- Advertisment -
HomeNew postsPM-Kisan 2025: ಪಿಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರ ಕೈತಪ್ಪಿದ ಆರ್ಥಿಕ ನೆರವು! ಇಲ್ಲಿದೆ...

PM-Kisan 2025: ಪಿಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರ ಕೈತಪ್ಪಿದ ಆರ್ಥಿಕ ನೆರವು! ಇಲ್ಲಿದೆ ಅಧಿಕೃತ ಪಟ್ಟಿ!

ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan latest update 2025) ಇ-ಕೆವೈಸಿ ಮಾಡಿಕೊಳ್ಳದ ಮತ್ತು ಆಸ್ತಿ ತೆರಿಗೆಯನ್ನು ಪಾವತಿ ಮಾಡುವ, ಭೂ ದಾಖಲೆಗಳು ಸರಿಯಾಗಿಲ್ಲದ ಒಟ್ಟು10 ಲಕ್ಷ ರೈತರಿಗೆ ಈ ಯೋಜನೆಯ ಆರ್ಥಿಕ ನೆರವು ಕೈತಪ್ಪಿದು ಈ ಕುರಿತು ಇದಕ್ಕೆ ಸಂಬಂಧಿಸಿದ ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ(PM Kisan latest update) ಎಲ್ಲ ವರ್ಗದ ರೈತರಿಗೆ ಒಂದು ವರ್ಷದಲ್ಲಿ ತಲಾ ಮೂರು ಕಂತುಗಳಂತೆ ರೂ 2,000 ಸಾವಿರದಂತೆ ಒಟ್ಟು ರೂ 6,000 ಆರ್ಥಿಕ ನೆರವನ್ನು ಈ ಯೋಜನೆಯಡಿ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Bescom Helpline-ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆಗೆ ಜಿಲ್ಲಾವಾರು ಸಹಾಯವಾಣಿ ಬಿಡುಗಡೆ!

ಪ್ರಸ್ತುತ ಈ ಯೋಜನೆಯಡಿ ಕೆಲವು(PM Kisan status) ತಾಂತ್ರಿಕ ಕಾರಣಗಳಿಂದ ಮತ್ತು ಮಾರ್ಗಸೂಚಿಯನ್ವಯ ಅನರ್ಹ ರೈತರಿಗೆ ಈ ಯೋಜನೆಯ ಹಣ ವರ್ಗಾವಣೆ ಸ್ಥಗಿತವಾಗಿದ್ದು ಈ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದ್ದು ಇದರೊಟ್ಟಿಗೆ ರೈತರು ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿದ್ದು ಅರ್ಹ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಹೇಗೆ ಚೆಕ್ ಮಾಡಿಕೊಳ್ಳವುದು ಎನ್ನುವ ಮಾಹಿತಿಯನ್ನು ಸಹ ತಿಳಿಸಲಾಗಿದೆ.

PM Kisan rejected farmers list-10 ಲಕ್ಷ ರೈತರ ಕೈತಪ್ಪಿದ ಪಿಎಂ ಕಿಸಾನ್ ಹಣ:

ಅಂಕಿ-ಅಂಶದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಲ್ಲಿಯವರೆಗೆ ಸರಿಸುಮಾರು 10 ಲಕ್ಷ ರೈತರಿಗೆ ಈ ಯೋಜನೆಯಡಿ ಜಮಾ ಅಗುತ್ತಿದ್ದ ಆರ್ಥಿಕ ನೆರವು ಸ್ಥಗಿತವಾಗಿದ್ದು ಇದಕ್ಕೆ ಸೂಕ್ತ ಕಾರಣಗಳ ಪಟ್ಟಿ ಈ ಕೆಳಗೆ ತಿಳಿಸಲಾಗಿದೆ.

1) ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಇ-ಕೆವೈಸಿ ಮಾಡಿಕೊಳ್ಳದವರಿಗೆ ಸ್ಥಗಿತವಾಗಿದೆ.

2) ಆಸ್ತಿಯ ದಾಖಲೆ ಮತ್ತು ಆಧಾರ್ ಕಾರ್ಡ ವಿವರ ತಾಳೆಯಾಗದ ಫಲಾನುಭವಿಗಳಿಗೂ ಸಹ ಸ್ಥಗಿತವಾಗಿದೆ.

3) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಇಲ್ಲದವರಿಗೆ ಹಣ ಜಮಾ ಅಗಿರುವುದಿಲ್ಲ.

4) ಅರ್ಜಿಯನ್ನು ಸಲ್ಲಿಸಿದ ಬಳಿಕ GST ಮತ್ತು ಆದಾಯ ತೆರಿಗೆಯನ್ನು ಪಾವತಿ ಮಾಡುವವರನ್ನು ಗುರುತಿಸಿ ಹಣ ವರ್ಗಾವಣೆಯನ್ನು ಸ್ಥಗಿತ ಮಾಡಲಾಗಿದೆ.

5) ಒಂದೇ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರ ಹೆಸರಿಗೂ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವವರಲ್ಲಿ ಒಬ್ಬರಿಗೆ ಈ ಯೋಜನೆಯ ಹಣ ವರ್ಗಾವಣೆಯು ಸ್ಥಗಿತವಾಗಿದೆ.

ಇದನ್ನೂ ಓದಿ: School Holidays-ಶಿಕ್ಷಣ ಇಲಾಖೆಯಿಂದ ಅಧಿಕೃತ ಬೇಸಿಗೆ ರಜೆ ಅವಧಿ ಮತ್ತು ಶಾಲೆ ಪ್ರಾರಂಭ ದಿನಾಂಕ ಪ್ರಕಟ!

pmkisan

PM Kisan Status-ಅರ್ಹರಿದ್ದರು ಹಣ ಜಮಾ ಅಗದಿದ್ದರೆ ಈ ಕ್ರಮ ಅನುಸರಿಸಿ:

ಈ ಯೋಜನೆಯ ಮಾರ್ಗಸೂಚಿಯನ್ವ ಅರ್ಹರಿದ್ದರು ಪಿಎಂ ಕಿಸಾನ್ ಹಣ ಜಮಾ ಅಗದಿದ್ದರೆ ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಂಡು ಅರ್ಜಿಯನ್ನು ಸರಿಪಡಿಸಿಕೊಳ್ಳಬೇಕು.

ಇ-ಕೆವೈಸಿ ಮಾಡಿಕೊಳ್ಳದರು ಅಗತ್ಯ ದಾಖಲಾತಿ ಸಲ್ಲಿಸಿ ಇ-ಕೆವೈಸಿ ಮಾಡಿಕೊಳ್ಳಿ ಅದೇ ರೀತಿ ಬ್ಯಾಂಕ್ ಖಾತೆಗ ಆಧಾರ್ ಕಾರ್ಡ ಲಿಂಕ್ ಇಲ್ಲದವರು ಆಧಾರ್ ಕಾರ್ಡ ಲಿಂಕ್ ಮಾಡಿಸಿ, ನಿಮ್ಮ ಜಮೀನಿನ ಪಹಣಿಯಲ್ಲಿರುವ ಹೆಸರಿಗೂ ಆಧಾರ್ ಕಾರ್ಡ ನಲ್ಲಿರುವ ಹೆಸರಿಗೂ ತಾಳೆಯಾಗುತ್ತಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!

PM Kisan beneficiary list 2025-ಪಿ ಎಂ ಕಿಸಾನ್ ಅರ್ಹ ರೈತರ ಪಟ್ಟಿ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಿರುವ ರೈತರು ಈ ಯೋಜನೆಯ ಅಧಿಕೃತ https://pmkisan.gov.in/ ಜಾಲತಾಣವನ್ನು ನಿಮ್ಮ ಮೊಬೈಲ್ ನಲ್ಲೇ ನೇರವಾಗಿ ಭೇಟಿ ಮಾಡಿ ಮನೆಯಲ್ಲೇ ಕುಳಿತು ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ PM Kisan beneficiary list ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಅಧಿಕೃತ ಜಾಲತಾಣವನ್ನು ಭೇಟಿ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “Beneficiary List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪೇಜ್ ನಲ್ಲಿ ರೈತರು ರಾಜ್ಯ-Karnataka ಮತ್ತು ಪಕ್ಕದ ಕಾಲಂ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಗೋಚರಿಸುತ್ತದೆ. ಒಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

PM Kisan Status Check-ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ರೈತರು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ತಂತ್ರಾಂಶವನ್ನು ಭೇಟಿ ಮಾಡಿ ಈ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಸಹ ತಿಳಿದುಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ PM Kisan Status Check ಮಾಡಿ ಪಿಎಂ ಕಿಸಾನ್ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “Know Your Status” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ನೋಂದಣಿ ಸಂಖ್ಯೆಯನ್ನು ಹಾಕಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

PM Kisan e-KYC: ಇ-ಕೆವೈಸಿ ಮಾಡಿಕೊಳ್ಳ ಅಗತ್ಯ ದಾಖಲೆಗಳು:

1) ಅರ್ಜಿದಾರರ ರೈತರ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಮೊಬೈಲ್ ಪೋನ್
4) ಖುದ್ದು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅರ್ಜಿದಾರರೊಂದಿಗೆ ಭೇಟಿ ಮಾಡಬೇಕಾಗುತ್ತದೆ.

PM Kisan Samman Nidhi-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ವೆಬ್ಸೈಟ್ ಲಿಂಕ್-

ರಾಜ್ಯ ಸರ್ಕಾರದ ಅಧಿಕೃತ ಜಾಲತಾಣ- CLICK HERE
ಕೇಂದ್ರ ಸರ್ಕಾರ ಅಧಿಕೃತ ಜಾಲತಾಣ- CLICK HERE
ಸಹಾಯವಾಣಿ-
CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -