ಉಚಿತವಾಗಿ 30 ದಿನ ವಸತಿ ಮತ್ತು ಊಟ ಸಹಿತ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಟ್ರೈನಿಂಗ್(Motor repair) ಪಡೆಯಲು ಅರ್ಜಿ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಈ ಉಚಿತ ತರಬೇತಿಯನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ತರಬೇತಿಯನ್ನು ಎಲ್ಲಿ ನಡೆಸಲಾಗುತ್ತದೆ? ತರಬೇತಿ ಪಡೆಯುವುದರ ಪ್ರಯೋಜನೆಗಳೇನು? ತರಬೇತಿ ಪಡೆದ ಬಳಿಕ ಯಾವೆಲ್ಲ ಯೋಜನೆಯಡಿ ಸಾಲವನ್ನು ಪಡೆದು ಸ್ವ-ಉದ್ಯೋಗವನ್ನು ಆರಂಭಿಸಬಹುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ದಿನೇ ದಿನೇ ಕೃಷಿಕರು ಬೋರ್ವೆಲ್ ಕೊರೆಸುವುದು ಹೆಚ್ಚುತ್ತಿದ್ದು ಬೋರ್ವೆಲ್ ಗಳಿಂದ ನೀರವನ್ನು ಪಂಪ್ ಮಾಡಲು ಬಳಕೆ ಮಾಡುವ ಮೋಟಾರ್ ಪಂಪ್ ದುರಸ್ತಿ ಮಾಡುವವರಿಗೆ ಹೆಚ್ಚು ಬೇಡಿಕೆ ಇದ್ದು ಈ ಕ್ಷೇತ್ರದಲ್ಲಿ ಸ್ವ-ಉದ್ಯೋಗವನ್ನು ಆರಂಭಿಸಲು ಆಸಕ್ತಿಯಿರುವವರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?
Free Motor repair training- 30 ದಿನದ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ತರಬೇತಿ ಅವದಿ:
ತರಬೇತಿಯು ದಿನಾಂಕ: 06 ನವೆಂಬರ್ 2024 ರಿಂದ ಆರಂಭವಾಗಿ ದಿನಾಂಕ: 05 ಡಿಸೆಂಬರ್ 2024ಕ್ಕೆ ಮುಕ್ತಾಯವಾಗಲಿದ್ದು ಒಟ್ಟು 30 ದಿನದ ತರಬೇತಿ ಇದಾಗಿರುತ್ತದೆ.
Motor repair training- ಸಂಪೂರ್ಣ ಉಚಿತ ತರಬೇತಿ:
ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ತರನಾದ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯು ತರಬೇತಿ ಕೇಂದ್ರದಲ್ಲೇ ಲಭ್ಯವಿರುತ್ತದೆ.
ಇದನ್ನೂ ಓದಿ: Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
Motor repair business- ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವ ವಿಧಾನ:
ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ತರಬೇತಿಯನ್ನು ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳು ಮುಂಚಿತವಾಗಿ ತರಬೇತಿಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ ಇದಕ್ಕಾಗಿ 9538281989, 9449860007, 9916783825, 8884044412 ಈ ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.
ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?
ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ತರಬೇತಿಯನ್ನು ಪಡೆಯಲು 18 ರಿಂದ 45 ವರ್ಷ ವಯೋಮಾನದವರು ಭಾಗವಹಿಸಬಹುದು.
ಗ್ರಾಮೀಣ ಭಾಗದವರು ಮತ್ತು ಬಿ.ಪಿ.ಎಲ್ ಕಾರ್ಡ ಹೊಂದಿರುವವರು ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ಇರುತ್ತದೆ.
ಇದನ್ನೂ ಓದಿ: agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?
ತರಬೇತಿಯಲ್ಲಿ ಭಾಗವಹಿಸಲು ಬೇಕಾಗುವ ದಾಖಲೆಗಳು:
1) ಅರ್ಜಿದಾರರ ಅಧಾರ್ ಕಾರ್ಡ
2) ಪಾಸ್ ಪೋರ್ಟ ಸೈಜ್ ಪೋಟೊ- 4
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ರೇಷನ್ ಕಾರ್ಡ ಪ್ರತಿ
5) ಪಾನ್ ಕಾರ್ಡ್
ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿ ತಿಳಿಸಲಾಗುತ್ತದೆ:
ಈ ತರಬೇತಿಯಲ್ಲಿ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಕಲಿಕೆ ಜೊತೆಗೆ ಗೃಹಬಳಕೆಯ ವಿದ್ಯುತ್ ಉಪಕರಣಗಳಾದ ಮಿಕ್ಷರ್, ಗ್ರ್ಯಂಡರ್, ಫ್ಯಾನ್, ಹೌಸ್ ವೈರಿಂಗ್ ಹಾಗೂ ಇತರೆ ವಸ್ತುಗಳ ರಿಪೇರಿ ಕುರಿತು ಸಹ ತರಬೇತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
ಇದಲ್ಲದೇ ತರಬೇತಿ ಮುಗಿದ ಬಳಿಕ ಸ್ವಂತ ಉದ್ಯೋಗವನ್ನು ಆರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿಯಲ್ಲಿ ಸಾಲವನ್ನು ಪಡೆಯಬಹುದು ಎಂದು ಸಹ ತಿಳಿಸಿ ಬ್ಯಾಂಕ್ ಮೂಲಕ ತರಬೇತಿ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.
ತರಬೇತಿ ನಡೆಯುವ ಕೇಂದ್ರದ ವಿಳಾಸ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗ್ಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ- 581 343