- Advertisment -
HomeGovt SchemesMudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರಕಾರವು ಜಾರಿಗೆ ತಂದಿರುವ ಮುದ್ರಾ ಯೋಜನೆಯಡಿ(Mudra loan) ಸ್ವಂತ ಉದ್ದಿಮೆಯನ್ನು ಆರಂಭಿಸಲು ಅಥವಾ ಈಗಾಗಲೇ ಉದ್ದಿಮೆಯನ್ನು ಹೊಂದಿರುವವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆಯಲು ಅವಕಾಶವಿದ್ದು, ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅನೇಕ ಜನರು ಸರಕಾರದ ಯೋಜನೆಗಳು ಕೇವಲ ಪುಸ್ತಕದಲ್ಲಿ ಓದುವುದಕ್ಕೆ ಮಾತ್ರ ಚಂದಾ ಇದರ ಪ್ರಯೋಜನವನ್ನು ಪಡೆಯಲು ಸರ್ಕಾರಿ ಕಚೇರಿ/ಬ್ಯಾಂಕ್ ಗಳನ್ನು(Bank Loan) ಅಲೆದಾಡುವುದು ಕಷ್ಟಕರ ಎಂದು ದೂರುತ್ತಾರೆ ಇದಕ್ಕೆ ಸೂಕ್ತ ಪರಿಹಾರ ಮಾರ್ಗವನ್ನು ಸಹ ಈ ಅಂಕಣದಲ್ಲಿ ವಿವರಿಸಲಾಗಿದೆ.

ಮುದ್ರಾ ಯೋಜನೆ ಎಂದರೇನು? ಮುದ್ರಾ ಯೋಜನೆಯನ್ನು(Mudra loan Application) ಜಾರಿಗೆ ತರಲು ಪ್ರಮುಖ ಉದ್ದೇಶ, ಮುದ್ರಾ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಗಳು ಯಾವುವು? ಈ ಯೋಜನೆಯಡಿ ಯಾವ ಉದ್ದೇಶಕ್ಕೆ ಸಾಲವನ್ನು ನೀಡಲಾಗುತ್ತದೆ? ಸಾಲ ಪಡೆಯಲು ನಿಗದಿಪಡಿಸಿದ ಅರ್ಹತೆಗಳು ಯಾವುವು ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: E-Khatha-ಹಳ್ಳಿಗರಿಗೂ ಸಿಹಿ ಸುದ್ದಿ! ಅನಧಿಕೃತ ಆಸ್ತಿಗಳಿಗೆ ಇ-ಖಾತಾ!

Loan Applicationಕಚೇರಿ/ಬ್ಯಾಂಕ್ ಅಲೆದಾಟಕ್ಕೆ ಬ್ರೇಕ್ ಹಾಕಲು ಈ ಕ್ರಮ ಅನುಸರಿಸಿ:

ಬಹುತೇಕ ಜನರು ಸರ್ವೆ ಸಾಮಾನ್ಯವಾಗಿ ಯಾವುದೇ ಸಹಾಯಧನ ಆಧಾರಿತ ಯೋಜನೆಯ ಕುರಿತು ಓದಿದಾಗ/ಕೇಳಿದಾಗ ಈ ಯೋಜನೆಗಳ ಪ್ರಯೋಜನ ಪಡೆಯುವು ಕಷ್ಟಕರ ಎಂದು ದೂರುವುದು ಸರ್ವೆ ಸಾಮಾನ್ಯ ಇದಕ್ಕೆ ಈ ಕ್ರಮ ಅನುಸರಿಸಿ.

ಮುಂಚಿತವಾಗಿ ಯೋಜನೆಯನ್ನು ಹಾಕಿಕೊಳ್ಳಿ:

ಸರಕಾರಿ ಯೋಜನೆಯ ಪ್ರಯೋಜನವನ್ನು ಪಡೆಯಲು 2-3 ತಿಂಗಳ ಮುಂಚೆಯೇ ಆ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದು ಪ್ರಯೋಜನ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಮುಂಚಿತವಾಗಿಯೇ ಸಿದ್ದವಾಗಿರಬೇಕು.

Business loan Application process-ಅರ್ಜಿ ವಿಲೇವಾರಿ ಹೇಗೆ ಅಗುತ್ತದೆ ಎಂದು ತಿಳಿಯಿರಿ:

ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಫಲಾಭವಿಯನ್ನು ಆಯ್ಕೆ ಮಾಡಲು ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದು ಆ ಕ್ರಮಗಳನ್ನು ಅನುಸರಿಸಲು ಪ್ರಯತ್ನಿಸಿ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Mudra loan

Bank Loan Scheme-ಮುದ್ರಾ ಯೋಜನೆ ವಿವರಣೆ:

(Micro Units Development and Refinance Agency-MUDRA) ಮುದ್ರಾ ಎಂದರೆ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಅಭಿವೃದ್ಧಿ ಮತ್ತು ಮರುಹಣಕಾಸು ಅವಶ್ಯಕತೆಗಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಭಾರತ ಸರ್ಕಾರದವತಿಯಿಂದ 2015ರ ಏಪ್ರಿಲ್ 8ರಂದು ಪ್ರಧಾನಮಂತ್ರಿಯವರು ಸ್ಥಾಪಿಸಿದ ಹಣಕಾಸು ಸಂಸ್ಥೆಯಾಗಿದೆ.

ಮುದ್ರಾ ಯೋಜನೆಯು ಸಾಮಾಜಿಕ-ಆರ್ಥಿಕವಾಗಿ ನಿರ್ಲಕ್ಷ್ಯಕ್ಕೊಳಗಾದ ವರ್ಗಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಸದಸ್ಯ ಸಾಲ ನೀಡುವ ಸಂಸ್ಥೆಗಳು ಅಂದರೆ ನಿರ್ದಿಷ್ಟ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಸೂಕ್ಷ್ಮ ಹಣಕಾಸು ಸಂಸ್ಥೆಗಳು 20 ಲಕ್ಷ ಪಾಯಿಗಳವರೆಗೆ ಮೇಲಾಧಾರ ರಹಿತ ಸಾಲವನ್ನು ನೀಡುತ್ತವೆ. ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Scholarship- SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ! ಶುಲ್ಕ ಮರುಪಾವತಿ ಅವಕಾಶ!

Mudra Scheme-ಮುದ್ರಾ ಯೋಜನೆಯ ಉದ್ದೇಶ:

  • ಸಣ್ಣ/ಸೂಕ್ಷ್ಮ ಉದ್ಯಮಗಳಿಗೆ ಹಣಕಾಸಿನ ಸಹಾಯ ನೀಡಲು ಮಾರ್ಗಸೂಚಿಗಳನ್ನು ರೂಪಿಸುವುದು.
  • ವ್ಯಾಪಾರ, ಉತ್ಪಾದನೆ ಮತ್ತು ಸೇವೆಯೊಂದಿಗೆ ವ್ಯವಹರಿಸುವ ಎಲ್ಲಾ ಕಿರು ಹಣಕಾಸು ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳನ್ನು ನೋಂದಾಯಿಸುವುದು ಮತ್ತು ನಂತರ ಅವುಗಳನ್ನು ನಿಯಂತ್ರಿಸುವುದು.
  • ಸಣ್ಣ ವ್ಯವಹಾರಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಸಹಾಯ ಮಾಡುವುದು.
  • ತಮ್ಮ ಉದ್ಯಮವನ್ನು ನಿರ್ಮಿಸಲು ಮತ್ತು ವಿಸ್ತರಿಸಲು ಕಡಿಮೆ ಆದಾಯದ ಗುಂಪುಗಳಿಗೆ ಸಹಾಯ ಮಾಡುವುದು.
  • ಬ್ಯಾಂಕಿಂಗ್ ಸೌಲಭ್ಯವಿಲ್ಲದವರಿಗೆ ಸುಲಭವಾಗಿ ಹಣಕಾಸು ಲಭ್ಯತೆಯನ್ನು ಸೃಷ್ಟಿಸಲು ಸಹಾಯ ಮಾಡುವುದು ಮತ್ತು ಅವರ
  • ಹಣಕಾಸು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.
  • ಪರಿಶಿಷ್ಠ ಜಾತಿ/ಪಂಗಡಗಳಿಗೆ ಸಾಲ ನೀಡುವ ಆದ್ಯತೆಯನ್ನು ಒದಗಿಸುವುದು.

Mudra Loan-ಮುದ್ರಾ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಗಳು ಯಾವುವು?

ಮುದ್ರಾ ಸಾಲಗಳನ್ನು ಈಗ ನಾಲ್ಕು ವಿಭಾಗಗಳಲ್ಲಿ ನೀಡಲಾಗುವುದು.

  • ಶಿಶು ಸಾಲ ಯೋಜನೆ: 50,000 ವರೆಗಿನ ಸಾಲಗಳನ್ನು ನೀಡಲಾಗುತ್ತದೆ.
  • ಕಿಶೋರ್ ಸಾಲ ಯೋಜನೆ: 50,000 ಕ್ಕಿಂತ ಹೆಚ್ಚಿನ ಮತ್ತು 5 ಲಕ್ಷದವರೆಗಿನ ಸಾಲಗಳನ್ನು ನೀಡಲಾಗುತ್ತದೆ.
  • ತರುಣ್ ಸಾಲ ಯೋಜನೆ: 5 ಲಕ್ಷ ಕ್ಕಿಂತ ಹೆಚ್ಚಿನ ಮತ್ತು 10 ಲಕ್ಷ ವರೆಗಿನ ಸಾಲಗಳನ್ನು ನೀಡಲಾಗುತ್ತದೆ.
  • ತರುಣ್ ಪ್ಲಸ್ ಸಾಲ ಯೋಜನೆ: 10 ಲಕ್ಷದಿಂದ 20 ಲಕ್ಷ ವರೆಗಿನ ಸಾಲಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Mudra Yojana Information-ಯಾವೆಲ್ಲ ಬಗ್ಗೆಯ ಸಾಲವನ್ನು ಈ ಯೋಜನೆಯಡಿ ಪಡೆಯಬಹುದು?

  • ವ್ಯಾಪಾರ ಮಾಡಲು ವಾಹನ ಖರೀದಿಗೆ ಸಾಲವನ್ನು ಪಡೆಯಬಹುದು.
  • ಸರಕು ಸಾಗಾಣಿಕೆ ಖರೀದಿಗೆ ವಾಹನ ಸಾಲ.
  • ಉದ್ದಿಮೆಗೆ ಕಾರ್ಯನಿರತ ಬಂಡವಾಳ ಸಾಲ ಪಡೆಯಲು ಅವಕಾಶವಿರುತ್ತದೆ.
  • ಉತ್ಪಾದನ ಘಟಕಕ್ಕೆ ಮತ್ತು ಯಂತ್ರೋಪಕರಣಗಳ ಖರೀದಿ ಸಾಲ.
  • ಕೃಷಿಯೇತರ ಆದಾಯ ಉತ್ಪಾದಿಸುವ ಉದ್ದಿಮೆಯನ್ನು ಸ್ಥಾಪಿಸಲು ಸಾಲ ಪಡೆಯಬಹುದು.
  • ವ್ಯಾಪಾರಿಗಳು ಮತ್ತು ಅಂಗಡಿಯವರಿಗೆ ಈ ಯೋಜನೆಯಡಿ ವ್ಯಾಪಾರ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಲವನ್ನು ಪಡೆಯಬಹುದು.

Documents For Mudra Loan-ಅರ್ಜಿ ಸಲ್ಲಿಸುವ ಅಗತ್ಯ ದಾಖಲೆಗಳು:

ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಅರ್ಜಿದಾರರು ಮುಂಚಿತವಾಗಿ ಸಿದ್ದಪಡಿಸಿಕೊಂಡಿರಬೇಕು.

  • ಅರ್ಜಿದಾರರ ಗುರುತಿನ ಪುರಾವೆ
  • ವ್ಯವಹಾರದ ಗುರುತಿನ ಪುರಾವೆ/ವಿಳಾಸ ಪುರಾವೆ (ಸಂಬಂಧಿತ ಪ್ರಮಾಣಪತ್ರಗಳು ಮತ್ತು ಪರವಾನಗಿಗಳು)
  • ಕಳೆದ ಆರು ತಿಂಗಳ ಬ್ಯಾಂಕ್‌ ಅಕೌಂಟ್ ಹಣ ವರ್ಗಾವಣೆ ವಿವರ
  • ಕಳೆದ ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್‌ನೊಂದಿಗೆ ಆದಾಯ ತೆರಿಗೆ ಪಾವತಿ ವರದಿ
  • ಪೋಟೋ
  • ಪಾನ್ ಕಾರ್ಡ ಪ್ರತಿ

How to Apply For Mudra Loan-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಜಿದಾರರು ಎರಡು ಆಯ್ಕೆಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ “ಉದ್ಯಮಿಮಿತ್ರ/UdyamiMitra” ಜಾಲತಾಣವನ್ನು ಪ್ರವೇಶ ಮಾಡಬೇಕು.

Mudra loan application

Step-2: ಇದಾದ ಬಳಿಕ ಮುಖಪುಟದ ಬಲ ಬದಿಯಲ್ಲಿ ಕಾಣುವ “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಇತರೆ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಳ್ಳಬೇಕು.

Step-3: ನಂತರ Login ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ ಲಾಗಿನ್ ಅಗಬೇಕು ಆಗ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ “Sumbit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Mudra Scheme Helpline-ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು:

Mudra Scheme Website-ಮುದ್ರಾ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್- CLICK HERE
ರಾಜ್ಯವಾರು ಸಹಾಯವಾಣಿ ಸಂಖ್ಯೆಗಳು- Download Now

- Advertisment -
LATEST ARTICLES

Related Articles

- Advertisment -

Most Popular

- Advertisment -