ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ, ಹಂದಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ ಪಡೆಯಬವುದು. 57,000 ಸಾವಿರದಿಂದ 87,000 ಸಾವಿರದ ವರೆಗೆ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.
ಉದ್ಯೋಗ ಖಾತ್ರಿಯಡಿ ಶೆಡ್ ನಿರ್ಮಿಸಲು ಸಹಾಯಧನ ವಿವರ ಹೀಗಿದೆ:
ದನದ ಶೆಡ್ ನಿರ್ಮಾಣ ರೂ.57,000/-
ಕುರಿ/ಮೇಕೆ ಶೆಡ್ ನಿರ್ಮಾಣ ರೂ.70,000/-
ಕೋಳಿ ಶೆಡ್ ನಿರ್ಮಾಣ ರೂ. 60000/-
ಹಂದಿ ಶೆಡ್ ನಿರ್ಮಾಣ ರೂ. 87000/-
ಅಜೋಲ ತೊಟ್ಟಿ ನಿರ್ಮಾಣ ರೂ. 16000/-
ಎಲ್ಲಿ ಅರ್ಜಿ ಸಲ್ಲಿಸಬೇಕು?
ಈಗ ಚುನಾವಣೆ ಇರುವುದರಿಂದ ಈ ಚುನವಾಣೆ ಮುಗಿದ ನಂತರ ನಿಮ್ಮ ಗ್ರಾಮ ಪಂಚಾಯತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಕ್ರಿಯ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು ಇದಾದ ನಂತರ ನೀವು ಕಾಮಗಾರಿಯನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ: ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿಗಳ ದರ ಪರಿಷ್ಕರಣೆ.
ಇದರ ಜೊತೆಗೆ ಆರ್ಥಿಕ ಸ್ವಾವಲಂಬನೆಗಾಗಿ ಉದ್ಯೋಗ ಖಾತರಿ ಯೋಜನೆಯಡಿ ನರ್ಸರಿ ಸಸಿಗಳನ್ನು ಬೆಳೆಸಲು ಮಹಿಳಾ ಸ್ವಸಹಾಯ ಸಂಘಗಳಿಗೂ ಅವಕಾಶವಿರುತ್ತದೆ. ಅಪೌಷ್ಠಿಕತೆ ನಿವಾರಣೆಗೆ ವೈಯಕ್ತಿಕ ಪೌಷ್ಠಿಕ ತೋಟ ನಿರ್ಮಿಸಿಕೊಳ್ಳಬವುದು.
ಅಗತ್ಯ ದಾಖಲಾತಿಗಳು:
1)ಉದ್ಯೋಗ ಚೀಟಿ.
2)ಆಧಾರ್ ಕಾರ್ಡ್ ಪ್ರತಿ
3)ಬ್ಯಾಂಕ್ ಪಾಸ್ ಬುಕ್ ಪ್ರತಿ
4)ಪೋಟೋ
5)ಜಮೀನ ಪಹಣಿ
ಕೂಲಿದರ ವಿವರ:
ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ವರ್ಷಕ್ಕೆ 100 ದಿನಗಳವರೆಗೆ ಒಂದು ದಿನಕ್ಕೆ 309/- ರೂ ಕೂಲಿ ಪಡೆಯಬವುದು.
ನರೇಗಾ ಯೋಜನೆ ಸಹಾಯವಾಣಿ: 1800 425 8666