- Advertisment -
HomeAgriculturePM-Kisan App: ಇ-ಕೆವೈಸಿ ಸ್ಟೇಟಸ್ ಮತ್ತು ಹಣ ಜಮಾ ವಿವರ ತಿಳಿಯಲು! ಪಿ ಎಂ ಕಿಸಾನ್...

PM-Kisan App: ಇ-ಕೆವೈಸಿ ಸ್ಟೇಟಸ್ ಮತ್ತು ಹಣ ಜಮಾ ವಿವರ ತಿಳಿಯಲು! ಪಿ ಎಂ ಕಿಸಾನ್ ಮೊಬೈಲ್ ಆಪ್!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇವಲ ಒದೆರಡು ಕ್ಲಿಕ್ ನಲ್ಲಿ ಸುಲಭವಾಗಿ ಈ ಯೋಜನೆಯ ಅರ್ಜಿಯ ಇ-ಕೆವೈಸಿ ಸ್ಥಿತಿ ಮತ್ತು ಹಣ ಜಮಾ ವಿವರವನ್ನು ಪಡೆಯಲು ಮೊಬೈಲ್ ಅಪ್ಲಿಕೇಶನ್(PM-Kisan App) ಅನ್ನು ಕೇಂದ್ರದ ಕೃಷಿ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ.

ಪಿ ಎಂ ಕಿಸಾನ್ ಯೋಜನೆಯ(PM-Kisan) ಅರ್ಜಿಯ ಸ್ಥಿತಿ ಕುರಿತು ಮಾಹಿತಿಯನ್ನು ಪಡೆಯಲು ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ಮಾಡದೇ ಈ ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಈ ಅಂಕಣದಲ್ಲಿ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್(Kisan samman nidhi) ಅನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ತಿಳಿಯುವುದು ಹೇಗೆ? ಮತ್ತು ಈ ಅಪ್ಲಿಕೇಶನ್ ನಲ್ಲಿ ಯಾವೆಲ್ಲ ಮಾಹಿತಿಯನ್ನು ಪಡೆಯಬಹುದು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Lineman Job- ಏಪ್ರಿಲ್ ಅಂತ್ಯಕ್ಕೆ 3 ಸಾವಿರ ಲೈನ್‌ಮೆನ್‌ ನೇಮಕ: ಕೆ ಜೆ ಜಾರ್ಜ್

Kisan Samman Nidhi Application- ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ನಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ಎಲ್ಲಾ ರೈತರ ಖಾತೆಗೆ ವಾರ್ಷಿಕ ₹6,000 ರೂ ಹಣವನ್ನು ನೇರ ನಗದು ವರ್ಗಾವಣೆಯ ಮೂಲಕ ನಾಲ್ಕು ತಿಂಗಳಿಗೆ ಒಮ್ಮೆ ಜಮಾ ಮಾಡಲಾಗುತ್ತದೆ ಇಲ್ಲಿಯವರಿಗೆ ಈ ಯೋಜನೆಯಡಿ ಒಟ್ಟು ₹2,000 ರೂ ದಂತೆ 18 ಕಂತುಗಳ ಹಣವನ್ನು ಜಮಾ ಮಾಡಲಾಗಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳು ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

1) ಪಿ ಎಂ ಕಿಸಾನ್ ಅರ್ಜಿದಾರರ ಇ-ಕೆವೈಸಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು/PM kisan e-KYC Status.
2) ಕಂತುಗಳವಾರು ಹಣ ಜಮಾ ಅಗಿರುವುದರ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು/PM kisan amount status check.
3) ನಿಮ್ಮ ಅರ್ಜಿಗೆ ಕೃಷಿ ಜಮೀನಿನ ಸರ್ವೆ ನಂಬರ್ ವಿವರ ಲಿಂಕ್ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು/Land seeding Status.
4) ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು/Bank account Adhar link.

ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

PM-Kisan Status-ಪಿ ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವ ವಿಧಾನ:

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಕಿಸಾನ್ ಸಮ್ಮಾನ್ ಅರ್ಜಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ PM-Kisan App Download ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ PMKISAN GoI ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

PM-Kisan status

Step-2: ಇದಾದ ಬಳಿಕ ಅಪ್ಲಿಕೇಶನ್ ಅನ್ನು ತೆರೆದು “Login” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ನಮೂದಿಸಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ನಾಲ್ಕು ಅಂಕಿಯ OTP ಅನ್ನು ನಮೂದಿಸಿ Login ಆಗಬೇಕು.

ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

Step-3: ಲಾಗಿನ್ ಅದ ನಂತರ ಇಲ್ಲಿ ಮುಖಪುಟದಲ್ಲಿ ಗೋಚರಿಸುವ “Dashboard” ಬಟನ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಅರ್ಜಿಯ ಇ-ಕೆವೈಸಿ ಸ್ಥಿತಿ, ಆಧಾರ್ ಕಾರ್ಡ ಲಿಂಕ್ ಸ್ಟೇಟಸ್, ಜಮೀನಿನ ಲಿಂಕ್ ಸ್ಟೇಟಸ್ ಮಾಹಿತಿಯನ್ನು ಪಡೆಯಬಹುದು.

PM-Kisan status (2)

ಉದಾಹರಣೆಗೆ: ಇಲ್ಲಿ “Status” ಆಯ್ಕೆ ವಿಭಾಗದಲ್ಲಿ Land record seeding-Yes, Ekyc- Yes, Bank account linking aadhar status- Yes ಎಂದು ತೋರಿಸಿದರೆ ನಿಮ್ಮ ಅರ್ಜಿಯ ಎಲ್ಲಾ ವಿವರ ಸರಿಯಾಗಿದೆ ಎಂದು ಒಂದೊಮ್ಮೆ “No” ಎಂದು ತೋರಿಸಿದರೆ ನಿಮ್ಮ ಅರ್ಜಿಯ ಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕು ಎಂದು.

Step-4: ಈ ಯೋಜನೆಯಡಿ ಜಮಾ ಅಗಿರುವ ಕಂತುಗಳವಾರು ಹಣದ ವಿವರವನ್ನು ಪಡೆಯಲು ಮುಖಪುಟದಲ್ಲಿ ಕಾಣುವ “Beneficiary status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Instalment” ಕಂತನ್ನು ಆಯ್ಕೆ ಮಾಡಿಕೊಂಡು ಹಣದ ಜಮಾ ವಿವರವನ್ನು ಪಡೆಯಬಹುದು.

PM-Kisan (3)
- Advertisment -
LATEST ARTICLES

Related Articles

- Advertisment -

Most Popular

- Advertisment -