- Advertisment -
HomeGovt SchemesPouthi Khata-ಕಂದಾಯ ಇಲಾಖೆಯಿಂದ ಪೌತಿ ಖಾತೆ ಅಭಿಯಾನ! ಇಲ್ಲಿದೆ ಸಂಪೂರ್ಣ ಮಾಹಿತಿ!

Pouthi Khata-ಕಂದಾಯ ಇಲಾಖೆಯಿಂದ ಪೌತಿ ಖಾತೆ ಅಭಿಯಾನ! ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಮೂಲಕ ಪೌತಿ ಖಾತೆ(Pouthi Khata) ಅಭಿಯಾನವನ್ನು ಆರಂಭಿಸಲಾಗಿದ್ದು, ಪ್ರಸ್ತುತ ವಾರಸುದಾರರ ಹೆಸರಿಗೆ ಕೃಷಿ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಜಮೀನುಗಳು(RTC) ಮಾಲೀಕತ್ವವು ಇನ್ನು ಸಹ ದೊಡ್ಡ ಸಂಖ್ಯೆಯಲ್ಲಿ ಮರಣ ಹೊಂದಿದವರ ಹೆಸರಿನಲ್ಲೇ ಮುಂದುವರೆಯುತ್ತಿದ್ದು ಈ ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರಿಗೆ ವರ್ಗಾವಣೆ ಮಾಡಲು ಸರಕಾರದಿಂದ ಪೌತಿ ಖಾತೆ ಅಭಿಯಾನವನ್ನು ಆರಂಭಿಸಲು ನಿರ್ಧಾರ ಕೈಗೊಂಡಿದೆ. ಈ ಹಿಂದೆ ಈಗಾಗಲೇ ಕಂದಾಯ ಇಲಾಖೆಯಿಂದ ಪೌತಿ ಖಾತೆ ಅಭಿಯಾನವನ್ನು ನಡೆಸಲಾಗಿತ್ತಾದರು ಸಹ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಾಗಿರಲ್ಲಿ ಈ ಕಾರಣದಿಂದ ಪುನಃ ಮರು ಆರಂಭಿಸಲಾಗಿದೆ.

ಪೌತಿ ಖಾತೆ ಎಂದರೇನು? ಪೌತಿ ಖಾತೆ ಅಭಿಯಾನ ಎಂದರೇನು? ಪೌತಿ ಖಾತೆ ಅಭಿಯಾನ(Pouthi Khata Abhiyana) ಏಕೆ ಮಾಡಲಾಗುತ್ತದೆ? ಪೌತಿ ಖಾತೆ ಅಭಿಯಾನವನ್ನು ಹೇಗೆ ಮಾಡಲಾಗುತ್ತದೆ? ರೈತರು ಪೌತಿ ಖಾತೆ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ration Card-ಆಹಾರ ಇಲಾಖೆಯಿಂದ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ!

What is Pouthi Khata-ಪೌತಿ ಖಾತೆ ಎಂದರೇನು?

ಮರಣ ಹೊಂದಿದವರ ಹೆಸರಿನಲ್ಲಿರುವ ಕೃಷಿ ಜಮೀನನ್ನು ಆ ಜಮೀನಿನ ವಾರಸುದಾರರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ.

What is Pouthi Khata Abhiyana-ಪೌತಿ ಖಾತೆ ಅಭಿಯಾನ ಎಂದರೇನು? ಏಕೆ ಮಾಡುತ್ತಾರೆ?

ಕಂದಾಯ ಇಲಾಖೆಯ ಅಧಿಕಾರಿ ತಂಡವು ಹಳ್ಳಿ ಮಟ್ಟದಲ್ಲಿ ಅರ್ಹ ನಾಗರಿಕರ ಮನೆ ಬಾಗಿಲಿಗೆ ಭೇಟಿ ಮಾಡಿ ಖುದ್ದು ಸ್ಥಳ ಪರೀಶಿಲನೆ ನಡೆಸಿ ಪೌತಿ ಖಾತೆ ಅಭಿಯಾನದ ಮೂಲಕ ಜಮೀನಿನ ವಾರಸುದಾರರ ಹೆಸರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಡುವುದರಿಂದ ನಿಖರ ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಲು ಈ ಅಭಿಯಾನ ಸಹಕಾರಿಯಾಗಲಿದೆ.

ಪೌತಿ ಖಾತೆ ಅಭಿಯಾನವನ್ನು ಆರಂಭಿಸಲು ಮುಖ್ಯ ಕಾರಣ ಏನೆಂದರೆ ಇನ್ನು ಸಹ ಹಲವು ಜಿಲ್ಲೆಗಳಲ್ಲಿ ಕೃಷಿ ಜಮೀನುಗಳ ಮಾಲೀಕತ್ವವು ಮರಣ ಹೊಂದಿದವರ ಹೆಸರಿನಲ್ಲೇ ಇದ್ದು ಇದರಿಂದ ನಾಗರಿಕರಿಗೆ ಸರಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದೇ ಇರುವುದು ಹಾಗೂ ಪ್ರಸ್ತುತ ವಾರಸುದಾರರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡಲು ಈ ಅಭಿಯಾನವನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: Aadhar card correction- ಆಧಾರ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಗೆ ಭರ್ಜರಿ ಸಿಹಿ ಸುದ್ದಿ!

Pouthi Khata

Pouthi Khata Abhiyana-ಪೌತಿ ಖಾತೆ ಅಭಿಯಾನವನ್ನು ಹೇಗೆ ಮಾಡಲಾಗುತ್ತದೆ?

ಪೌತಿ ಖಾತೆ ಅಭಿಯಾನವನ್ನು ಆರಂಭಿಸಲು ಇದಕ್ಕಾಗಿಯೇ ಪ್ರತೇಕ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು, ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಮನೆ ಮನೆಗೆ ಭೇಟಿ ಮಾಡಿ ಜಮೀನಿನ ವಾರಸುದಾರರ ನಿಖರ ಮಾಹಿತಿಯನ್ನು ಸಂಗ್ರಹಣೆ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಕುಟುಂಬದ ವಂಶವೃಕ್ಷವನ್ನು ಆಧಾರವಾಗಿ ಬಳಕೆ ಮಾಡಿಕೊಂಡು ಆಧಾರ್ ಕಾರ್ಡ ವಿವರ ದಾಖಲಿಸಿ OTP ದಾಖಲಿಸಿ ಇನ್ನಿತರೆ ಅರ್ಜಿ ವಿಲೇವಾರಿ ಕಾರ್ಯಗಳನ್ನು ನಡೆಸಿ ಖಾತೆ ವರ್ಗಾವಣೆ ಪಕ್ರಿಯನ್ನು ಮಾಡಲಾಗುತ್ತದೆ.

ಒಂದೊಮ್ಮೆ ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಬಾರದೇ ಪೌತಿ ಖಾತೆಗೆ ಒಪ್ಪಿಗೆ ಸೂಚನೆ ನೀಡದೇ ಇದ್ದಲ್ಲಿ ಕೋರ್ಟಗೆ ಹೋಗಬಹುದು.

ಇದನ್ನೂ ಓದಿ: PM-Kisan App: ಇ-ಕೆವೈಸಿ ಸ್ಟೇಟಸ್ ಮತ್ತು ಹಣ ಜಮಾ ವಿವರ ತಿಳಿಯಲು! ಪಿ ಎಂ ಕಿಸಾನ್ ಮೊಬೈಲ್ ಆಪ್!

Pouthi Khata benefits-ಪೌತಿ ಖಾತೆ ಅಭಿಯಾನದಿಂದ ರೈತರಿಗೆ ಆಗುವ ಪ್ರಯೋಜನಗಳು:

ಪೌತಿ ಖಾತೆ ಅಭಿಯಾನದಲ್ಲಿ ರೈತರು ತಮ್ಮ ಕೃಷಿ ಜಮೀನಿನ ಖಾತೆಗಳನ್ನು ಪ್ರಸ್ತುತ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದರಿಂದ ಅರ್ಜಿ ಸಲ್ಲಿಸಲು ನಗರ ಅಥವಾ ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ತಾಲ್ಲೂಕು ಅಪೀಸುಗಳಿಗೆ ಅಲೆದಾಟ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು.

ಇದಲ್ಲದೇ ಪೌತಿ ಖಾತೆ ಮಾಡಿಸಿಕೊಳ್ಳುವ ಸಮಯದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ.

Pouthi Khata Details-ಖಾತೆ ವರ್ಗಾವಣೆಗೆ ಸಂಬಂಧಪಟ್ಟಂತೆ ಅಂಕಿ-ಅಂಶ ಹೀಗಿದೆ:

A) ರಾಜ್ಯದಲ್ಲಿರುವ ಒಟ್ಟು ಜಮೀನುಗಳು- 4.11 ಕೋಟಿ

B) ಆಧಾರ್ ಮೂಲಕ ಇ-ಕೆವೈಸಿ ಮಾಡಿಕೊಂಡವರು- 3.5 ಕೋಟಿ

C) ಮರಣ ಹೊಂದಿದವರ ಹೆಸರಿನಲ್ಲಿರುವ ಖಾತೆಗಳು- 51.13 ಲಕ್ಷ

D) ಕೃಷಿಯೇತರ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಖಾತೆಗಳು- 70 ಲಕ್ಷ

ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

Nadakacheri-ನೆಮ್ಮದಿ ಕೇಂದ್ರ/ನಾಡಕಚೇರಿಯಲ್ಲಿಯು ಅರ್ಜಿ ಸಲ್ಲಿಸಲು ಅವಕಾಶ:

ಪೌತಿ ಖಾತೆಯನ್ನು ಮಾಡಿಸಿಕೊಳ್ಳಲು ಅರ್ಜಿದಾರರು ಈ ಅಭಿಯಾನವನ್ನು ಹೊರತುಪಡಿಸಿ ತಮ್ಮ ತಮ್ಮ ಹೋಬಳಿಯ ನಾಡಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆಧಾರ್ ಕಾರ್ಡ ಪ್ರತಿ, ಪೋಟೋ, ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಜೊತೆಗೆ bhoomi ತಂತ್ರಾಂಶದಲ್ಲಿ ನಮೂನೆ-1 ರಲ್ಲಿ ಅರ್ಜಿಯನ್ನು ದಾಖಲಿಸಬೇಕು.

ಮರಣ ಪ್ರಮಾಣ ಪತ್ರ ಲಭ್ಯವಿಲ್ಲದೇ ಇದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪತ್ರವನ್ನು ಪಡೆದು ತಾಲ್ಲೂಕು ಅಪೀಸ್ ನಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂದು ಇಲಾಖೆ ಅಧಿಕಾರಿಗಳಿಂದ ಸ್ಥಳ ಮಹಜರ್ ಮಾಡಿಸಿಕೊಂಡು ವಾರಸುದಾರರಿಂದ ಅಫಿಡವಿಟ್ ಪಡೆದು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Lineman Job- ಏಪ್ರಿಲ್ ಅಂತ್ಯಕ್ಕೆ 3 ಸಾವಿರ ಲೈನ್‌ಮೆನ್‌ ನೇಮಕ: ಕೆ ಜೆ ಜಾರ್ಜ್

Pouthi Khata Benefits For Farmers-ರೈತರಿಗೆ ಪೌತಿ ಖಾತೆ ಪ್ರಯೋಜನಗಳೇನು?

  • ಪೌತಿ ಖಾತೆಯನ್ನು ಮಾಡಿಸಿಕೊಳ್ಳುವುದರಿಂದ ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಯಲ್ಲಿನ ಸಬ್ಸಿಡಿ ಆಧಾರಿತ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
  • ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು, ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಸಹ ನೆರವಾಗುತ್ತದೆ ಒಟ್ಟಾರೆಯಾಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆಯ ಯೋಜನೆಗಳ ನೆರವು ಪಡೆಯಲು ಪೌತಿ ಖಾತೆ ಸಹಕಾರಿಯಾಗಿದೆ.
  • ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಹಾನಿಯಾದಾಗ ಬೆಳೆ ವಿಮೆ, ಬೆಳೆ ಪರಿಹಾರ, ಪಡೆಯಲು ಪೌತಿ ಖಾತೆ ಅಗಿರುವುದು ಕಡ್ದಾಯವಾಗಿದೆ.
  • ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ಸರಕಾರವು ನಿಮ್ಮ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಂಡಾಗ ಸರಕಾರದಿಂದ ಪರಿಹಾರದ ಅರ್ಥಿಕ ನೆರವಿನ ಹಣವನ್ನು ತೆಗೆದುಕೊಳ್ಳಲು ಸಹಕಾರಿಯಾಗಿದೆ.
- Advertisment -
LATEST ARTICLES

Related Articles

- Advertisment -

Most Popular

- Advertisment -