Home Blog Page 79

ಜಯದೇವ ಆಸ್ಪತ್ರೆ ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಕಾರ್ಯಗಾರ‍, 8 ಜೂನ್ ನೊಂದಣಿಗೆ ಕಡೆಯ ದಿನ!

0

ರಾಜ್ಯದ ಪ್ರಖ್ಯಾತ ಹೃದ್ರೋಗ ಚಿಕಿತ್ಸಾ ಕೇಂದ್ರವಾದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಶಸ್ತ್ರಚಿಕಿತ್ಸೆ ನೀಡುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಅಮೇರಿಕಾ ಹಾಗೂ ಡಾ. ಗೋವಿಂದರಾಜು ಸಬ್ರಮಣಿ ಹಾರ್ಟ ಫೌಂಡೇಷನ್, ವಿಸ್ಕಿನ್ ಸನ್ , ಅಮೇರಿಕಾರವರ ಸಹಯೋಗದೊಂದಿಗೆ 200 ಬಡ ರೋಗಿಗಳಿಗೆ ಉಚಿತ ಅಂಜಿಯೋಪ್ಲಾಸ್ಟಿ ಕಾರ್ಯಗಾರವನ್ನು 12 ಜೂನ್ 2023 ರಿಂದ 18 ನೂನ್ 2023ರವರೆಗೆ ಆಯೋಜನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಸ್ಥೆಯ ನಿರ್ದೇಶಕರಾದ ಡಾ ಸಿ. ಎನ್ ಮಂಜುನಾಥರವರ ಮಾಹಿತಿ ಪ್ರಕಾರ ಈ ಕಾರ್ಯಗಾರದಲ್ಲಿ 200 ಜನ ಬಡರೋಗಿಗಳ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗಾಗಿ ಆಯೋಜಿಸಲಾಗಿದ್ದು, ಪ್ರತಿ ರೋಗಿಗೂ ಉನ್ನತ ಗುಣಮಟ್ಟದ ಮೇಡಿಕೇಟೆಡ್ ಸ್ಟಂಟ್ ಗಳನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ತೋಟಗಾರಿಕೆ ಮತ್ತು ಅರಣ್ಯ ಜಾತಿಯ ಸಸಿ ಪಡೆಯಲು ಅರ್ಜಿ ಅಹ್ವಾನ!

ಈ ಸೌಲಭ್ಯವನ್ನು ಈಗಾಗಳೆ ಅಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದಾಗಿದೆ. ಅವಶ್ಯಕ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿ ಪಿ ಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ಕೋರಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೇ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು 8ನೇ ಜೂನ್ ಒಳಗೆ ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಆಸ್ಪತ್ರೆ ವಿಳಾಸ:

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು-560 069. ಆಸ್ಪತ್ರೆ ಜಾಲತಾಣ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಜಯದೇವ ಆಸ್ಪತ್ರೆ, ಬೆಂಗಳೂರು- 9480827888 ಅಥವಾ 080-26944874
  • ಜಯದೇವ ಆಸ್ಪತ್ರೆ, ಕಲಬುರಗಿ-9482114611 ಅಥವಾ 08472-230511
  • ಜಯದೇವ ಆಸ್ಪತ್ರೆ, ಮೈಸೂರು -8660105492 ಅಥವಾ 0821-2263255

ಈ ಮಾಹಿತಿಯನ್ನು ಅದಷ್ಟು ಜನರಿಗೆ ಶೇರ್ ಮಾಡಿ ಅರ್ಹ ಪಲಾನುಭವಿಗಳು ಈ ಯೋಜನೆಯ ಪ್ರಯೋಜನೆ ಪಡೆಯುವಂತಾಗಲಿ.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ:

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶೇಷವಾಗಿ ಹೃದಯ ಆರೈಕೆಗಾಗಿಯೇ ಬೆಂಗಳೂರಿನ ಬನ್ನೇರುಘಟ್ಟರಸ್ತೆ ಯಲ್ಲಿರುವ ಕೇಂದ್ರ ಸ್ಥಾನ, ಬೆಂಗಳೂರಿನ ರಾಜಾಜಿನಗರದ ಇಎಸ್‌ಐ-ಎಂಹೆಚ್‌ ಶಾಖೆ, ಮೈಸೂರು ಹಾಗೂ ಕಲಬುರಗಿ ಶಾಖೆಗನ್ನೊಳಗೊಂಡಂತೆ 1600 ಹಾಸಿಗೆ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೂ ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಹೃದ್ರೋಗ ಆರೈಕೆ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು ಸಮಾಜದ ಎಲ್ಲಾ ವರ್ಗದ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುತ್ತಿದೆ ಮತ್ತು ಅರ್ಹ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುತ್ತದೆ.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು “ಚಿಕಿತ್ಸೆ ಮೊದಲು ಪಾವತಿ ನಂತರ” ಎಂಬ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇವೆ. ಇಲ್ಲಿ ತುರ್ತು ಹೃದ್ರೋಗ ಚಿಕಿತ್ಸೆ ಅಗತ್ಯವಿರುವ ರೋಗಿಗೆ ಯಾವುದೇ ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡಲಾಗುತ್ತಿದೆ.

ತೋಟಗಾರಿಕೆ ಮತ್ತು ಅರಣ್ಯ ಜಾತಿಯ ಸಸಿ ಪಡೆಯಲು ಅರ್ಜಿ ಅಹ್ವಾನ! 

0

ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತ ಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸಿಗಳನ್ನು ಪೂರೈಸುವ ಜವಾಬ್ದಾರಿಯಿಂದ ವಿವಿಧ ಯೋಜನೆಗಳಡಿಯಲ್ಲಿ “ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಿಂದ” ಸೋಮವಾರಪೇಟೆ- ಕುಶಾಲನಗರ ರಸ್ತೆಯಲ್ಲಿ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ 50 ವಿವಿಧ ಸಸಿಗಳನ್ನು ಬೆಳಸಲಾಗಿದ್ದು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ( Job card ) ಹೊಂದಿರುವ ಬಿಪಿಎಲ್ ಕಾರ್ಡುದಾರು ಸದರಿ ಯೋಜನೆಯಲ್ಲಿ ಉಚಿತವಾಗಿ ಸಸಿಗಳನ್ನು ಪಡೆಯಬಹುದಾಗಿದೆ (ಷರತ್ತುಗಳು ಅನ್ವಯ) ಹಾಗೂ ಇತರೆ ಯೋಜನೆಗಳಲ್ಲಿ ಸರ್ಕಾರ ನಿಗಧಿ ಪಡಿಸಿರುವ 6×9 ಅಳತೆಯ ಚೀಲದ ಸಸಿಗಳು ಸಸಿ ಒಂದಕ್ಕೆ ರೂ 7.00 ಹಾಗೂ 8×12 ಅಳತೆಯ ಚೀಲದ ಸಸಿಗಳು ಸಸಿ ಒಂದಕ್ಕೆ ರೂ 23.60 ಗಳನ್ನು ಪಾವತಿಸಿ ಪಡೆದುಕೊಳ್ಳಬಹುದಾಗಿದೆ. 

ಕೊಡಗಿನಲ್ಲಿ ನಶಿಸುತ್ತಿರುವ ಕಾಡು ಜಾತಿಯ ಹಣ್ಣುಗಳ ಸಸಿಗಳು ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ “ಅಗಸ” ಸಸಿಗಳನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನೆಡಬಹುದಾದ ಲಾವಂಚ ಸಸಿಗಳು ಹಾಗು ಔಷಧೀಯ ಸಸಿಗಳನ್ನು ಬೆಳೆದಿರುವುದು ವಿಶೇಷ. ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿರುತ್ತದೆ ಎಂದು  ವಲಯ ಅರಣ್ಯಾಧಿಕಾರಿಗಳು, ಸೋಮವಾರಪೇಟೆ ಇವರು ಪ್ರಕಟನೆ ಹೊರಡಿಸಿದ್ದಾರೆ. 

ಸಸಿಗಳನ್ನು ಪಡೆಯಲು ಒದಗಿಸಬೇಕಾದ ದಾಖಲಾತಿಗಳು: 

1. ಪಹಣಿ ಪತ್ರ (RTC)  2. ಬಿಪಿಎಲ್ ಕಾರ್ಡು (ಮನರೇಗಾ ಯೋಜನೆಗೆ ಮಾತ್ರ)  3. ಉದ್ಯೋಗ ಚೀಟಿ (Job Card)  (ಮನರೇಗಾ ಯೋಜನೆಗೆ ಮಾತ್ರ)  4. ಆಧಾರ್ ಕಾರ್ಡ್ 

ಇದೆ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಅರಣ್ಯ ಇಲಾಖೆಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಈ ರೀತಿಯ ಸಸಿ ವಿತರಣೆ ಯೋಜನೆಗಳು ಮತ್ತು ಸಸಿ ಲಭ್ಯವಿದ್ದು ಒಮ್ಮೆ ಭೇಟಿ ಮಾಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬವುದಾಗಿದೆ.

 ಮಾಹಿತಿಗಾಗಿ ಸಂಪರ್ಕಿಸಿ: 

1. ಫಿರೋಜ್ ಖಾನ್ ಎಸ್.ಕೆ, ಉಪ ವಲಯ ಅರಣ್ಯಾಧಿಕಾರಿಗಳು : 9483646101

2. ಭವ್ಯ ಸಿ.ಕೆ , ಉಪ ವಲಯ ಅರಣ್ಯಾಧಿಕಾರಿಗಳು : 9008994572

3. ಅನಿಲ್ ಕುಮಾರ್ ಕೆ.ಬಿ, ಗಸ್ತು ಅರಣ್ಯ ಪಾಲಕರು : 9482108007,

4. ಶೀಥಲ್ ಪಿ.ಎಲ್, ತಾಂತ್ರಿಕ ಸಹಾಯಕರು, ಮನರೇಗಾ ( ಅರಣ್ಯ ): 8861340218

ನಿಮ್ಮ ಹತ್ತಿರದಲ್ಲಿ ಅರಣ್ಯ ಇಲಾಖೆ ನರ್ಸರಿ ಎಲ್ಲಿದೆ? ಅಲ್ಲಿ ಲಭ್ಯವಿರುವ ಸಸಿಗಳು ಯಾವುವು? ಎಂದು ಹೇಗೆ ತಿಳಿಯುವುದು?

0

ಕರ್ನಾಟಕದಲ್ಲಿ ಅರಣ್ಯ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿಯು ನರ್ಸರಿಯನ್ನು ಹೊಂದಿದ್ದು ಇಲ್ಲಿ ಅನೇಕ ಬಗ್ಗೆಯ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಸಸಿಗಳನ್ನು ತಯಾರಿಸಿ ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಅತಿ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ.

ರೈತರು ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಿಮ್ಮ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಭೇಟಿ ಮಾಡಿ ತಮಗೆ ಬೇಕಾಗಿರುವ ಸಸಿಗಳ ಜಾತಿ ಮತ್ತು ಸಂಖ್ಯೆ, ಸಸಿಗಳನ್ನು ನೆಡಲು ಉದ್ದೇಶಿಸಿರುವ ಜಮೀನಿನ ಆರ್.ಟಿ.ಸಿ/ಪಹಣಿ/ಉತಾರ್ ಪ್ರತಿ, ರೈತನ ಆಧಾರ್ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ನಿಮ್ಮ ಹತ್ತಿರದಲ್ಲಿ ಅರಣ್ಯ ಇಲಾಖೆ ನರ್ಸರಿ ಎಲ್ಲಿದೆ? ಅಲ್ಲಿ ಲಭ್ಯವಿರುವ ಸಸಿಗಳ ವಿವರ ತಿಳಿಯುವ ವಿಧಾನ:

ಇದನ್ನೂ ಓದಿ: ಪ್ರಮುಖ ಸುದ್ದಿ: ರಾಜ್ಯ ಸರಕಾರದಿಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಜಾರಿಗೆ ಅನುಮೋದನೆ.

ನಿಮ್ಮ ಹತ್ತಿರದ ನರ್ಸರಿ ತಿಳಿಯುವ ವಿಧಾನ:

https://aranya.gov.in/Enursery/Home/DashBoardNew.aspx ಈ ಕೊಂಡಿಯ ಮೇಲೆ ಒತ್ತಿ ಅರಣ್ಯ ಇಲಾಖೆಯ ಅಧಿಕೃತ ಸಸ್ಯಕ್ಷೇತ್ರದ ಜಿಯೋ ಟ್ಯಾಗ್ ಮ್ಯಾಪ್ ಜಾಲತಾಣಕ್ಕೆ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಆಯ್ಕೆ ಮಾಡಿಕೊಂಡು ನಿಮ್ಮ ಹತ್ತಿರದಲ್ಲಿ ನರ್ಸರಿ ಎಲ್ಲಿ ಇದೆ ಎಂದು ಸುಲಭವಾಗಿ ತಿಳಿಯಬವುದಾಗಿದೆ.

ನಾಟಿ ಮಾಡಿದ ಸಸಿಗಳಿಗೆ ಪ್ರೋತ್ಸಾಹ ಧನ :

ರೈತರು ನಾಟಿ ಮಾಡಿದ ಮಾರ್ಗಸೂಚಿಯನ್ವಯ ಆಯ್ದ ಸಸಿಗಳಿಗೆ ಅರಣ್ಯ ಇಲಾಖೆಯಿಂದ ಒಂದು ವರ್ಷದಿಂದ ಮೂರು ವರ್ಷದವರೆಗೆ ಪ್ರೋತ್ಸಾಹ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಜಾಲತಾಣ www.aranya.gov.in  ಬೇಟಿ ಮಾಡಿ, ಅಥವಾ ಅರಣ್ಯ ಸಹಾಯವಾಣಿ 1926 ಗೆ ಕರೆ ಮಾಡಿ‌ ತಿಳಿಯಿರಿ.

ಭಾರತದಲ್ಲಿ ಹೆಚ್ಚು ಬಳಕೆ ಮಾಡುವ 4WD ಟಾಪ್ 10 ಟ್ರ್ಯಾಕ್ಟರಗಳು!

0

4WD ಟ್ರಾಕ್ಟರ್ ಎಂದರೆ ಇಂಜಿನ್ ನಿಂದ ಟ್ರ್ಯಾಕ್ಟರ್ ನ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡುವುದರ ಮೂಲಕ ಟ್ರ್ಯಾಕ್ಟರ್ ಚಲಿಸುವ ತಂತ್ರಜ್ಞಾನಕ್ಕೆ 4WD ಎಂದು ಕರೆಯಲಾಗುತ್ತದೆ. ಈ ಕಾರ್ಯ ವಿಧಾನದಿಂದ ಇದು ಕೆಲಸ ಮಾಡುವಾಗ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಜಾರುವಿಕೆಯನ್ನು ಹೊಂದಿರುತ್ತದೆ.

4WD ಟ್ರಾಕ್ಟರುಗಳ ಮುಂಭಾಗದ ಚಕ್ರಗಳು ಟ್ರಾಕ್ಟರ್ ಅನ್ನು ಮುಂದಕ್ಕೆ ಎಳೆಯಲು ಹಿಂದಿನ ಚಕ್ರಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ, ಹಿಂದಿನ ಟ್ರಾಕ್ಟರ್ ಮುಂಭಾಗಕ್ಕಿಂತ ಹೆಚ್ಚು ಎಳೆತವನ್ನು ಹೊಂದಿದ್ದು ನಾಲ್ಕು ಚಕ್ರಗಳು ಟ್ರಾಕ್ಟರ್ ಚಲಿಸಲು ಸಹಾಯ ಮಾಡುವುದರಿಂದ, ಉತ್ತಮ ಎಳೆಯುವ ಶಕ್ತಿ, ಇಂಧನ ದಕ್ಷತೆ ಮತ್ತು ಹೆಚ್ಚಿನ ಲಗತ್ತು ಆಯ್ಕೆಗಳೊಂದಿಗೆ ನಿಮ್ಮ ಕೆಲಸವನ್ನು ಹೆಚ್ಚು ನಿರ್ವಹಿಸಬಹುದಾಗಿದೆ.

ಸೋನಾಲಿಕಾ, ಜಾನ್ ಡೀರೆ ಟ್ರಾಕ್ಟರ್, ಮಹೀಂದ್ರಾ ಟ್ರಾಕ್ಟರ್, ಐಚರ್, ಸ್ವರಾಜ್ ಟ್ರಾಕ್ಟರ್, ಮತ್ತು ಫಾರ್ಮ್‌ಟ್ರಾಕ್ ಭಾರತದಲ್ಲಿ ಅತ್ಯುತ್ತಮ 4wd ಟ್ರಾಕ್ಟರ್ ಮಾದರಿಗಳನ್ನು ಒದಗಿಸುವ ಜನಪ್ರಿಯ ಟ್ರ್ಯಾಕ್ಟರ್ ಬ್ರಾಂಡ್‌ಗಳಾಗಿವೆ.

4WD ಟ್ರಾಕ್ಟರ್ ಎಂದರೆ ಇಂಜಿನ್ ನಿಂದ ಟ್ರ್ಯಾಕ್ಟರ್ ನ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡುವುದರ ಮೂಲಕ ಟ್ರ್ಯಾಕ್ಟರ್ ಚಲಿಸುವ ತಂತ್ರಜ್ಞಾನಕ್ಕೆ 4WD ಎಂದು ಕರೆಯಲಾಗುತ್ತದೆ. ಈ ಕಾರ್ಯ ವಿಧಾನದಿಂದ ಇದು ಕೆಲಸ ಮಾಡುವಾಗ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಜಾರುವಿಕೆಯನ್ನು ಹೊಂದಿರುತ್ತದೆ.

4WD ಟ್ರಾಕ್ಟರುಗಳ ಮುಂಭಾಗದ ಚಕ್ರಗಳು ಟ್ರಾಕ್ಟರ್ ಅನ್ನು ಮುಂದಕ್ಕೆ ಎಳೆಯಲು ಹಿಂದಿನ ಚಕ್ರಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ, ಹಿಂದಿನ ಟ್ರಾಕ್ಟರ್ ಮುಂಭಾಗಕ್ಕಿಂತ ಹೆಚ್ಚು ಎಳೆತವನ್ನು ಹೊಂದಿದ್ದು ನಾಲ್ಕು ಚಕ್ರಗಳು ಟ್ರಾಕ್ಟರ್ ಚಲಿಸಲು ಸಹಾಯ ಮಾಡುವುದರಿಂದ, ಉತ್ತಮ ಎಳೆಯುವ ಶಕ್ತಿ, ಇಂಧನ ದಕ್ಷತೆ ಮತ್ತು ಹೆಚ್ಚಿನ ಲಗತ್ತು ಆಯ್ಕೆಗಳೊಂದಿಗೆ ನಿಮ್ಮ ಕೆಲಸವನ್ನು ಹೆಚ್ಚು ನಿರ್ವಹಿಸಬಹುದಾಗಿದೆ.

ಸೋನಾಲಿಕಾ, ಜಾನ್ ಡೀರೆ ಟ್ರಾಕ್ಟರ್, ಮಹೀಂದ್ರಾ ಟ್ರಾಕ್ಟರ್, ಐಚರ್, ಸ್ವರಾಜ್ ಟ್ರಾಕ್ಟರ್, ಮತ್ತು ಫಾರ್ಮ್‌ಟ್ರಾಕ್ ಭಾರತದಲ್ಲಿ ಅತ್ಯುತ್ತಮ 4wd ಟ್ರಾಕ್ಟರ್ ಮಾದರಿಗಳನ್ನು ಒದಗಿಸುವ ಜನಪ್ರಿಯ ಟ್ರ್ಯಾಕ್ಟರ್ ಬ್ರಾಂಡ್‌ಗಳಾಗಿವೆ.

  1. MAHINDRA JIVO 245 DI
  2. Mahindra Jivo 365 DI 4WD
  3. POWERTRAC EURO 45 PLUS 4WD
  4. SWARAJ 855 FE
  5. JOHN DEERE 5310 GEARPRO
  6. MASSEY FERGUSON 6028
  7. KUBOTA NEOSTAR B2741
  8. EICHER 280 4WD
  9. SONALIKA GT 22
  10. NEW HOLLAND 5500 TURBO SUPER

ಸಮಾಜ ಕಲ್ಯಾಣ ಇಲಾಖೆಯಿಂದ ಯಾವೆಲ್ಲ ಸೌಲಭ್ಯ ಪಡೆಯಬವುದು?

0

ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು:

  • ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕ/ಬಾಲಕಿಯರಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸುವುದು ಹಾಗೂ ವಸತಿ ಶಾಲೆಗಳ ಪ್ರವೇಶ ಮಂಜೂರಾತಿ ನೀಡಲಾಗುತ್ತದೆ.
  • ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ (ಪರಿಶಿಷ್ಠ ಜಾತಿ(ಪಂಗಡ) ವಿದ್ಯಾರ್ಥಿವೇತನ ಮಂಜೂರಾತಿ ಕುರಿತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತದೆ.

  • ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ.

ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು:

  • ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1995 ಹಾಗೂ ನಿಯಮಗಳು 1977 ಕರ್ನಾಟಕ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಪಂಗಡಗಳ (ದೌರ್ಜನ್ಯ ಪ್ರತಿಬಂಧ ಅಧಿನಿಯಮ) 1989 ಹಾಗೂ ನಿಯಮಗಳು 1995 ಅನ್ವಯ ಅಂತರತಜಾತಿ ವಿವಾಹವಾಗುವ ದಂಪತಿಗಳಿಗೆ ಪ್ರೋತ್ಸಾಹಧನ.
  • ಸಾಮಾಜಿಕ ಸರಳವಿವಾಹ ಯೋಜನೆ.
  • ವಿಧವಾ ಮರುವಿವಾಹಕ್ಕೆ ಪ್ರೋತ್ಸಾಹಧನ.
  • ಒಳಪಂಗಡಗಳ ಅಂತರಜಾತಿ ವಿವಾಹ.

ಇದನ್ನೂ ಓದಿ: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ!

ಪರಿಶಿಷ್ಠ ಜಾತಿ ಉಪಯೋಜನೆ:

ಪರಿಶಿಷ್ಠ ಜಾತಿ/ಪಂಗಡದ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕ್/ಡಿಸಿಸಿ ಬ್ಯಾಂಕ್/ ಅಪೆಕ್ಸ್ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಕಾರ್ಯಕ್ರಮ.

ಎಸ್.ಸಿ.ಎಸ್.ಟಿ /ಐ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳು ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳು.

ಮೂಲಭೂತ ಸೌಕರ್ಯ ವಿಭಾಗದಲ್ಲಿ:

ಪರಿಶಿಷ್ಠ ಜಾತಿ ಕಾಲೋನಿಗಳ ಅಭಿವೃದ್ದಿಗಾಗಿ ಪರಿಶಿಷ್ಠ ಜಾತಿ ಉಪಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ/ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಗಳ ಮುಖಾಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕೂಡು ರಸ್ತೆಗಳು, ಶುದ್ಧ ಕುಡಿಯುವ ನೀರು, ಬೀದಿ ದೀಪ, ಅತಿ ಸಣ್ಣ ಪ್ರಮಾಣದ ಸೇತುವೆಗಳು ಮುಂತಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ವಿವರ:

  • ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ.
  • ಸರ್ಕಾರಿ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗ ಉನ್ನತೀಕರಣ.
  • ಡಾ. ಬಿ.ಆರ್. ಅಂಬೇಡ್ಕರ್/ ಡಾ. ಬಾಬು ಜಗಜೀವನರಾಮ್ ಸಮುದಾಯಭವನಗಳ ನಿರ್ಮಾಣ.
  • ಪರಿಶಿಷ್ಠ ಜಾತಿಯ ಸಂಘ ಸಂಸ್ಥೆಗಳ ವತಿಯಿಂದ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕಟ್ಟಡ ನಿರ್ಮಾಣ.
  • ಪರಿಶಿಷ್ಠ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
  • ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ.
  • ಮುಖ್ಯಮಂತ್ರಿಗಳ ಮಾದರಿ ಗ್ರಾಮ ಯೋಜನೆ.

ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ: 9482300400

ವೆಬ್ಸೈಟ್ ವಿಳಾಸ: https://sw.kar.nic.in/

Varuna mitra: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ!

0

ಹೌದು ರೈತ ಬಾಂಧವರೇ ನಿಮ್ಮ ಗ್ರಾಮದಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಅತೀ ಸುಲಭವಾಗಿ ಕ್ಷಣಾರ್ದದಲ್ಲಿ ತಿಳಿಯಲು ಒಂದು ಕರೆ ಮಾಡಿದರೆ ಸಾಕು ಮಳೆ ಮುನ್ಸೂಚನೆಯನ್ನು ನೀಡಲು ಅನೇಕ ಮೊಬೈಲ್ ಅಪ್ಲಿಕೇಶನ್ ಇವೆ. ಆದರೆ ರೈತರಿಗೆ ಸುಲಭವಾಗಿ ಮಳೆ ಮುನ್ಸೂಚನೆಯನ್ನು ನೀಡಲು “ವರುಣ ಮಿತ್ರ” ಸಹಾಯವಾಣಿ ಅನ್ನು 2011ರಿಂದ ಪ್ರಾರಂಭಿಸಿದ್ದು ಈ ಸಹಾಯವಾಣಿಯನ್ನು ಹೇಗೆ ಬಳಸಬೇಕು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

24*7 ಉಚಿತ ಮಳೆ ಮುನ್ಸೂಚನೆ ನೀಡುವ “ವರುಣ ಮಿತ್ರ”

9243345433 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರು ಮತ್ತು ನಿಮ್ಮ ಹೆಸರನ್ನು ತಿಳಿಸಿದರೆ ಸಾಕು ನಿಮ್ಮ ಭಾಗದಲ್ಲಿ ಮಳೆ ಬರುತ್ತದೆಯೋ ಇಲ್ಲವೋ ಎಂದು ತಿಳಿಸುತ್ತಾರ‍ೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC)ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳ ವಿಸ್ತಾರವಾದ ಜಾಲವು, ಹೋಬಳಿ ಮಟ್ಟದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿಯನ್ನು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

ಈ ಸಹಾಯವಾಣಿಗೆ ರೈತರು 24*7 ಅಂದರೆ ಕೇವಲ ಕಚೇರಿ ಸಮಯದಲ್ಲಿ ಮಾತ್ರವಲ್ಲದೆ ದಿನದ 24 ಗಂಟೆಯು ಕರೆ ಮಾಡಿ ಮಳೆ ಮುನ್ಸೂಚನೆಯನ್ನು ಪಡೆಯಬವುದು. ಇದರಿಂದ ರೈತರಿಗೆ ಮುಂಚಿತವಾಗಿಯೇ ಮಳೆ ಮುನ್ಸೂಚನೆಯು ಲಭ್ಯವಾಗಿ ತಮ್ಮ ಕೃಷಿ ಚಟುವಟಿಗೆಯನ್ನು ಕಾಲ ಕಾಲಕ್ಕೆ ಸಮರ್ಪಕವಾಗಿ ರೂಪಿಸಿಕೊಳ್ಳಬವುದು ಜೊತೆಗೆ ಹವಾಮಾನ ವೈಪರೀತ್ಯಗಳಿಂದ ರೈತರಿಗೆ ಉಂಟಾಗಬವುದಾದ ಹಾನಿಯನ್ನು ತಗ್ಗಿಸಲು ಈ ಸಹಾಯವಾಣಿ ತುಂಬ ಅನುಕೂಲಕರವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC) ಟ್ವಿಟರ್ ನಲ್ಲಿಯೂ ಮಾಹಿತಿ ಲಭ್ಯ:

https://twitter.com/KarnatakaSNDMC?s=20 ಈ ಲಿಂಕ್ ಮೇಲೆ ಒತ್ತಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC)ನ ಟ್ವಿಟರ್ ಖಾತೆಯನ್ನು ಭೇಟಿ ಮಾಡಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದ ಮಳೆ ಮುನ್ಸೂಚನೆ, ಗಾಳಿ ವೇಗ, ತಾಪಮಾನ ಇತ್ಯಾದಿ ಮಾಹಿತಿಯ ಲೈವ್ ಅಪ್ಡೇಟ್ ಅನ್ನು ನಿರಂತರವಾಗಿ ಇಲ್ಲಿ ನೀವು ಪಡೆಯಬವುದಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

0

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ, ಹಂದಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ ಪಡೆಯಬವುದು. 57,000 ಸಾವಿರದಿಂದ 87,000 ಸಾವಿರದ ವರೆಗೆ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.

ಉದ್ಯೋಗ ಖಾತ್ರಿಯಡಿ ಶೆಡ್ ನಿರ್ಮಿಸಲು ಸಹಾಯಧನ ವಿವರ ಹೀಗಿದೆ:

ದನದ ಶೆಡ್ ನಿರ್ಮಾಣ ರೂ.57,000/-
ಕುರಿ/ಮೇಕೆ ಶೆಡ್ ನಿರ್ಮಾಣ ರೂ.70,000/-
ಕೋಳಿ ಶೆಡ್‌ ನಿರ್ಮಾಣ ರೂ. 60000/-
ಹಂದಿ ಶೆಡ್ ನಿರ್ಮಾಣ ರೂ. 87000/-
ಅಜೋಲ ತೊಟ್ಟಿ ನಿರ್ಮಾಣ ರೂ. 16000/-

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈಗ ಚುನಾವಣೆ ಇರುವುದರಿಂದ ಈ ಚುನವಾಣೆ ಮುಗಿದ ನಂತರ ನಿಮ್ಮ ಗ್ರಾಮ ಪಂಚಾಯತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಕ್ರಿಯ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು ಇದಾದ ನಂತರ ನೀವು ಕಾಮಗಾರಿಯನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿಗಳ ದರ ಪರಿಷ್ಕರಣೆ.

ಇದರ ಜೊತೆಗೆ ಆರ್ಥಿಕ ಸ್ವಾವಲಂಬನೆಗಾಗಿ ಉದ್ಯೋಗ ಖಾತರಿ ಯೋಜನೆಯಡಿ ನರ್ಸರಿ ಸಸಿಗಳನ್ನು ಬೆಳೆಸಲು ಮಹಿಳಾ ಸ್ವಸಹಾಯ ಸಂಘಗಳಿಗೂ ಅವಕಾಶವಿರುತ್ತದೆ. ಅಪೌಷ್ಠಿಕತೆ ನಿವಾರಣೆಗೆ ವೈಯಕ್ತಿಕ ಪೌಷ್ಠಿಕ ತೋಟ ನಿರ್ಮಿಸಿಕೊಳ್ಳಬವುದು.

ಅಗತ್ಯ ದಾಖಲಾತಿಗಳು:

1)ಉದ್ಯೋಗ ಚೀಟಿ.
2)ಆಧಾರ್ ಕಾರ್ಡ್ ಪ್ರತಿ
3)ಬ್ಯಾಂಕ್ ಪಾಸ್ ಬುಕ್ ಪ್ರತಿ
4)ಪೋಟೋ
5)ಜಮೀನ ಪಹಣಿ

ಕೂಲಿದರ ವಿವರ:

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ವರ್ಷಕ್ಕೆ 100 ದಿನಗಳವರೆಗೆ ಒಂದು ದಿನಕ್ಕೆ 309/- ರೂ ಕೂಲಿ ಪಡೆಯಬವುದು.

ನರೇಗಾ ಯೋಜನೆ ಸಹಾಯವಾಣಿ: 1800 425 8666

ನಿಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಬರಬೇಕೆ ಈ ಕ್ರಮಗಳನ್ನು ಅನುಸರಿಸಿ!

0

ದಿನೆ ದಿನೇ ಹೆಚ್ಚುತ್ತಿರುವ ಮನೆಯ ಪ್ರತಿ ತಿಂಗಳ ವಿದ್ಯುತ್ ಬಿಲ್ ನಿಯಂತ್ರಣ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬವುದು ಎಂದು ಈ ಅಂಕಣದಲ್ಲಿ ಸಂಕ್ಷಿತವಾಗಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ, ಈ ಕ್ರಮ ಕೈಗೊಳ್ಳುವುದರಿಂದ ವಿದ್ಯುತ್ ಉಳಿತಾಯ ಮಾಡಿ ಮನೆಯ ತಿಂಗಳ ವೆಚ್ಚ ಕಡಿತಗೊಳಿಸಲು ಸಹಕಾರಿಯಾಗುತ್ತದೆ.

ವಿದ್ಯುತ್ ಬಳಕೆಯಲ್ಲಿ ಉಳಿತಾಯ ಕ್ರಮಗಳು:

  • ಬುರುಡೆ ಬಲ್ಬ/ಟ್ಯೂಬ್ ಲೈಟ್/ಸಿ.ಎಫ್.ಎಲ್ ಬಲ್ಬಗಳ ಬದಲಾಗಿ ಎಲ್.ಇ.ಡಿ ಬಲ್ಬಗಳನ್ನು ಬಳಸಿ. ಎಲ್.ಇ.ಡಿ ಬಲ್ಬಗಳ ಬಳಕೆಯಿಂದ ನಿಮ್ಮ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ.
  • ಎಲ್.ಇ.ಡಿ ಬಲ್ಬಗಳನ್ನು ಸತತವಾಗಿ 25,000 ಗಂಟೆಗಳ ಕಾಲ ಬೆಳಕನ್ನಿ ನೀಡಲು ಬಳಸಬಹುದು.
  • ಸ್ವಿಚ್ ಆನ್ ಮಾಡಿದ ತಕ್ಷಣ ಎಲ್.ಇ.ಡಿ ಬಲ್ಬಗಳು ಪ್ರಕಾಶಮಾನವಾದ ಬೆಳಕನ್ನು ನೀಡುತ್ತವೆ.

ಸೌರಶಕ್ತಿ ಬಳಸುವುದು:

ಸೌರಶಕ್ತಿಯ ಮೇಲ್ಚಾವಣಿಯ ಬಳಕೆಯಿಂದ ವಿದ್ಯುತ್ ಉತ್ಪಾದಿಸಿ, ಸ್ವಂತ ಬಳಕೆಗೆ ಉಪಯೋಗಿಸಬಹುದಾಗಿರುತ್ತದೆ. ಸ್ವಂತ ಬಳಕೆಗೂ ಮೀರಿ ವಿದ್ಯುಚ್ಚಕ್ತಿ ಉತ್ಪಾದಿಸಿದಲ್ಲಿ ಅಂತಹ ವಿದ್ಯುಚ್ಚಕ್ತಿಯನ್ನು ಹೆಸ್ಕಾಂ ಗ್ರಿಡ್ ಗೆ ರವಾನಿಸಿ ಹಣಗಳಿಸಬಹುದಾಗಿದೆ.

ಬಿಇಇ 5 ಸ್ಟಾರ ವಿದ್ಯುತ್ ಉಪಕರಣಗಳನ್ನು ಬಳಸುವುದು:

ಬಿಇಇಯಿಂದ ದೃಢೀಕೃತಗೊಂಡ 5 ಸ್ಟಾರ ರೇಟೆಡ್ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ವಿದ್ಯುತ್ ಬಿಲ್ಲನಲ್ಲಿ ಉಳಿತಾಯವಾಗುತ್ತದೆ ಹಾಗೂ ವಿದ್ಯುತ್ ಚ್ಚಕ್ತಿಯೂ ಸಹ ಉಳಿತಾಯವಾಗುತ್ತದೆ. ಆದ್ದರಿಂದ ವಿದ್ಯುತ್ ಉಪಕರಣಗಳನ್ನು ಖರೀದಿಸುವಾಗ ಬಿಇಇ ಪ್ರಮಾಣಿತ 5 ಸ್ಟಾರ ರೇಟೆಡ್ ಉಪಕರಣಗಳನ್ನೆ ಖರೀದಿಸಿರಿ.

  • ಯಾವಾಗಲೂ ಐ.ಎಸ್.ಐ, ಅಂಗೀಕೃತ ಹಾಗೂ ಬಿ.ಇ.ಇ. 5 ಸ್ಟಾರ್‌ಗಳುಳ್ಳ Energy Efficient ವಿದ್ಯುತ್ ಉಪಕರಣಗಳಾದ ಫ್ಯಾನ್, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಹವಾನಿಯಂತ್ರಣ ಇತರೇ ಉಪಕರಣಗಳನ್ನು ಮಾತ್ರ ಉಪಯೋಗಿಸಿ.
  • ಅವಶ್ಯಕತೆ ಇದ್ದಾಗ ಮಾತ್ರ ವಿದ್ಯುತ್ ದೀಪಗಳನ್ನು ಬಳಸಿ.
  • ಎಲೆಕ್ಟ್ರಿಕ್ ಕಾಯಿಲ್ ಬದಲಿಗೆ ಸ್ಟಾರ್‌ ರೇಟೆಡ್ ಇಂಡಕ್ಷನ್ ಸ್ಟವ್‌ಗಳನ್ನು ಬಳಸಿ.

  • ಬಿಸಿ ಇರುವ ತಿಂಡಿ ಪದಾರ್ಥಗಳನ್ನು ರೆಫ್ರಿಜರೇಟರ್‌ ಒಳಗೆ ಇಡದಿರಿ.
  • ಬಟ್ಟೆಗಳನ್ನು ಮಷಿನ್‌ನಲ್ಲಿ ಒಣಗಿಸುವುದರ ಬದಲಿಗೆ ನೈಸರ್ಗಿಕ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ.
  • ಅವಶ್ಯಕತೆಯಿಲ್ಲದಿರುವಾಗ ಆಫೀಸ್ ಮತ್ತು ಮನೆಗಳಲ್ಲಿನ ಗಣಕಯಂತ್ರಗಳನ್ನು off ಮಾಡಿರಿ.
  • ಮಾನಿಟರ್‌ನ ತೀಕ್ಷ್ಯತೆಯನ್ನು ಕಡಿಮೆ ಇರಿಸಿ. ಹೆಚ್ಚು ತೀಕ್ಷ್ಮತೆಯು ಹೆಚ್ಚು ವಿದ್ಯುತ್‌ ಅನ್ನು ಬಳಸುತ್ತದೆ.

ಇದನ್ನೂ ಓದಿ: ನಕ್ಷತ್ರವಾರು ಈ ವರ್ಷದ ಮಳೆ ಅವಧಿ ಮತ್ತು ಪ್ರಮಾಣ, ಸೂಕ್ತ ಬೆಳೆ, ಹಿರಿಯರ ಗಾದೆಗಳ ಲೆಕ್ಕಾಚಾರ.

ಎಲ್.ಇ.ಡಿ. ದೀಪಗಳನ್ನು ಬಳಸುವುದು:

  • ಬುರುಡೆ ಬಲ್ಬ/ಟ್ಯೂಬ್ ಲೈಟ್/ಸಿ.ಎಫ್.ಎಲ್ ಬಲ್ಬಗಳ ಬದಲಾಗಿ ಎಲ್.ಇ.ಡಿ ಬಲ್ಬಗಳನ್ನು ಬಳಸಿ. ಎಲ್.ಇ.ಡಿ ಬಲ್ಬಗಳ ಬಳಕೆಯಿಂದ ನಿಮ್ಮ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ.
  • ಎಲ್.ಇ.ಡಿ ಬಲ್ಬಗಳನ್ನು ಸತತವಾಗಿ 25,000 ಗಂಟೆಗಳ ಕಾಲ ಬೆಳಕನ್ನಿ ನೀಡಲು ಬಳಸಬಹುದು.
  • ಸ್ವಿಚ್ ಆನ್ ಮಾಡಿದ ತಕ್ಷಣ ಎಲ್.ಇ.ಡಿ ಬಲ್ಬಗಳು ಪ್ರಕಾಶಮಾನವಾದ ಬೆಳಕನ್ನು ನೀಡುತ್ತವೆ.

ಸೌರಶಕ್ತಿ ಬಳಸುವುದು:

ಸೌರಶಕ್ತಿಯ ಮೇಲ್ಚಾವಣಿಯ ಬಳಕೆಯಿಂದ ವಿದ್ಯುತ್ ಉತ್ಪಾದಿಸಿ, ಸ್ವಂತ ಬಳಕೆಗೆ ಉಪಯೋಗಿಸಬಹುದಾಗಿರುತ್ತದೆ. ಸ್ವಂತ ಬಳಕೆಗೂ ಮೀರಿ ವಿದ್ಯುಚ್ಚಕ್ತಿ ಉತ್ಪಾದಿಸಿದಲ್ಲಿ ಅಂತಹ ವಿದ್ಯುಚ್ಚಕ್ತಿಯನ್ನು ಹೆಸ್ಕಾಂ ಗ್ರಿಡ್ ಗೆ ರವಾನಿಸಿ ಹಣಗಳಿಸಬಹುದಾಗಿದೆ.

ಬಿಇಇ 5 ಸ್ಟಾರ ವಿದ್ಯುತ್ ಉಪಕರಣಗಳನ್ನು ಬಳಸುವುದು:

ಬಿಇಇಯಿಂದ ದೃಢೀಕೃತಗೊಂಡ 5 ಸ್ಟಾರ ರೇಟೆಡ್ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ವಿದ್ಯುತ್ ಬಿಲ್ಲನಲ್ಲಿ ಉಳಿತಾಯವಾಗುತ್ತದೆ ಹಾಗೂ ವಿದ್ಯುತ್ ಚ್ಚಕ್ತಿಯೂ ಸಹ ಉಳಿತಾಯವಾಗುತ್ತದೆ. ಆದ್ದರಿಂದ ವಿದ್ಯುತ್ ಉಪಕರಣಗಳನ್ನು ಖರೀದಿಸುವಾಗ ಬಿಇಇ ಪ್ರಮಾಣಿತ 5 ಸ್ಟಾರ ರೇಟೆಡ್ ಉಪಕರಣಗಳನ್ನೆ ಖರೀದಿಸಿರಿ.

ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವ ಜಮೀನಿನ ವರ್ಗಾವಣೆ ಕುರಿತು ರೈತರಿಗೊಂದು ಸಿಹಿ ಸುದ್ದಿ!

0

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವ ವಿಧಾನವನ್ನು ತುಂಬ ಸರಳೀಕರಣ ಮಾಡಲಾಗಿದ್ದು ರೈತರ ಜಮೀನಿನ ಪಹಣಿಯು ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು, ಅವರು ಮರಣ ಹೊಂದಿದ್ದರೆ ಅಂಥವರ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಪ್ರಸ್ತುತ ಉಳುಮೆ ಮಾಡುತ್ತಿರುವ ಮಕ್ಕಳು  ಅವಕಾಶವನ್ನು ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಪೌತಿ ಖಾತೆ ಆಂದೋಲನವನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ರೈತರು ಸರಳವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ಜಮೀನಿನ ಪಹಣಿ ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದಲ್ಲಿ ಬ್ಯಾಂಕಿನಿಂದ ಸಾಲ ಪಡೆಯಲು, ವಿಮೆ ಹಣದ ಸೌಲಭ್ಯ ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳಿಂದ ಯಾವುದೇ ಸಹಾಯಧನ ಆದಾರಿತ ಸೌಲಭ್ಯ ಪಡೆಯಲು  ಅರ್ಹರಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ರೈತರು ಖಾತೆ ಬದಲಾವಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದ್ದು, ಇದು ಕೃಷಿ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿದೆ. ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮವನ್ನು ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮ ಅನುಷ್ಥಾನ ಮಾಡಲಾಗುತ್ತಿದೆ. 

ಜಮೀನಿನ ವಾರಸುದಾರ ನಿಧನದ ನಂತರ ಜಮೀನಿನ ಖಾತೆ ಬದಲಾವಣೆಗೆ ಸಾಕಷ್ಟು ಸಮಯದಿಂದ ಕಾಯುತ್ತಿರುವ ಅನೇಕ ಕುಟುಂಬಗಳಿಗೆ ಇದೊಂದು ಉತ್ತಮ ಯೋಜನೆಯಾಗಿದೆ. ಈ ನೂತನ ಪದ್ದತಿಯನ್ವ ಮರಣ ಹೊಂದಿದವರ ವಿವರಗಳನ್ನು ಪಡೆಯಬೇಕು. ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪ್ರಮಾಣ ಪತ್ರ ಪಡೆದು ಭೂಮಿ ತಂತ್ರಾಂಶ, ಪೌತಿ ಖಾತೆಗಾಗಿ ನಮೂನೆ ಒಂದರಲ್ಲಿ ದಾಖಲಿಸುವುದು. 

ಒಂದೊಮ್ಮೆ ವಂಶವೃಕ್ಷ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಚೇರಿ/ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ವ್ಯಕ್ತಿಯು ಮರಣ ಹೊಂದಿ ಒಂದು ವರ್ಷಕ್ಕಿಂತಲೂ ಕೂಡ ಬಹುಕಾಲ ಆಗಿದ್ದರೆ ಮರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇರದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ್ ಈ ದಾಖಲೆಗಳು ಪರಿಶೀಲಿಸಿಕೊಂಡು ಗ್ರಾಮಲೆಕ್ಕಾಧಿಕಾರಿಯವರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ, ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡೆವಿಟ್ ಪಡೆದು ಅವರ ಆಧಾರ ಕಾರ್ಡ್, ರೇಶನ್ ಕಾರ್ಡ್ ಲಿಂಕ್ ಮೆಲೆ ಅರ್ಜಿಯನ್ನು ಹಾಕಬಹುದಾಗಿದೆ. 

ಈ ರೀತಿಯ ಪೌತಿ ಖಾತೆಯನ್ನು ಬದಲಾವಣೆಗೆ ಸಂಬಂಧಪಟ್ಟಂತೆ ಮ್ಯುಟೆಶನ್ ಶುಲ್ಕದಲ್ಲಿ ರಾಜ್ಯ ಸರ್ಕಾರ ರಿಯಾಯಿತಿಯನ್ನು ನೀಡಿದೆ. ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ 12 ಮತ್ತು ನಮೂನೆ 21 ನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮ್ಯುಟೇಷನ್ ವಿಲೇವಾರಿಗೆ 30 ದಿನಗಳಕಾಲ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ತಕರಾರು ಅರ್ಜಿ ಸಲ್ಲಿಸಿದಲ್ಲಿ ಹೋಬಳಿಗಳಿಗೆ ಗ್ರೇಡ್-1 ತಹಶೀಲ್ದಾರ ಮತ್ತು ಗ್ರೇಡ್-2 ತಹಶೀಲ್ದಾರಗೆ ಹೊಣೆಯನ್ನು ನೀಡಲಾಗಿದ್ದು, ಆಯಾ ಹೋಬಳಿಯಲ್ಲಿ ಒಂದು ತಿಂಗಳೊಳಗೆ ಕ್ಯಾಂಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.

ಪೌತಿ ಖಾತೆ ಅಥವಾ ನಿಮ್ಮ ಹೆಸರಿಗೆ ಜಮೀನಿನ ಪಹಣಿ ಮಾಡಿಕೊಳ್ಳಲು ನಮೂನೆ-1 ಈ ಅರ್ಜಿಯನ್ನು ನಾಡಕಚೇರಿಯಲ್ಲಿ ಪಡೆದುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಬವುದು. 

ನಿಮ್ಮ ಮೊಬೈಲ್ ನಲ್ಲೆ ಪಹಣಿ/ಖಾತೆ/ಊತಾರ್ ವಿವರ ಪಡೆಯಲು ಹೀಗೆ ಮಾಡಿ:

https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮ-ಸರ್ವೆ ನಂಬರ್-ಇತರೇ ವಿವರ ಹಾಕಿ ನಿಮ್ಮ ಪಹಣಿ ವಿವರ ಪಡೆಯಬವುದು.