ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ(PMSBY Insurance) ಒಂದು ವರ್ಷಕ್ಕೆ 12 ರೂ ಪ್ರೀಮಿಯಂ ಮೊತ್ತ ಕಟ್ಟಿದರೆ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ವಿಮೆ ಪರಿಹಾರ, ಸಾವು ಅಥವಾ ಪೂರ್ಣ ಅಂಗವೈಕಲ್ಯಕ್ಕೆ ರೂ.2 ಲಕ್ಷ ವಿಮೆಯನ್ನು ಸೌಲಭ್ಯ ಪಡೆಯಬವುದಾಗಿದೆ.
ಈ ವಿಮಾ ಯೋಜನೆಯ ಮೂಲಕ ಜನರಿಗೆ ಸಂಪೂರ್ಣ ಅಂಗವೈಕಲ್ಯ ಅಥವಾ ಅಪಘಾತದಿಂದ ಮರಣ ಹೊಂದಿದ ಸಂದರ್ಭದಲ್ಲಿ ಅಂತವರಿಗೆ ಅರ್ಥಿಕವಾಗಿ ಸಹಾಯ ಮಾಡುವ ದೇಸೆಯಲ್ಲಿ ಕೇಂದ್ರ ಸರಕಾರವು ಅತೀ ಕಡಿಮೆ ಪ್ರಿಮಿಯಂ ಮೊತ್ತದಲ್ಲಿ ವಿಮಾ ಯೋಜನೆಯನ್ನು ಅನುಷ್ಥಾನ ಮಾಡಿಕೊಂಡು ಬರುತ್ತಿದೆ.
ಈ ಯೋಜನೆಯ(PMSBY Insurance Scheme) ಕುರಿತು ಬಹಳಷ್ಟು ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಇಂದು ಈ ವಿಮಾ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಒಂದೊಮ್ಮೆ ಅಪಘಾತದಿಂದ ವ್ಯಕ್ತಿ ಮರಣ ಅಥವಾ ಸಂಪೂರ್ಣ ಅಂಗವೈಕಲ್ಯ ಅದರೆ ವಿಮೆ ಕ್ಲೈಮ್ ಮಾಡಲು ಎಲ್ಲಿ ಅರ್ಜಿ ಸಲ್ಲಿಸಬೇಕು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಎಲ್ಲರಿಗೂ ಈ ಯೋಜನೆಯ ಕುರಿತು ತಿಳಿಯುವಂತಾಗಲಿ.
ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?
ಯಾರು ಅರ್ಜಿ ಸಲ್ಲಿಸಬವುದು?
ಈ ವಿಮಾ ಯೋಜನೆಯಡಿ 18 ರಿಂದ 70 ವರ್ಷದ ನಡುವಿನ ವಯೋಮಾನದ ಬ್ಯಾಂಕ್ ಖಾತೆ ಹೊಂದಿರುವ ಎಲ್ಲಾ ಜನರು ಅರ್ಜಿ ಸಲ್ಲಿಸಬವುದು.
ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಪ್ರೀಮಿಯಂ ಮೊತ್ತ ಎಷ್ಟು?
ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರು ನಿಮ್ಮ ಹತ್ತಿರ ಪೋಟ್ ಅಪೀಸ್ ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ರಾಷ್ಟ್ರಿಯ ಬ್ಯಾಂಕ್ ನ ಶಾಖೆಯನ್ನು ಪ್ರತಿ ವರ್ಷ ಜೂನ 1 ನೇ ತಾರೀಕಿನ ಮುಂಚಿತವಾಗಿ ಹೋಗಿ ಅರ್ಜಿ ಸಲ್ಲಿಸಬೇಕು.
ನಿಮ್ಮ ಖಾತೆಯಿಂದ 12 ರೂ ಪ್ರೀಮಿಯಂ ಮೊತ್ತ ಕಟ್ಟಾಗುತ್ತದೆ. ಪ್ರತಿ ವರ್ಷ ಇದೆ ರೀತಿ ರಿನಿವಲ್ ಮಾಡಿಸುತ್ತಿರಬೇಕು.
ನಿಮ್ಮ ಮೊಬೈಲ್ ನಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ(PMSBY) ಅರ್ಜಿ ನಮೂನೆ ಡೌನ್ಲೋಡ್ ಮಾಡಬವುದು!
ಈ ಲಿಂಕ್ ಮೇಲೆ ಒತ್ತಿ https://jansuraksha.gov.in/Forms-PMSBY.aspx ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬವುದು.
ವಿಮೆ ಕ್ಲಿಮ್ ಮಾಡಲು ಅರ್ಜಿ ನಮೂನೆ ಡೌನ್ಲೋಡ್ ಮಾಡುವ ವಿಧಾನ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಜಿದಾರರು ಈ ಲಿಂಕ್ https://jansuraksha.gov.in/Forms-PMSBY.aspx ಮೇಲೆ ಕ್ಲಿಕ್ ಮಾಡಿ ವಿಮಾ ಪರಿಹಾರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಒದಗಿಸಿ ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು.
ಈ ಯೋಜನೆಯಡಿ ಯಾವ ಸಂದರ್ಭದಲ್ಲಿ ವಿಮೆ ಪಡೆಯಬವುದು?
1. ಸಂಪೂರ್ಣ ಅಂಗವೈಕಲ್ಯ ಅಥವಾ ಅಪಘಾತದಿಂದ ಮರಣ ಹೊಂದಿದ ಸಂದರ್ಭದಲ್ಲಿ ಪಾವತಿಸಬೇಕಾದ ರೂ ಎರಡು ಲಕ್ಷಗಳ ಕ್ಲೈಮ್ ಮಾಡಲಾಗುತ್ತದೆ
2. ಶಾಶ್ವತ ಭಾಗಶಃ ಅಂಗವೈಕಲ್ಯ ಸಂದರ್ಭದಲ್ಲಿ ಪಾವತಿಸಬೇಕಾದ ರೂ ಒಂದು ಲಕ್ಷದ ಕ್ಲೈಮ್ ಮಾಡಲಾಗುತ್ತದೆ.
3. ಶಾಶ್ವತ ಅಂಗವೈಕಲ್ಯ ಎಂದರೆ ಈ ಕೆಳಗಿನವುಗಳಲ್ಲಿ ಯಾವುದಾದರೂ:
ಶಾಶ್ವತ ಸಂಪೂರ್ಣ ಅಂಗವೈಕಲ್ಯ ಎಂದರೆ:
A) ಎರಡೂ ಕಣ್ಣುಗಳ ಒಟ್ಟು ಮತ್ತು ಸರಿಪಡಿಸಲಾಗದ ನಷ್ಟ ಅಥವಾ ಎರಡೂ ಕೈಗಳು ಅಥವಾ ಪಾದಗಳ ಬಳಕೆಯ ನಷ್ಟ ಅಥವಾ ಒಂದು ಕಣ್ಣಿನ ದೃಷ್ಟಿ ನಷ್ಟ ಮತ್ತು ಒಂದು ಕೈ ಅಥವಾ ಪಾದದ ಬಳಕೆಯ ನಷ್ಟ .
B) ಶಾಶ್ವತ ಭಾಗಶಃ ಅಂಗವೈಕಲ್ಯ-ಒಟ್ಟು ಮತ್ತು ಸರಿಪಡಿಸಲಾಗದ ಒಂದು ಕಣ್ಣಿನ ದೃಷ್ಟಿ ನಷ್ಟ ಅಥವಾ ಒಂದು ಕೃ ಅಥವಾ ವಾದದ ಬಳಕೆಯ ನಷ್ಟ. ಎಂದು ಈ ಯೋಜನೆಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
PMSBY Yojana: ಇಲ್ಲಿಯವರೆಗೆ ಈ ಯೊಜನೆಯಡಿ ಎಷ್ಟು ವಿಮೆ ಪಾವತಿ ಮಾಡಲಾಗಿದೆ ಎಂದು ತಿಳಿಯುವ ವಿಧಾನ:
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://dfs.dashboard.nic.in/DashboardF.aspx ಕೇಂದ್ರ ಸರಕಾರದ ಹಣಕಾಸು ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ಈ ಯೋಜನೆಯ ವಿಮಾ ಅವಧಿ, ವರ್ಷವನ್ನು ಆಯ್ಕೆ ಮಾಡಿಕೊಂಡು “Draw Graph” ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯ ಕುರಿತು ಇಲ್ಲಿಯವರೆಗೆ ಎಷ್ಟು ಜನರಿಗೆ ಮತ್ತು ಒಟ್ಟು ಎಷ್ಟು ಕೋಟಿ ವಿಮಾ ಪರಿಹಾರ ಪಾವತಿ ಮಾಡಲಾಗಿದೆ ಎಂದು ಅಂಕಿ-ಅಂಶದ ಮಾಹಿತಿ ತೋರಿಸುತ್ತದೆ.