ಕಂದಾಯ ಇಲಾಖೆಯಲ್ಲಿ ಒಂದು ವಿಭಾಗವಾಗಿರುವ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ನಿರ್ದೇಶನಾಲಯದಿಂದ ಜನವರಿ-2024 ತಿಂಗಳ ಪಿಂಚಣಿ ಹಣವನ್ನು ಅರ್ಹ ನಾಗರಿಕರ ಖಾತೆಗೆ ಜಮಾ ಮಾಡಲಾಗಿದೆ.
ವಿವಿಧ ಪಿಂಚಣಿ ಯೋಜನೆಯಡಿ ಈ ಹಿಂದಿನ ತಿಂಗಳವರೆಗೆ ಪ್ರತಿ ತಿಂಗಳು ಹಣ ಪಡೆಯುತ್ತಿರುವವರು ಮತ್ತು ಹೊಸ ಫಲಾನುಭವಿಗಳು ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಅಗಿದಿಯೋ? ಇಲ್ಲವೋ? ಎಂದು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡದೇ ಕೇವಲ ಒಂದೆರಡು ಕ್ಲಿಕ್ ನಲ್ಲಿ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು.
ಡಿಸೆಂಬರ್-2023 ರವರೆಗೆ ಎಲ್ಲಾ ಅರ್ಹ ವಿವಿಧ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ತಾವು ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮಾ ಅಗುತಿತ್ತು ಅದರೆ ಈ ತಿಂಗಳಿನಿಂದ ಫಲಾನುಭವಿ ಆಧಾರ್ ಲಿಂಕ್ ಮಾಡಿಸಿರುವ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿ ಖಾತೆಗೆ ಪಿಂಚಣಿ ಹಣ ಜಮಾ ಅಗಿರುತ್ತದೆ.
ಇದನ್ನೂ ಓದಿ: Milk incentive details-ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ!
Pinchani status check-ನಿಮ್ಮ ಖಾತೆಗೆ ಪಿಂಚಣಿ ಹಣ ಬಂದಿರುವುದನ್ನು ಚೆಕ್ ಮಾಡುವ ವಿಧಾನ:
ಅರ್ಜಿದಾರ ಅರ್ಹ ವಿವಿಧ ಪಿಂಚಣಿ ಪಡೆಯುತ್ತಿರುವ ನಾಗರಿಕರು ರಾಜ್ಯ ಸರಕಾರದ ಇ-ಆಡಳಿತ ವಿಭಾಗವು ಅಭಿವೃದ್ದಿಪಡಿಸಿರುವ “DBT Karnataka” ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಜನವರಿ-2024ರ ಪಿಂಚಣಿ ಹಣ ಬಂದಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ ಈ January Pension statusಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ “DBT karnataka” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದಾದ ಬಳಿಕ “Open” ಬಟನ್ ಮೇಲೆ ಕ್ಲಿಕ್ ಮಾಡಿ ಈ ಅಪ್ಲಿಕೇಶನ್ ಅನ್ನು ತೆರೆಯಬೇಕು.
Step-2: ಇಲ್ಲಿ ಮೊದಲಿಗೆ ಪಿಂಚಣಿ ಪಡೆಯುತ್ತಿರುವ ಫಲಾನುಭವಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಬಳಿಕ ನಿಮಗೆ ಸದಾ ನೆನಪಿನಲ್ಲಿ ಉಳಿಯುವ 4 ಅಂಕಿಯ ಒಂದು ಪಾಸ್ವರ್ಡ ಅನ್ನು ಎರಡು ಬಾರಿ ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಈ “DBT karnataka” ಅಪ್ಲಿಕೇಶನ್ ಗೆ ಲಾಗಿನ್ ಅಗಬೇಕು.
ಇದನ್ನೂ ಓದಿ: Electricity bill- ನಿಮ್ಮ ಮನೆಯಲ್ಲಿ ಪ್ರತಿ ತಿಂಗಳು ಬಳಕೆಯಾದ ವಿದ್ಯುತ್ ಯೂನಿಟ್ ಎಷ್ಟು, ಬಿಲ್ ಮೊತ್ತವೇಷ್ಟು?ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್
Step-4: ಲಾಗಿನ್ ಅದ ಬಳಿಕ ಮುಖಪುಟದಲ್ಲಿ ತೋರಿಸುವ “ಪಾವತಿ ಸ್ಥಿತಿ/Payment status” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ “ಸಂಧ್ಯಾ ಸುರಕ್ಷ ಯೋಜನೆ” ಎಂದು ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲೆ ಕಾಣುವ ಅರೋ ಬಟನ್ ಮೇಲೆ ಒತ್ತಿದ್ದರೆ ನಿಮಗೆ ಪಿಂಚಣಿ ಹಣ ಯಾವ ದಿನಾಂಕದಂದು ಜಮಾ ಅಗಿದೆ? ಎಷ್ಟು ಮೊತ್ತ? UTR ನಂಬರ್ , ಬ್ಯಾಂಕ್ ಹೆಸರು ಹಾಗೂ ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆಗಳು ಗೋಚರಿಸುತ್ತವೆ.
ಇದನ್ನೂ ಓದಿ: Gruha jyothi Yojana-ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್!
Pension amount: ಈ ತಿಂಗಳಿನಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯಿದರೆ ಮಾತ್ರ ಬರಲಿದೆ ಪಿಂಚಣಿ:
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ನಿರ್ದೇಶನಾಲಯದಿಂದ ಇತ್ತೀಚೆಗೆ ಹೊರಡಿಸಿರುವ ಹೊಸ ಪ್ರಕಟಣೆಯನ್ವಯ ಈ ತಿಂಗಳಿನಿಂದ ಆಧಾರ್ ಡಾಟಾವನ್ನು ಬಳಕೆ ಮಾಡಿಕೊಂಡು ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಪಿಂಚಣಿ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ.
ಇದರ ಪ್ರಕಾರ ಇನ್ನು ಮುಂದೆ ನಾಗರಿಕರು ವಿವಿಧ ಯೋಜನೆಯಡಿ ಪಿಂಚಣಿ ಪಡೆಯಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್/NPCI mapping ಇರುವುದ್ದು ಕಡ್ಡಾಯವಾಗಿದೆ ಹೀಗಿದಲ್ಲಿ ಮಾತ್ರ ನಿಮಗೆ ಇನ್ನು ಮುಂದಿನ ತಿಂಗಳ ಮತ್ತು ಈ ತಿಂಗಳ ಪಿಂಚಣಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಲಿದೆ.