ಪ್ರಧಾನ ಮಂತ್ರಿ ಶೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 16 ಅಕ್ಟೋಬರ್ 2024 ರಂದು ನವದೆಹಲಿಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(CCEA) ಸಭೆಯಲ್ಲಿ ಒಟ್ಟು 6 ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು(MSP) ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕೃಷಿಕರು ತಮ್ಮ ಬೆಳೆಗಳನ್ನು ಲಾಭದಾಯಕ ಬೆಲೆಯಲ್ಲಿ(MSP price) ಮಾರಾಟ ಮಾಡಲು ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರದಿಂದ 2025-26 ನೇ ಸಾಲಿನ ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.
ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಕೃಷಿ ಬೆಳೆಗಳ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ರೈತರ ಬೆಳೆಗಳಿಗೆ ತಕ್ಕ ಬೆಲೆಯನ್ನು ನೀಡಲು ಕೂಲಿ ಮಾನವ ಕಾರ್ಮಿಕರು, ಎತ್ತಿನ ಕಾರ್ಮಿಕರು/ ಯಂತ್ರ ಕಾರ್ಮಿಕರು, ಭೂಮಿಯಲ್ಲಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, , ಪಂಪ್ ಸೆಟ್ ಗಳ ನಿರ್ವಾಹಣಾ ವೆಚ್ಚ ರೈತರ ಕುಟುಂಬ ನಿರ್ವಹಣೆ ಎಲ್ಲಾ ವೆಚ್ಚವನ್ನು ಲೆಕ್ಕಾಚಾರ ಹಾಕಿ ಕೇಂದ್ರದಿಂದ ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: South tour package- ರಾಜ್ಯ ಸರಕಾರದಿಂದ 6 ದಿನದ ದಕ್ಷಿಣ ಭಾರತ ಪ್ರವಾಸಕ್ಕೆ ರೂ 15,000/- ಸಾವಿರ ಸಹಾಯಧನ!
MSP price list-2024: ಏರಿಕೆ ಮಾಡಿದ ಹಿಂಗಾರು ಬೆಳೆಗಳ ಬೆಂಬಲ ಬೆಲೆಯ ವಿವರ ಈ ಕೆಳಗಿನಂತಿದೆ:
ಬೆಳೆ | ಈ ವರ್ಷದ MSP ದರ(ರೂ) | ಕಳೆದ ವರ್ಷದ MSP ದರ(ರೂ) |
1) ಗೋಧಿ/Wheat | 2425 | 2275 |
2) ಬಾರ್ಲಿ /Barley | 1980 | 1850 |
3) ಕಡಲೆ/Gram | 5650 | 5440 |
4) ಮಸೂರ್/Lentil (Masur) | 6700 | 6425 |
5) ಸಾಸಿವೆ/Rapeseed & Mustard | 5940 | 5650 |
6) ಕುಸುಬಿ/Safflower | 5940 | 5800 |
ಇದನ್ನೂ ಓದಿ: South tour package- ರಾಜ್ಯ ಸರಕಾರದಿಂದ 6 ದಿನದ ದಕ್ಷಿಣ ಭಾರತ ಪ್ರವಾಸಕ್ಕೆ ರೂ 15,000/- ಸಾವಿರ ಸಹಾಯಧನ!
ಬೆಳೆವಾರು ಎಷ್ಟು ದರ ಏರಿಕೆ ಮಾಡಲಾಗಿದೆ?
ಕೇಂದ್ರ ಸರಕಾರವು ಈ ಬಾರಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಗೋಧಿ- ರೂ 150 ಏರಿಕೆ ಮಾಡಲಾಗಿದೆ ಇದೆ ಸರತಿಯಲ್ಲಿ ಸಾಸಿವೆ- ರೂ 300 ಕುಸುಬಿ- ರೂ 210 ಸೂರ್ಯಕಾಂತಿ- ರೂ 140 ಕಡಲೆ- ರೂ 210 ಬಾರ್ಲಿ- ರೂ 130 ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ.
Rabi MSP price hike details- ರೈತರ ಆದಾಯ ಹೆಚ್ಚಳಕ್ಕೆ ಬೆಂಬಲ ಬೆಲೆ:
ಹವಾಮಾನ ವೈಪರಿತ್ಯ ಅನೀರಿಕ್ಷಿತ ರೋಗ-ಕೀಟ ಬಾಧೆಯಿಂದ ರೈತರ ಆದಾಯವು ದಿನೇ ದಿನೇ ಕಡಿಮೆಯಾಗುತ್ತಿದ್ದು ಇಂತಹ ಸನ್ನಿವೇಶದಲ್ಲಿ ರೈತರಿಗೆ ಆರ್ಥಿಕವಾಗಿ ನೆರವು ನೀಡಲು ಬೆಂಬಲ ಬೆಲೆ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆಯನ್ನು ನೀಡಲಾಗುತ್ತದೆ.
ಉತ್ತರ ಮತ್ತು ಮಧ್ಯ ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ ಗೋಧಿಯು ಮುಖ್ಯ ಬೆಳೆಯಾಗಿದ್ದು ದೊಡ್ಡ ಸಂಖ್ಯೆ ರೈತರಿಗೆ ಈ ಯೋಜನೆಯ ಪ್ರಯೋಜನ ದೊರೆಯಲ್ಲಿದ್ದು ಈ ಬೆಳೆಗಳ ಬೆಲೆಯಲ್ಲಿ ಮಾರುಕಟ್ಟೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಯೋಜನೆ ನೆರವಾಗುತ್ತದೆ.
ಸಾಸಿವೆಯನ್ನು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಹೆಚ್ಚು ಪ್ರದೇಶ ಬೆಳೆಯುವುದರಿಂದ ಇಲ್ಲಿಯ ರೈತರಿಗೆಈ ಯೋಜನೆಯ ಪ್ರಯೋಜನ ದೊರೆಯಲ್ಲಿದೆ. ನಮ್ಮ ರಾಜ್ಯದಲ್ಲಿ ಕಡಲೆ, ಸೂರ್ಯಕಾಂತಿ,ಕುಸುಬಿ ಬೆಳೆಯುವವರಿಗೂ ಈ ಯೋಜನೆಯ ಪ್ರಯೋಜನ ಸಿಗುತ್ತದೆ.
ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!
How to sell MSP Price- ಯಾವುದೇ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದು ಹೇಗೆ?
ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ APMC ಮಾರುಕಟ್ಟೆ ಬಳಿ ಸರಕಾರದಿಂದ ರೈತರ ನೋಂದಣಿಯನ್ನು ಮಾಡಿಕೊಂಡು ಉತ್ಪನ್ನವನ್ನು ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯಲಾಗುತ್ತದೆ.
ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಈ ಖರೀದಿ ಕೇಂದ್ರಗಳನ್ನು ಭೇಟಿ ಮಾಡಿ ಅಧಿಕೃತ ತಂತ್ರಾಂಶದಲ್ಲಿ ನೋಂದಣಿಯನ್ನು ಮಾಡಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು.
ಇದನ್ನೂ ಓದಿ: Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!
ಒದಗಿಸಬೇಕಾದ ಅಗತ್ಯ ದಾಖಲೆಗಳು:
1) ರೈತರ FID ಸಂಖ್ಯೆ(ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತದೆ)
2) ಅಧಾರ್ ಕಾರ್ಡ ಲಿಂಕ್ ಯಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಮಾರಾಟ ಮಾಡಲು ಬಯಸುವ ಜಮೀನಿನ ಪಹಣಿ/ಉತಾರ್/RTC(ಬೆಳೆ ಬೆಳೆದಿರುವ ಜಮೀನಿನ ಪಹಣಿಯನೇ ಸಲ್ಲಿಸುವುದು)
4) ಮೊಬೈಲ್ ನಂಬರ್
ಈ ಕುರಿತು ಕೇಂದ್ರ ಸರಕಾರದ ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Read Now