hsrp number plate last date- HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ ಮುಂದೂಡಿಕೆ!

HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ ಮುಂದೂಡಿಕೆ(hsrp number plate last date) ಮಾಡಲಾಗಿದ್ದು ಸಾರ್ವಜನಿಕರ ಕೋರಿಕೆಗೆ ರಾಜ್ಯ ಸರಕಾರ ಅಧಿಕೃತ ಅನುಮೋದನೆ ನೀಡಿದೆ.

hsrp number plate last date- HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ ಮುಂದೂಡಿಕೆ!
hsrp number plate last date-2024

HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ ಮುಂದೂಡಿಕೆ(hsrp number plate last date) ಮಾಡಲಾಗಿದ್ದು ಸಾರ್ವಜನಿಕರ ಕೋರಿಕೆಗೆ ರಾಜ್ಯ ಸರಕಾರ ಅಧಿಕೃತ ಅನುಮೋದನೆ ನೀಡಿದೆ.

ಸಾರಿಗೆ ಇಲಾಖೆಯ ಈ ಹಿಂದಿನ ಸಾರ್ವಜನಿಕ ಪ್ರಕಟಣೆಯ ಪ್ರಕಾರದ ವಾಹನ ಹೊಂದಿರುವ ಮಾಲೀಕರು ತಮ್ಮ ವಾಹನವನ್ನು 2019 ಕ್ಕಿಂತ ಮೊದಲೇ ನೋಂದಣಿ ಮಾಡಿಸಿದ್ದಲ್ಲಿ ಅಂತಹ ವಾಹನಗಳಿಗೆ(Bike/car/track ect..) HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಲು 17 ಫೆಬ್ರವರಿ 2024 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು.

ಈ ದಿನಾಂಕದ ಒಳಗಾಗಿ ತಮ್ಮ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದಿದ್ದಲ್ಲಿ ಕೊನೆಯ ದಿನಾಂಕ ಮುಗಿದ ಬಳಿಕ ಟ್ರಾಪಿಕ್ ಪೋಲಿಸರಿಂದ ದಂಡ ಹಾಕಲಾಗುವುದು ಎಂದು ಸಹ ತಿಳಿಸಿದ್ದರ ಪರಿಣಾಮ ವಾಹನ ಮಾಲೀಕರು ಒಂದೇ ಬಾರಿಗೆ ನಂಬರ್ ಪ್ಲೇಟ್ ಬುಕ್ ಮಾಡಲು ಧಾವಿಸಿದರ ಪರಿಣಾಮ ಸರ್ವರ್ ಸಮಸ್ಯೆಯಿಂದ ಇನ್ನು ಬಹು ದೊಡ್ಡ ಸಂಖ್ಯೆಯ ಜನರು ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದು ಬಾಕಿ ಉಳಿದಿರುವ ಕಾರಣ ರಾಜ್ಯ ಸರಕಾರದಿಂದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ: Best life insurance plan-ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಜಿ ಆಹ್ವಾನ!

hsrp number plate - HSRP ನಂಬರ್ ಅಳವಡಿಕೆಗೆ ಬರೋಬ್ಬರಿ 3 ತಿಂಗಳ ಕಾಲ ಅವಕಾಶ!

ತಮ್ಮ ವಾಹನಕ್ಕೆ ಹೊಸ ಮಾದರಿ HSRP ನಂಬರ್ ಪ್ಲೇಟ್ ಹಾಕಿಸಲು ಮಾಲೀಕರು ಇಷ್ಟು ತೀವ್ರ ಪರದಾಟ ಪಟ್ಟರು. ಇದೀಗ ವಾಹನ ಸವಾರರ ಪರದಾಟಕ್ಕೆ ಕೊನೆಗೂ ಬ್ರೇಕ್ ಹಾಕಿದೆ . ಪ್ರೇಮಿಗಳ ದಿನಾಚರಣೆ ದಿನವೇ, ವಾಹನ ಪ್ರೇಮಿಗಳಿಗೆ ಈಗ ಸಿಹಿಸುದ್ದಿ ನೀಡಿದೆ ಈ ಕುರಿತು ಸ್ವತಃ ಸಾರಿಗೆ ಸಚಿವರೇ ಈ ವಿಚಾರದ ಕುರಿತು ಮಾಹಿತಿ ನೀಡಿದ್ದು, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸಿಕೊಳ್ಳುಅ ನಿಗದಿಪಡಿಸಿದ  17 ಫೆಬ್ರವರಿ  2024 ಕೊನೆಯ ದಿನಾಂಕವನ್ನು ಈಗ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರದಿಂದ ಬರೋಬ್ಬರಿ 3 ತಿಂಗಳ ಕಾಲ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಈ ಕುರಿತು ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೇ ಮಾಹಿತಿ ತಿಳಿಸಿದ್ದು, ಈ ಮೂಲಕ ಕರ್ನಾಟಕದ ವಾಹನಗಳ ಸವಾರರಿ/ಮಾಲೀಕರಿಗೆ ದೊಡ್ಡ ರಿಲೀಫ್ ದೊರೆತಂತಾಗಿದೆ. 

ಇದನ್ನೂ ಓದಿ: Horticulture crop parihara amount- ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

hsrp number plate booking- 1 ಸಾವಿರ ರೂಪಾಯಿ ದಂಡ!

HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಮಾಡಿಕೊಳ್ಳದೇ ಇದ್ದಲ್ಲಿ ವಾಹನ ಮಾಲೀಕರು 1 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ ಎನ್ನುವ ಸುದ್ದಿ ಹರಿದಾಡಿದ ತಕ್ಷಣೆವೇ ಈ ವಿನೂತನ ಮಾದರಿ ನಂಬರ್ ಪ್ಲೇಟ್ ಅನ್ನು ಹಾಕಿಸಲು ಸಾರ್ವಜನಿಕರು ಹೆಚ್ಚು ಮುಂದೆ ಬಂದ ಕಾರಣ ಸರ್ವರ್ ಸಮಸ್ಯೆ, ಅಧಿಕ ಜನ ದಟ್ಟನೆಯಿಂದಾಗಿ ಇನ್ನು 1 ಕೋಟಿಗೂ ಹೆಚ್ಚಿನ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದು ಬಾಕಿ ಉಳಿದಿರುತ್ತದೆ.

hsrp number- ಉಪಯುಕ್ತ ಕೊಂಡಿಗಳು:

ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಅನ್ನು ಬುಕ್ ಮಾಡುವ ವಿಧಾನವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: click here

HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ನಮ್ಮ ಪುಟದ ಇತರೆ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here

ಸಾರಿಗೆ ಇಲಾಕೆಯ ಅಧಿಕೃತ ವೆಬ್ಸೈಟ್: click here

HSRP ನಂಬರ್ ಪ್ಲೇಟ್ ಅಳವಡಿಕೆ ಅಧಿಕೃತ ಸಾರ್ವಜನಿಕ ಪ್ರಕಟಣೆ: Download Now

ಇದನ್ನೂ ಓದಿ: Sheep and Goat farming-ಕುರಿ,ಮೇಕೆ ಸಾಕಾಣಿಕೆಗಾಗಿ 1.75 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!