PAN Card News: ನಿಮ್ಮ ಬಳಿ ಪಾನ್ ಕಾರ್ಡ್ ಇದ್ಯಾ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

ನಮ್ಮ ದೇಶದಲ್ಲಿ ಆಧಾರ್ ಕಾರ್ಡ, ರ‍ೇಶನ್ ಕಾರ್ಡ, ವೋಟಿಂಗ್ ಕಾರ್ಡ ರೀತಿ ಪಾನ್ ಕಾರ್ಡ(adhar pan card link) ಸಹ ಒಂದು ಅತೀ ಮುಖ್ಯ ದಾಖಲೆಯಾಗಿದ್ದು, ಈ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ.

ಕೇಂದ್ರ ಸರಕಾರದಿಂದ ಪಾನ್ ಕಾರ್ಡ್‌ (PAN Card) ಕುರಿತು ನೂತನ ನಿಯಮವನ್ನು ಜಾರಿಗೊಳಿಸಿದ್ದು, ಈ ಕುರಿತು ನೀವು ಗಮನಿಸದೇ ಹೋದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದ್ದರಿಂದ ಮುಂದೆ ಬರುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪಾನ್ ಕಾರ್ಡನ ಹೊಸ ಮಾರ್ಗಸೂಚಿ ಪ್ರಕಾರ ನಿಮ್ಮ ಪಾನ್ ಅನ್ನು ನವೀಕರಣ ಮಾಡಲಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು.

ಆಧಾರ್‌ ಕಾರ್ಡ(Aadhaar card) ಮತ್ತು ವೋಟಿಂಗ್ ಕಾರ್ಡ ನಂತೆಯೇ ಪಾನ್ ಕಾರ್ಡ ಸಹ ಒಂದು ಭಾರತೀಯ ನಾಗರಿಕರಿಗೆ ಅತೀ ಮುಖ್ಯವಾಗಿ ಹೊಂದಿರಬೇಕಾದ ದಾಖಲೆಯಾಗಿದೆ. ಶಾಶ್ವತ ಖಾತೆ ಸಂಖ್ಯೆಯಾಗಿರುವ (Permanent Account Number) ಪಾನ್ ಕಾರ್ಡ್ಅನ್ನು ಬ್ಯಾಂಕ್ ವಹಿವಾಟುಗಳಿಗೆ, ಹಣಕಾಸು ಚಟುವಟಿಕೆ ಸೇರಿದಂತೆ ಇತರೆ ಸರಕಾರಿ ಯೋಜನೆಯ ಸೌಲಭ್ಯ ಪಡೆಯಲು ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ: Janana pramana patra-2024: ಜನನ ಪ್ರಮಾಣ ಪತ್ರ ಪಡೆಯುವುದು ಬಾರೀ ಸುಲಭ! ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

ಅದ್ದರಿಂದ ಈ ಕಾರ್ಡ ಅನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು ಕೇಂದ್ರ ಸರ್ಕಾರ ಪಾನ್ ಕಾರ್ಡ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು. ಈ ಕುರಿತು ಪಾನ್ ಕಾರ್ಡ್ ಹೊಂದಿರುವವರು ತಿಳಿದುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ಪಾನ್ ಕಾರ್ಡ್‌ಗೆ ಸಂಬಂಧಿಸಿ ನೂತನ ನಿಯಮವನ್ನು ಹೊರಡಿಸಲಾಗಿದ್ದು. ಇದರ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

PAN Card New Rule- ಪಾನ್ ಕಾರ್ಡ ಕುರಿತು ಕೇಂದ್ರದ ಹೊಸ ನಿಯಮ ಯಾವುದು?

ಕೇಂದ್ರ ಸರಕಾರದ ಹೊಸ ನಿಯಮದ ಪ್ರಕಾರ ಪಾನ್ ಕಾರ್ಡ್ ಹೊಂದಿರುವವರು ಪಾನ್ ಕಾರ್ಡ ನೊಂದಿಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ನೀವು ಈ ಕೆಲಸವನ್ನು ಮಾಡದೇ ಹೋದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಕೊನೆಯ ಗಡುವಿನೊಳಗೆ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಮತ್ತು ಈ ಕುರಿತಾದ ನಿಯಮಗಳನ್ನು ಅನುಸರಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಬಳಿಕ ಅದನ್ನು ನೀವು ಸಕ್ರಿಯಗೊಳಿಸಲು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: PMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

pan and adhar link

Why pan-adhar link-ಏಕೆ ಲಿಂಕ್ ಮಾಡಬೇಕು?

ಕೇಂದ್ರ ಸರಕಾರದಿಂದ ಈ ನಿಯಮ ಜಾರಿಯ ಮುಖ್ಯ ಉದ್ದೇಶ ಹಣಕಾಸು ವಹಿವಾಟಿನಲ್ಲಿ ಪಾರದರ್ಶಕತೆಯನ್ನು ತರುವುದು. ಈ ಕ್ರಮದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಅವರ ಎಲ್ಲಾ ಹಣಕಾಸಿನ ಚಟುವಟಿಕೆಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಯಾರು ಎಷ್ಟು ಮೊತ್ತದ ಅನಧಿಕೃತ ಹಣವನ್ನು ಹೊಂದಿದ್ದಾರೆ, ಸರಕಾರಕ್ಕೆ ಎಷ್ಟು ಮೊತ್ತದ ತೆರಿಗೆ ವಂಚಿಸುತ್ತಾರೆ? ಎನ್ನುವ ಮಾಹಿತಿಯನ್ನು ತಿಳಿಯಲು ಸಹಕಾರಿಯಾಗುತ್ತದೆ.

Pan card importance-ಪಾನ್ ಕಾರ್ಡ ಏಕೆ ಮುಖ್ಯ?

ಬ್ಯಾಂಕ್ ಅಕೌಂಟ್ ತೆರೆಯಲು ಹಣ ವಹಿವಾಟನ್ನು ನಡೆಸಲು ಅತ್ಯಗತ್ಯ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು.

ವಿವಿಧ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಬೇಕಾಗುತ್ತದೆ.

ಇದನ್ನೂ ಓದಿ: MGNREGA-2024: ನರೇಗಾ ಯೋಜನೆಯಡಿ 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

ಕ್ರೇಡಿಟ್ ಕಾರ್ಡ/ಡೇಬಿಟ್ ಕಾರ್ಡ ಅನ್ನು ಹೊಂದಲು.

ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಪಡೆಯಲು ಪಾನ್ ಕಾರ್ಡ ಅವಶ್ಯಕ.

pan and adhar link method-ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ?

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಪಾನ್ ಕಾರ್ಡಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ Income Tax e-filing Portal ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: BPL card-ಈ ಕಾರ್ಡ ಹೊಂದಿರುವವರಿಗೆ BPL ರ‍ೇಶನ್ ಕಾರ್ಡ ಪಡೆಯಲು ಅವಕಾಶ!

Step-2: ನಂತರ ಇಲ್ಲಿ “Link Aadhaar” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಪಾನ್ ಮತ್ತು ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಬಳಿಕ ನಿಮ್ಮ ಹೆಸರು ಮತ್ತು ಇತರೆ ವಿವರವನ್ನು ಚೆಕ್ ಮಾಡಿಕೊಂಡು ಮುಂದುವರೆಯಬೇಕು.

Step-3: ಇಲ್ಲಿ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡನಲ್ಲಿ ಎರಡು ಹೆಸರುಗಳು ಸರಿಯಾಗಿವೆಯೇ ಎಂದು ಒಮ್ಮೆ ಖಚಿತಪಡಿಸಿಕೊಂಡು ವ್ಯತ್ಯಾಸವಿದ್ದಲ್ಲಿ ಸಂಬಂಧಪಟ್ಟ ದಾಖಲೆಯನ್ನು ಸಲ್ಲಿಸಿ. ತದನಂತರ ಹುಟ್ಟಿದ ದಿನಾಂಕ ಕಾಣಿಸುತ್ತದೆ ಅದನ್ನು ಖಚಿತಪಡಿಸಿಕೊಂಡು ಇತರೆ ವಿವರಗಳನ್ನು ಭರ್ತಿ ಮಾಡಿ ಕೊನೆಯಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ.