ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-Kisan Scheme) ಯೋಜನೆಯಡಿ ಇದೆ ತಿಂಗಳ 24 ರಂದು ದೇಶದ 9.2 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ 19 ನೇ ಕಂತಿನ ರೂ 2,000 ಆರ್ಥಿಕ ನೆರವನ್ನು ಜಮಾ ಮಾಡಲಾಗಿದ್ದು ಈ ಯೋಜನೆಯ ಹಣ ಪಡೆಯದವರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ(Modi) ಅವರು ಬಿಹಾರ ರಾಜ್ಯದಲ್ಲಿ ಏರ್ಪಡಿಸಿದ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ಈ ಯೋಜನೆಯ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು ಒಟ್ಟು 9.2 ಕೋಟಿ ರೈತರ ಖಾತೆಗೆ 22,000 ಕೋಟಿ ರೂ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗಿದೆ.
ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ ತಾಂತ್ರಿಕ ಕಾರಣಗಳಿಂದ ರೂ 2,000 ಹಣವನ್ನು ಪಡೆಯಲು ಸಾಧ್ಯವಾಗದೇ ಇದ್ದ ಅರ್ಹ ಫಲಾನುಭವಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬಹುದು ಮತ್ತು ಯಾವೆಲ್ಲ ಕಾರಣಗಳಿಂದ ಹಣ ಜಮಾ ಅಗಿರುವುದಿಲ್ಲ ಎನ್ನುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Gruha Jyothi Scheme: ಮನೆ ಬದಲಾವಣೆ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
PM Kisan Useful News-ಅರ್ಜಿ ಸಲ್ಲಿಸಿದರು ಸಹ ಹಣ ಜಮಾ ಅಗಿಲ್ಲವಾ?
ಅನೇಕ ರೈತರು ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು ಸಹ ಹಣ ಪಡೆಯಲು ಕೆಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರುವುದಿಲ್ಲ ಈ ತಾಂತ್ರಿಕ ಕಾರಣಗಳ ಪಟ್ಟಿ ಹೀಗಿದೆ:
1) ಅರ್ಜಿದಾರರು ಕೃಷಿ ಇಲಾಖೆಯನ್ನು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳದೇ ಇರುವುದು.
2) ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇರುವುದು.
3) ಗಂಡ-ಹೆಂಡತಿ ಇಬ್ಬರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದು.
4) 2019 ರ ನಂತರ ಕೃಷಿ ಜಮೀನನ್ನು ಖರೀದಿ ಮಾಡಿರುವುದು.
5) ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಂಡಿರಬಹುದು.
6) ಅರ್ಜಿದಾರರ ಹೆಸರು ಜಮೀನಿನ ಹೆಸರು ತಾಳೆಯಾಗದಿರುವುದು.
ಇದನ್ನೂ ಓದಿ: Labour Card Application-ಹೊಸದಾಗಿ ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!
Kisan Samman Nidhi Yojana-ಅರ್ಜಿಯನ್ನು ಸರಿಪಡಿಸಿಕೊಳ್ಳುವ ಮಾರ್ಗಗಳು:
1) ಅರ್ಜಿದಾರರು ಕೃಷಿ ಇಲಾಖೆಯನ್ನು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳದೇ ಇರುವುದು:
ಕೃಷಿ ಇಲಾಖೆಯ ಅಂಕಿ-ಅಂಶದ ಮಾಹಿತಿಯನ್ವಯ ಇನ್ನು ಸಹ ಅನೇಕ ಪಿ ಎಂ ಕಿಸಾನ್ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಇ-ಕೆವೈಸಿಯನ್ನು ಮಾಡಿಕೊಂಡಿರುವುದಿಲ್ಲ ಅದ್ದರಿಂದ ಅರ್ಜಿದಾರರು ತಮ್ಮ ಆಧಾರ್ ಕಾರ್ಡ ಸಮೇತ ಮೊಬೈಲ್ ಅನ್ನು ಸ್ವಂತ ಅರ್ಜಿದಾರರು ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.
2) ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇರುವುದು:
ಪಿ ಎಂ ಕಿಸಾನ್ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದು ಕಡ್ಡಾಯವಾಗಿದೆ ಅದ್ದರಿಂದ ಅರ್ಜಿದಾರರು ಒಮ್ಮೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: Bilijola MSP-ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ!

3) ಗಂಡ-ಹೆಂಡತಿ ಇಬ್ಬರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದು:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಮಾರ್ಗಸೂಚಿಯ ಪ್ರಕಾರ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಹೆಸರನಲ್ಲಿಯೂ ಸಹ ಕೃಷಿ ಜಮೀನು ಇದ್ದರೆ ಒಬ್ಬರಿಗೆ ಮಾತ್ರ ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುತ್ತಾರೆ ಅದ್ದರಿಂದ ಒಬ್ಬರಿಗೆ ಮಾತ್ರ ಹಣ ಪಡೆಯಲು ಸಾಧ್ಯವಾಗುತ್ತದೆ.
4) 2019 ರ ನಂತರ ಕೃಷಿ ಜಮೀನನ್ನು ಖರೀದಿ ಮಾಡಿರುವುದು:
ಪಿ ಎಂ ಕಿಸಾನ್ ಯೋಜನೆಯು ಫೆಬ್ರವರಿ 2019 ರಿಂದ ಜಾರಿಗೆ ಬಂದಿದ್ದು ಈ ಯೋಜನೆ ಜಾರಿಗೆ ಬಂದ ನಂತರ ಕೃಷಿ ಜಮೀನನ್ನು ಖರೀದಿ ಮಾಡಿರುವವರು ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಬರುವುದಿಲ್ಲ ನಕಲಿ ರೈತರ ಹಾವಳಿಯನ್ನು ತಪ್ಪಿಸಲು ಕೇಂದ್ರದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: PM-Kisan 2025: ಕೇಂದ್ರದಿಂದ ಪಿ ಎಂ ಕಿಸಾನ್ 19 ನೇ ಕಂತಿ ಹಣ ವರ್ಗಾವಣೆ! ನಿಮಗೆ ಬಂತಾ ಚೆಕ್ ಮಾಡಿ!
5) ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಂಡಿರಬಹುದು:
ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರ ಫಲಾನುಭವಿಯ ಬ್ಯಾಂಕ್ ಖಾತೆಯು ನಿಷ್ಕ್ರಿಯವಾಗಿದ್ದರು ಸಹ ಈ ಯೋಜನೆಯ ಹಣ ಬರುವುದಿಲ್ಲ ಆದ ಕಾರಣ 19 ನೇ ಕಂತಿನ ಹಣವನ್ನು ಪಡೆಯದವರು ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಯನ್ನು ನೆರವಾಗಿ ಭೇಟಿ ಮಾಡಿ ನಿಮ್ಮ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳಬೇಕು.
6) ಅರ್ಜಿದಾರರ ಹೆಸರು ಜಮೀನಿನ ಹೆಸರು ತಾಳೆಯಾಗದಿರುವುದು:
ರೈತರು ಅರ್ಜಿ ಸಲ್ಲಿಸಿದ ಬಳಿಕ ತಮ್ಮ ಜಮೀನಿನ ಪಹಣಿಯಲ್ಲಿನ ಹೆಸರು ಮತ್ತು ಆಧಾರ್ ಕಾರ್ಡನಲ್ಲಿರುವ ಹೆಸರು ತಾಳೆಯಾಗದಿದ್ದಲ್ಲಿ ಅಂತಹ ರೈತರಿಗೂ ಸಹ ಈ ಯೋಜನೆಯ ಹಣ ಜಮಾ ಅಗುವುದಿಲ್ಲ ಅದ್ದರಿಂದ ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ನಿಮ್ಮ ಹೆಸರನ್ನು ಸರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!
Kisan samman Helpline-ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ ವಿವರ ಹೀಗಿದೆ:
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ- 1800-115-526
ಮೇಲ್ ವಿಳಾಸ- pmkisan-ict@gov.in ಅಥವಾ pmkisan-funds@gov.in
PM Kisan Farmers List-ಪಿ ಎಂ ಕಿಸಾನ್ ರೈತರ ಪಟ್ಟಿ ಮತ್ತು ಜಮಾ ವಿವರ ಪಡೆಯುವುದು ಹೇಗೆ?
ಪಿ ಎಂ ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ಪಟ್ಟಿಯನ್ನು ನೋಡಲು ಮತ್ತು ಈ ಯೋಜನೆಯ ಹಣ ಜಮಾ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ PM Kisan Farmers List ಮಾಡಿ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಿ.