ರೈತರು ಕೇಂದ್ರ ಸರಕಾರದ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(pmkisan status check-2024) ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಇಲ್ಲಿಯವರೆಗೆ ನಿಮಗೆ ಎಷ್ಟು ಕಂತು ರೂ 2,000/- ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ಚೆಕ್ ಮಾಡಿಕೊಳ್ಳಬಹುದು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣವನ್ನು 18 ಜೂನ್ 2024 ರಂದು ರೈತರ ಖಾತೆಗೆ ವರ್ಗಾವಣೆ ಮಾಡಲು ಕೇಂದ್ರ ಕೃಷಿ ಇಲಾಖೆಯಿಂದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ನೇರ ನಗದು ವರ್ಗಾವಣೆ(DBT amount) ಮೂಲಕ ದೇಶ 9.3 ಕೋಟಿ ರೈತರ ಖಾತೆ ಈ ಯೋಜನೆಯ ಅರ್ಥಿಕ ನೆರವು ದೊರೆಯಲ್ಲಿದೆ.
ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ಮೂಲಕ ಪಿ ಎಂ ಕಿಸಾನ್ ಪೋರ್ಟಲ್ ಅನ್ನು ಪ್ರವೇಶ ಮಾಡಿ ಯಾವ ಯಾವ ತಿಂಗಳಲ್ಲಿ ಅರ್ಥಿಕ ನೆರವು ಜಮಾ ಅಗಿದೆ? ಎಷ್ಟು ಕಂತಿನ ಹಣ ಸಂದಾಯವಾಗಿದೆ? ಯು.ಟಿ.ಆರ್ ನಂಬರ್, ಬ್ಯಾಂಕ್ ಖಾತೆ ವಿವರ ಇತ್ಯಾದಿ ಮಾಹಿತಿಯನ್ನು ಸಹ ತಿಳಿಯಬಹುದು.
ಇದನ್ನೂ ಓದಿ: RTC crop details-ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!
PM-kisan status check-2024: ಇಲ್ಲಿಯವರೆಗೆ ಎಷ್ಟು ಕಂತು ಪಿ ಎಂ ಕಿಸಾನ್ ಹಣ ಬಂದಿದೆ ಎಂದು ಹೇಗೆ ಚೆಕ್ ಮಾಡುವುದು?
Step-1: ಮೊದಲಿಗೆ ಈ pmkisan status check ಲಿಂಕ್ ಮೇಲೆ ಕ್ಲಿಕ್ ಮಾಡಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ನಂತರ ಮುಖಪುಟದಲ್ಲಿ ಕಾಣುವ “Know your status” ಬಟನ್ ಮೇಲೆ ಕ್ಲಿಕ್ ಮಾಡಿ “Know your registration no” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Get mobile” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Bele nashta parihara-2024: ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ 3,000/- ಜೀವನೋಪಾಯ ನಷ್ಟ ಪರಿಹಾರ!
ಮೊದಲ ಬಾರಿಗೆ ನಿಮಗೆ ಒಟಿಪಿ ಬರದೇ ಇದ ಪಕ್ಷದಲ್ಲಿ ಪುನಃ ಮತ್ತೊಮ್ಮೆ “Resend OTP” ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿಯನ್ನು ಪಡೆಯಬಹುದು, ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ಅನ್ನು “Enter OTP” ಕಾಲಂ ನಲ್ಲಿ ಹಾಕಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಿ ಎಂ ಕಿಸಾನ್ ಅರ್ಜಿಯ ಸಂಖ್ಯೆ ತೋರಿಸುತ್ತದೆ ಅದನ್ನು ಒಂದು ಕಡೆ ಬರೆದುಕೊಳ್ಳಬೇಕು.
Step-3: ಮೇಲಿನ ಹಂತವನ್ನು ಅನುಸರಿಸಿ ಅರ್ಜಿಯ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡು ನಂತರ “BACK” ಬಟನ್ ಅಥವಾ kisan samman status check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆಯನ್ನು(Registration No) ಹಾಕಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಾಲ್ಕು ಅಂಕಿನ ಒಟಿಪಿ ಬರುತ್ತದೆ ಅದನ್ನು ಹಾಕಿ “Get Data” ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ವೈಯಕ್ತಿಕ ವಿವರ, ಕಂತಿನವಾರು ಹಣ ಜಮಾ ದಿನಾಂಕ, ಬ್ಯಾಂಕ್ ಖಾತೆಗೆ ಕೊನೆಯ ನಾಲ್ಕು ಅಕೌಂಟ್ ನಂಬರ್ ಸಂಪೂರ್ಣ ವಿವರ ತೋರಿಸುತ್ತದೆ.
ಗಮನಿಸಿ: “Installments Details” ಆಯ್ಕೆಯಲ್ಲಿ ಕಂತನ್ನು ಆಯ್ಕೆ ಮಾಡಿಕೊಂಡು ಕಂತಿನವಾರು ವಿವರವನ್ನು ಪಡೆಯಬೇಕು.