ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತಿ(pm kisan 19th installment) ರೂ 2,000 ಆರ್ಥಿಕ ನೆರವಿನ ಹಣವನ್ನು ದೇಶದ ಅರ್ಹ 9.2 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಇಂದು(24-02-2025) ಬಿಹಾರ ರಾಜ್ಯದ ಬಗಲ್ ಪುರ್ ನಲ್ಲಿ ಮಧ್ಯಾಹ 2-00 ಗಂಟೆಗೆ ಏರ್ಪಡಿಸಿದ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಪಿಎಂ ಕಿಸಾನ್(PM-Kisan) ಯೋಜನೆಯ ಅರ್ಹ ಫಲಾನುಭವಿ ರೈತರ ಖಾತೆಗೆ 19 ನೇ ಕಂತಿ ಹಣ ಜಮಾ ಮಾಡುವ ಕಾರ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆಯನ್ನು ನೀಡಿದ್ದಾರೆ.
ಈ ಅಂಕಣದಲ್ಲಿ ಪಿ ಎಂ ಕಿಸಾನ್ 19 ನೇ ಕಂತಿ ಹಣ ಜಮಾ(PM-Kisan Status) ವಿವರವನ್ನು ರೈತರು ಮೊಬೈಲ್ ನಲ್ಲಿ ಪಡೆದುಕೊಳ್ಳುವುದು ಹೇಗೆ? ತಮ್ಮ 19ನೇ ಕಂತಿನ ಹಣ ಬಂದಿರುವುದನ್ನು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡದೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!
PM kisan 19th installment amount- 9.2 ಕೋಟಿ ರೈತರ ಖಾತೆ 22,000 ಸಾವಿರ ಕೋಟಿ ಹಣ ವರ್ಗಾವಣೆ!
ಕೇಂದ್ರ ಸರಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM-Kisan Amount) ಅರ್ಜಿ ಸಲ್ಲಿಸಿ ನೋಂದಣಿಯನ್ನು ಮಾಡಿಕೊಂಡಿರುವ ಒಟ್ಟು 9.2 ಕೋಟಿ ರೈತರ ಖಾತೆ 22,000 ಸಾವಿರ ಕೋಟಿ ಆರ್ಥಿಕ ನೆರವನ್ನು ಇಂದು(24-02-2025)ರಂದು ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ನೇರವಾಗಿ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೇ ಜಮಾ ಮಾಡಲಾಗಿದೆ.
ಒಟ್ಟು ಎಲ್ಲಾ ರೈತರ ಖಾತೆಗೆ 15 ನೇ ಕಂತಿನ ಹಣವನ್ನು ವರ್ಗಾಹಿಸಲು ಕೇಂದ್ರ ಸರಕಾರವು 18,000 ಸಾವಿರ ಕೋಟಿ ವೆಚ್ಚ ಭರಿಸಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಯೋಜನೆಯ ವಿಭಾಗವು ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

How To Check PM-Kisan Status-19 ನೇ ಕಂತಿನ ಪಿಎಂ ಕಿಸಾನ್ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳುವ ವಿಧಾನ:
ರೈತರು ಕೇಂದ್ರ ಸರಕಾರದಿಂದ ಇಂದು ಬಿಡುಗಡೆ ಮಾಡಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತಿನ ರೂ 2,000 ಆರ್ಥಿಕ ನೆರವಿನ ಜಮಾ ವಿವರವನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.
ಮೊಟ್ಟ ಮೊದಲಿಗೆ ಹಣ ಜಮಾ ವಿವರವನ್ನು ಪಡೆದುಕೊಳ್ಳಲು ನಿಮ್ಮ ಪಿ ಎಂ ಕಿಸಾನ್ ಅರ್ಜಿಯ ನೋಂದಣಿ/ರಿಜಿಸ್ಟ್ರೇಷನ್ ನಂಬರ್ ಅನ್ನು ಇದೆ ವೆಬ್ಸೈಟ್ ನಲ್ಲಿ ತೆಗೆದುಕೊಳ್ಳಬೇಕು ಇದಾದ ನಂತರ ರಿಜಿಸ್ಟ್ರೇಷನ್ ನಂಬರ್ ಅನ್ನು ನಮೂದಿಸಿ ಹಣ ಜಮಾ ವಿವರವನ್ನು ಪಡೆದುಕೊಳ್ಳಬೇಕು.
ಇದನ್ನೂ ಓದಿ: Land Survey-ನಿಮ್ಮ ಜಮೀನಿನ ಸರ್ವೇ ಇನ್ನೂ ಮುಂದೆ ಕೇವಲ 10 ನಿಮಿಷದಲ್ಲಿ ಮಾಡಿಸಬಹುದು!
ಹಂತ-1: ಪಿಎಂ-ಕಿಸಾನ್ ರಿಜಿಸ್ಟ್ರೇಷನ್ ನಂಬರ್ ತೆಗೆದುಕೊಳ್ಳುವ ವಿಧಾನ:
Step-1: ಪ್ರಥಮದಲ್ಲಿ PM-Kisan Registration No ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.

Step-2: ಇದಾದ ಬಳಿಕ ಇಲ್ಲಿ ಮುಖಪುಟದ ಬಲಬದಿಯಲ್ಲಿ ಕಾಣುವ “Know Your Status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಈ ಪೇಜ್ ನಲ್ಲಿ “Know Your Registration No” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: Know Your Registration Number ಪೇಜ್ ನ Search By ವಿಭಾಗದಲ್ಲಿ Mobile Number/Aadhaar Number ಎಂದು ಎರಡು ಆಯ್ಕೆಗಳು ಕಾಣಿಸುತ್ತವೆ ಇದರಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿದಾರರ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಅನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Get Mobile”ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 4 ಅಂಕಿಯ OTP ಅನ್ನು ನಮೂದಿಸಿ Get Details ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ರೀತಿಯ “KA22136XXXX” ನಿಮ್ಮ ಅರ್ಜಿಯ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ತೋರಿಸುತ್ತದೆ ಇದನ್ನು ಒಂದು ಕಡೆ ಬರೆದುಕೊಳ್ಳಬೇಕು.
ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!
ಹಂತ-2: ಪಿಎಂ ಕಿಸಾನ್ 19 ನೇ ಕಂತಿನ ಹಣ ಜಮಾ ವಿವರ ಪಡೆಯುವ ವಿಧಾನ:
ಮೇಲಿನ ವಿಧಾನವನ್ನು ಅನುಸರಿಸಿ ಪಿಎಂ ಕಿಸಾನ್ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ತೆಗೆದುಕೊಂಡ ಬಳಿಕ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಈ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ 19 ನೇ ಕಂತಿನ ಹಣ ಜಮಾ ವಿವರವನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.
Step-1: ಮೊದಲಿಗೆ ಈ PM-Kisan Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪುಟವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಇಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಒಟಿಪಿ ಅನ್ನು ಪಡೆದ ಬಳಿಕ “Enter OTP” ಕಾಲಂ ನಲ್ಲಿ ನಿಮ್ಮ ನೋದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ 4 ಅಂಕಿಯ OTP ಅನ್ನು ನಮೂದಿಸಿ “Get Data” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಈ ನಂತರದ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ಕೆಳಗೆ ಸ್ಕ್ರೋರ್ ಮಾಡಿದಾಗ “Latest Installments Details” ಕಾಲಂ ನ “Payment Status” ಕೆಳಗೆ ವWaiting for approval by state ಅಥವಾ FTP processed: Yes ಎಂದು ತೋರಿಸಿದರೆ ನಿಮ್ಮ 19 ನೇ ಕಂತಿನ ಹಣ ಇನ್ನು1-2 ದಿನದಲ್ಲಿ ಜಮಾ ಅಗುತ್ತದೆ ಎಂದು ಈಗಾಗಲೇ ಜಮಾ ಅಗಿದ್ದರೆ “19th installment payment done” ಎಂದು ತೋರಿಸುತ್ತದೆ