ಇಲ್ಲಿಯವರೆಗೆ ಆಧಾರ್ ಕಾರ್ಡ ಜೊತೆ ಪ್ಯಾನ್ ಕಾರ್ಡ ಲಿಂಕ್ ಮಾಡದವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೂತನ ಕ್ರಮದ ಕುರಿತು ಪ್ರಕಟಣೆ ಹೊರಡಿಸಿದ್ದು, ಆಧಾರ್-ಪ್ಯಾನ್ ಲಿಂಕ್(Pan-adhar card link-2024) ಮಾಡದವರಿಗೆ ಡಬಲ್ ತೆರಿಗೆ ಬೀಳಲಿದೆ.
ಪ್ರಸಕ್ತ ಆರ್ಥಿಕ ವರ್ಷದ ಒಳಗೆ ಅಂದರೆ 31 ಮೇ 2024ರ ಒಳಗಾಗಿ ಆಧಾರ್ ಕಾರ್ಡಗೆ ಪ್ಯಾನ್ ಲಿಂಕ್ ಮಾಡದವರಿಗೆ ಅನ್ವಯವಾಗುವ ದರಕ್ಕಿಂತಲೂ ಎರಡರಷ್ಟ ಮೂಲದಲ್ಲಿ ತೆರಿಗೆ ಕಡಿತ(TDS) ಮಾಡಲಾಗುವುದು ಎಂದು ತೆರಿಗೆ ಇಲಾಖೆಯು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಮೊಬೈಲ್ ನಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ವಿಧಾನ ಹೇಗೆ? ಮತ್ತು ಈಗಾಗಲೇ ಆಧಾರ್ ಪ್ಯಾನ್ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳುವ ವಿಧಾನದ ಕುರಿತು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Crop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!
How to link pan card aadhar card-2024ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ ಗೆ ಆಧಾರ್ ಲಿಂಕ್ ಮಾಡುವ ವಿಧಾನ:
ಸಾರ್ವಜನಿಕರು ತೆರಿಗೆ ಇಲಾಖೆ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪ್ಯಾನ್ ಕಾರ್ಡಗೆ ಅಧಾರ್ ಲಿಂಕ್ ಮಾಡಬಹುದು ಮತ್ತು ಈಗಾಗಲೇ ಲಿಂಕ್ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ ಈ Pan adhar link ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ನಂತರ ಈ ಪೇಜ್ ನ ಎಡಬದಿಯಲ್ಲಿ ಕಾಣುವ “Link Aadhaar” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ PAN ಮತ್ತು Aadhaar Number ಎರಡು ಕಾಲಂ ನಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ “Validate” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Karnataka Apex Bank Recruitment-2024: ಕರ್ನಾಟಕ ಅಪೇಕ್ಸ್ ಬ್ಯಾಂಕ್ ನಲ್ಲಿ ನೇಮಕಾತಿ!
Step-3: ನಂತರ ಆಧಾರ್ ಕಾರ್ಡನಲ್ಲಿರುವಂತೆ ನಿಮ್ಮ ಹೆಸರನ್ನು ಬರೆದು ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ಈ ರೀತಿ ಮೇಲಿನ ವಿಧಾನವನ್ನು ಅನುಸರಿಸಿದ ಬಳಿಕ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ ಅಗ ಬಟನ್ ಮೇಲೆ ಕ್ಲಿಕ್ ಮಾಡಿದಾರೆ ಪ್ಯಾನ್ ಮತ್ತು ಆಧಾರ್ ಕಾರ್ಡ ಲಿಂಕ್ ಅಗುತ್ತದೆ.
ಒಂದೊಮ್ಮೆ ಈಗಾಗಲೇ ಪ್ಯಾನ್ ಮತ್ತು ಆಧಾರ್ ಕಾರ್ಡ ಲಿಂಕ್ ಅಗಿದ್ದರೆ ಈಗಾಗಲೇ ಲಿಂಕ್ ಅಗಿದೆ ಎಂದು ಸೂಚನೆ ನೀಡುತ್ತದೆ.