PM kisan Status check- 9 ಕೋಟಿ ಪಿ ಎಂ ಕಿಸಾನ್ ಫಲಾನುಭವಿಗಳಿಗೆ ರೂ 2,000 ಹಣ ಬಿಡುಗಡೆ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

ಕೇಂದ್ರ ಸರಕಾರದಿಂದ ಪಿ ಎಂ ಕಿಸಾನ್ ಯೋಜನೆಯ(Pmkisan status check) 16 ನೇ ಕಂತಿನ ಹಣವನ್ನು 9 ಕೋಟಿ ಪಿ ಎಂ ಕಿಸಾನ್ ಫಲಾನುಭವಿಗಳಿಗೆ ರೂ 2,000 ಹಣ ಬಿಡುಗಡೆ ಮಾಡಲಾಗಿರುತ್ತದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಭೇಟಿ ಮಾಡದೇ ನಿಮ್ಮ ಮೊಬೈಲ್ ನಲ್ಲೇ ನಿಮಗೆ ಈ ಯೋಜನೆಯ ರೂ 2,000 ಜಮಾ ಅಗಿದಿಯಾ? ಇಲ್ಲವಾ? ಎಂದು ಕೇವಲ ಒಂದೆರಡು ಕ್ಲಿಕ್  ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಿಂದ ನೇರ ನಗದು ವರ್ಗಾವಣೆ(DBT) ಮೂಲಕ ಈ ಯೋಜನೆಯಡಿ ಅರ್ಜಿ ಸಲ್ಲಿಸಿವ ಅರ್ಹ 9 ಕೋಟಿ ರೈತರಿಗೆ ರೂ 2,000 ವರ್ಗಾಹಿಸಲಾಗಿದೆ.

ಇದನ್ನೂ ಓದಿ: Raita vidya nidhi scholarship- ಈ ವರ್ಗದ ಮಕ್ಕಳಿಗೂ ರೈತ ವಿದ್ಯಾನಿಧಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

Pmkisan status check-2024: ನಿಮ್ಮ ಖಾತೆಗೆ ರೂ 2,000 ಹಣ ಬಂದಿದಿಯಾ? ಇಲ್ಲವಾ? ಎಂದು ಚೆಕ್ ಮಾಡುವ ವಿಧಾನ:

ಪಿ ಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಕೇಂದ್ರ ಸರಕಾರದ pmkisan.gov.in ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಖಾತೆಗೆ ಹಣ ಬಂದಿದಿಯಾ? ಎಂದು ಖಚಿತಪಡಿಸಿಕೊಳ್ಳಬಹುದು.

Step-1: ಮೊದಲಿಗೆ ಈ Pmkisan status ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ನಿಮ್ಮ ಬಳಿ ಈಗಾಗಲೇ ನಿಮ್ಮ ಅರ್ಜಿಯ Registration Number ಹೊಂದಿದ್ದರೆ ನೇರವಾಗಿ “Enter Registration No” ಕಾಲಂ ನಲ್ಲಿ ನಿಮ್ಮ Registration Number ಅನ್ನು ಹಾಕಬೇಕು.

ಇದನ್ನೂ ಓದಿ: PM-kisan-2024: ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

Step-2: ಒಂದು ವೇಳೆ ಇಲ್ಲವಾದಲ್ಲಿ ಅಲ್ಲೆ ಪಕ್ಕದಲ್ಲಿ ಕಾಣುವ “KNOW YOUR REGISTRATION NUMBER” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಿ “Get mobile” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ “OTP” ಅನ್ನು ನಮೂದಿಸಿ “Get Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ರೀತಿ ಸಂಖ್ಯೆ “KA26851****” ನಿಮ್ಮ REGISTRATION NUMBER ತೋರಿಸುತ್ತದೆ. ಇದನ್ನು ಒಂದು ಕಡೆ ಬರೆದಿಟ್ಟುಕೊಳ್ಳಬೇಕು.

Step-3: ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಪಿ ಎಂ ಕಿಸಾನ್ ಅರ್ಜಿಯ REGISTRATION NUMBER ಅನ್ನು ಪಡೆದುಕೊಂಡ ಬಳಿಕ ಈ ಲಿಂಕ್ Pmkisan status check ಮೇಲೆ ಕ್ಲಿಕ್ ಮಾಡಿ ನಿಮ್ಮ ಪಿ ಎಂ ಕಿಸಾನ್ REGISTRATION NUMBER ಅನ್ನು Enter Registration No. ಕಾಲಂ ನಲ್ಲಿ ಹಾಕಿ ಪಕ್ಕದಲ್ಲಿರುವ ಕ್ಯಾಪ್ಚ(Captcha code) ಅನ್ನು ನಮೂದಿಸಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Horticulture training- 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ! ರೂ 1,750 ಮಾಸಿಕ ಶಿಷ್ಯವೇತನ.

Step-4: “Get OTP” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ 4 ಅಂಕಿಯ OTP ಬರುತ್ತದೆ ಅದನ್ನು ನಮೂದಿಸಿ “Get Data” ಬಟನ್ ಮೇಲೆ ಮಾಡಿದರೆ ನಿಮಗೆ ಹಣ  ಜಮಾ ಅಗಿರುವ ವಿವರ ತೋರಿಸುತ್ತದೆ.

ವಿಶೇಷ ಸೂಚನೆ: ಇಲ್ಲಿ FTO processed:- “Yes” ಎಂದು ತೋರಿಸಿ Payment Status : Waiting for approval by state ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಅಗಿದೆ ಎಂದು ಅರ್ಥ ಇನ್ನು 2-3 ದಿನದ ಒಳಗಾಗಿ ನಿಮಗೆ ಹಣ ಸಂದಾಯವಾಗುತ್ತದೆ.

FTO processed:- “No” ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಅಗಿಲ್ಲವೆಂದು.

ಇದನ್ನೂ ಓದಿ: Senior citizen bus pass- ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!