ರಾಜ್ಯ ಸರಕಾರದಿಂದ ದಿನಾಂಕ: 05 ಜನವರಿ 2024 ರಂದು ಮೊದಲ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿ ಅನುಸರ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಜಮಾ ಅಗಲಿದೆ.
ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ವಿವರ ದಾಖಲಾಗಿರುವುದನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ಖಚಿತಪಡಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು ಮತ್ತು ಬ್ಯಾಂಕ್ ವಿವರ ಕೃಷಿ ಇಲಾಖೆಯ ಪ್ರೂಟ್ಸ್ ವೆಬ್ಸೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಅಗಿರುತ್ತದೆ ಎಂದು ಚೆಕ್ ಮಾಡಿಕೊಳ್ಳಬವುದಾಗಿದೆ.
ಇದನ್ನೂ ಓದಿ: First installment drought relief: ಮೊದಲ ಕಂತಿನ ಬರ ಪರಿಹಾರ ಹಣ ಜಮಾ ನಿಮಗೂ ಬಂದಿರುವುದು ಚೆಕ್ ಮಾಡಿ!!!
Parihara list-2024-ವಿಧಾನ-1: ಹಳ್ಳಿವಾರು ಅರ್ಹ ರೈತರ ಪಟ್ಟಿ ಪಡೆಯಲ್ಲಿ ಹೆಸರನ್ನು ಚೆಕ್ ಮಾಡುವ ಮೂಲಕ:
ರೈತರ ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು fruits ಜಾಲತಾಣವನ್ನು ಭೇಟಿ ಮಾಡಿ ನಿಮ್ಮ ಜಿಲ್ಲೆ ಇತ್ಯಾದಿ ವಿವರವನ್ನು ಈ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ಹಳ್ಳಿವಾರು ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬವುದು.
ಈ ಪಟ್ಟಿಯು ಪಿ ಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ರೈತರ ಪಟ್ಟಿಯಾಗಿದ್ದು ಬಹುತೇಕ ಈ ಪಟ್ಟಿಯಲ್ಲಿರುವವರಿಗೆ FID ನಂಬರ್ ಇದ್ದು ಈ ಪಟ್ಟಿ ಅನುಗುಣವಾಗಿಯೇ ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ಜಮಾ ಅಗಲಿದೆ.
ಇದನ್ನೂ ಓದಿ: Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು ತಿಳಿಯಬವುದು.
Step-1: ಮೊದಲಿಗೆ ಈ ಲಿಂಕ್ Parihara list ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯೆ ಅಧಿಕೃತ ಪಿ ಎಂ ಕಿಸಾನ್ ಪ್ರೂಟ್ಸ್ ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2: ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು “ವಿಕ್ಷೀಸು” ಬಟನ್ ಮೇಲೆ ಕ್ಲಿಕ್ ಮಾಡಿದರೆ ಹಳ್ಳಿವಾರು ಅರ್ಹ ಫಲಾನುಭವಿ ಪಟ್ಟಿ ತೋರಿಸುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿ ಇದಿಯೇ ಎಂದು ಚೆಕ್ ಮಾಡಿಕೊಳ್ಳಿ ಇದ್ದಲಿ ನಿಮಗೆ ರಾಜ್ಯ ಸರಕಾರದಿಂದ ನೀಡುವ ಪರಿಹಾರದ ಹಣ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಅಗುತ್ತದೆ.
Bara parihara status-ವಿಧಾನ-2: ಆಧಾರ್ ನಂಬರ್ ಹಾಕಿ FID ನಂಬರ್ ಖಚಿತಪಡಿಸಿಕೊಳ್ಳುವ ಮೂಲಕ:
ಈಗಾಗಲೇ ಸರಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯ ಮಾಡಲಾಗಿದ್ದು ಈ ನಂಬರ್ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಅಗಲಿದೆ ಎಂದು ತಿಳಿಸಲಾಗಿದೆ.
ಇದರ ಪ್ರಕಾರ ರೈತರ ತಮ್ಮ ಅಧಾರ್ ನಂಬರ್ ಅನ್ನು ಹಾಕಿ FID ನಂಬರ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಕೆ ಮಾಡಿಕೊಂಡು ನಿಮ್ಮ ಅಧಾರ್ ನಂಬರ್ ಅನ್ನು ಹಾಕಿ FID ನಂಬರ್ ರಚನೆ ಅಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬವುದು.
ಇದನ್ನೂ ಓದಿ: Labour card application-ಲೇಬರ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ! ಒಂದು ಕಾರ್ಡ ಅನೇಕ ಪ್ರಯೋಜನಗಳು.
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ FID number check ನಿಮ್ಮ 12 ಅಂಕಿಯ ಆಧಾರ್ ನಂಬರ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: “Search” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಇಲ್ಲಿ 16 ಅಂಕಿಯ “FID1404**********” ಈ ರೀತಿಯ ಸಂಖ್ಯೆ ಗೋಚರಿಸುತ್ತದೆ ಈ ಸಂಖ್ಯೆ ಬಂದರೆ ನಿಮ್ಮ FID ನಂಬರ್ ರಚನೆ ಅಗಿದೆ ಎಂದು ಒಂದೊಮ್ಮೆ “Data not found” ಎಂದು ತೋರಿಸಿದರೆ ನಿಮ್ಮ FID ನಂಬರ್ ರಚನೆ ಅಗಿಲ್ಲ ಎಂದು ಅರ್ಥ, ಅಗ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ FID ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!