Poultry farm-ಕೋಳಿ ಸಾಕಾಣಿಕೆಗೆ ಯಾವೆಲ್ಲ ಪರವಾನಗಿಯನ್ನು ಪಡೆಯಬೇಕು? ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬವುದು?

Poultry farm: ಗ್ರಾಮೀಣ ಭಾಗದಲ್ಲಿ ಕೋಳಿ ಪಾರ್ಮ್ ಮಾಡಲು ಆಸಕ್ತಿ ಹೊಂದಿರುವವರು ಮೊದಲಿಗೆ ಯಾವೆಲ್ಲ ಅನುಮತಿ/ಪರವಾನಗಿಗಳನ್ನು ತೆಗೆದುಕೊಳ್ಳಬೇಖಾಗುತ್ತದೆ? ಮತ್ತು ಕೋಳಿ ಪಾರ್ಮ್ ಮಾಡಲು ಯಾವೆಲ್ಲ ಸರಕಾರಿ ಯೋಜನೆಗಳು ಲಭ್ಯವಿವೆ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. 

ಪ್ರಸ್ತುತ ಸನ್ನಿವೇಶದಲ್ಲಿ ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆ(poultry farm) , ಹೈನುಗಾರಿಕೆ, ಮೀನುಗಾರಿಕೆ ಯಂತಹ ಉಪಕಸುಬುಗಳಲ್ಲಿ ತೊಡಗಿಕೊಂಡರೆ ಮಾತ್ರ ರೈತರು ಅರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ.

ಬದಲಾಗುತ್ತಿರುವ ಹವಾಮಾನ ,ಮಳೆ ಕೊರತೆ, ಬೆಳೆಗಳಿಗೆ ರೋಗ-ಕೀಟ ಭಾದೆ ಸಂದರ್ಭದಲ್ಲಿ ಕೇವಲ ಏಕ ಬೆಳೆ/ ಏಕ ಮೂಲದ ಆದಾಯವನ್ನು ನೆಚ್ಚಿಕೊಳ್ಳುವ ಬದಲಿಗೆ ಕೃಷಿ ಪೂರಕ ಉಪಕಸುಬುಗಳನ್ನು ಮಾಡುವುದು ಅತ್ಯಗತ್ಯವಾಗಿದೆ

ಇದಕ್ಕೆ ಪೂರಕವಾಗಿ ಇಂದು ಈ ಅಂಕಣದಲ್ಲಿ ಗ್ರಾಮೀಣ ಭಾಗದಲ್ಲಿ ಕೋಳಿ ಪಾರ್ಮ್ ಮಾಡಲು ಆಸಕ್ತಿ ಹೊಂದಿರುವವರು ಮೊದಲಿಗೆ ಯಾವೆಲ್ಲ ಅನುಮತಿ/ಪರವಾನಗಿಗಳನ್ನು ತೆಗೆದುಕೊಳ್ಳಬೇಖಾಗುತ್ತದೆ? ಮತ್ತು ಕೋಳಿ ಪಾರ್ಮ್ ಮಾಡಲು ಯಾವೆಲ್ಲ ಸರಕಾರಿ ಯೋಜನೆಗಳು ಲಭ್ಯವಿವೆ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. 

ಇದನ್ನೂ ಓದಿ: Ganga kalyana yojana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 3 ದಿನ ಮಾತ್ರ ಬಾಕಿ!

(1) ಗ್ರಾಮಾಂತರ ಪ್ರದೇಶದಲ್ಲಿ ಕೋಳಿ ಫಾರಂ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯಿಂದ ಕಟ್ಟಡ ಪರವಾನಿಗೆ ನೀಡಲು ಜಮೀನಿನ ಭೂಪರಿವರ್ತನೆ ಅವಶ್ಯಕತೆ ಇದೆಯೇ?

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಪ್ರಕರಣ 2(ಎ)(ಡಿ) ಮತ್ತು ಪ್ರಕರಣ 81 ರಡಿ ಕೋಳಿ ಫಾರಂಗಳು (ಕೋಳಿ ಸಾಕಾಣಿಕೆ) ಕೃಷಿ ಕಸುಬಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶದ ವ್ಯಾಪ್ತಿಗೆ ಒಳಪಡುವ ಕೋಳಿ ಫಾರಂ ಕಟ್ಟಡವನ್ನು ನಿರ್ಮಿಸಲು ಭೂ ಪರಿವರ್ತನೆ ಅಗತ್ಯವಿರುವುದಿಲ್ಲ.

(2) ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಾದ ಇನ್ನಿತರ ದಾಖಲಾತಿಗಳು ಯಾವುವು?

ಕಟ್ಟಡ ಪರವಾನಿಗೆ ಪಡೆಯಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್.ಓ.ಸಿ, ತಹಶೀಲ್ದಾರ
ರವರಿಂದ ನಿರಾಕ್ಷೇಪಣಾ ಪತ್ರ ಮತ್ತು ಪಹಣಿ ನೀಡಬೇಕಾಗಿರುತ್ತದೆ.

(3) ಕೋಳಿ ಫಾರಂಗೆ ಸಂಬಂಧಪಟ್ಟಂತೆ ಉದ್ಯಮ ಪರವಾನಿಗೆ ನೀಡುವ ಪ್ರಾಧಿಕಾರ ಯಾವುವು?

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64 ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ವಿಧವಾದ ಕಟ್ಟಡವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅನುಮತಿಯನ್ನು ಪಡೆಯಬೇಕಾಗಿರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಸಂಗೋಪನೆ ಇಲಾಖೆಯ ವಿಧಿಸುವ ಷರತ್ತುಗಳನ್ನು ಪಾಲಿಸುವ ನಿಬಂಧನೆಗೊಳಪಟ್ಟು ಗ್ರಾಮ ಪಂಚಾಯತಿಯ ಪರವಾನಿಗೆ ನೀಡಲು ಸಕ್ಷಮ ಪ್ರಾಧಿಕಾರವಾಗಿರುತ್ತದೆ.

ಇದನ್ನೂ ಓದಿ: Bara parihara-2023: ರಾಜ್ಯ ಸರಕಾರದಿಂದ ಬರ ಪರಿಹಾರದ ಮೊತ್ತ ನಿಗದಿ! ಒಂದು ಎಕರೆಗೆ ಎಷ್ಟು ಸಿಗಲಿದೆ?

(4) ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹಾಗೂ ಗ್ರಾಮ ಪಂಚಾಯತಿಗೆ ಒದಗಿಸಬೇಕಾದ ದಾಖಲೆಗಳು ಯಾವುವು?

ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಹಶೀಲ್ದಾರ ರವರಿಂದ ನಿರಾಕ್ಷೇಪಣಾ ಪತ್ರ, ಪಹಣಿ, ಕಟ್ಟಡ ಅನುಮತಿ ಪತ್ರ ಮತ್ತು ಕಂದಾಯ ರಶೀದಿ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

Poutry farm schemes- ಕೋಳಿ ಸಾಕಾಣಿಕೆಗೆ ಸರಕಾರಿ ಯೋಜನೆಗಳು:

(1)ಪಶು ಕಿಸಾನ್ ಕ್ರೇಡಿಟ್ ಕಾರ್ಡ ಯೋಜನೆ:

ಈ ಯೋಜನೆಯಡಿ ಸಣ್ಣ ಪ್ರಮಾಣದ ಕೋಳಿ ಸಾಕಾಣಿಕೆಯನ್ನು ಆರಂಭಿಸಲು ಪಶು ಸಂಗೋಪನೆ ಇಲಾಖೆಯ ಪಶು ಕಿಸಾನ್ ಕ್ರೇಡಿಟ್ ಕಾರ್ಡ ಯೋಜನೆ ಅಡಿ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲ್ಲೂಕಿನ ಪಶು ಸಂಗೋಪನೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!

(2)National livestock mission 

ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆಗೆ National livestock mission ಯೋಜನೆಯಡಿ ಶೇ 50 ರಷ್ಟು ಬ್ಯಾಂಕ್ ಸಾಲಕ್ಕೆ ಸಹಾಯಧನ ಪಡೆಯಬವುದಾಗಿದ್ದು ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here 

(3)AgriClinic or Agri Business(ACABC) 

ಇದಲ್ಲದೇ ಯುವಕರು/ ಕೃಷಿ ಪದವೀಧರರು/ ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಕೋಳಿ ಸಾಕಾಣಿಕೆಯನ್ನು ಆರಂಭಿಸಲು ಆಸಕ್ತಿ ಹೊಂದಿದಲ್ಲಿ  AgriClinic or Agri Business(ACABC) ಯೋಜನೆಯಡಿ 2 ತಿಂಗಳ ತರಬೇತಿ ಪಡೆದು ಶೇ 36 ರಿಂದ 44% ವರೆಗೆ ಬ್ಯಾಂಕ್ ಸಾಲಕ್ಕೆ ಸಹಾಯಧನ ಪಡೆಯಬವುದಾಗಿದೆ. ಹೆಚ್ಚಿನ ಸಹಾಯಧನದಲ್ಲಿ ಬ್ಯಾಂಕ್ ಸಾಲ ಸಹಿತ ಕೋಳಿ ಸಾಕಾಣಿಕೆಯನ್ನು ಮಾಡಬವುದು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಭೇಟಿ ಮಾಡಿ: https://www.agriclinics.net/

ನಮ್ಮ ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಕುರಿತು ತರಬೇತಿ ನೀಡುವ ಕೇಂದ್ರಗಳ ವಿವರ ಹೀಗಿದೆ: 

  • ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ದಕ್ಷಿಣ ಕನ್ನಡ.
  • ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಉತ್ತರ ಕನ್ನಡ.
  • ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ವಿಜಯಪುರ.
  • ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ರಾಯಚೂರು.
  • ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಕೋಲಾರ.              

ಕೋಳಿ ಸಾಕಾಣಿಕೆ ಪಠ್ಯಕ್ರಮ ತಿಳಿಯಲು ಇಲ್ಲಿ ಕ್ಲಿಕ್: click here
ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277100200