ಕೇಂದ್ರ ಸರಕಾರವು 2019 ರಲ್ಲಿ ದೇಶದ ರೈತರಿಗೆ ಅರ್ಥಿಕವಾಗಿ ನೇರವಾಗಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ(PM-kisan)ಯೋಜನೆಯನ್ನು ಜಾರಿಗೆ ತರಲಾಗಿತ್ತು.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ ಆಗಿನ ಬಿಜೆಪಿ ಸರಕಾರವು ಈ ಯೋಜನೆಗೆ ಹೆಚ್ಚುವರಿಯಾಗಿ ರೂ 4,000 ಸಾವಿರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲು ನಿರ್ಣಯ ಕೈಗೊಂಡು ಅದರಂತೆ ತಲಾ 2 ಕಂತುಗಳಲ್ಲಿ ಈ ಹಣವನ್ನು ರೈತರಿಗೆ ವರ್ಗಾವಣೆ ಮಾಡಲಾಗಿತ್ತು.
ರೈತರು ಇಲ್ಲಿಯವರೆಗೆ ಎಷ್ಟು ಬಾರಿ ರಾಜ್ಯ ಸರಕಾರದ ಪಿ ಎಂ ಕಿಸಾನ್ ಕಂತಿನ ಹಣ ತಮ್ಮ ಖಾತೆಗೆ ಯಾವ ಯಾವ ತಿಂಗಳಿನಲ್ಲಿ ಜಮಾ ಅಗಿದೆ? ಎಂದು ಮೊಬೈಲ್ ನಲ್ಲೇ ಹೇಗೆ ತಿಳಿಯಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.
PM-kisan state installment-ರಾಜ್ಯ ಸರಕಾರದ ಪಿ ಎಂ ಕಿಸಾನ್ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?
ಮುಖ್ಯವಾಗಿ ಈ ಯೋಜನೆಯ ಅರ್ಥಿಕ ನೆರವು ಜಮಾ ಅಗಿರುವುದನ್ನು ಪರಿಶೀಲಿಸಲು ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೊಂದಣಿ ಮಾಡಿಕೊಂಡು FID ಅನ್ನು ಹೊಂದಿರುವುದು ಅತ್ಯಗತ್ಯವಾಗಿದೆ.
ಹಂತವಾರು ಯಾವೆಲ್ಲ ವಿಧಾನವನ್ನು ಅನುಸರಿಸಿ ಅರ್ಥಿಕ ನೆರವು ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಬೇಕು ಎಂದು ಈ ಕೆಳಗೆ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಸಹಕರಿಸಿ.
Step-1: ಈ ಲಿಂಕ್ State pm kisan status ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಈಗಾಗಲೇ ಈ ವೆಬ್ಸೈಟ್ ಗೆ ಬಳಕೆದಾರ ನೋಂದಣಿಯನ್ನು ಮಾಡಿಕೊಂಡಿರುವವರು ಅರ್ಜಿದಾರ ರೈತನ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ ಹಾಕಿ ಕ್ಯಾಪ್ಚರ್ ಕೋಡ್ ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಬಳಕೆದಾರ ನೊಂದಣಿಯನ್ನು ಮಾಡಿಕೊಳ್ಳದವರು “Citizen Registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಫಲಾನುಭವಿ ರೈತರ ಆಧಾರ್ ನಂಬರ್ ಮತ್ತು ಅಧಾರ್ ಕಾರ್ಡನಲ್ಲಿರುವಂತೆಯೆ ಯಥಾ ಪ್ರಕಾರ ಹೆಸರನ್ನು ಹಾಕಿ “I agree” ಬಟನ್ ಮೇಲೆ ಕ್ಲಿಕ್ ಮಾಡಿ “ಸಲ್ಲಿಸಿ/submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ಈ ರೀತಿ “ಸಲ್ಲಿಸಿ/Submit” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಕ್ಯೆಗೆ 5 ಅಂಕಿಯ OTP ಬರುತ್ತದೆ ಅದನ್ನು ನಮೂದಿಸಿ ಬಳಕೆದಾರರಾಗಲು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Step-3: ಮೇಲಿನ ವಿಧಾನ ಅನುಸರಿಸಿ ಬಳಕೆದಾರ ನೊಂದಣಿ ಮಾಡಿಕೊಂಡ ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಅಂದರೆ ಫಲಾನುಭವಿ ರೈತರ ಮೊಬೈಲ್ ನಂಬರ್ ಮತ್ತು ರಚನೆ ಮಾಡಿಕೊಂಡು ಪಾಸ್ವರ್ಡ ಮತ್ತು ಅಲ್ಲೇ ಕೆಳಗೆ ಗೋಚರಿಸುವ ಕ್ಯಾಪ್ಚರ್ ಕೋಡ್ ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಅದ ಬಳಿಕ “Search” ಆಯ್ಕೆ ವಿಭಾಗದಲ್ಲಿ ಕಾಣಿಸುವ “Payment Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಯಾವ ಯಾವ ತಿಂಗಳಿನಲ್ಲಿ ರಾಜ್ಯ ಸರಕಾರದಿಂದಾ ಪಿ ಎಂ ಕಿಸಾನ್ ಯೋಜನೆಯ ಹಣ ವರ್ಗಾವಣೆ ಅಗಿದೆ ಎನ್ನುವ ಸಂಪೂರ್ಣ ವಿವರ ಗೋಚರಿಸುತ್ತದೆ.
ಈ ಪುಟದಲ್ಲಿ Beneficiary ID, ಹೆಸರು ,ಯೋಜನೆ, ಹಣ ವರ್ಗಾವಣೆಯ UTR no, Payment date, Payment mode, ಒಟ್ಟು ಎಷ್ಟು ಹಣ? ಎನ್ನುವ ವಿವರ ಗೋಚರಿಸುತ್ತದೆ.
ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?