ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಒಟ್ಟು ವಿವರವನ್ನು ಪ್ರಕಟಿಸಲಾಗಿದೆ. ರೈತರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯೇ? ಎಂದು ಖಚಿತಪಡಿಸಿಕೊಳ್ಳಬಹುದು.
ರಾಜ್ಯ ಮತ್ತು ಕೇಂದ್ರ ಸರಕಾರದ ಬಹುತೇಕ ಸಹಾಯಧನ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಅರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಆಧಾರ್ ಲಿಂಕ್ /NPCI mapping ಇರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಕಾರಣದಿಂದಾಗಿ ರೈತರು ಬರ ಪರಿಹಾರ, ಬೆಳೆ ವಿಮೆ, ಕಿಸಾನ್ ಸಮ್ಮಾನ್ ನಿಧಿ, ಪಿಂಚಣಿ ಹಣ, ಇತರೆ ವಿವಿಧ ಇಲಾಖೆಯ ಸಹಾಯಧನ ಯೋಜನೆಯಡಿ ಹಣ ಪಡೆಯಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI mapping ಇರುವುದು ಕಡ್ಡಾಯ ಇಲ್ಲವಾದಲ್ಲಿ ನಿಮಗೆ ಹಣ ಜಮಾ ಅಗುವುದಿಲ್ಲ. ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿದಿಯೇ? ಇಲ್ಲವೇ? ಎಂದು.
ಇದನ್ನೂ ಓದಿ: Crop loan interest- ರೈತರ ಕೃಷಿ ಸಾಲದ 440 ಕೋಟಿ ರೂ ಬಡ್ಡಿ ಮನ್ನಾ! ಬಡ್ಡಿ ಮನ್ನಾಕ್ಕೆ ಯಾರೆಲ್ಲ ಅರ್ಹರು?
Aadhar Not Seeded Report- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಪಟ್ಟಿ ಬಿಡುಗಡೆ:
ಕೃಷಿ ಇಲಾಖೆಯಿಂದ ರಾಜ್ಯದಲ್ಲಿ ಒಟ್ಟು ಎಷ್ಟು ಜನ ರೈತರು ಇನ್ನು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲ ಎನ್ನುವ ವಿವರವನ್ನು PMkisan fruits ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದು ಈ ಕೆಳಗಿನ ವಿಧಾನ ಅನುಸರಿಸಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ, ಹಳ್ಳಿ ಆಯ್ಕೆ ಮಾಡಿಕೊಂಡು ಈ ವಿವರವನ್ನು ಪಡೆಯಬವುದು.
Step-1: ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ aadhar link status ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಇದಾದ ಬಳಿಕ ಈ ಪೇಜ್ ನಲ್ಲಿ ಜಿಲ್ಲಾವಾರು ಒಟ್ಟು ಎಷ್ಟು ಜನ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲ ಎನ್ನುವ ಅಂಕಿ-ಸಂಖ್ಯೆ ವಿವರ ತೋರಿಸುತ್ತದೆ.
Step-2: ಬಳಿಕ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಆ ಜಿಲ್ಲೆಯ ತಾಲ್ಲೂಕು ಪಟ್ಟಿ ಕಾಣಿಸುತ್ತದೆ ಇದೇ ರೀತಿ ನಿಮ್ಮ ತಾಲ್ಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿದಾರ ಹೋಬಳಿಯ ವಿವರ ಮತ್ತು ಹೋಬಳಿಯ ಮೇಲೆ ಕ್ಲಿಕ್ ಮಾಡಿದರೆ ಆ ಹೋಬಳಿಯಲ್ಲಿರುವ ಒಟ್ಟು ಹಳ್ಳಿಯ ವಿವರ ತೋರಿಸುತ್ತದೆ.
ಇದನ್ನೂ ಓದಿ: Parihara amount-2024: 30 ಲಕ್ಷ ರೈತರಿಗೆ ಬರ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಈ ಮಾಹಿತಿಯ ಪ್ರಕಾರ ಇನ್ನು 2 ಲಕ್ಷ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲ ಈ ರೈತರು ಸರಕಾರಿ ಯೋಜನೆಯ ಅರ್ಥಿಕ ನೆರವು ಪಡೆಯಲು ಅಸಾಧ್ಯವಾಗಿದೆ ಅದ ಕಾರಣ ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಿಕೊಂಡು ಲಿಂಕ್ ಅಗದಿದ್ದಲ್ಲಿ ಕೊಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
Bank-Aadhar link status check: ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವ ವಿಧಾನ:
ರೈತರು ತಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಅಗಿದಿಯೋ ಅಥವಾ ಇಲ್ಲವೋ? ಎಂದು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT karnayaka app ಸರಕಾರದ ಅಧಿಕೃತ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಫಲಾನುಭವಿಯ ಅಧಾರ್ ಸಂಖ್ಯೆಯನ್ನು ಹಾಕಿ “OTP ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ತದನಂತರ ನಿಮ್ಮ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ನಿಮಗೆ ನೆನಪಿನಲ್ಲಿ ಉಳಿಯು ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಎರಡು ಬಾರಿ ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: January Pension status: ಜನವರಿ-2024ರ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.
Step-3: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಅಪ್ಲಿಕೇಶನ್ ನ ಮುಖಪುಟದ ಬಲ ಬದಿಯಲ್ಲಿ “ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ ಸ್ಥಿತಿ/Aadhr-bank link status” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದ್ದರೆ ಇಲ್ಲಿ ಬ್ಯಾಂಕ್ ಅಕೌಂಟ್ ವಿವರ ತೋರಿಸಿ ಕೊನೆಯಲ್ಲಿ Seeding status: “Active” ಎಂದು ತೋರಿಸುತ್ತದೆ.
ಲಿಂಕ್ ಅಗದಿದ್ದಲ್ಲಿ “inactive” ಎಂದು ತೋರಿಸುತ್ತದೆ ಅಗ ನೀವು ಮತ್ತೊಮ್ಮೆ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಬೇಕು.