PM kisan e-KYC status : ಪಿ ಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ತಿಳಿಯುವುದು ಹೇಗೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan ekyc status) ಯೋಜನೆಯಡಿ ಹಣ ಪಡೆಯಲು ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಜೊತೆ ತಮ್ಮ ಬ್ಯಾಂಕ್ ಖಾತೆಗ್ ಆಧಾರ್ ಲಿಂಕ್ ಮಾಡಿಸಿರಬೇಕು.

ಈಗಾಗಲೇ ಈ ಎರಡು ಕಾರ್ಯಗಳನ್ನು ಮಾಡಿರುವ ರೈತರು ಅಂದರೆ ಈಗಾಗಲೇ ಪಿ ಎಂ ಕಿಸಾನ್ ಯೋಜನೆಯ ಇ-ಕೆವೈಸಿ ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿರುವವರು ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದಲ್ಲದೇ ಒಂದೊಮ್ಮೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಅಗಿರುವುದುದನ್ನು ಚೆಕ್ ಮಾಡಿದಾಗ ಇ-ಕೆವೈಸಿ ಅಗಿಲ್ಲವಾದಲ್ಲಿ ಮತ್ತು ಆಧಾರ್ ಲಿಂಕ್ ಅಗಿಲ್ಲವಾದಲ್ಲಿ ಯಾವ ವಿಧಾನ ಅನುಸರಿಸಿ ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳಬವುದು ಎಂದು ಸಹ ಈ ಅಂಕಣದಲ್ಲಿ ತಿಳಿಸಲಾಗಿದೆ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

Pmkisan eKyc Status check-ಪಿ ಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವ ವಿಧಾನ:

ಈ ಯೋಜನೆಯಡಿ ವಾರ್ಷಿಕವಾಗಿ ರೂ 6,000 ಪಡೆಯಲು ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯಿಂದ ಈಗಾಗಲೇ ಪ್ರಕಟನೆ ಹೊರಡಿಸಿ ಶೇ 80 ಕ್ಕಿಂತ ಹೆಚ್ಚಿನ ರೈತರ ಇ-ಕೆವೈಸಿ ಮಾಡಿಸಲಾಗಿದೆ ಅದರೆ ಇನ್ನು ಕೆಲವು ರೈತರಿಗೆ ಈ ಕುರಿತು ಗೊಂದಲವಿದ್ದು ನಮ್ಮ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನೆ ಕೇಳಿರುತ್ತಾರ‍ೆ. ಇದಕ್ಕೆ ಉತ್ತರವನ್ನು ಈ ಕೆಳಗೆ ತಿಳಿಸಲಾಗಿದೆ.

Step-1: ಇಲ್ಲಿ ಕ್ಲಿಕ್ ಮಾಡಿ: pm kisan ekyc status ಜಾಲತಾಣಕ್ಕೆ ಭೇಟಿ ಮಾಡಬೇಕು. ನಂತರ ಈ ವೆಬ್ಸೈಟ್ ನಲ್ಲಿ ಅರ್ಜಿದಾರರ ತಮ್ಮ REGISTRATION NUMBER (ಇಲ್ಲಿ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆ ಹಾಕಿ ಪಿ ಎಂ ಕಿಸಾನ್ REGISTRATION NUMBER ಪಡೆದುಕೊಳ್ಳಬವುದು) ಅನ್ನು ಹಾಕಿ ಅಲ್ಲೇ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ನಮೂದಿಸಿ Get Data ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?

Step-2: Get Data ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ “ELIGIBILITY STATUS” ವಿಭಾಗದಲ್ಲಿ e-KYC Status :-  “Yes” ಎಂದು ಗೋಚರಿಸಿದರೆ ಇ-ಕೆವೈಸಿ ಅಗಿದೆ ಎಂದು ಒಂದೊಮ್ಮೆ “NO” ಎಂದು ಗೋಚರಿಸಿದರೆ ಇ-ಕೆವೈಸಿ ಅಗಿಲ್ಲ ಎಂದು. ಈ ರೀತಿ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಮೊಬೈಲ್ ಮೂಲಕ ಮನೆಯಲ್ಲೇ ಕುಳಿತು ಮಾಹಿತಿ ಪಡೆದುಕೊಳ್ಳಬವುದು.

bank and aadhar link status- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ತಿಳಿಯುವ ವಿಧಾನ:

Step-1: ಇಲ್ಲಿ ಕ್ಲಿಕ್ ಮಾಡಿ: pm kisan ekyc status ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-kisan) ಯೋಜನೆಯ ಜಾಲತಾಣ ಭೇಟಿ ಮಾಡಬೇಕು. ತದನಂತರ ಈ ವೆಬ್ಸೈಟ್ ನಲ್ಲಿ ಅರ್ಜಿದಾರರ ತಮ್ಮ REGISTRATION NUMBER (ಇಲ್ಲಿ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆ ಹಾಕಿ ಪಿ ಎಂ ಕಿಸಾನ್ REGISTRATION NUMBER ಪಡೆದುಕೊಳ್ಳಬವುದು) https://pmkisan.gov.in/KnowYour_Registration.aspx ಅನ್ನು ಹಾಕಿ ಅಲ್ಲೇ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ನಮೂದಿಸಿ Get Data ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Akrama-sakrama yojana: ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರಕಾರ!

Step-2: “ELIGIBILITY STATUS” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಇಲ್ಲಿ Aadhaar Bank Account Seeding Status:-  “Yes” ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಥವಾ NPCI mapping ಅಗಿದೆ ಎಂದು. “NO” ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಅಗಿಲ್ಲ ಎಂದು.

ವಿಶೇಷ ಸೂಚನೆ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು ಅರ್ಜಿ ಸಲ್ಲಿಸಿ 15 ದಿನ ಆದ ಬಳಿಕ ಮಾತ್ರ ಇಲ್ಲಿ ಆಧಾರ್ ಲಿಂಕ್ ಅಗಿರುವ ಮಾಹಿತಿ ತೋರಿಸುತ್ತದೆ 15 ದಿನದ ಒಳಗಾಗಿ ಚೆಕ್ ಮಾಡಿದರೆ ಸರಿಯಾದ ವಿವರ ತೋರಿಸುವುದಿಲ್ಲ.

ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯು ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿಗೆ ಶೇರ್ ಮಾಡಿ ನಮ್ಮ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸಿ.

NPCI mapping- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು?

ಒಂದೊಮ್ಮೆ ಈ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿದಾಗ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿಲ್ಲ ಎಂದು ತೋರಿಸಿದರೆ ಅಂತಹ ಫಲಾನುಭವಿಗಳು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆ ಭೇಟಿ ಮಾಡಿ ಅರ್ಜಿದಾರರ ಆಧಾರ್ ಕಾರ್ಡ ಪ್ರತಿ ಮತ್ತು ಅರ್ಜಿ ನಮೂನೆ  ಭರ್ತಿ ಮಾಡಿ ಸಲ್ಲಿಸಿದರೆ ನಿಮ್ಮ ಅಕೌಂಟ್ ಗೆ ಆಧಾರ್ ಲಿಂಕ್/NPCI mapping ಅಗುತ್ತದೆ.

Pmkisan Ekyc- ಇ-ಕೆವೈಸಿ ಎಲ್ಲಿ ಮಾಡಿಸಬೇಕು?

ಇ-ಕೆವೈಸಿ ಅಗಿಲ್ಲದ  ರೈತರು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳಬವುದು.

ಇದನ್ನೂ ಓದಿ: ಪಿ ಎಂ ಕಿಸಾನ್ ಯೋಜನೆಯ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

pm kisan 15th installment date: ಕೇಂದ್ರ ಸರಕಾರದಿಂದ ಪಿ.ಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ವರ್ಗಾವಣೆಗೆ ಅಧಿಕೃತ ದಿನಾಂಕ ಪ್ರಕಟ!

PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

PM kisan : ಪಿ ಎಮ್ ಕಿಸಾನ್ ಯೋಜನೆಯ ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ!