Narega yojane: ತೋಟಗಾರಿಕೆ ಇಲಾಖೆಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.

ಬಳ್ಳಾರಿ: ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾರ್ಯಕ್ರಮಗಳಾದ ಬದು ನಿರ್ಮಾಣ, ಕೃಷಿಹೊಂಡ, ಇಂಗುಗುಂಡಿ ಮತ್ತು ಬಸಿಗಾಲುವೆ ನಿರ್ಮಾಣ ಕಾಮಗಾರಿಗಳಿಗೆ ಸಹಾಯಧನ ನೀಡಲಾಗುವುದು.

ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಲ್ಲಿ ಸಪೋಟ, ದಾಳಿಂಬೆ, ಪೇರಲ, ಪಪ್ಪಾಯ, ಮಾವು, ಡ್ರ್ಯಾಗನ್ ಹಣ್ಣು, ತೆಂಗು, ತಾಳೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಕೂಲಿ ಮತ್ತು ಸಾಮಾಗ್ರಿ ವೆಚ್ಚವನ್ನು ಆನ್ ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಇರುತ್ತದೆ.

ಆಸಕ್ತ ರೈತರು ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್, ಉದ್ಯೋಗ ಚೀಟಿ, ಬಿಪಿಎಲ್ ಜೆರಾಕ್ಸ್ ಪ್ರತಿ ಅಥವಾ ಎಸ್‍ಸಿ/ಎಸ್‍ಟಿ ಜಾತಿ ಪ್ರಮಾಣ ಪ್ರತಿ ಜೆರಾಕ್ಸ್ ಅಥವಾ ಸಣ್ಣ ರೈತರ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ? ಎಂದು ತಿಳಿಯುವುದು ಹೇಗೆ?

ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ, ತಾಂತ್ರಿಕ ಸಹಾಯಕರು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೇಶ್ವರ.ಹೆಚ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಸಹಾಯವಾಣಿ ಕರೆ ಮಾಡಿ ನಿಮ್ಮ ಜಿಲ್ಲೆಯ ಮಾಹಿತಿ ಪಡೆಯಿರಿ:

ಇದೆ ರೀತಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಚಟುವಟಿಗೆ ಕೈಗೊಳ್ಳಲು ಹಲವು ಯೋಜನೆಗಳಿದ್ದು 1800 425 8666 ಈ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ಸಧ್ಯದ ಯೋಜನೆಗಳ ಮಾಹಿತಿ ಪಡೆದು ಸಂಬಂದಪಟ್ಟ ಇಲಾಖೆಯನ್ನು ಅಗತ್ಯ ದಾಖಲಾತಿ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ನರೇಗಾ ಟ್ವಿಟರ್ ಖಾತೆಯಲ್ಲಿ ಯೋಜನೆ ಅನುಷ್ಥಾನದ ಸಂಪೂರ್ಣ ಮಾಹಿತಿ ನೋಡಬವುದು:

https://twitter.com/MgnregsK?s=20 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಯ ರೈತರು ಈ ಯೋಜನೆಯಡಿ ಅನುಷ್ಥಾನ ಮಾಡಿರುವ ಅನೇಕ ಪೋಟೋ ಇತ್ಯಾದಿ ವಿವರವನ್ನು ನೋಡಬವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನರೇಗಾ ಯೋಜನೆಯ ಜಾಲತಾಣ ಭೇಟಿ ಮಾಡಿ: https://nrega.nic.in/