Mutation Status: ಮ್ಯುಟೇಶನ್ ಎಂದರೇನು? ಆನ್ಲೈನ್ ನಲ್ಲಿ ಮ್ಯುಟೇಶನ್ ನೋಡುವುದು ಹೇಗೆ?

ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಜಮೀನಿನ ದಾಖಲಾತಿಗಳ ಕುರಿತು ಸರಕಾರ ರೂಪಿಸಿರುವ ಅಧಿಕೃತ ದಾಖಲೆಗಳಲ್ಲಿ ಒಂದಾದ ಮ್ಯುಟೇಶನ್ (M R )  ಕುರಿತು ಮತ್ತು ಭೂಮಾಪನ ಇಲಾಖೆಯಲ್ಲಿ ಸಿಗುವ ದಾಖಲಾತಿಗಳ ಕುರಿತು ಇಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

Mutation: ಮ್ಯುಟೇಶನ್ (M R ) ಎಂದರೇನು ?

ಮ್ಯುಟೇಶನ್ ಪ್ರಾಪರ್ಟಿಗೆ ಸಂಬಂಧಿಸಿದಂತೆ ವರ್ಗಾವಣೆಯನ್ನು ಅಂದರೆ ಯಾರಿಂದ ಯಾರಿಗೆ ಪ್ರಾಪರ್ಟಿ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ವಿವರಿಸುವ ರೆವೆನ್ಯೂ ದಾಖಲೆಯಾಗಿರುತ್ತದೆ. ಇದು ಗಿಫ್ಟ್, ಸೇಲ್, ವಿಲ್ ಮತ್ತು ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ.

How to check Mutation Status: ಆನ್ಲೈನ್ ನಲ್ಲಿ ಮ್ಯುಟೇಶನ್ ನೋಡುವುದು ಹೇಗೆ?

ಕಂದಾಯ ಇಲಾಖೆಯ  ಅಧಿಕೃತ bhoomi website ಭೇಟಿ ಮಾಡಿ ಸಾರ್ವಜರ್ನಿಕರು ಆನ್ಲೈನ್ ನಲ್ಲಿ ತಮ್ಮ ಜಮೀನಿನ ಮ್ಯುಟೇಶನ್ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬವುದು.

Step-1: ಇಲ್ಲಿ ಕ್ಲಿಕ್ ಮಾಡಿ: Mutation Status ಭೂಮಿ ವೆಬ್ಸೈಟ್ ಭೇಟಿ ಮಾಡಬೇಕು, ನಂತರ ಜಮೀನು ಇರುವ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮ ಆಯ್ಕೆ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ Fetch Details ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಈ ಪುಟದಲ್ಲಿ ಹಿಸ್ಸಾವಾರು ಸರ್ವೆ ನಂಬರ್ ತೋರಿಸುತ್ತದೆ ಇಲ್ಲಿ ಬಲ ಬದಿಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಿ ತದನಂತರ ಎಡ ಬದಿಯಲ್ಲಿ ಕಾಣುವ “preview” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಮ್ಯುಟೇಶನ್ ಸ್ಥಿತಿಯನ್ನು ನೋಡಬವುದು.

ಇದನ್ನೂ ಓದಿ: Gruhalakshmi application: ಗೃಹಲಕ್ಷ್ಮಿ ಅರ್ಜಿ ಈ ರೀತಿಯಾದಲ್ಲಿ ನಿಮಗೆ ಹಣ ಬರುವುದಿಲ್ಲ!

Acquistion Type ಅಲ್ಲಿ ಹೇಗೆ ಜಮೀನು ವರ್ಗಾವಣೆ ಅಗಿದೆ ಎಂದು ತೋರಿಸುತ್ತದೆ:

  • ಕ್ರಯ: ಖರೀದಿ ಮಾಡಿದ ಜಮೀನು
  • ವಿಭಾಗ: ಅಣ್ಣ-ತಮ್ಮ ಜಮೀನನ್ನು ವಿಭಾಗ ಮಾಡಿಕೊಂಡಿರುವುದು.
  • ಪೌತಿ: ತಂದೆಯಿಂದ ಮಗನಿಗೆ, ಗಂಡನಿಂದ ಹೆಂಡತಿಗೆ ವರ್ಗಾವಣೆ ಅಗಿರುವುದು.

Online Mutation- ಶುಲ್ಕ ಪಾವತಿಸಿ ಮೂಲ ಪ್ರತಿ ಡೌನ್ಲೋಡ್ ಮಾಡಬವುದು: 

ನಿಮ್ಮ ಜಮೀನಿಗೆ ಸಂಬಧಪಟ್ಟ ಮೂಲ ದಾಖಲೆಗಳನ್ನು ಶುಲ್ಕ ಪಾವತಿ ಮಾಡಿ ಆನ್ಲೈನ್ ನಲ್ಲಿ ಕಂದಾಯ ಇಲಾಖೆಯ ಈ ವೆಬ್ಸೈಟ್ https://rtc.karnataka.gov.in/service78/ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬವುದು.

Land records department- ಭೂಮಾಪನ ಇಲಾಖೆಯಲ್ಲಿ ದೊರೆಯುವ ಸೇವೆ ಮತ್ತು ದಾಖಲಾತಿಗಳು:

ಭೂಮಾಪನ ಇಲಾಖೆಯಲ್ಲಿ ದೊರೆಯಬಹುದಾದ ಸೇವೆ ಮತ್ತು ದಾಖಲಾತಿಗಳನ್ನು ಪಡೆಯುವ ವಿಧಾನ ದಾಖಲಾತಿಗಳ ನಿರ್ವಹಣೆ ಕುರಿತು ಈ ಕೆಳಗೆ ತಿಳಿಸಲಾಗಿದೆ.

ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಯಾವುವೆಂದರೆ ದರಖಾಸ್ತು, ಅಲಿನೇಷನ್, ಭೂಸ್ವಾಧೀನ ಮತ್ತು ಪೋಡಿ ದಾಖಲಾತಿಗಳನ್ನು ಭೂಮಾಪಕರುಗಳು ಅಳತೆ ಮಾಡಿದ ನಂತರ ತಯಾರಿಸಿ ತಹಶೀಲ್ದಾರ್ ರವರು ಧೃಡೀಕರಿಸಿದ ನಕ್ಷೆಗಳು.

ಹದ್ದುಬಸ್ತು ಪ್ರಕರಣಗಳಲ್ಲಿ ಭೂಮಾಪಕರುಗಳು ತಯಾರಿಸಿರುವ ನಕ್ಷೆಗಳ ಪ್ರತಿಗಳು.
ಮೂಲಮರುಭೂಮಾಪನ ಮತ್ತು ಮೊದಲನೇ / ಎರಡನೇ ಮರುವರ್ಗೀಕರಣದ ದಾಖಲಾತಿಗಳ ಪ್ರತಿಗಳು.
ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ಖರಾಬು ಉತಾರ್ ಪ್ರತಿಗಳು.
ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಮತ್ತು ಇಲಾಖಾ ಅಧಿಕಾರಿಗಳು ಸಾರ್ವಜನಿಕರಿಗೆ  ನೀಡಿದ ತಿಳುವಳಿಕೆ ಪತ್ರಗಳ ಪ್ರತಿಗಳು.
ಮರುಭೂಮಾಪನ ಟಿಪ್ಪಣಿಯ ಪ್ರತಿಗಳು.

ಇದನ್ನೂ ಓದಿ: Ganga kalyana application last date-ಗಂಗಾ ಕಲ್ಯಾಣ,ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ 6 ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಹದ್ದುಬಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಗಳು, ಬಾವಿ ಇತರೆ ಚಿಹ್ನೆಗಳನ್ನು ಮೂಡಿಸಿ ತಯಾರಿಸಿರುವ ನಕ್ಷೆಗಳ ಪ್ರತಿಗಳು (ನಿರ್ದಿಷ್ಟ ಕೋರಿಕೆ ಮೇರೆಗೆ ಮರುಭೂಮಾಪನ ನಕಾಶೆಯ ಮೂಲ ಪ್ರತಿ.

ಹಿಸ್ಸಾ ಸರ್ವೆ ಮತ್ತು ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ದಾಖಲಿಸಲಾದ ಹೆಸರುಗಳೊಂದಿಗೆ ಹಿಸ್ಸಾ ಸರ್ವೆಯ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿ, ಹಿಸ್ಸಾ ಸರ್ವೆ / ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ಪಡೆಯಲಾದ ಹೆಸರುಗಳನ್ನೊಳಗೊಂಡಂತೆ ಹಿಸ್ಸಾ ಸರ್ವೆ ದಾಖಲಾತಿಗಳಾದ

ಟಿಪ್ಪಣಿ,
ಪಕ್ಕಾ ಮತ್ತು
ಅಟ್ಲಾಸುಗಳು.
ದರಖಾಸ್ತು,
ಅಲಿನೇಷನ್,
ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಟಿಪ್ಪಣಿ ಮತ್ತು ಅಟ್ಲಾಸ್ ಗಳ ಪ್ರತಿಗಳು.

ಭೂಮಾಪಕರು ಹೊರಡಿಸಲಾಗಿರುವ ಹದ್ದುಬಸ್ತು ಪ್ರಕರಣಗಳ ನಿರ್ಣಯಗಳು ತಹಶೀಲ್ದಾರ್ ಗಳು ಹೊರಡಿಸಿದ ಹದ್ದುಬಸ್ತು ಪ್ರಕರಣಗಳ ಮೇಲ್ಮನವಿ ನಿರ್ಣಯಗಳು. ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ (ನಗರಮಾಪನ ಅಧಿಕಾರಿಗಳು / ನಗರಮಾಪನ ವಿಚಾರಣಾಧಿಕಾರಿಗಳು) ಕೈಗೊಂಡ ಮೇಲ್ಮನವಿ ತೀರ್ಪುಗಳು.

ನಗರಮಾಪನ ದಾಖಲಾತಿಗಳು:

1) ಪಿ ಆರ್ ಕಾರ್ಡಗಳು.
2) ಪಿ ಟಿ ಶೀಟು ನಕಲುಗಳು.
3) ನಗರಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ.
4) ವಿಚಾರಣಾ ವಹಿಯ ನಕಲು.
5) ಸ್ಥಳೀಯ ಕ್ಷೇತ್ರದ ನಕಾಶೆ.
6) ಕ್ಷೇತ್ರ ಅಳತೆ ಪುಸ್ತಕ.
7) ಭೂಮಾಪನ /ವಿಚಾರಣೆ ಸಮಯದಲ್ಲಿ ಪಡೆದ ಹೇಳಿಕೆಗಳು.
8) ನಗರಮಾಪನದ ವಿಚಾರಣಾಧಿಕಾರಿಗಳ ಆದೇಶದ ನಕಲು.
9) ನಗರಮಾಪನದ ವಿಚಾರಣಾಧಿಕಾರಿಗಳ ತೀರ್ಪುಗಳು.

ಇದನ್ನೂ ಓದಿ: Free CCTV Installation training: ಉಚಿತ ಅಣಬೆ ಬೇಸಾಯ, ಸಿಸಿಟಿವಿ ಕ್ಯಾಮೆರಾ  ಇನ್ಸ್ಟಾಲೇಶನ್ ತರಬೇತಿಗೆ ಅರ್ಜಿ ಆಹ್ವಾನ!