ಕಳೆದ 2023 ರ ಮುಂಗಾರು ಮಾನ್ಸುನ್ ಮಾರುತಗಳು “ಎಲ್ ನಿನೊ” ಪರಿಣಾಮದಿಂದ ದುರ್ಬಲಗೊಂಡು ರಾಜ್ಯದಲ್ಲಿ ಬಾರೀ ಮಳೆ ಕೊರತೆ ಉಂಟಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ.
ಇಂತಹ ಸಮಯದಲ್ಲಿ ರೈತರಿಗೆ ಹವಾಮಾನ(Weather) ತಜ್ಞರಿಂದ ಸಿಹಿ ಸುದ್ದಿ ದೊರೆತಿದ್ದು “ಎಲ್ ನಿನೊ” ಪ್ರಭಾವು ಜೂನ್ ತಿಂಗಳಿಗೂ ಮೊದಲೇ ದುರ್ಬಲಗೊಳ್ಳಲಿದೆ ಎಂದು ಮಾಹಿತಿ ತಿಳಿಸಿದ್ದಾರೆ ಇದರ ಪ್ರಕಾರ ಮಾನ್ಸುನ್ ಮಾರುತಗಳು ದುರ್ಬಲಗೊಳ್ಳುವುದು ತಪ್ಪಿ ಈ ವರ್ಷ(2024) ಮುಂಗಾರು ಹಂಗಾಮಿನಲ್ಲಿ(Monsoon update 2024) ಉತ್ತಮ ಮಳೆ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಪಂಚಾದ್ಯಂತ ಹವಾಮಾನದ(Weather update) ಮೇಲೆ ಪರಿಣಾಮ ಉಂಟು ಮಾಡುವ “ಎಲ್ ನಿನೊ” ದುರ್ಬಲಗೊಳ್ಳುವುದು ಶುರುವಾಗಿದೆ ಎಂಬುದನ್ನು ಎರಡು ಜಾಗತಿಕ ಹವಾಮಾನ ಸಂಸ್ಥೆಗಳು ಕಳೆದ ವಾರ ವರದಿ ಮಾಡಿವೆ. ಎಲ್ ನಿನೊ ಜೂನ್ ಮೊದಲು ದುರ್ಬಲಗೊಂಡು ಆಗಸ್ಟ್‌ಗೂ ಮೊದಲು “ಲಾ ನಿನಾ” ಪರಿಣಾಮ ಆರಂಭವಾಗಬಹುದು ಎಂದು ಈ ಸಂಸ್ಥೆಗಳು ಮಾಹಿತಿ ತಿಳಿಸಿವೆ.
ಇದನ್ನೂ ಓದಿ: agriculture land registration- ಜಮೀನಿನ ಮಾಲೀಕ ಮರಣವಾದ ಬಳಿಕ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು?
ಈ ಕುರಿತು ಪ್ರಸ್ತುತ ಹವಾಮಾನದ ಕುರಿತು ಉಂಟಾಗುತ್ತಿರುವ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಭಾರತದ ಹವಾಮಾನ ತಜ್ಞರು, ಜೂನ್-ಆಗಸ್ಟ್‌ಗೂ ಮೊದಲು “ಲಾ ನಿನಾ” ಪ್ರಭಾವ ಶುರುವಾದರೆ ಮುಂಗಾರು ಮಳೆಯು ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಆಗಲಿದೆ ಎಂದು ಹೇಳಿದ್ದಾರೆ.
ಜೂನ್-ಜುಲೈಗೆ ಮೊದಲು ಲಾ ನಿನಾ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಹೇಳಿದ್ದಾರೆ. ‘ಎಲ್ ನಿನೊ ಪರಿಸ್ಥಿತಿಯು ಬದಲಾಗಿ, ಎಲ್ ನಿನೊ ಹಾಗೂ ಲಾ ನಿನಾ ಎರಡೂ ಇಲ್ಲದ ಸ್ಥಿತಿ (ಎನ್ನೊ-ತಟಸ್ಥ ಸ್ಥಿತಿ) ಎದುರಾದರೂ ಮುಂಗಾರು ಮಳೆಯು ಈ ವರ್ಷದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ’ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: Bengalore Job fair- 26, 27 ಫೆಬ್ರವರಿ 2024 ರಂದು ಬೃಹತ್ ಉದ್ಯೋಗ ಮೇಳ!
Monsoon update- ಐರೋಪ್ಯ ಒಕ್ಕೂಟದ ಕೋಪರ್ನಿಕಸ್ ಕ್ರೈಮೇಟ್ ಚೇಂಜ್ ಸರ್ವಿಸ್ (CDS) ಸಂಸ್ಥೆ: “ಎಲ್ ನಿನೊ” ಪರಿಸ್ಥಿತಿ ದುರ್ಬಲ
ಎಲ್ ನಿನೊ ಪರಿಸ್ಥಿತಿ ದುರ್ಬಲಗೊಳ್ಳುವುದು ಶುರುವಾಗಿದೆ ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್ ಕ್ರೈಮೇಟ್ ಚೇಂಜ್ ಸರ್ವಿಸ್ (ಸಿಡಿಎಸ್) ಸಂಸ್ಥೆ ಖಚಿತಪಡಿಸಿದೆ. ‘ಈ ಸಂದರ್ಭದಲ್ಲಿ ನಾವು ಯಾವುದನ್ನೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಕೆಲವು ಅಧ್ಯಯನಗಳು ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನುತ್ತವೆ. ಇನ್ನು ಕೆಲವು ಅಧ್ಯಯನಗಳು ಎನ್ನೊ-ತಟಸ್ಥ ಸ್ಥಿತಿ ನಿರ್ಮಾಣವಾಗಬಹುದು ಎನ್ನುತ್ತಿವೆ. ಆದರೆ ಎಲ್ಲ ಅಧ್ಯಯನಗಳೂ ಎಲ್ ನಿನೊ ಕೊನೆಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ. ಶಿವಾನಂದ ಪೈ ತಿಳಿಸಿದರು.
ಇದನ್ನೂ ಓದಿ: Karnataka guarantee yojana- ಗ್ಯಾರಂಟಿ ಯೋಜನೆ ಸ್ಥಗಿತ ವದಂತಿ: ಸಿ ಎಂ ಸಿದ್ದರಾಮಯ್ಯ ಸ್ಪಷ್ಟನೆ!
ನಮ್ಮ ದೇಶದಲ್ಲಿ ಬರುವ ಒಟ್ಟು ಮಳೆಯಲ್ಲಿ ಶೇಕಡ 70ರಷ್ಟು ಮಳೆ ನೈಋತ್ಯ ಮಾರುತಗಳಿಂದಾಗಿ ಆಗುತ್ತದೆ. ದೇಶದ ಜಿಡಿಪಿಗೆ ಶೇಕಡ 14ರಷ್ಟು ಪಾಲು ನೀಡುವ ಕೃಷಿ ಕ್ಷೇತ್ರಕ್ಕೆ ಈ ಮಳೆಯು ಬಹಳ ಮುಖ್ಯವಾಗಿದೆ. ಈ ವರ್ಷವಾದರು ಉತ್ತಮ ಮಳೆ ಬರಲಿ ಮತ್ತು ರೈತಾಪಿ ವರ್ಗವು ಸಂಕಷ್ಟ ಸ್ಥಿತಿಯಿಂದ ಹೊರ ಬರಲಿ ಎನ್ನುವುದು ನಮ್ಮ ತಂಡದ ಆಶಾಯ.
ಪ್ರಮುಖ ಉಪಯುಕ್ತ ಲಿಂಕ್ ಗಳು:
ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್(IMD): Click here
ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರ, ಬೆಂಗಳೂರು: click here