ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR) ಯಿಂದ 3 ದಿನ “ರಾಷ್ಟ್ರೀಯ ತೋಟಗಾರಿಕೆ ಮೇಳ 2025/National Horticulture Fair” ವನ್ನು ಆಯೋಜನೆ ಮಾಡಲಾಗಿದ್ದು ಈ ಮೇಳದ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR, Bengalure) ವತಿಯಿಂದ “ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗಿದ್ದು ಕಳೆದ ವರ್ಷ 70,000 ಸಾವಿರಕ್ಕೂ ಅಧಿಕ ರೈತರು ಈ ಮೇಳದಲ್ಲಿ ಭಾಗವಹಿಸಿದ್ದರು ಎಂದು ಸಂಸ್ಥೆಯ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
“ವಿಕಸಿತ ಭಾರತಕ್ಕಾಗಿ ತೋಟಗಾರಿಕೆ-ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ” ಎನ್ನುವ ಶಿರ್ಷೀಕೆಯಡಿಯಲ್ಲಿ ಈ ಬಾರಿಯ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಈ ಭಾರಿಯ ಮೇಳದ ವಿಶೇಷತೆಗಳೇನು? ಮುಂಚಿತವಾಗಿ ಸ್ಟಾಲ್ ಬುಕ್ ಮಾಡಲು ಅನುಸರಿಸಬೇಕಾದ ಕ್ರಮಗಳೇನು? ರೈತರು ಮೇಳದಲ್ಲಿ ಭಾಗವಹಿಸಿ ಯಾವೆಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು ಎನ್ನುವ ವಿವರವನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Ration Angadi-ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
National Horticulture Fair 2025-ಮೇಳದಲ್ಲಿ ಯಾವೆಲ್ಲ ಮಾಹಿತಿಯನ್ನು ಪಡೆಯಬಹುದು?
- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR) ವತಿಯಿಂದ ಅಭಿವೃದ್ದಿಪಡಿಸಿರುವ ಸುಧಾರಿತ ನೂತನ ತಳಿಗಳ ಪ್ರಾತ್ಯಕ್ಷಿಕೆ ಕುರಿತು ಪ್ರಯೋಗಿಕ ಮಾಹಿತಿಯನ್ನು ಪಡೆಯಬಹುದು.
- ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿನ ನೂತನ ತಂತ್ರಜ್ಞಾನಗಳ ಕುರಿತು ಮಾಹಿತಿ ಪ್ರದರ್ಷನ ಮಳಿಗೆಗಳು.
- ತೋಟಗಾರಿಕೆ ಬೆಳೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಸೂಕ್ತ ತಂತ್ರಜ್ಞಾನಗಳ ಮಾಹಿತಿ.
- ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ.
- ಪುಪ್ಪ ಕೃಷಿ, ತರಕಾರಿ, ಔಷಧ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಪ್ರಾತ್ಯಕ್ಷಿಕೆ.
- ಹನಿ ಮತ್ತು ತುಂತುರು ನೀರಾವರಿಯ ಸುಧಾರಿತ ಕ್ರಮಗಳ ಪ್ರಾತ್ಯಕ್ಷಿಕೆ.
- 250 ಕ್ಕೂ ಹೆಚ್ಚಿನ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಪೂರಕ ಪ್ರದರ್ಶನ ಮಳಿಗೆಗಳು ಈ ಮೇಳದಲ್ಲಿ ಇರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಳದ ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now
ಇದನ್ನೂ ಓದಿ: Revenue Department-ರಾಜ್ಯ ಸರಕಾರದಿಂದ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಣಯ!
ಈ ಬಾರಿಯ ಮೇಳದಲ್ಲಿ ಪ್ರದರ್ಶನದಲ್ಲಿರುವ ತಂತ್ರಜ್ಞಾನಗಳ ವಿವರ:
1) ಕಲ್ಲಂಗಡಿ – ಸೆಲ್-4
ಇಳುವರಿ: 80 ಟನ್/ಹೆ, ಹಣ್ಣಿನ ತೂಕ: 4-8 ಕೆಜಿ/ಹಣ್ಣು
ಕ್ಯಾರೋಟಿನ್-ಸಮೃದ್ಧ ವಿಧ (28.34 μg/g).
2) ಬಾಟಲ್ ಸೋರೆಕಾಯಿ-ಅರ್ಕಾ ಶ್ರೇಯಸ್
ಅಂಟಂಟಾದ ಕಾಂಡ ರೋಗಕ್ಕೆ ನಿರೋಧಕ
ಹಣ್ಣುಗಳು: ದುಂಡಗಿನ ಅಥವಾ ಕ್ಲಬ್-ಆಕಾರದ, ಇಳುವರಿ: 48 ಟ/ಹೆ
ಇದನ್ನೂ ಓದಿ: Education Assistance-ವಿದ್ಯಾರ್ಥಿಗಳಿಗೆ ₹20 ಸಾವಿರದ ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ!
3) ವ್ಯಾಕ್ಸ್ ಆಪಲ್ – CHESM-1
ಬೆಳವಣಿಗೆ: ಹರಡುವಿಕೆ, ನಿಯಮಿತ ಬೇರಿಂಗ್
ಹಣ್ಣು: ಗುಲಾಬಿ ಸಿಪ್ಪೆ, ಬೆಲ್ ಆಕಾರದ, ಕಡಿಮೆ ಬೀಜಗಳು
ಇಳುವರಿ: 90-120 ಕೆಜಿ / ಸಸ್ಯ, ಹಣ್ಣಿನ ತೂಕ: 35-40 ಗ್ರಾಂ
4) ಆವಕಾಡೊ – ಅರ್ಕಾ ಕೂರ್ಗ್ ರವಿ
ನಿಯಮಿತ ಬೇರಿಂಗ್, ಹೆಚ್ಚಿನ ಇಳುವರಿ.
ಹಣ್ಣು: 400-600 ಗ್ರಾಂ, 80% ತಿರುಳು.
ಇಳುವರಿ: 185 ಕೆಜಿ / ಸಸ್ಯ.
ಇದನ್ನೂ ಓದಿ: Free Bus Pass-ಈ ವರ್ಗದರಿಗೆ ಉಚಿತ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!
5) ರೆಡ್ ಡ್ರ್ಯಾಗನ್ ಫ್ರೂಟ್ ಪೌಡರ್ ತಂತ್ರಜ್ಞಾನ
ಕಡು ನೇರಳೆ ಬಣ್ಣ, ಮುಕ್ತವಾಗಿ ಹರಿಯುವ, ಕನಿಷ್ಠ ಸೇರ್ಪಡೆಗಳೊಂದಿಗೆ (4-8%).
ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು, ಖನಿಜಗಳು, ಪ್ರೋಟೀನ್ ಮತ್ತು ಕಚ್ಚಾ ನಾರುಗಳಲ್ಲಿ ಸಮೃದ್ಧವಾಗಿದೆ.
ಅಪ್ಲಿಕೇಶನ್‌ಗಳು: ಕುಕೀಸ್, ಕೇಕ್‌ಗಳು, ಮಫಿನ್‌ಗಳು, ಮಿಲ್ಕ್‌ಶೇಕ್‌ಗಳು, ಡಿಪ್ ಟೀ ಬ್ಯಾಗ್‌ಗಳು.
6) ಎಲೆ ಸುರುಳಿ ನಿರೋಧಕ ಮೆಣಸಿನಕಾಯಿ ಮಿಶ್ರತಳಿಗಳು
ಪ್ರಭೇದಗಳು: ಅರ್ಕ ಧಿರಿತಿ, ಅರ್ಕ ನಿಹಿರಾ
ಫೈಟೊಫ್ಥೊರಾ ಬೇರು ಕೊಳೆತ ಮತ್ತು ಮೆಣಸಿನ ಎಲೆ ಸುರುಳಿ ವೈರಸ್‌ಗೆ ನಿರೋಧಕ
ಇದನ್ನೂ ಓದಿ: VA Selection List- 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ!
ಉತ್ತಮ ಇಳುವರಿ ಮತ್ತು ಬೆಳೆ ನಿರ್ವಹಣೆಗಾಗಿ ಸುಧಾರಿತ ಕೃಷಿ ತಂತ್ರಗಳ ಮಾಹಿತಿಯನ್ನು ವಿಕ್ಷೀಸಲು ICAR-IIHR ನ ಅಧಿಕೃತ ಜಾಲತಾಣ- Click here
ಮೇಳಕ್ಕೆ ಭೇಟಿ ಮಾಡಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ- Book Now
ಮುಂಚಿತವಾಗಿ ಸ್ಟಾಲ್ ಬುಕಿಂಗ್ ಮಾಡಲು ಜಾಲತಾಣದ ಲಿಂಕ್- Stall Booking
ಮೇಳದ ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now
ಮುಂಚಿತವಾಗಿ ಸ್ಟಾಲ್ ಬುಕಿಂಗ್ ಕುರಿತು ವಿವರವನ್ನು ಪಡೆಯಲು ಸಂಪರ್ಕಿಸಿ:
ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್
ICAR-IIHR, ಬೆಂಗಳೂರು
ಮೊಬೈಲ್: 8618286559