ಹಳ್ಳಿಯಲ್ಲಿ ವಾಸ ಮಾಡುತ್ತಿರುವ ರೈತರು, ಮಹಿಳೆಯರು ಮತ್ತು ನಿರುದ್ಯೋಗಿಗಳು ನರೇಗಾ ಯೋಜನೆಯಡಿ(NREGA Scheme) ನೋಂದಣಿಯನ್ನು ಮಾಡಿಕೊಂಡು ತಮ್ಮ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಈ ಯೋಜನೆಯ ಮೂಲಕ ಉದ್ಯೋಗವನ್ನು ಪಡೆಯಲು ಅವಕಾಶವಿದ್ದು ಇದರ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉದ್ಯೋಗ ಖಾತ್ರಿಯನ್ನು ಒದಗಿಸಲು ಭಾರತ ಸರ್ಕಾರವು ಜಾರಿಗೆ ತಂದಿರುವ ಒಂದು ಮಹತ್ವಪೂರ್ಣ ಯೋಜನೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ (MGNREGA) ಸಹ ಒಂದು ಪ್ರಮುಖ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಲವು ಕೃಷಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ಇದನ್ನೂ ಓದಿ: Aadhar QR Code-ಶೀಘ್ರದಲ್ಲೇ ಆಧಾರ್ ಕಾರ್ಡಗೆ ಕ್ಯೂಆರ್ ಕೋಡ್ ಅಳವಡಿಕೆ!
ಈ ಯೋಜನೆಯಡಿ, ನಿಮ್ಮ ಬಳಿ NREGA ಜಾಬ್ ಕಾರ್ಡ ಇದ್ದರೆ, ನಿಮ್ಮ ಹಳ್ಳಿಯಲ್ಲೇ ಕೆಲಸ ಪಡೆಯಲು ಅವಕಾಶವಿದ್ದು, ಈ ಲೇಖನದಲ್ಲಿ ಈ ಕಾರ್ಡ ಅನ್ನು ಪಡೆಯುವುದು ಹೇಗೆ? ಇದಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು ಯಾವುವು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
NREGA ಯೋಜನೆ ಎಂದರೇನು?
NREGA (ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್) ಭಾರತದ ಗ್ರಾಮೀಣ ಜನರಿಗೆ ವಾರ್ಷಿಕವಾಗಿ ಕನಿಷ್ಠ 100 ದಿನಗಳ ಕೆಲಸವನ್ನು ಖಾತ್ರಿ ಮಾಡುವ ಒಂದು ಸರ್ಕಾರಿ ಯೋಜನೆಯಾಗಿದೆ. ಈ ಯೋಜನೆಯು ದೇಶದಾದ್ಯಂತ 2005 ರಿಂದ ಜಾರಿಗೆ ಬಂದಿದ್ದು, ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಿ, ಹಳ್ಳಿಯಿಂದ ನಗರ ಪ್ರದೇಶಗಳಿಗೆ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವುದು ಸಹ ಒಂದು ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: Mudra Loan-52 ಕೋಟಿ ಫಲಾನುಭವಿಗಳಿಗೆ ಮುದ್ರಾ ಲೋನ್ ಮಂಜೂರು! ಇಲ್ಲಿದೆ ಸಂಪೂರ್ಣ ವಿವರ!

NREGA Information-100 ದಿನ ಕೆಲಸ ₹37,000 ರೂ ವರೆಗೆ ಹಣ ಪಡೆಯಬಹುದು:
ಗ್ರಾಮೀಣ ಭಾಗದ ಜನರು ಈ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು ಜಾಬ್ ಕಾರ್ಡ ಅನ್ನು ಪಡೆದು ಒಂದು ವರ್ಷ ಅವಧಿಯಲ್ಲಿ ನೀವು ವಾಸವಾಗಿರುವ ಹಳ್ಳಿಯಲ್ಲೇ 100 ದಿನದ ವರೆಗೆ ಕೆಲಸವನ್ನು ಪಡೆದು ಒಂದು ದಿನಕ್ಕೆ ರೂ 370/- ರಂತೆ ಒಟ್ಟು ₹37,000 ರೂ ವರೆಗೆ ಹಣವನ್ನು ಪಡೆಯಲು ಅವಕಾಶವಿರುತ್ತದೆ.
Job Card Details-ಜಾಬ್ ಕಾರ್ಡ ಏಕೆ ಪಡೆಯಬೇಕು?
ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಕುಟುಂಬಗಳು ನರೇಗಾ ಯೋಜನೆಯಡಿ ವಿವಿಧ ಬಗ್ಗೆಯ ಸೌಲಭ್ಯವನ್ನು ಪಡೆದು ಜಾಬ್ ಕಾರ್ಡ/ಉದ್ಯೋಗ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಅದ್ದರಿಂದ ಗ್ರಾಮೀನ ಕುಟುಂಬದ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಈ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

Documnets For Job Card-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
ಅರ್ಜಿದಾರರ ಕುಟುಂಬದ ರೇಷನ್ ಕಾರ್ಡ
ಅರ್ಜಿದಾರರ ಆಧಾರ್ ಕಾರ್ಡ
ಬ್ಯಾಂಕ್ ಪಾಸ್ ಬುಕ್
ಪೋಟೋ
ಮೊಬೈಲ್ ನಂಬರ್
How To Apply For Job Card-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಿ ಜಾಬ್ ಕಾರ್ಡ/ಉದ್ಯೋಗ ಚೀಟಿಯನ್ನು ಪಡೆಯಬಹುದು.
ಇದನ್ನೂ ಓದಿ: New BPL Card-ಹೊಸ ಬಿಪಿಎಲ್ ಕಾರ್ಡ ವಿತರಣೆ! ಇಲ್ಲಿದೆ ನೂತನ ಅಪ್ಡೇಟ್!
Nrega Job Card Eligibility-ಅರ್ಜಿ ಸಲ್ಲಿಸಲು ಅರ್ಹರು:
ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರಿಗೆ 18 ವರ್ಷ ಭರ್ತಿಯಾಗಿರಬೇಕು.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
For More Information-ಹೆಚ್ಚಿನ ಮಾಹಿತಿಗಾಗಿ:
ನರೇಗಾ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ- 8277506000
ಅಧಿಕೃತ ಜಾಲತಾಣ- CLICK HERE