ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ಎಲ್ಲಾ ವರ್ಗದ ರೈತರಿಗೆ ತಲಾ ರೂ 2,000 ದಂತೆ ಒಂದು ವರ್ಷಕ್ಕೆ ರೂ 6,000 ಅರ್ಥಿಕ ನೆರವನ್ನು ನೇರ ನಗದು ವರ್ಗಾವಣೆ(pm kisan 18th installment) ಮೂಲಕ ರೈತರ ಖಾತೆಗೆ ಹಾಕಲಾಗುತ್ತಿದ್ದು, ಈ ಯೋಜನೆಯ 18ನೇ ಕಂತಿನ ಹಣ ಬಿಡುಗಡೆ ಮಾಹಿತಿ ಮತ್ತು ಇ-ಕೆವೈಸಿ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಪಿ ಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಕಳೆದ 18 ಜೂನ್ 2024 ರಂದು ದೇಶದ ಎಲ್ಲಾ ರೈತರ ಖಾತೆಗೆ ಏಕ ಕಾಲಕ್ಕೆ ನೇರ ನಗದು ವರ್ಗಾವಣೆ(DBT) ಜಮಾ ಮಾಡಲಾಗಿತ್ತು 9.26 ಕೋಟಿ ರೈತರ ಖಾತೆಗೆ ಒಟ್ಟು 21 ಸಾವಿರ ಕೋಟಿ ಹಣವನ್ನು ಈ ಯೋಜನೆಯಡಿ ವರ್ಗಾವಣೆ ಮಾಡಲಾಗಿರುತ್ತದೆ.
ಪ್ರಸ್ತುತ 18ನೇ ಕಂತಿನ ಹಣವನ್ನು ಪಡೆಯಲು ಇ-ಕೆವೈಸಿ ಮಾಡಿಕೊಳ್ಳುವ ವಿಧಾನ ಮತ್ತು 18ನೇ ಕಂತಿನ ಹಣ ಬಿಡುಗಡೆ ದಿನಾಂಕದ ವಿವರವನ್ನು ಈ ಅಂಕಣದಲ್ಲಿ ತಿಳಿಸಲಗಿದೆ.
pm kisan 18th installment date-ಪ್ರತಿ ವರ್ಷ ಈ ತಿಂಗಳಲ್ಲಿ ಪಿ ಎಂ ಕಿಸಾನ್ ಹಣ ಬಿಡುಗಡೆ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ರೂ.ವನ್ನು ನೀಡಲಾಗಿತಿದ್ದು,ಈ ಯೋಜನೆಯಡಿ ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಕಂತನ್ನು ಏಪ್ರಿಲ್-ಜುಲೈನಲ್ಲಿ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎರಡನೇ ಮತ್ತು ಮೂರನೇ ಕಂತನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮ ಮಾಡಲಾಗುತ್ತದೆ.
pm kisan e-kyc-ಪಿ ಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳಿ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಅಂದರೆ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಹಣ ಜಮಾ ಅಗಿತ್ತಿದೆಯೇ? ಎಂದು ತಿಳಿಯಲು ಇ-ಕೆವೈಸಿ ಮಾಡಿಸುವುದನ್ನು ಕೃಷಿ ಇಲಾಖೆಯಿಂದ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: karmika elake yojane-ತಾಯಿ ಮಗು ಸಹಾಯ ಹಸ್ತ ಯೋಜನೆ, ರೂ 6,000 ಅರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ!
pm-kisan e-KYC method-ಇ-ಕೆವೈಸಿ ಮಾಡಿಕೊಳ್ಳುವ ವಿಧಾನ:
ವಿಧಾನ-1: OTP ಆಧಾರಿತ e-KYC:
ಕೇಂದ್ರ ಸರಕಾರದ ಅಧಿಕೃತ pm-kisan ಜಾಲತಾಣವನ್ನು ಪ್ರವೇಶ ಮಾಡಿ ಅಥವಾ pm-kisan ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಮಾಡಿಕೊಳ್ಳಬಹುದು.
PM-kisan webiste: Download Now
PM-kisan app: Download Now
ವಿಧಾನ-2: Biometric ಆಧಾರಿತ e-KYC:
ರೈತರು ತಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಇ-ಕೆವೈಸಿ ಯನ್ನು ಮಾಡಿಸಬಹುದು.
ವಿಧಾನ-3: ಮುಖಚರ್ಯೆ ಆಧಾರಿತ e-KYC:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು “FACE AUTHENTICATION” ಆಯ್ಕೆಯನ್ನು ಬಳಕೆ ಮಾಡಿಕೊಂಡು ಇ-ಕೆವೈಸಿಯನ್ನು ಮಾಡಬಹುದು.
ಇದನ್ನೂ ಓದಿ: Marriage incentive yojana-ಈ ಯೋಜನೆಯಡಿ ಹೊಸದಾಗಿ ಮದುವೆಯಾಗುವವರಿಗೆ ಸರ್ಕಾರದಿಂದ 2.50 ಲಕ್ಷ ರೂ.ಪ್ರೋತ್ಸಾಹ ಧನ!
ಸೂಚನೆ: ಪಿ ಎಂ ಕಿಸಾನ್ ಯೋಜನೆಯಡಿ ರೈತ ಬಂಧುಗಳು ಅರ್ಥಿಕ ನೆರವು ಪಡೆಯಲು e-KYC ಮಾಡಿಕೊಳ್ಳುವುದನ್ನು ಕೃಷಿ ಇಲಾಖೆಯಿಂದ ಕಡ್ಡಾಯಗೊಳಿಸಲಾಗಿದ್ದು, e-KYC ಮಾಡಿಸಲು ಬಾಕಿಯಿರುವ ರೈತರು ತಪ್ಪದೇ ಕೂಡಲೇ e-KYC ಅನ್ನು ಮಾಡಿಸಿಕೊಳ್ಳಲು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ವಿಧಾನ-1: OTP ಆಧಾರಿತ e-KYC
Step-1: ಈ PM-kisan e-kyc ಲಿಂಕ್ ಮೇಲೆ ಕ್ಲಿಕ್ ಮಾಡಿ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ತದನಂತರ ಅರ್ಜಿದಾರರ ಆಧಾರ್ ಕಾರ್ಡ/Aadhaar No. ಸಂಖ್ಯೆಯನ್ನು ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿ OTP ಪಡೆದು ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
pmkisan helpline numbers-ಸಹಾಯವಾಣಿ:- 155261 ಮತ್ತು 011-24300606.