ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಎಲ್ಲಾ ಭಾಗದ ಆಸ್ತಿಗಳಿಗೆ ಗ್ರಾಮ ಪಂಚಾಯತಿ ಕಡೆಯಿಂದ ಇ-ಸ್ವತ್ತು(E-Swathu) ಡಿಜಿಟಲ್ ಆಸ್ತಿ ಮಾಲೀಕತ್ವ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಇಂದು ಈ ಅಂಕಣದಲ್ಲಿ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣ ಪತ್ರ ಪಡೆಯುವುದರ ಕುರಿತು ಕೆಲವು ಉಪಯುಕ್ತ ಮಾಹಿತಿಯನ್ನು ತಿಳಿಸಲಾಗಿದೆ.
ಕಳೆದೆರಡು ವಾರದ ಹಿಂದೆ ನಡೆದ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಎಲ್ಲಾ ಆಸ್ತಿಗಳಿಗೆ ಕೂಡಲೇ ಅಧಿಕೃತ ಇ-ಸ್ವತ್ತು(NA Land records) ಪ್ರಮಾಣ ಪತ್ರವನ್ನು ವಿತರಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Bagar Hukum-ಬಗರ್ ಹುಕುಂ ಯೋಜನೆಯ ಅರ್ಜಿ ವಿಲೇವಾರಿಗೆ ನೂತನ ಆದೇಶ ಪ್ರಕಟ!
ಪ್ರಸ್ತುತ ಅಂಕಿ-ಅಂಶದ ಮಾಹಿತಿಯ ಪ್ರಕಾರ ರಾಜ್ಯದ ಗ್ರಾಮೀಣ(Grama panchayat) ಭಾಗದಲ್ಲಿ 90 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಿಕೊಳ್ಳುವುದು ಬಾಕಿ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಾರ್ವಜನಿಕರು ಇ-ಸ್ವತ್ತು ಅನ್ನು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು, ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣ ಪತ್ರವನ್ನು ಪಡೆಯುವುದರಿಂದ ಅಗುವ ಪ್ರಯೋಜನಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?
E-swathu Application-ಇ-ಸ್ವತ್ತು ಎಂದರೇನು?
ಗ್ರಾಮೀಣ ಭಾಗದ ಖಾಲಿ ಜಾಗಕ್ಕೆ ಮತ್ತು ಮನೆ ನಿರ್ಮಾಣ ಮಾಡಿಕೊಂಡಿರುವ ಜಾಗಕ್ಕೆ ಅಧಿಕೃತ ಮಾಲೀಕತ್ವ ಪ್ರಮಾಣ ಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ಹೊಂದುವುದಕ್ಕೆ ಇ-ಸ್ವತ್ತು ಮಾಡಿಸುವುದು ಎಂದು ಕರೆಯುತ್ತಾರೆ.
ಈ ಇ-ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಪೋಟೋ, ಒಟ್ಟು ವಿಸ್ತೀರ್ಣ, ಮಾಲೀಕರ ವಿವರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ.
ಇದನ್ನೂ ಓದಿ: Borewell- ಇನ್ನು ಮುಂದೆ ಬೋರ್ ವೆಲ್ ಕೊರೆಸಲು ಈ ನಿಯಮ ಪಾಲನೆ ಕಡ್ಡಾಯ!
How to Apply for e-swathu-ಆಸ್ತಿಗಳಿಗೆ ಇ-ಸ್ವತ್ತು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ಪ್ರಸ್ತುತ ಗ್ರಾಮ ಪಂಚಾಯತಿಯಲ್ಲೇ ಇ-ಸ್ವತ್ತು ಪ್ರಮಾಣ ಪತ್ರದ ಸಂಪೂರ್ಣ ಅರ್ಜಿ ವಿಲೇವಾರಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents for e-swathu- ಅಗತ್ಯ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ
3) ಅರ್ಜಿದಾರರ ಪೋಟೋ
4) ಮನೆ ಅಥವಾ ಖಾಲಿ ಖಾಗದ ಪೋಟೋ ಕಾಪಿ
5) ಕಂದಾಯ ರಶೀದಿ
6) ವಿದ್ಯುತ್ ಬಿಲ್
7) ಕೈಬರಹದ ಅರ್ಜಿ
ಇದನ್ನೂ ಓದಿ: Murarji school admission- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!
E-swathu Application process- ಅರ್ಜಿ ವಿಲೇವಾರಿ ಪ್ರಕ್ರಿಯೆ:
ಒಮ್ಮೆ ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹಳ್ಳಿಯ ಗ್ರಾಮ ಪಂಪಾಯತಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಪಂಚಾಯತಿ ಸಿಬ್ಬಂದಿಗಳು ತಮ್ಮ ಸ್ಥಳವನ್ನು ಭೇಟಿ ಮಾಡಿ ಜಾಗದ ಅಳತೆಯನ್ನು ತೆಗೆದುಕೊಳ್ಳುತ್ತಾರೆ ಬಳಿಕ ನಿಮ್ಮ ಅರ್ಜಿಯನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ಪುನಃ ಸ್ಥಳ ಭೇಟಿ ಮಾಡಿ ಜಿಪಿಎಸ್ ಪೋಟೋ ತೆಗೆ ಇ-ಸ್ವತ್ತು ಪ್ರಮಾಣ ಪತ್ರವನ್ನು ನಿಮಗೆ ನೀಡುತ್ತಾರೆ.
E-swathu Benefits-ಇ-ಸ್ವತ್ತು ಪ್ರಮಾಣ ಪತ್ರದ ಪ್ರಯೋಜನಗಳೇನು?
1) ಆಸ್ತಿಯ ಮೇಲಿನ ಮಾಲೀಕತ್ವವನ್ನು ಖಚಿತವಾಗಿ/ನಿಖರವಾಗಿ ಗುರುತಿಸುವ ದಾಖಲಾತಿ ಇದಾಗಿರುತ್ತದೆ.
2) ಇ-ಸ್ವತ್ತು ಪ್ರಮಾಣ ಪತ್ರ ಇದ್ದರೆ ಮಾತ್ರ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.
3) ಆಸ್ತಿಯನ್ನು ಮಾರಾಟ ಮಾಡಲು ಈ ಪತ್ರ ಕಡ್ಡಾಯವಾಗಿ ಹೊಂದಿರಬೇಕು.