆ. ಈ ನಿಯಮವನ್ನು ಪಾಲಿಸಿ ನೀವು ಕಷ್ಟಪಟ್ಟು ದುಡಿದ ಹಣವನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿ ಹಾಗೂ ಫೈನಾನ್ಸಿಯಲ್ ಫ್ರೀಡಂ ಪಡೆಯಿರಿ.