- Advertisment -
HomeGovt SchemesPMAY 2.0 Yojana-2024: ಸ್ವಂತ ಮನೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! PMAY 2.0 ಯೋಜನೆಯಡಿ...

PMAY 2.0 Yojana-2024: ಸ್ವಂತ ಮನೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! PMAY 2.0 ಯೋಜನೆಯಡಿ ₹ 2.50 ಲಕ್ಷ ಸಬ್ಸಿಡಿ!

Last updated on December 26th, 2024 at 12:38 pm

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(Pradhan Mantri Awas Yojana) ಅರ್ಜಿ ಸಲ್ಲಿಸಲು ಪ್ರಯೋಜನ ಪಡೆದುಕೊಳ್ಳಲು ಆಸಕ್ತಿಯಿರುವವರಿಗೆ ಕೇಂದ್ರ ಸರಕಾರದಿಂದ ಸಿಹಿ ಸುದ್ದಿ ಪ್ರಕಟವಾಗಿದ್ದು ಈ ಯೋಜನೆಯಡಿ ಎರಡನೇ ಹಂತದಲ್ಲಿ 2029 ರ ವರೆಗೆ ಯೋಜನೆಯ ವಿಸ್ತರಣೆ ಮಾಡಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

PMAY 2.0 ಯೋಜನೆಯಡಿ ಬಡ ಮತ್ತು ಮಧ್ಯಮ ವರ್ಗದ 1 ಕೋಟಿ ಜನರಿಗೆ ಈ ಯೋಜನೆಯಡಿ ಸ್ವಂತ ಮನೆಯನ್ನು ಹೊಂದಲು ₹ 2.5 ಲಕ್ಷ ಸಹಾಯಧನವನ್ನು(Home loan schems) ಒದಗಿಸಲು ಕೇಂದ್ರದಿಂದ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ- ಅರ್ಬನ್‌ 2.0 ಯ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ(PMAY 2.0 Yojana application) ಮಾಡಲಾಗಿದ್ದು 2024ರ ಸೆಪ್ಟೆಂಬರ್‌ 1ರಿಂದ ಇದು ಜಾರಿಗೆ ಬಂದಿದ್ದು ಮುಂದಿನ 5 ವರ್ಷಗಳ ಕಾಲ 2029ರ ವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು ಈ ಯೋಜನೆಯ ಮೂಲಕ ಒಂದು ಲಕ್ಷಕ್ಕೂ ಅಧಿಕ ಹೊಸ ಮನೆಗಳಿಗೆ ಈ ನೆರವು ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Honey Bee Keeping Training-ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶ!

Who can apply for PMAY 2.0-ಅರ್ಜಿ ಸಲ್ಲಿಸಲು ಅರ್ಹರು:

(a) ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರು ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

(b) ಕಳೆದ 20 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಗೃಹ ಸಂಬಂಧಿತ ಸಹಾಯಧನ ಆಧಾರಿತ ಯೋಜನೆಯಡಿ ಸಬ್ಸಿಡಿಯನ್ನು ಪಡೆದಿರಬಾರದು.

(c)ಈಗಾಗಲೇ ಸ್ವಂತ ಮನೆಯನ್ನು ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ.

(d) ಏಕಾಂಗಿಯಾಗಿ ವಾಸ ಮಾಡುತ್ತಿರುವ ಮಹಿಳೆಯರಿಗೆ, ಅಂಕವಿಕಲರಿಗೆ, ಹಿರಿಯ ನಾಗರಿಕರಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Required Documents For PMAY 2.0 Scheme-ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar Card.

(2) ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book.

(3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste and Income Certificate.

(4) ಪೋಟೋ/Photo.

(5) ಮೊಬೈಲ್ ನಂಬರ್/Mobile Numebr.

ಇದನ್ನೂ ಓದಿ: Labor Department Scholarship-ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಇನ್ನು 11 ದಿನಗಳು ಮಾತ್ರ ಬಾಕಿ!

PMAY 2.0 Application-ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(Pradhan Mantri Awas Yojana) ಪ್ರಯೋಜನವನ್ನು ಪಡೆದುಕೊಳ್ಳಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು ಒಂದು ಅರ್ಹ ಅಭ್ಯರ್ಥಿಗಳು ನೇರವಾಗಿ PMAY 2.0 ಯೋಜನೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಅಗತ್ಯ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಎರಡನೇಯ ವಿಧಾನ ಅರ್ಜಿದಾರರು ತಮ್ಮ ಹತ್ತಿರದ ಗ್ರಾಮ ಒನ್/CSC ಕೇಂದ್ರವನ್ನು/ ಕಂಪ್ಯೂಟರ್ ಸೆಂಟರ್ ಅನ್ನು ಪ್ರವೇಶ ಮಾಡಿಯು ಸಹ ಅರ್ಜಿಯನ್ನು ಸಲ್ಲಿಸಬಹುದು.

PMAY 2.0 Online Apply Method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಪಿಎಂ ಆವಾಸ್ 2.0 ಯೋಜನೆಯ ಸೌಲಭ್ಯ ಪಡೆಯಲು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಕೇಂದ್ರ ಸರಕಾರದಿಂದ ಅವಕಾಶ ಮಾಡಿಕೊಡಲಾಗಿದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ PMAY 2.0 APPLICATION ಮಾಡಿ ಅಧಿಕೃತ ಪಿಎಂ ಆವಾಸ್ 2.0 ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಈ ಪೇಜ್ ನಲ್ಲಿ “APPLY PMAY-U 2.0” ಬಟನ್ ಮೇಲೆ ಕ್ಲಿಕ್ ಮಾಡಿ “CLICK TO PROCEED” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “PROCEED” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

Pradhan Mantri Awas Yojana (2)

Step-3: ಇದಾದ ಬಳಿಕ ನಿಮ್ಮ ರಾಜ್ಯ/State, ಮತ್ತು ಅರ್ಜಿದಾರರ ವಾರ್ಷಿಕ ಆದಾಯ ವನ್ನು ನಮೂದಿಸಿ ನಂತರ “Select Mission Component” ಆಯ್ಕೆ ಮಾಡಿಕೊಂಡು ಇಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳಿಗೆ ಟಿಕ್ ಮಾಡಿ ಕೇಳಗೆ ಕಾಣವ “ELIGIBLITY CHECK” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ಪೇಜ್ ನಲ್ಲಿ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ಹಾಕಿ “Generare OTP” ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ನಮೂದಿಸಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

PMAY 2.0 Website-ಯೋಜನೆಯ ವೆಬ್ಸೈಟ್ ಲಿಂಕ್- CLICK HERE

PMAY 2.0 Guidelines-ಈ ಯೋಜನೆಯ ಅಧಿಕೃತ ಮಾರ್ಗಸೂಚಿ ಡೌನ್ಲೋಡ್ ಲಿಂಕ್- Download Now

- Advertisment -
LATEST ARTICLES

Related Articles

- Advertisment -

Most Popular

- Advertisment -