ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಈಗಾಗಲೇ ವಿವಿಧ ರೀತಿಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ನೀಡಿ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದ್ದು ಇದೇ ಮಾದರಿಯಲ್ಲಿ ಕುಸುಬೆಯನ್ನು(Kusube Bembala Bele) ಸಹ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ನೋಂದಣಿಗೆ ಅವಕಾಶ ನೀಡಲಾಗಿದೆ.
ಬೆಂಬಲ ಬೆಲೆಯಲ್ಲಿ ಕುಸುಬೆಯನ್ನು ರೈತರಿಂದ ನೇರವಾಗಿ ಖರೀದಿ ಮಾಡುವುದರ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಕೃಷಿ ಮಾರುಕಟ್ಟೆ(Krishi Market) ಸಚಿವ ಶಿವಾನಂದ ಎಸ್.ಪಾಟೀಲ ಅವರು ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ ಈ ನಿಟ್ಟಿನಲ್ಲಿ ಕುಸುಬೆ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿಯನ್ನು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈತರು ಬೆಂಬಲ ಬೆಲೆಯಲ್ಲಿ(Bembala Bele Yojane) ಕುಸುಬೆಯನ್ನು ಮಾರಾಟ ಮಾಡಲು ಎಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು? ನೋಂದಣಿ ಮಾಡಿಕೊಳ್ಳಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಇನ್ನಿತರೆ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Free Bus for Students- SSLC ಮತ್ತು PUC ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ!
Kusube MSP Price-ಪ್ರತಿ ಕ್ವಿಂಟಾಲ್‍ಗೆ ರೂ 5,940 ನಿಗದಿ:
ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಕುಸುಬೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಒಪ್ಪಿಗೆಯನ್ನು ಸೂಚಿಸಿದ್ದು, ರೈತರಿಂದ ಖರೀದಿ ಮಾಡುವ ಪ್ರತಿ ಕ್ವಿಂಟಾಲ್‍ಗೆ ಕುಸುಬೆಗೆ ರೂ 5,940/- ನಿಗದಿಪಡಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Kusube Market-ಮಾರುಕಟ್ಟೆಯಲ್ಲಿ ಕುಸುಬೆ ಬೆಲೆ ಕುಸಿತ:
ಪ್ರಸ್ತುತ ಹೊರಗಿನ ಮಾರುಕಟ್ಟೆಯಲ್ಲಿ ಕುಸುಬೆ ಬೆಲೆ ಕುಸಿದಿರುವ ಕಾರಣ ಬೆಂಬಲ ಬೆಲೆಯಲ್ಲಿ(Minimum Support Price Scheme) ಖರೀದಿಗೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದ್ದು, ಸಂಬಂಧಪಟ್ಟವರಿಗೆ ಖರೀದಿ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: Land Rights Cases-ಕೃಷಿ ಜಮೀನಿನ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುವುದು ಕಡ್ಡಾಯ!

ಯಾವೆಲ್ಲ ಜಿಲ್ಲೆಗಳಲ್ಲಿ ಖರೀದಿ ಮಾಡಲಾಗುತ್ತದೆ?
ರೈತರಿಂದ ನೇರವಾಗಿ ಕುಸುಬೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಈ ಕೆಳಗಿನ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸುಬೆಯನ್ನು ಬೆಳೆಯಲಾಗುತ್ತಿದ್ದು ಈ ಜಿಲ್ಲೆಗಳಿಗೆ ಹೊಂದಿಕೊಂಡುಖರೀದಿ ಕೇಂದ್ರವನ್ನು ತೆರೆಯಲು ರಾಜ್ಯ ಸರಕಾರ ನಿರ್ದೇಶನ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ.
1) ಬೀದರ್
2) ಧಾರವಾಡ
3) ದಾವಣಗೆರೆ
4) ಗದಗ
5) ವಿಜಯಪುರ
6) ಕಲಬುರಗಿ
7) ಚಿತ್ರದುರ್ಗ
8) ಕೊಪ್ಪಳ
9) ಬೆಳಗಾವಿ
ಜನವರಿಯಿಂದ ಮಾರ್ಚ ಅವಧಿಯಲ್ಲಿ ಕಟಾವು ಪ್ರಕ್ರಿಯೆ ನಡೆಯಲಿದ್ದು, ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಆವಕವಾಗಲಿದೆ. ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡದೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Karnataka Dam Water Level-ಈ ಬಾರಿ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ?
Registration-ನೋಂದಣಿಯಲ್ಲಿ ಎಲ್ಲಿ ಮಾಡಿಕೊಳ್ಳಬೇಕು?
ರೈತರು ತಾವು ಬೆಳೆದಿರುವ ಕುಸುಬೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ತಮ್ಮ ಹತ್ತಿರದ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಖರೀದಿ ಕೇಂದ್ರದ ಕುರಿತು ಮಾಹಿತಿಯನ್ನು ಪಡೆದು ಕುಸುಬೆ ಖರೀದಿ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.
Required Documents For Kusube MSP-ನೋಂದಣಿಯನ್ನು ಮಾಡಿಕೊಳ್ಳಲು ಅವಶ್ಯಕ ದಾಖಲೆ ವಿವರ ಹೀಗಿದೆ:
- ಆಧಾರ್ ಕಾರ್ಡ
- ಬ್ಯಾಂಕ್ ಖಾತೆ ಪುಸ್ತಕ
- ಕುಸುಬೆ ಬೆಳೆದ ಜಮೀನಿನ RTC/ಪಹಣಿ/ಊತಾರ್
- ಮೊಬೈಲ್ ನಂಬರ್
- FID ನಂಬರ್(ರೈತ ಸಂಪರ್ಕ ಕೇಂದ್ರದಲ್ಲಿ ರಚನೆ ಮಾಡಿಕೊಂಡಿರಬೇಕು)
ಇದನ್ನೂ ಓದಿ: SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
MSP Scheme Helpline-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ- 1800 425 1552