PM-kisan list-2024 ಪಿ ಎಂ ಕಿಸಾನ್ ಪರಿಷ್ಕೃತ ರೈತರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ 2,000 ಹಣ ಪಡೆಯಲು ಅರ್ಹರಿರುವ ಪರಿಷ್ಕೃತ ರೈತರ ಪಟ್ಟಿಯನ್ನು(PM-kisan list-2024) ಈ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯನ್ನು ರೈತರು ತಮ್ಮ ಮೊಬೈಲ್ ನಲ್ಲಿ ಹೇಗೆ ನೋಡುವುದು ಎನ್ನುವ ಮಾಹಿತಿಯನ್ನು ಈ  ಲೇಖನದಲ್ಲಿ ವಿವರಿಸಲಾಗಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಹಣ ಪಡೆಯಲು ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಒಂದೊಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದ ಪಕ್ಷದಲ್ಲಿ ಏನು ಮಾಡಬೇಕು? ಇತ್ಯಾದಿ ಮಾಹಿತಿಯನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Crop survey-ಬೆಂಬಲ ಬೆಲೆ, ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯಲು ಈ ಕೆಲಸ ತಪ್ಪದೇ ಮಾಡಿ!

kisan samman nidhi- ಮುಂದಿನ ಕಂತಿಯ ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮುಂದಿನ ಕಂತಿನ ಹಣ ಪಡೆಯಲು ಇಲ್ಲಿಯವರೆಗೆ ಇ-ಕೆವೈಸಿ ಮಾಡದೇ ಇರುವವರು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಕಡ್ಡಾಯವಾಗಿ ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಿ ಇಲ್ಲವಾದಲ್ಲಿ ನಿಮಗೆ ಈ ಯೋಜನೆಯ ಹಣ ಜಮಾ ಅಗುವುದಿಲ್ಲ.

e-KYC documents- ಇ-ಕೆವೈಸಿ ಮಾಡಿಸಲು ಸಲ್ಲಿಸಬೇಕಾದ ದಾಖಲೆಗಳು:

ಎರಡು ವಿಧಾನ ಅನುಸರಿಸಿ ಕೃಷಿ ಇಲಾಖೆಯಿಂದ ಈ ಯೋಜನೆಯ ಅರ್ಹ ಫಲಾನುಭವಿಗಳ ಕೆವೈಸಿ ಮಾಡಿಕೊಳ್ಳಲಾಗುತ್ತಿದ್ದು, ಒಂದು OTP ಆಧಾರಿತ ಇನ್ನೊಂದು ಫಲಾನುಭವಿ ಪೋಟೋ(face authentication) ಅನ್ನು ಅಪ್ಲಿಕೇಶನ್ ಮೂಲಕ ತೆದು ಕೆವೈಸಿ ಮಾಡಲಾಗುತ್ತಿದೆ. ಇದಕ್ಕಾಗಿ ಫಲಾನುಭವಿ ಮೊಬೈಲ್ ಮತ್ತು ಆಧಾರ್ ಕಾರ್ಡ ದಾಖಲೆಗಳು ಬೇಕಾಗುತ್ತವೆ.

ಇದನ್ನೂ ಓದಿ: Uppara nigama yojane-2024: ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ!

PM kisan DBT amount- ಈ ತಿಂಗಳಲ್ಲಿ ಪಿ ಎಂ ಕಿಸಾನ್ ಹಣ ಜಮಾ ಸಾಧ್ಯತೆ:

ಕೇಂದ್ರ ಕೃಷಿ ಇಲಾಖೆಯ ಕೆಲವು ಮೂಲಗಳ ಮಾಹಿತಿಯ ಪ್ರಕಾರ ನವೆಂಬರ್ ಕೊನೆ ಅಥವಾ ಡಿಸೆಂಬರ್ ತಿಂಗಳಲ್ಲಿ ಈ ಯೋಜನೆಯ ರೂ 2,000 ಹಣ ರೈತರ ಖಾತೆಗೆ ನೇರ ನಗದು ವರ್ಗಾವಣೆ(PM kisan DBT amount) ಮೂಲಕ ಜಮಾ ಅಗಲಿದೆ.

pm kisan Beneficiary list- ಮೊಬೈಲ್ ನಲ್ಲಿ ಪಿ ಎಂ ಕಿಸಾನ್ ಪರಿಷ್ಕೃತ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾಲತಾಣವನ್ನು ಭೇಟಿ ಮಾಡಿ  ಪಿ ಎಂ ಕಿಸಾನ್ ಪರಿಷ್ಕೃತ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Pumpset adhar link-10 HP ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ! ಇಲ್ಲಿದೆ ಮಹತ್ವದ ಮಾಹಿತಿ!

Step-1: ಮೊದಲಿಗೆ ಈ ಲಿಂಕ್ pm kisan Beneficiary list ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ವೆಬ್ಸೈಟ್ ಮಾಡಬೇಕು.

Step-2: ತದನಂತರ ಮುಖಪುಟದ ಬಲ ಬದಿಯಲ್ಲಿ ಕೊನೆಯಲ್ಲಿ ಕಾಣುವ “Beneficiary List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “Beneficiary List” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪೇಜ್ ನಲ್ಲಿ ರಾಜ್ಯ/State: ಕರ್ನಾಟಕ/Karnataka ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ/ಹಳ್ಳಿ ಹೆಸರನ್ನು ಸೆಲೆಕ್ಟ್ ಮಾಡಿ ಕೊನೆಯಲ್ಲಿ ಗೋಚರಿಸುವ “Get Report” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4:  “Get Report” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಪೇಜ್ ನಲ್ಲಿ ನಿಮ್ಮ ಹಳ್ಳಿಯಲ್ಲಿ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ 2,000/- ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಈ ಯೋಜನೆಯ ಮುಂದಿನ ಕಂತಿನ ಹಣ ನೇರ ನಗದು ವರ್ಗಾವಣೆ ಮೂಲಕ ಜಮಾ ಅಗುತ್ತದೆ.

ಸೂಚನೆ: ಸಂಪೂರ್ಣ ಪಟ್ಟಿಯನ್ನು ನೋಡಲು ಈ ಪೇಜ್ ನ ಕೊನೆಯಲ್ಲಿ ಕಾಣುವ ಪೇಜ್ ನಂಬರ್ ಗಳ ಮೇಲೆ ಕ್ಲಿಕ್ ಮಾಡಬೇಕು.