ಬೆಳೆ ನಷ್ಟ ಪರಿಹಾರವನ್ನು(bele parihara) ಪಡೆಯಲು ಎಲ್ಲಾ ದಾಖಲಾತಿಗಳು ಆನ್ಲೈನ್ ನಲ್ಲಿ ಸರಿಯಾಗಿ ಸಲ್ಲಿಸಿರುವ ರೈತರ ಹಳ್ಳವಾರು ಪಟ್ಟಿಯನ್ನು(Parihara farmer list) ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ನಲ್ಲಿ ಹಳ್ಳಿವಾರು ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಹವಾಮಾನ ವೈಪರಿತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರವನ್ನು(bele Parihara)ಒದಗಿಸಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ರೈತರ ಖಾತೆಗೆ ಜಮಾ ಮಾಡಲು ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ರೈತರಿಗೆ ಬೆಳೆ ಪರಿಹಾರವನ್ನು ನೇರ ನಗದು ವರ್ಗಾವಣೆಯ ಮೂಲಕ ಹಣ ಪಾವತಿ ಮಾಡಲು Parihar ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ.
ರೈತರ ತಮ್ಮ ಮೊಬೈಲ್ ನಲ್ಲಿ ಕಂದಾಯ ಇಲಾಖೆಯ ಪರಿಹಾರ ವೆಬ್ಸೈಟ್ ಅನ್ನು ನೇರವಾಗಿ ಭೇಟಿ ಮಾಡಿ ತಮ್ಮ ಮನೆಯಲ್ಲೇ ಕುಳಿತುಕೊಂಡು ಕ್ಷಣಾರ್ಧದಲ್ಲೇ ಅರ್ಹ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು, ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.
ಇದನ್ನೂ ಓದಿ: Anganawadi job notification-2024: ಅಂಗನವಾಡಿ ಕೇಂದ್ರಗಳಲ್ಲಿ 552 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ!
Parihara farmer list-2024: ಹಳ್ಳಿವಾರು ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡುವ ವಿಧಾನ:
ರಾಜ್ಯ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯಿಂದ ನಿರ್ವಹಿಸಲ್ಪಡುವ https://parihara.karnataka.gov.in ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ರೈತರು ಇಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಿ ಬೆರಳ ತುದಿಯಲ್ಲಿ ಪರಿಹಾರ ಪಡೆಯಲು ಯಾವುದೇ ತಾಂತ್ರಿಕ ಅಡಚಣೆ ಇಲ್ಲದ ಹಳ್ಳಿವಾರು ರೈತರ ಪಟ್ಟಿಯನ್ನು ನೋಡಬಹುದು.
Step-1: ಮೊಟ್ಟ ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ Parihara ತಂತ್ರಾಂಶ/ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: GKVK krishi mela-2024: ಬೆಂಗಳೂರು ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ವಿಶೇಷತೆಗಳ ವಿವರ!
Step-2: ಪರಿಹಾರ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “village wise list” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಗಮನಿಸಿ: ಮೊಬೈಲ್ ಕ್ರೋಮ್ ಬ್ರೊಸರ್ ನಲ್ಲಿ ಈ ವೆಬ್ಸೈಟ್ ಅನ್ನು ಸರಿಯಾಗಿ ವಿಕ್ಷೀಸಲು ನಿಮ್ಮ ಮೊಬೈಲ್ ಕ್ರೋಮ್ ಬ್ರೊಸರ್ ನಲ್ಲಿ “Desktop Site” ಆಯ್ಕೆಯನ್ನು ಟಿಕ್ ಮಾಡಿಕೊಳ್ಳಿ.
ಇದನ್ನೂ ಓದಿ: Horticulture Department-ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ ಹಲವು ಸೌಲಭ್ಯ! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ!
Step-3: ಬಳಿಕ ಈ ಪೇಜ್ ನಲ್ಲಿ ವರ್ಷ: 2023 ಋತು: Kharif/ಮುಂಗಾರು ವಿಪತ್ತಿನ ವಿಧ: Drought/ಬರ ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ವನ್ನು ಸೆಲೆಕ್ಟ್ ಮಾಡಿ ಕೊನೆಯಲ್ಲಿ “Get Report/ವರದಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: “Get Report/ವರದಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಪೇಜ್ ನಲ್ಲಿ ನಿಮ್ಮ ಹಳ್ಳಿಯ ರೈತರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.
ಈ ಪಟ್ಟಿಯಲ್ಲಿ ರೈತರ ಹೆಸರು, ಸರ್ವೆ ನಂಬರ್, ನಷ್ಟವಾದ ಬೆಳೆ ಹೆಸರು, ಬೆಳೆ ವಿಸ್ತೀರ್ಣ, ಹಣ ಪಾವತಿ ಸ್ಥಿತಿ, ಹಣ ಸಂದಾಯವಾದ ದಿನಾಂಕ, ಒಟ್ಟು ಹಣ ಎಷ್ಟು ಪಾವತಿ ಅಗಿದೆ? ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.
ಇದನ್ನೂ ಓದಿ: Sukanya Samriddhi Yojana-2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ತಪ್ಪದೇ ಈ ಕೆಲಸ ಮಾಡಿ!
Parihara amount- ಬೆಳೆ ಪರಿಹಾರ ಯಾರಿಗೆಲ್ಲ ಸಿಗಲಿದೆ?
ಅತೀ ಹೆಚ್ಚು ಮಳೆಯಿಂದ ಬೆಳೆ ನಷ್ಟವಾಗಿ ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಸಿಗುತ್ತದೆ.
ಮಳೆ ಕೊರತೆಯಿಂದ ನಷ್ಟವಾದ ಸಮಯದಲ್ಲಿ ಸಹ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.
ಒಟ್ಟಾರುಯಾಗಿ ಬೆಳೆ ನಷ್ಟವಾದ ಸಮಯದಲ್ಲಿ ಅಗತ್ಯ ದಾಖಲಾತಿಗಳ ಸಮೇತ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಪರಿಹಾರ ತಂತ್ರಾಂಶದಲ್ಲಿ ನಿಮ್ಮ ಮಾಹಿತಿಯನ್ನು/ಅರ್ಜಿಯ ವಿವರವನ್ನು ದಾಖಲು ಮಾಡಿದ ಅರ್ಹ ರೈತರಿಗೆ ಬೆಳೆ ನಷ್ಟ ಪರಿಹಾರ ದೊರೆಯುತ್ತದೆ.
Documents for parihar application-ಅರ್ಜಿ ಸಲ್ಲಿಸಲು ಸಲ್ಲಿಸಬೇಕಾದ ದಾಖಲೆಗಳು:
1) ರೈತರ ಅಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಬೆಳೆ ನಷ್ಟವಾದ ಜಮೀನಿನ ಪಹಣಿ/ಉತಾರ್/RTC
4) ಮೊಬೈಲ್ ಸಂಖ್ಯೆ