Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

December 8, 2024 | Siddesh
Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!
Share Now:

ಕಂದಾಯ ಇಲಾಖೆಯಿಂದ ರೈತರ ಜಮೀನಿನ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮವನ್ನು ಕೈಗೊಳ್ಳಲು ಸಿದ್ದತೆಯನ್ನು ನಡೆಸಿದ್ದು ಈ ಕುರಿತು ಪ್ರಕಟಿಸಿರುವ ಮಾಹಿತಿ ವಿವರ ಮತ್ತು ಪೋಡಿ(Podi)ಎಂದರೇನು? ಪೋಡಿ ಏಕೆ ಮಾಡಿಸಿಕೊಳ್ಳಬೇಕು? ಎನ್ನುವುದರ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರತಿ ವರ್ಷವು ಸಹ ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕಾರ್ಯವನ್ನು ಮಾಡಲಾಗುತ್ತದೆ ಅದರೆ ಅರ್ಜಿ ಸಲ್ಲಿಸಿ ಸುಮಾರು ದಿನ ಕಳೆದರು ರೈತರ ಅರ್ಜಿಯ ವಿಲೇವಾರಿ ಅಗುವುದೇ ಇಲ್ಲ ಎಂದು ಅನೇಕ ರೈತರು ದೂರುತ್ತಾರೆ ಇದನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯಿಂದ ನೂತನ ಕ್ರಮವನ್ನು ಅನುಷ್ಥಾನಗೊಳಿಸುತ್ತಿದೆ.

ಇದನ್ನೂ ಓದಿ: Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ಪೋಡಿ ದುರಸ್ತಿ ಕುರಿತು ಕಂದಾಯ ಇಲಾಖೆಯಿಂದ ಹಂಚಿಕೊಂಡಿರುವ ಮಾಹಿತಿಯನ್ನು ಈ ಕೆಳಗೆ ತಿಳಿಸಿದ್ದು ಇದರ ಜೊತೆಗೆ ಪೋಡಿ ಎಂದರೇನು? ಪೋಡಿಯನ್ನು ಸರಿಪಡಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳೇನು? ಪೋಡಿಯನ್ನು ಏಕೆ ಮಾಡಿಸಿಕೊಳ್ಳಬೇಕು? ಇತ್ಯಾದಿ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Podi durasti abhiyana-ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಅಭಿಯಾನ:

ರಾಜ್ಯಾದ್ಯಂತ 30 ವರ್ಷಗಳಿಂದ ಹಾಗೇಯೆ ಉಳಿದಿಕೊಂಡಿರುವ ರೈತರಿಗೆ ಮಂಜೂರಾದ ಸರಕಾರಿ ಜಮೀನುಗಳು ಪೋಡಿ ಆಗದೆ ಲಕ್ಷಾಂತರ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪೋಡಿ ದರಸ್ತಿ ಅಭಿಯಾನವನ್ನು ಪ್ರಾರಂಭಿಸಿದೆ.

ಡಿಸೆಂಬರ್ ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಸೂಚನೆ ನೀಡಲಾಗಿದ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!

krishna bairegouda

ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ತಹಶೀಲ್ದಾರ್ ಗಳೊಂದಿಗೆ ಬಗರ್ ಹುಕುಂ ಮತ್ತು ನಮೂನೆ 1ರಿಂದ 5ರ ದುರಸ್ತಿ ಕಾರ್ಯಗಳ ಪ್ರಗತಿ ಕುರಿತಾಗಿ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದ್ದಾರೆ.

ಇದುವರೆಗೆ ಪೋಡಿ ದುರಸ್ತಿ ಅಭಿಯಾನದಡಿ 29,778 ಸರ್ವೇ ನಂಬರ್ ಗಳಿಗೆ 1ರಿಂದ 5ಕಡತ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 11,436 ರೈತರ ಜಮೀನು ಸರ್ವೆಗೆ ಆದೇಶಿಸಲಾಗಿದೆ. ಈ ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಆದೇಶಿಸಲು ಕ್ರಮ ಕೈಗೊಳ್ಳಬೇಕು. ದಶಕಗಳಿಂದ ಬಾಕಿ ಇದ್ದ ರೈತರ ಪೋಡಿ ದುರಸ್ತಿ ಸಮಸ್ಯೆ ಬಗೆಹರಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಹೊಸ ಆದೇಶ ಪ್ರಕಟ!

What is podi- ಪೋಡಿ ಎಂದರೇನು?

ಒಂದು ಜಮೀನಿನ ಸರ್ವೆ ನಂಬರಿನ ಪಹಣಿಯಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರುಗಳು ಒಂದೇ ಸರ್ವೆ ನಂಬರಿನಲ್ಲಿ ಇದ್ದರೆ ಅದನ್ನು ಬೇರ್ಪಡಿಸಿ ಬಹುಮಾಲೀಕತ್ವದಿಂದ ಏಕ ಮಾಲೀಕತ್ವಕ್ಕೆ ಪರಿವರ್ತನೆ ಮಾಡಿ ಹಿಸ್ಸಾ ಸರ್ವೆ ನಂಬರ್ ನೀಡಿ ಮಾಲೀಕರನ್ನು ಪ್ರತ್ಯೇಕಿಸಿ ಒಂದು ಪಹಣಿಯಲ್ಲಿ ಒಬ್ಬರ ಹೆಸರು ಬರುವ ಹಾಗೆ ಮಾಡುವುದಕ್ಕೆ ಪೋಡಿ ಎಂದು ಕರೆಯುತ್ತಾರೆ.

ಪೋಡಿ ಏಕೆ ಮಾಡಿಸಬೇಕು? ಇದರಿಂದ ಆಗುವ ಪ್ರಯೋಜನಗಳು:

ಜಮೀನಿನ ಪಹಣಿಯಲ್ಲಿ ಬಹು ಮಾಲೀಕತವವಿದ್ದಲ್ಲಿ ಬ್ಯಾಂಕ್ ಮೂಲಕ ಸಾಲ ಪಡೆಯುವ ಸಮಯದಲ್ಲಿ ಮತ್ತು ಸರಕಾರದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆಯಲು ಒಪ್ಪಿಗೆ ಪತ್ರ ನೀಡಬೇಕಾಗುತ್ತದೆ ಅಲ್ಲದೇ ನಿಮ್ಮ ಜಮೀನಿನ ಜಂಟಿ ಮಾಲೀಕರು ಇದಕ್ಕೆ ಒಪ್ಪದೇ ಇದ್ದಲ್ಲಿ ಸವಲತ್ತು ಪಡೆಯಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದ ಪೋಡಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!

Revenue department-ದೊಡ್ಡ ಸಂಖ್ಯೆಯ ರೈತರು ಪೋಡಿ ಮಾಡಿಸದೇ ಇರಲು ಕಾರಣಗಳು ಹೀಗಿವೆ:

ರಾಜ್ಯದಲ್ಲಿ ಇನ್ನು ಅನೇಕ ಜನರು ಪೋಡಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣಗಳ ಪಟ್ಟಿ ಈ ರೀತಿ ಇದೆ.

ಅವಿಭಕ್ತ ಕುಟುಂಬಗಳು ಜಮೀನನ್ನು ವಿಭಾಗ ಮಾಡಿಕೊಂಡ ಬಳಿಕ ಜಮೀನಿನ ಖಾತಾಗಳು ಇನ್ನೂ ಸಹ ಜಂಟಿಯಾಗಿರುತ್ತವೆ.

ಸಹೋದರರ ನಡುವಿನ ಜಮೀನಿನ ವ್ಯಾಜ್ಯ ಹಾಗೂ ಸೂಕ್ತ ದಾಖಲೆಗಳು ಇಲ್ಲದಿರುವುದು.

Podi application- ಪೋಡಿ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ತಮ್ಮ ಹೋಬಳಿಯ ಕಂದಾಯ ಇಲಾಖೆಯ ನಾಡಕಚೇರಿಯನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ/ಆಡಳಿತಾಧಿಕಾರಿ(VA) ಅವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಕೆ ಕುರಿತು ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: