ಕೇಂದ್ರ ಸರಕಾರವು ಪಾನ್ ಕಾರ್ಡ ನಲ್ಲಿ ಮಹತ್ವದ ಬದಲಾವಣೆ ತಂದಿದ್ದು ಮುಂದಿನ ದಿನಗಳಲ್ಲಿ ಪಾನ್ ಕಾರ್ಡ 2.0(Pan card 2.0) ಯೋಜನೆ ಜಾರಿಗೆ ಬರಲಿದೆ.
ಏನಿದು ಪಾನ್ ಕಾರ್ಡ 2.0 ಯೋಜನೆ? ಪಾನ್ ಕಾರ್ಡ ನಲ್ಲಿ ಯಾವೆಲ್ಲ ಬಗ್ಗೆಯ ಬದಲಾವಣೆಗಳು ಬರಲಿವೆ? ಈಗಾಗಲೇ ಪಾನ್ ಕಾರ್ಡ ಹೊಂದಿರುವವರು ಹೊಸ ರೀತಿಯ ಪಾನ್ ಕಾರ್ಡ ಅನ್ನು ಪಡೆಯಬೇಕಾ? ಎಲ್ಲಿ ಪಡೆಯಬೇಕು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Pmkisan farmer list-ಪಿ ಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
ಕೇಂದ್ರ ಸರಕಾರದಿಂದ ಆದಾಯ ತೆರಿಗೆ ಪಾವತಿಯಲ್ಲಿ(Income tax) ಪಾರದರ್ಶಕತೆನ್ನು ತರಲು ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ತೆರಿಗೆದಾರರ ಗುರುತನ್ನು ಖಚಿತಪಡಿಸಿಕೊಳ್ಳಲು ನೂತನ ಯೋಜನೆಯನ್ನು ಜಾರಿಗೆ ತರಲು ಸಿದ್ದತೆಯನ್ನು ನಡೆಸಿದೆ.
Pan 2.0 news-ಏನಿದು ಪಾನ್ 2.0 ಯೋಜನೆ?
ಹಾಲಿ ಇರುವ ಪಾನ್ ಕಾರ್ಡ ರೀತಿಯಲ್ಲಿಯೇ ಈ ಕಾರ್ಡ ಇರಲಿದ್ದು ಅದರೆ ಇಲ್ಲಿ ಹೊಸದಾಗಿ ಕ್ಯೂ ಆರ್ ಕೋಡ್ ಸೇರಿಸಲಾಗುತ್ತದೆ ಪ್ರತಿ ಪಾನ್ ಕಾರ್ಡಗೂ ವಿನೂತನ ಕ್ಯೂ ಆರ್ ಕೋಡ್ ಹಾಕುವುದರ ಮೂಲಕ ತೆರಿಗೆ ಸಂಗ್ರಹಣೆ ಮತ್ತು ತೆರಿಗೆದಾರರ ಮಾಹಿತಿಯನ್ನು ನಿಖರವಾಗಿ ತಿಳಿಯಲು ಕೇಂದ್ರ ಸರಕಾರಕ್ಕೆ ಸಹಾಯವಾಗಲಿದೆ.
ಇದನ್ನೂ ಓದಿ: PM Usha Scholarship- ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ರೂ ₹20,000 ವಿದ್ಯಾರ್ಥಿ ವೇತನ!
ಹೊಸ ರೀತಿಯ ಪಾನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬೇಕೇ?
ಹಾಲಿ ಈಗಾಗಲೇ ಪಾನ್ ಕಾರ್ಡ ಅನ್ನು ಹೊಂದಿರುವವರು ಹೊಸ ಮಾದರಿಯ ಪಾನ್ ಕಾರ್ಡ ಅನ್ನು ಪಡೆಯಲು ಹೊಸದಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ ಎಂದು ಕೇಂದ್ರ ಸರಕಾರವು ಪ್ರಕಟಣೆಯಲ್ಲಿ ತಿಳಿಸಲಾಗಿರುತ್ತದೆ.
ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!
Pan 2.0 upgrade-ಕೇಂದ್ರದಿಂದ ಹಾಲಿ ಪಾನ್ ಕಾರ್ಡ ಅನ್ನು ಉಚಿತವಾಗಿ ಅಪ್ ಗ್ರೇಡ್ ಮಾಡಲಾಗುತ್ತದೆ:
ಈಗಾಗಲೇ ದೇಶದಲ್ಲಿ 78 ಕೋಟಿಗೂ ಅಧಿಕ ಪಾನ್ ಕಾರ್ಡಗಳು ಅಸ್ತಿತ್ವದಲ್ಲಿದ್ದು ಈ ಎಲ್ಲಾ ಪಾನ್ ಕಾರ್ಡ ಗಳನ್ನು ಉಚಿತವಾಗಿ ಕೇಂದ್ರ ಸರಕಾರವು ಅಪ್ ಗ್ರೇಡ್ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Pan 2.0 upgrade application-ಪಾನ್ ಕಾರ್ಡ ಅಪ್ ಗ್ರೇಡ್ ಮಾಡಲು ಅರ್ಜಿ ಸಲ್ಲಿಸಬೇಕೇ?
ಪ್ರಸ್ತುತ ಕೇಂದ್ರ ಸರಕಾರದಿಂದ ಹೊರಡಿಸಿರುವ ಪ್ರಕಟಣೆಯನ್ವಯ ಹಾಲಿ ಇರುವ ಹಳೆಯ ಪಾನ್ ಕಾರ್ಡ ಅನ್ನು ಅಪ್ ಗ್ರೇಡ್ ಮಾಡಲು ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Kuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!
Pan 2.0 benefits-ಪಾನ್ 2.0 ಕಾರ್ಡ ಪ್ರಯೋಜನಗಳು:
ಈ ಪಾನ್ ಕಾರ್ಡನಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಿರುವುದರಿಂಡ ತೆರಿಗೆದಾರರ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸಹಾಯವಾಗುತ್ತದೆ.
ಕ್ಯೂ ಆರ್ ಕೋಡ್ ತಾಂತ್ರಿಕತೆಯಿಂದಾಗಿ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಸಹಕಾರಿಯಾಗಿದೆ.
ಸುಧಾರಿತ ಎನ್ಕ್ರಿಪ್ಶನ್ ತಾಂತ್ರಿಕತೆಯು ಈ ಕಾರ್ಡನಲ್ಲಿ ಇರುವುದರಿಂದ ತೆರಿಗೆದಾರರ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತದೆ.
ತ್ವರಿತವಾಗಿ ಹಣಕಾಸಿಗೆ ಸಂಬಂಧಪಟ್ಟ ವಹಿವಾಟನ್ನು ಮಾಡಲು ಈ ವಿಧಾನವು ನೆರವಾಗುತ್ತದೆ ಎಂದು ಯೋಜನೆಯ ಕುರಿತಾದ ಪ್ರಕಟಣೆಯಲ್ಲಿ ಉಲೇಖಿಸಲಾಗಿದೆ.